ಬುಧವಾರದೊಳಗೆ ಒಪ್ಪಂದ ಅಂತಿಮಗೊಳ್ಳದಿದ್ದರೆ ಇರಾನ್ ಮೇಲೆ ಮತ್ತೆ ಬಾಂಬ್ ದಾಳಿ: ಟ್ರಂಪ್ ಎಚ್ಚರಿಕೆ

Date:

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳು ನಿರ್ಣಾಯಕ ಹಂತ ತಲುಪಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಠಿಣ ಎಚ್ಚರಿಕೆಯೊಂದನ್ನು ರವಾನಿಸಿದ್ದಾರೆ. ‘ಬುಧವಾರದ ಗಡುವಿನೊಳಗೆ ಇರಾನ್ ಜೊತೆಗಿನ ಒಪ್ಪಂದ ಅಂತಿಮಗೊಳ್ಳದಿದ್ದರೆ, ಆ ದೇಶದ ಮೇಲೆ ಮತ್ತೆ ಬಾಂಬ್ ದಾಳಿಗಳನ್ನು ಆರಂಭಿಸುವುದಾಗಿ’ ಟ್ರಂಪ್ ಬೆದರಿಕೆ ಹಾಕಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

- Advertisement -

ಮಧ್ಯಪ್ರಾಚ್ಯದಲ್ಲಿ ಇತ್ತೀಚೆಗೆ ತೀವ್ರಗೊಂಡಿದ್ದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ಬಳಿಕ, ಇದೀಗ ಶಾಂತಿ ಒಪ್ಪಂದದ ಮಾತುಕತೆಗಳು ನಡೆಯುತ್ತಿವೆ. ಈ ಬಗ್ಗೆ ಮಾತನಾಡಿರುವ ಟ್ರಂಪ್, ಇರಾನ್ ಒಪ್ಪಂದಕ್ಕೆ ಸಮ್ಮತಿಸಲು ಬುಧವಾರದ ಅಂತಿಮ ಗಡುವು ವಿಧಿಸಿದ್ದಾರೆ. ಒಂದು ವೇಳೆ ಈ ಗಡುವಿನೊಳಗೆ ಒಪ್ಪಂದಕ್ಕೆ ಸಹಿ ಬೀಳದಿದ್ದರೆ, ಇರಾನ್ ಮೇಲೆ ಹೊಸದಾಗಿ ಭಾರಿ ವೈಮಾನಿಕ ಮತ್ತು ಬಾಂಬ್ ದಾಳಿಗಳನ್ನು ಪುನರಾರಂಭಿಸಲು ಅಮೆರಿಕ ಹಿಂಜರಿಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಎಲ್ಲವನ್ನೂ ಕಣ್ಣುಮುಚ್ಚಿ ಪಾಲಿಸುವ ವಿಭೀಷಣನೆ ಈ ಸಮಾಜಕ್ಕೆ ಸೂಕ್ತ,...

ರಾಮಾಯಣವನ್ನು ಗೌರವಿಸುವ ನಾವು ರಾವಣನ ದೃಷ್ಟಿಕೋನದಿಂದಲೂ ಕಥೆಯನ್ನು ಓದಬೇಕು. ಈ ಕಾಲಕ್ಕೆ ರಿಟೆಲ್ಲಿಂಗ್ಸ್, ಕೌಂಟರ್ ನರೇಟಿವ್ಸ್ ಹಾಗೂ ಹ್ಯೂಮನೈಸಿಂಗ್ ಸ್ಟೋರಿಸ್ ಅಗತ್ಯತೆ ಬಹಳವಾಗಿದೆ. ಶಿವ ನಮ್ಮ ಅಚ್ಚುಮೆಚ್ಚಿನ ದೇವನಾಗಿದ್ದ. ಅವನನ್ನ ನಾವು ಅತಿಯಾಗಿ ಪ್ರೀತಿಸುತಿದ್ದೆವು....

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ...

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ ಹೆಸರು ಆಜಾದ್. ಅವರ ಕನಸು ಸ್ವತಂತ್ರ ಭಾರತ. ಅವರ ಹೋರಾಟ ರಾಷ್ಟ್ರೀಯ ಏಕತೆ. ಅವರ ನಂಬಿಕೆ ಶಿಕ್ಷಣ. ಅವರ ವೈಚಾರಿಕ...

ಕಿವೀಸ್ ಕೋಟೆಯಲ್ಲಿ ಇತಿಹಾಸ ಬರೆಯುವತ್ತ ಶುಭಮನ್ ಗಿಲ್ ಪಡೆ:...

ನವೆಂಬರ್ 13 ಮತ್ತು 15ರಂದು ನಡೆಯಲಿರುವ ಕಿವೀಸ್ ವಿರುದ್ಧದ ನಾಲ್ಕು ಹಾಗೂ ಐದನೇ ಏಕದಿನ ಪಂದ್ಯಗಳಲ್ಲಿ ನಾಯಕ ಶುಭಮನ್ ಗಿಲ್ ಅವರ ನಾಯಕತ್ವದ ಕೌಶಲ ಮತ್ತೊಮ್ಮೆ ಒರೆಗಲ್ಲಿಗೆ ಹಚ್ಚಲ್ಪಡಲಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿರುವ...

