ಕಲಬುರಗಿ | ಮೊಸಳೆ ಕಣ್ಣೀರು ಹಾಕಬೇಡಿ, ಮೊದಲು ಅನ್ನದಾತರಿಗೆ ಉತ್ತರಿಸಿ: ಶರಣಬಸಪ್ಪ ಮಮಶೆಟ್ಟಿ

Date:

ತೊಗರಿ ನಾಡಿನಲ್ಲಿ ತೊಗರಿ ಬೆಳೆಗಾರರಿಗೆ ಪರಿಹಾರ ಮತ್ತು ಬೆಳೆವಿಮೆ ಹಣ ಬಿಡುಗಡೆ ಮಾಡದೆ ಅನ್ಯಾಯ ಮಾಡಿದ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೊಸಳೆ ಕಣ್ಣೀರು ಹಾಕುವುದನ್ನು ಬಿಟ್ಟು ಮೊದಲು ಅನ್ನದಾತರಿಗೆ ಉತ್ತರಿಸಬೇಕು. ತೊಗರಿ ನಾಡಿಗೆ ಬರಲು ಅವರಿಗೆ ಯಾವ ಮುಖವಿದೆ ಎಂದು ಕಲಬುರಗಿ ರೈತ ಸಂಘದ ಮುಖಂಡ ಶರಣಬಸಪ್ಪ ಮಮಶೆಟ್ಟಿ ಕಿಡಿಕಾರಿದ್ದಾರೆ.

“ನೆಟೆ ರೋಗದಿಂದ ಒಣಗಿಹೋದ ತೊಗರಿ ಬೆಳೆಗಾರರಿಗೆ ಪರಿಹಾರ ಘೋಷಿಸಿ, ರೈತರಿಗೆ ಆಸೆ ಹುಟ್ಟಿಸಿ  ಹಣ ಬಿಡುಗಡೆ ಮಾಡಲಾರದೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ದ್ರೋಹ ಬಗೆದಿವೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರಿಹಾರ ಘೋಷಿಸಿದ ರೈತರ ಖಾತೆಗೆ ಹಣ ಯಾಕೆ ಜಮಾ ಮಾಡಲಿಲ್ಲವೆಂದು  ಮೊದಲು ರೈತರಿಗೆ ಉತ್ತರಿಸಲಿ” ಎಂದು ಆಗ್ರಹಿಸಿದ್ದಾರೆ.

“ರಾಜ್ಯ ಸರ್ಕಾರ ರೈತರಿಗೆ ಸುಳ್ಳು, ಮೋಸ, ವಂಚನೆ ಮಾಡಿ, ಕೇವಲ ಅಧಿಕಾರದ ಕುರ್ಚಿಯ ಆಸೆಗಾಗಿ ಚುನಾವಣೆ ಗಿಮಿಕ್ ಮಾಡೋದನ್ನು ಕೈಬಿಟ್ಟು ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಬೆಳೆವಿಮೆ ಹಣ ಕಟ್ಟಿದ ಎಲ್ಲ ರೈತರಿಗೆ ವಿಮೆ ಹಣ ಬಿಡುಗಡೆ ಮಾಡಲಾಗದೆ ನೆನೆಗುದಿಗೆ ಹಾಕಿ ಯುನಿವರ್ಸೆಲ್‌ ಸೋಂಪೊ ಇನ್ಸೂರೆನ್ಸ್ ಕಂಪನಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ರೈತರ ನೆರವಿಗೆ ಬಾರದ ರಾಜ್ಯದ ಮುಖ್ಯಮಂತ್ರಿ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ರೈತರ ಎದುರು ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಮುಖ್ಯಮಂತ್ರಿ ರೈತ ವಿರೋಧಿ ಯುನಿವರ್ಸೆಲ್‌ ಸೋಂಪೊ ಇನ್ಸೂರೆನ್ಸ್ ಕಂಪನಿ ಬೆನ್ನಿಗೆ ನಿಂತು ಕಂಪನಿಯೊಂದಿಗೆ ಶಾಮೀಲಾದಂತೆ ಕಾಣುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? 2023ರ ವಿಧಾನಸಭಾ ಚುನಾವಣೆ | ಮತದಾರರ ಓಲೈಕೆಗೆ ‘ಉಚಿತ’ಗಳ ಸುರಿಮಳೆ; ಇವು ಕೇವಲ ಭರವಸೆಗಳೇ?

“ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್‌ನಿಂದ ಸಾಲ ಮಂಜೂರಾಗಿರುವ ರೈತರಿಗೆ ಸಾಲದ ಹಣ ನೀಡಲಾರದೆ ಪಹಣಿಯಲ್ಲಿ ಭೋಜಾ ಏರಿಸಿ ರೈತರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಆದರೆ ಮುಖ್ಯಮಂತ್ರಿ ಮಾತ್ರ ಕಿಂಚಿತ್ತೂ ರೈತರ ಬಗ್ಗೆ ಕಾಳಜಿ ತೋರುತ್ತಿಲ್ಲ.  ಅನ್ನದಾತರಿಗೆ ಬೇಜವಾಬ್ದಾರಿತನ ತೋರುತ್ತಿರುವ ಸರ್ಕಾರದ ನೀತಿ ಖಂಡನೀಯ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಬಿಜೆಪಿ ಸರ್ಕಾರ ಧಾರ್ಮಿಕ ದ್ವೇಷ ಹರಡಿ ರಾಜಕೀಯ ಮಾಡುತ್ತಿದೆ: ಡಾ. ತಿಮ್ಮಯ್ಯ

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಧರ್ಮ ಧರ್ಮಗಳ ಎತ್ತಿಕಟ್ಟಿ ರಾಜಕೀಯ ಮಾಡುತ್ತಿದೆ. ದೇಶದಲ್ಲಿ...

ಮೈಸೂರು | ಕೋಮುವಾದಿ ಶಕ್ತಿ ಸೋಲಿಸಿ, ಸಂವಿಧಾನ ಉಳಿಸಿ: ಸುಹೇಲ್ ಅಹಮದ್

ಸ್ವಾತಂತ್ರ್ಯ ಭಾರತದಲ್ಲಿ ಇಂದಿನ ಲೋಕಸಭಾ ಚುನಾವಣೆ ಐತಿಹಾಸಿಕವಾದದ್ದು ಯಾಕೆ ಅಂದ್ರೆ ಪ್ರಜಾಪ್ರಭುತ್ವ...

ಯಾದಗಿರಿ | ರಾಕೇಶ ಹತ್ಯೆ ಖಂಡಿಸಿ ಮಾದಿಗ ಸಮಾಜದ ಪ್ರತಿಭಟನೆ

ದಲಿತ ಯುವಕ ರಾಕೇಶ ಕೊಲೆಯನ್ನು ಖಂಡಿಸಿ ಯಾದಗಿರಿ ಜಿಲ್ಲಾ ಮಾದಿಗ ಸಮಾಜ...

ಶಿವಮೊಗ್ಗ | ಕಾಂಗ್ರೆಸ್‌ ಮುಖಂಡರ ಮನೆ ಮನೆ ಪ್ರಚಾರ; ಕಾರ್ಡ್‌ ಹಂಚಿ ಮತಯಾಚನೆ

ಶಿವಮೊಗ್ಗನಗರದ ಗೋಪಾಲಗೌಡ ಬಡಾವಣೆಯಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಮುಖಂಡರು ಮನೆಮನೆಗೆ ತೆರಳಿ...