ಸುದೀಪ್‌ ನಟನೆಯ ಜಾಹೀರಾತುಗಳಿಗೆ ತಡೆ ನೀಡಿ: ಚುನಾವಣಾ ಆಯೋಗಕ್ಕೆ ಸುರ್ಜೇವಾಲ ಪತ್ರ

Date:

Advertisements
  • ಪೊಲೀಸ್‌ ಬ್ಯಾರಿಕೇಡ್‌ಗಳ ಮೇಲೆ ಸುದೀಪ್ ಚಿತ್ರ
  • ನೀತಿ ಸಂಹಿತೆ ಮುಗಿಯುವವರೆ ನಿಗಾ ವಹಿಸುವಂತೆ ಮನವಿ

ಬಿಜೆಪಿ ಪರ ಪ್ರಚಾರಕ್ಕೆ ಮುಂದಾಗಿರುವ ನಟ ಕಿಚ್ಚ ಸುದೀಪ್ ಅವರ ಜಾಹೀರಾತು ಮತ್ತು ಸಿನಿಮಾಗಳಿಗೆ ತಡೆ ಹಿಡಿಯುವಂತೆ ಕಾಂಗ್ರೆಸ್ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸುರ್ಜೇವಾಲ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಹೊತ್ತಲ್ಲೇ ಬಿಜೆಪಿ ಸುದೀಪ್ ಅವರನ್ನು ಸ್ಟಾರ್‌ ಪ್ರಚಾರಕರನ್ನಾಗಿ ಮಾಡಿಕೊಂಡಿತ್ತು. ಅದಾದ ಬಳಿಕ ಅನೇಕರು ಆಯೋಗಕ್ಕೆ ಪತ್ರ ಬರೆದು, ಸುದೀಪ್ ನಟನೆಯ ಜಾಹೀರಾತು ಮತ್ತು ಸಿನಿಮಾಗಳಿಗೆ ತಡೆ ನೀಡುವಂತೆ ಒತ್ತಾಯಿಸಿದ್ದರು. ಇದೀಗ, ಸುರ್ಜೇವಾಲ ಕೂಡ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಬಿಜೆಪಿ ಪರ ಪ್ರಚಾರಕ್ಕೆ ಸುದೀಪ್‌ ಮುಂದಾಗಿದ್ದಾರೆ. ಈ ನಡುವೆ ಸರ್ಕಾರಿ ಜಾಗಗಳು ಸೇರಿದಂತೆ ಅನೇಕ ಕಡೆಗಳಲ್ಲಿ ಅವರ ನಟನೆಯ ಜಾಹೀರಾತುಗಳು ರಾರಾಜಿಸುತ್ತಿವೆ. ಇದನ್ನು ಉಲ್ಲೇಖಿಸಿ, ಸುರ್ಜೇವಾಲ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

Advertisements

ನೀತಿ ಸಂಹಿತೆ ಮುಗಿಯುವವರೆಗೆ ಸುದೀಪ್ ಅವರ ಸಿನಿಮಾಗಳ ಬಿಡುಗಡೆಯನ್ನು ಮುಂದೂಡುವಂತೆ ಅಧಿಕಾರಿಗಳಿಗೆ ಸುರ್ಜೇವಾಲ ಒತ್ತಾಯಿಸಿದ್ದಾರೆ. “ಪೊಲೀಸ್ ಬ್ಯಾರಿಕೇಡ್‌ ಸೇರಿದಂತೆ ಸರ್ಕಾರದ ಒಡೆತನದ ಕೆಲವು ಸಲಕರಣೆಗಳ ಮೇಲೆ ಬಿಜೆಪಿಯ ಸ್ಟಾರ್ ಪ್ರಚಾರಕ ಸುದೀಪ್ ನಟನೆಯ ಜಾಹೀರಾತುಗಳ ಚಿತ್ರಗಳು ಕಾಣಿಸುತ್ತಿವೆ. ಇದು ಪ್ರಚಾರದ ವಿಷಯಕ್ಕೆ ಸಂಬಂಧಿಸಿದೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

