ಕಲಬುರಗಿ | ಸರ್ವಜನರ ಶಾಂತಿಯ ತೋಟವನ್ನು ‘ಯುಪಿ’ ಮಾದರಿ ಪ್ರಯೋಗಾಲಯ ಮಾಡಲು ಹೊರಟಂತಿದೆ

Date:

Advertisements
  • ರೌಡಿಶೀಟರ್‌ಗಳಿಗೆ ಟಿಕೆಟ್ ನೀಡಿ, ಪ್ರಜಾಪ್ರಭುತ್ವದ ಕಗ್ಗೊಲೆಗೆ ಹಾದಿ ಮಾಡಿದೆ
  • ಬಹುಮತ ಪಡೆಯದಿದ್ದರೂ ಅನ್ಯ ಮಾರ್ಗಗಳಿಂದ ಅಧಿಕಾರ ಕಬಳಿಸಲಾಗಿದೆ

ಸರ್ವಜನರ ಶಾಂತಿಯ ತೋಟವಾದ ಕರ್ನಾಟಕವನ್ನು ‘ಯೋಗಿ’ ಸರ್ಕಾರದ ಮಾದರಿಯ ಬುಲ್ಡೋಜರ್ – ಎನ್‌ಕೌಂಟರ್ ಆಳ್ವಿಕೆಯ ಇನ್ನೊಂದು ಪ್ರಯೋಗಾಲಯವನ್ನಾಗಿ ಮಾಡಲು ಹೊರಟಂತಿದೆ ಎಂದು ಸಿರಿಮನೆ ನಾಗರಾಜ್ ಮತ್ತು ತಾರಾ ರಾವ್ ಆರೋಪಿಸಿದರು.

ಕಲಬುರಗಿ ನಗರದ ಪತ್ರಿಕಾ ಭವನದಲ್ಲಿ ಎದ್ದೇಳು ಕರ್ನಾಟಕ ನಾಗರಿಕ ಅಭಿಯಾನ ಕುರಿತು ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳ್ಳರಿಗೆ, ರೌಡಿಶೀಟರ್‌ಗಳಿಗೆ ಟಿಕೆಟ್ ನೀಡಿದ್ದು, ಪ್ರಜಾಪ್ರಭುತ್ವದ ಕಗ್ಗೊಲೆಗೆ ಹಾದಿ ಮಾಡುತ್ತಿದೆ ಎಂದು ದೂರಿದರು.

ಕಲಬುರಗಿಯು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ವಿಶ್ವಕ್ಕೆ ಶಾಂತಿ ಸಂದೇಶ ನೀಡಿದ ಬುದ್ಧರ ನಾಡು, ಸೂಫಿ ಸಂತರ, ಶರಣರ ಬೀಡು. ಸೌಹಾರ್ದ ಪರಂಪರೆಯ ಮಾದರಿ ಜಿಲ್ಲೆ. ಇಂತಹ ನಾಡಿನಲ್ಲಿ ವಿಭಜಕ, ಕೋಮು ಆಧರಿತ ಮತ್ತು ದ್ವೇಷ ರಾಜಕೀಯದಿಂದ ಪ್ರೇರಿತ ಶಕ್ತಿಗಳು ಅನ್ಯ ಮಾರ್ಗದ ಮೂಲಕ ಶಾಂತಿ ಮತ್ತು ಬಹುತ್ವದ ಈ ತೋಟವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿವೆ ಎಂದರು.

Advertisements

ಬಹುಮತವನ್ನು ಪಡೆಯದಿದ್ದರೂ ಈ ಶಕ್ತಿಗಳು ಹಣ ಮತ್ತು ಅತ್ಯಂತ ಹೇಯವಾದ ವಿಧಾನಗಳ ಮೂಲಕ ಅಧಿಕಾರ ಕಬಳಿಸುವುದನ್ನು ನೋಡುತ್ತಿದ್ದೇವೆ. ಈ ಶಕ್ತಿಗಳನ್ನು ಅಧಿಕಾರದಿಂದ ದೂರವಿಡದಿದ್ದಲ್ಲಿ ರಾಜ್ಯದಲ್ಲಿ ಶಾಂತಿ ಸೌಹಾರ್ದತೆಗಳಾಗಲಿ, ಜನಸಾಮಾನ್ಯರ ಅಭಿವೃದ್ಧಿಯಾಗಲಿ ಕನಸಿನಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಬಿಜೆಪಿ ಸೋಲಿಸಲು ಎದ್ದೇಳು ಕರ್ನಾಟಕ ಅಭಿಯಾನ: ಮಲ್ಲಿಗೆ ಸಿರಿಮನೆ

ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳು, ಒಳ ಮೀಸಲಾತಿಯ ಹೆಸರಿನ ಮಹಾ ಮೋಸ ಮತ್ತು ದ್ರೋಹ. ಅಲ್ಪಸಂಖ್ಯಾತರು ಮತ್ತು ಮಹಿಳೆಯರ ಮೇಲೆ ಮಿತಿ ಮೀರಿರುವ ಹಿಂಸೆ, ನರೇಗಾ ಉದ್ಯೋಗ ಕಡಿತ, ಎಲ್ಲ ಜೀವನಾವಶ್ಯಕ ವಸ್ತುಗಳ ಭಯಂಕರ ಬೆಲೆ ಏರಿಕೆ ಇಂಥವೇ ಈ ಸರ್ಕಾರದ ಘನಂದಾರಿ ಸಾಧನೆಗಳಾಗಿವೆ ಎಂದು ಟೀಕಿಸಿದರು.

ಮಹಾ ಸುಳ್ಳಿನ ಮೇಲೆ ನಿಂತಿರುವ 40% ಕಮಿಶನ್ ಸರ್ಕಾರದ 100 % ನರಕದಿಂದ ನೊಂದಿರುವ ಜನರು ಈ ಸಲ ಕೋಮುವಾದಿ, ಸಂವಿಧಾನ ವಿರೋಧಿ, ಜನವಿರೋಧಿ, ಮಹಿಳಾ – ದಲಿತ, ಅಲ್ಪಸಂಖ್ಯಾತರ ವಿರೋಧಿ, ಸರ್ಕಾರವನ್ನು ಸೋಲಿಸಿ, ಜನರ ಕೇಳಿಕೆಗಳಿಗೆ ದನಿಯಾಗುವ, ಸಂವಿಧಾನವನ್ನೂ ವಚನ ತತ್ವವನ್ನೂ ಗೌರವಿಸಿ ಅನುಸರಿಸುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಿದ್ಧರಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾರಾ ರಾವ್, ಸಿರಿಮನೆ ನಾಗರಾಜ್, ಪ್ರಬುದ್ಧ ಹುಬಳಿ, ಅಶ್ವಿನಿ ಮದನಕರ, ಸಂದ್ಯಾರಾಜ್ ಸ್ಯಾಮ್ಯುಯೆಲ್, ರಾಜೇಂದ್ರ ರಾಜವಾಳ್, ಬಿ ಎಂ ರಾವ್, ಅಬ್ದುಲ್ ಖಾದರ್ ಹಾಜರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X