ಬೀದರ್ | ಔರಾದ್‌ನಲ್ಲಿ ಬಿಜೆಪಿ ಅಲೆಯಿದೆ, ಬೇರೆ ಪಕ್ಷಗಳಿಗೆ ನೆಲೆಯಿಲ್ಲ: ಸಚಿವ ಪ್ರಭು ಚವ್ಹಾಣ್

Date:

Advertisements

ರಾಜ್ಯದ ಜನತೆ ಕಾಂಗ್ರೆಸ್‌ಅನ್ನು ತಿರಸ್ಕರಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 151 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಚಿವ ಪ್ರಭು ಬಿ ಚವ್ಹಾಣ್ ವಿಶ್ವಾಸ ವ್ಯಕ್ತಪಡಿಸಿದರು.

ಔರಾದ್(ಬಿ) ವಿಧಾನಸಭಾ ಕ್ಷೇತ್ರದ ಲಾಧಾ, ಧೂಪತಮಹಾಗಾಂವ, ಬಾಚೆಪಳ್ಳಿ, ಮಣಿಗೆಂಪೂರ, ಬಾಬಳಿ, ಮಸ್ಕಲ್, ನಾಗೂರ(ಬಿ), ನಿಟ್ಟೂರ(ಕೆ), ರಕ್ಷ್ಯಾಳ(ಕೆ), ರಕ್ಷ್ಯಾಳ(ಬಿ), ಬೆಳಕೋಣಿ, ಮಹಾಡೋಣಗಾಂವ, ಮುಂಗನಾಳ, ಖಂಡೆಕೇರಿ, ಹಸ್ಸಿಕೇರಾ, ಮುಧೋಳ(ಬಿ), ಬೇಂಬ್ರಾ, ಲಕ್ಷ್ಮೀನಗರ, ಬೆಡಕುಂದಾ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಮೇ.1ರಂದು ಮನೆ-ಮನೆಗೆ ಭೇಟಿ ನೀಡಿ ಮತಯಾಚನೆ ವೇಳೆ ಮಾತನಾಡಿದರು.

“ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಉತ್ತಮವಾಗಿ ಕೆಲಸ ಮಾಡಿವೆ. ಸಾಕಷ್ಟು ಜನಪರ ಕೆಲಸಗಳಾಗಿವೆ. ಬಡವರು, ರೈತರು, ಹಿಂದುಳಿದವರ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಾಡಿನ ಏಳಿಗೆಗೆ ಶ್ರಮಿಸಲಾಗಿದೆ. ರಾಜ್ಯದೆಲ್ಲೆಡೆ ಜನತೆ ಬಿಜೆಪಿಯತ್ತ ಒಲವು ತೋರಿಸುತ್ತಿದ್ದು, ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಕಾಣಲಿದೆ” ಎಂದರು.

Advertisements

“ಔರಾದ(ಬಿ) ಕ್ಷೇತ್ರದಲ್ಲಿ ಬಿಜೆಪಿಯ ಅಲೆಯಿದೆ. ಬೇರೆ ಯಾವುದೇ ಪಕ್ಷಗಳಿಗೆ ಇಲ್ಲಿ ನೆಲೆಯಿಲ್ಲ. ತಾವು ಭೇಟಿ ನೀಡಿದ ಎಲ್ಲ ಗ್ರಾಮಗಳಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ. ಕ್ಷೇತ್ರದ ಮಹಾಜನತೆ ಹಿಂದೆಂಗಿಂತಲೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ” ಎಂದು ಹೇಳಿದರು.

ಮೇ 3ರಂದು ಔರಾದ್‌ಗೆ ಯಡಿಯೂರಪ್ಪ ಆಗಮನ

ಮಾಜಿ ಸಿಎಂ ಬಿ‌.ಎಸ್ ಯಡಿಯೂರಪ್ಪ ಅವರು ಮೇ 3‌ರಂದು ಔರಾದ್(ಬಿ) ತಾಲೂಕಿಗೆ ಆಗಮಿಸಲಿದ್ದಾರೆ ಎಂದು ಸಚಿವ ಪ್ರಭು.ಬಿ ಚವ್ಹಾಣ್ ತಿಳಿಸಿದ್ದಾರೆ.‌ ಅಂದು ಬೆಳಿಗ್ಗೆ 11ಕ್ಕೆ ಔರಾದ್ ಪಟ್ಟಣದ ತಹಶೀಲ್ದಾರ್ ಕಚೇರಿಯ ಎದುರು ಮೈದಾನದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡುವರು. ಔರಾದ(ಬಿ) ಹಾಗೂ ಕಮಲನಗರ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು  ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮೊಸಳೆ ಕಣ್ಣೀರು ಹಾಕಬೇಡಿ, ಮೊದಲು ಅನ್ನದಾತರಿಗೆ ಉತ್ತರಿಸಿ: ಶರಣಬಸಪ್ಪ ಮಮಶೆಟ್ಟಿ

ಈ ಸಂದರ್ಭದಲ್ಲಿ ಮುಖಂಡರುಗಳಾದ ವಸಂತ ಬಿರಾದಾರ, ಮಾರುತಿ ಚವ್ಹಾಣ, ಶರಣಪ್ಪ ಪಂಚಾಕ್ಷರಿ, ಬಾಬುರಾವ ಬಿರಾದಾರ, ರಾಜಕುಮಾರ ಪೋಕಲವಾರ, ಸಚಿನ್ ರಾಠೋಡ್, ದೇವಿದಾಸ ರಾಠೋಡ್, ಮೃತ್ಯುಂಜಯ ಬಿರಾದಾರ, ಮಂಜು ಸ್ವಾಮಿ, ಮಾದಪ್ಪ ಮಿಠಾರೆ, ಬಾಲಾಜಿ ಠಾಕೂರ, ರಮೇಶ ವಾಗಮಾರೆ, ಸಂಜು ಮಾನಕರೆ, ವೀರೇಶ ಅಲ್ಮಾಜೆ, ರಾಜಪ್ಪ ಸೋರಳ್ಳೆ, ನಯ್ಯೂಮ್ ಚೌಧರಿ, ತ್ರಿಮುಖ ಶೇರಿಕಾರ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

Download Eedina App Android / iOS

X