ಇದನ್ನು ಓದಿದ್ದೀರಾ? ಇರಾನ್‌: ಬಿತ್ತಿದ್ದನ್ನು ಬೆಳೆದ ಅಮೆರಿಕ, ಆಡಳಿತ ಬದಲಿಸುವ ಕೊಲೆಗಡುಕತನ ಕಡುಕಟ್ಟರ್ ವಾದವನ್ನು ಭುಗಿಲೆಬ್ಬಿಸಿತು!

ಅಣ್ವಸ್ತ್ರ ಕಾರ್ಯಕ್ರಮಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಒಪ್ಪಂದ ಬಹುಪಾಲು ಅಂತಿಮಗೊಂಡಿದೆ ಎಂದು ಈ ಹಿಂದೆ ಹೇಳಿದ್ದರೂ, ಒಪ್ಪಂದಕ್ಕೆ ಅಧಿಕೃತ ಮುದ್ರೆ ಒತ್ತಲು ವಿಳಂಬವಾಗುತ್ತಿರುವುದು ಟ್ರಂಪ್ ಅವರ ಈ ಕಠಿಣ ಎಚ್ಚರಿಕೆಗೆ ಕಾರಣವಾಗಿದೆ.

ಫೆಬ್ರವರಿ 2026ರ ಅಂತ್ಯದಲ್ಲಿ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಜಂಟಿಯಾಗಿ ಇರಾನ್ ಮೇಲೆ ಭಾರಿ ದಾಳಿ ನಡೆಸಿದ್ದವು. ಇದರಿಂದ ಇರಾನ್‌ನ ಸೇನಾ ನೆಲೆಗಳು ಹಾಗೂ ಉನ್ನತ ನಾಯಕತ್ವಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಇರಾನ್‌ ಕೂಡ ಎರಡೂ ರಾಷ್ಟ್ರಗಳಿಗೆ ತಿರುಗೇಟು ನೀಡಿತ್ತು. ಸದ್ಯ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದು, ಅಮೆರಿಕವು ಇರಾನ್ ಬಂದರುಗಳ ಮೇಲೆ ನೌಕಾ ದಿಗ್ಬಂಧನವನ್ನು ಸಹ ಮುಂದುವರೆಸಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ, ಒಪ್ಪಂದದ ಕರಡಿಗೆ ಇರಾನ್ ತ್ವರಿತವಾಗಿ ಒಪ್ಪಿಗೆ ಸೂಚಿಸದಿದ್ದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಗುಡುಗಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಷ್ಟ್ರೀಯ ಶಿಕ್ಷಣ ದಿನ | ಶಿಕ್ಷಣ ಕ್ರಾಂತಿಯ ಹರಿಕಾರ-ಮೌಲಾನ ಅಬುಲ್ ಕಲಾಂ ಅಜಾದ್

ಮೌಲಾನಾ ಅಬುಲ್ ಕಲಾಂ ಆಜಾದ್ ಇದು ಅಪರೂಪದ ರಾಷ್ಟ್ರೀಯ ವ್ಯಕ್ತಿತ್ವ. ಅವರ...

ಅಸ್ಸಾಂನಲ್ಲಿ ಹಳಿ ತಪ್ಪಿದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್‌: ಹಲವರಿಗೆ ಗಾಯ

ಅಸ್ಸಾಂನ ಕಾಮರೂಪ್ ಜಿಲ್ಲೆಯ ಗುವಾಹಟಿ ಸಮೀಪದ ಡಿಗಾರು ರೈಲು ನಿಲ್ದಾಣದ ಬಳಿ...

ಜಾತಿಯ ಗೋಡೆಗಳಾಚೆ ಪ್ರೀತಿಯ ಪಯಣ: ಸಂವಿಧಾನದ ಬೆಳಕಿನಲ್ಲಿ ಹೊಸ ಬದುಕಿಗೆ ಮುನ್ನುಡಿ!

ಜಾತಿ, ಧರ್ಮ, ಕುಲ, ಗೋತ್ರಗಳ ಕಟ್ಟುಪಾಡುಗಳನ್ನು ಮೀರಿ ಪ್ರೀತಿ, ಸಮಾನತೆ ಮತ್ತು...

ಸೋನಿಯಾ ಪುಸ್ತಕ: ಸಿಖ್ಖರ ಗಾಯಗಳ ಮೇಲೆ ಉಪ್ಪು ಎರಚಿದ್ದಾರೆಂದ ಅಕಾಲಿಗಳು

‘ಆಪರೇಷನ್ ಬ್ಲೂ ಸ್ಟಾರ್’ ಬಳಿಕ ದೆಹಲಿಯ ಬೀದಿಗಳಲ್ಲಿ ಸಿಖ್ಖರ ಕಗ್ಗೊಲೆ ನಡೆಸುವಂತೆ...