- ಮೈಸೂರು ಭಾಗದ ಬಿಜೆಪಿ ಪ್ರಚಾರ ಯಾತ್ರೆಗೆ ಬಂದಿದ್ದ ಅಮಿತ್ ಶಾ
- ಚಾಮುಂಡಿ ಸನ್ನಿಧಾನದಲ್ಲಿ ಶೂ ಧರಿಸಿ ಓಡಾಡಿದ ಕೇಂದ್ರ ಗೃಹ ಸಚಿವ
ಚಾಮುಂಡಿ ಸನ್ನಿಧಿಯಲ್ಲಿನ ಅನಾದಿ ಕಾಲದ ಸಂಪ್ರದಾಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಧಕ್ಕೆ ತಂದಿರುವ ಆರೋಪ ಅವರ ಹೆಗಲೇರಿದೆ.
ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಹೊರಡುವ ವೇಳೆ ದೇವಳದ ಮುಖ್ಯದ್ವಾರದ ಬಳಿ ದೇವಸ್ಥಾನದ ಅರ್ಚಕರು ಹಾಗೂ ಮೈಸೂರಿನ ಜನಪ್ರತಿಗಳ ಜೊತೆ ಅಮಿತ್ ಶಾ ಫೋಟೋ ತೆಗೆಸಿಕೊಂಡಿದ್ದಾರೆ.
ಈ ವೇಳೆ ಅವರು ಶೂ ಧರಿಸಿ ಪೋಟೋಗೆ ಪೋಸು ನೀಡಿರುವುದು, ಚಾಮುಂಡೇಶ್ವರಿಯ ಭಕ್ತರನ್ನು ಕೆರಳಿಸಿದೆ.
ಜೊತೆಯಲ್ಲಿದ್ದ ಸಂಸದರು, ಶಾಸಕರು ಹಾಗೂ ಭದ್ರತಾ ಸಿಬ್ಬಂದಿಗಳೆಲ್ಲರೂ ಬರಿಗಾಲಲ್ಲೇ ದೇವಾಲಯದ ಆವರಣದಲ್ಲಿ ನಿಂತಿರುವಾಗ ಅಮಿತ್ ಶಾ ಮಾತ್ರ ಶೂ ಧರಿಸಿರುವುದು ಈಗ ವಿವಾದದ ಕಿಡಿ ಹೊತ್ತಿಸಿದೆ.
ಹಿಂದೂ ಧರ್ಮದ, ಸನಾನತ ನೀತಿಗಳ ಬಗ್ಗೆ ಮಾತನಾಡುವ ಬಿಜೆಪಿಗರೇ ಈಗ ಹೀಗೆ ನಡೆದುಕೊಂಡರೆ ಹೇಗೆ ಎನ್ನುವ ಪ್ರಶ್ನೆಯನ್ನು ಹಲವರು ಎತ್ತಿದ್ದಾರೆ.
ಅಮಿತ್ ಶಾ ಪ್ರವಾಸ:
ಇಂದು (ಏ 24) ಮೈಸೂರು ಭಾಗದಲ್ಲಿನ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ಭಾಗವಹಿಸುವ ಸಲುವಾಗಿ ಅಮಿತ್ ಶಾ ಮೈಸೂರಿಗೆ ಬಂದಿದ್ದರು.
ಈ ಸುದ್ದಿ ಓದಿದ್ದೀರಾ? : ಪ್ರಜಾಕೀಯ ಅಭ್ಯರ್ಥಿಯ ವಿನೂತನ ಪ್ರಯೋಗ | ಮತದಾರರಿಗೆ “ಬಾಂಡ್” ವಾಗ್ದಾನ
ಸಾಂಸ್ಕೃತಿಕ ನಗರಿಗೆ ಬಂದಿಳಿದ ಅವರು, ಅಲ್ಲಿಂದ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಳ ಸಮಿತಿ ಅವರನ್ನು ಗೌರವಿಸಿತ್ತು.
ಬಳಿಕ ಅಲ್ಲಿಂದ ಹೊರ ಹೊರಡುವ ವೇಳೆ ಎಲ್ಲರೊಂದಿಗೆ ನಿಂತು ಅಮಿತ್ ಶಾ ಫೋಟೋಗೆ ಪೋಸ್ ನೀಡಿದ್ದರು. ಈ ವೇಳೆ ಅವರು ಪಾದರಕ್ಷೆ ಧರಿಸಿದ್ದರು.