“ನಮ್ಮ ಕಾರ್ಯಕರ್ತರು ಹಂಚಿಕೊಂಡ ವರದಿಗಳು ಮತ್ತು ಛಾಯಾಚಿತ್ರಗಳ ಪ್ರಕಾರ, ಏಪ್ರಿಲ್ 14ನೇ ತಾರೀಕಿನಂದು ಬೆಂಗಳೂರಿನ ಮೇಖ್ರಿ ವೃತ್ತದಲ್ಲಿರುವ ಪೊಲೀಸ್ ಬ್ಯಾರಿಕೇಡ್‌ನ ಮೇಲೆ ಸುದೀಪ್ ಭಾವಚಿತ್ರ ಇರುವ ಜಾಹೀರಾತಿದೆ” ಎಂದು ಉಲ್ಲೇಖಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಮ್ಮ ದೇಣಿಗೆ ಹಣದಲ್ಲೇ ಠೇವಣಿ ಇಡಿ : ಕಾರ್ಯಕರ್ತರ ಒತ್ತಾಯ, ಭಾವುಕರಾದ ಪರಮೇಶ್ವರ್‌

“ಸುದೀಪ್ ಅವರ ಸೆಲೆಬ್ರಿಟಿ ಸ್ಥಾನಮಾನದ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. ಇದೊಂದು ಸಮಸ್ಯೆಯಲ್ಲದಿದ್ದರೂ, ಸುದೀಪ್ ಸ್ಪಷ್ಟವಾಗಿ ಬಿಜೆಪಿಯ ಮುಖವಾಗಿದ್ದಾರೆ. ಆದ್ದರಿಂದ ಅವರ ಚಲನಚಿತ್ರಗಳ ಬಿಡುಗಡೆ ಮುಂದೂಡಬೇಕು. ಜಾಹೀರಾತು ತಡೆ ಹಿಡಿಯಬೇಕು” ಎಂದು ಮನವಿ ಮಾಡಿಕೊಂಡಿದ್ದಾರೆ.

“ನೀತಿ ಸಂಹಿತೆಯ ನಿಯಮಗಳ ಅನ್ವಯ, ಸುದೀಪ್ ಅವರ ವಾಣಿಜ್ಯ ಪ್ರಚಾರದ ಲಾಭವನ್ನು ಚುನಾವಣೆ ಮುಗಿಯುವವರೆಗೆ ಮಾತ್ರ ಬಳಸದಂತೆ ತಡೆಯಬೇಕು. ಇಲ್ಲವಾದಲ್ಲಿ ಇದು ಬಿಜೆಪಿಗೆ ಲಾಭ ನೀಡುತ್ತದೆ” ಎಂದಿದ್ದಾರೆ..

“ಕರ್ನಾಟಕ ಸರ್ಕಾರಕ್ಕೆ ಸೇರಿದ ಯಾವುದೇ ಉಪಕರಣಗಳು, ತಡೆಗೋಡೆ, ಹೋರ್ಡಿಂಗ್‌ನಲ್ಲಿ ಸುದೀಪ್ ಅವರ ಪ್ರಚಾರದ ವಿಷಯ, ಜಾಹೀರಾತು ಇತ್ಯಾದಿಗಳನ್ನು ತೆಗೆದುಹಾಕಲು ರಾಜ್ಯ ಅಧಿಕಾರಿಗಳಿಗೆ ತುರ್ತು ಮತ್ತು ತಕ್ಷಣದ ನಿರ್ದೇಶನಗಳನ್ನು ರವಾನಿಸಬೇಕು” ಎಂದು ಸುರ್ಜೇವಾಲ ಮನವಿ ಮಾಡಿದ್ದಾರೆ.ಸುರ್ಜೇವಾಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X