ಚಿಕ್ಕಮಗಳೂರಿನ ಡಾ. ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗುರುವಾರ ಎದ್ದೇಳು ಕರ್ನಾಟಕ ಜಿಲ್ಲಾ ಸಮಿತಿಯಿಂದ ‘ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಂವಿಧಾನದ ಆಶಯ ಮತ್ತು ಮುಂದಿನ ನಡೆ ‘ ಕುರಿತಾಗಿ ನಡೆದ ವಿಚಾರ ಸಂಕೀರಣದಲ್ಲಿ ಚಿಂತಕ, ಲೇಖಕರಾದ ಶಿವಸುಂದರ್ ಮಾತನಾಡಿ ಜಾತಿ ವಿನಾಶ ಅಂಬೇಡ್ಕರ್ ಅವರ ಪ್ರಬಲವಾದ ವಾದವಾಗಿತ್ತು ಎಂದರು.
ರಾಜ್ಯದಲ್ಲಿ ಬದಲಾವಣೆ ನಿರೀಕ್ಷಿಸಿ ಜನ ಹಿತ ಕಾಯುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವನ್ನು ತರಲಾಯಿತು. ಆದರೆ, ಈ ಸರ್ಕಾರವು ಸಹ ಬಿಜೆಪಿಗೆ ಹೊರತಾಗಿಲ್ಲ. ಕೇಂದ್ರ ಸರ್ಕಾರ ತಂದ ರೈತ ವಿರೋಧಿ ಕಾಯ್ದೆಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಹಿಂದಕ್ಕೆ ಪಡೆಯಲಿಲ್ಲ ಇದು ನಿಜಕ್ಕೂ ವಿಪರ್ಯಾಸ.
ರಾಜ್ಯ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಎಲ್ಲರೂ ಬಂಡವಾಳ ಶಾಹಿಗಳಿಗೆ ಮಣೆ ಹಾಕುವವರೇ ಬಿಜೆಪಿ, ಜೆಡಿಎಸ್, ಈಗಿನ ಕಾಂಗ್ರೆಸ್ ಆಗಲಿ ಎಲ್ಲವೂ ಸಹ ಜನವಿರೋಧಿಗಳೇ. ಇಡೀ ದೇಶವೇ ಬ್ರಾಹ್ಮಣ ಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿದೆ. ಅದರ ಹಿಡಿತದಲ್ಲಿಯೇ ವ್ಯವಸ್ಥೆ ಸಾಗುತ್ತಿದೆ. ಜಾತಿ, ಧರ್ಮ ಬಡತನದ ವ್ಯವಸ್ಥೆಗೆ ನೇರ ಕಾರಣ ಬ್ರಾಹ್ಮಣ ವ್ಯವಸ್ಥೆ. ಅಸಮಾನತೆ ಆಧಾರದಲ್ಲಿಯೇ ಇವತ್ತಿಗೂ ದೇಶ ನಲುಗಿದೆ. ಸಮಾನತೆ ಇಲ್ಲವೇ ಇಲ್ಲ ಎಂದು ವಿಷಾಧಿಸಿದರು.

‘ಉಪನಿಷತ್, ವೇಧ, ಪುರಾಣ ಯಾವುದೇ ಆಗಲಿ ಸಮಾನತೆ ಹೇಳಿಲ್ಲ. ಎಲ್ಲವೂ ಪುರುಷ ಪ್ರಧಾನವೇ. ತನ್ನ ಹಿಡಿತ ಸಾದಿಸಿದ್ದೆ ಹೆಚ್ಚು. ಅದರ ಜೊತೆಗೆ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.’ ಎಂತಹ ದುರ್ದೈವ ಎಂದರೆ ದೇಶದಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸ್ವರಾಜ್ಯ ನಮ್ಮ ಹಕ್ಕು ಎಂದಿದ್ದ ಬಾಲ ಗಂಗಾಧರನಾಥ ತಿಲಕರು ಸಾರ್ವತ್ರಿಕ ಮತದಾನವನ್ನು ವಿರೋಧಿಸಿದ್ದರು.ಸ್ವಾತಂತ್ರ್ಯ ನಂತರ ಮತದಾನದ ಹಕ್ಕು ಬಂದಿದೆ.
ಸಂವಿಧಾನದಡಿ ನಾವೆಲ್ಲರೂ ಸಮಾನರು ಆದರೆ, ಇವತ್ತಿಗೂ ನಾವೆಲ್ಲಾ ಅಧಿಕಾರ ವಂಚಿತರು. ಸಾಮಾಜಿಕ ಹಾಗೂ ಆರ್ಥಿಕತೆ ಸಮಾಜದ ವ್ಯವಸ್ಥೆಗೆ ಬಹಳ ಮುಖ್ಯವಾದದ್ದು ಎನ್ನುವುದು ಅಂಬೇಡ್ಕರ್ ಅವರ ಪ್ರತಿಪಾದನೆಯಾಗಿತ್ತು.
” ರಾಜಕೀಯ ಪ್ರಜಾತಂತ್ರ ನಾಶವಾಗಿದೆ. ಅಂಬೇಡ್ಕರ್ ಅವರು ಬರೆದ ಸಂವಿಧಾನದ ಮೇಲು ದಾಳಿಯಾಗುತ್ತಿದೆ.
ರಾಜಕೀಯವಾಗಿ ಬಾಲಾಡ್ಯರಾದರು ಆರ್ಥಿಕ, ಸಾಮಾಜಿಕ ಅಸಮತೋಲನ ವ್ಯವಸ್ಥೆಯಿಂದ ಈಗಲೂ ಅಸಮಾನರೆ. ಜಾತಿ ವಿನಾಶದಿಂದ ಸಮಾಜ ಸುಧಾರಣೆ ಸಾಧ್ಯ ಎಂಬುದು ಅಂಬೇಡ್ಕರ್ ಅವರ ಪ್ರಬಲ ಪ್ರತಿಪಾದನೆ ಆಗಿತ್ತು. ಆ ನಿಟ್ಟಿನಲ್ಲಿ ಪುಸ್ತಕವನ್ನು ಸಹ ಹೊರ ತಂದಿದ್ದಾರೆ. ವಿಶೇಷ ಅಂದರೆ ನಡೆಯದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರು ಮಾಡಿದ ಭಾಷಣ.”

ಜಾತಿಯ ಮೂಲ ಇರುವುದು ಹಿಂದೂ ಧರ್ಮದಿಂದ. ಜಾತಿ ವಿನಾಶ ಸಾಧ್ಯ ಇರುವುದು ಸಂವಿಧಾನದಿಂದ. ‘ ಅಂಬೇಡ್ಕರ್ ಬರೆದ ಸಂವಿಧಾನ. ಆದರೆ, ಅಂಬೇಡ್ಕರ್ ಬಯಸಿದ ಸಂವಿಧಾನವೇ ‘ ಪ್ರಶ್ನಿಸಿಕೊಳ್ಳಬೇಕಾದ ಪರಿಸ್ಥಿತಿ.
ಅಂದು ಅಂಬೇಡ್ಕರ್ ಅವರು ಈ ಸಮಾಜದಲ್ಲಿ ದಲಿತ ಎನ್ನುವ ಕಾರಣಕ್ಕೆ ಅನುಭವಿಸಿದ ಯಾತನೆ ಏನಿತ್ತು ಅದು ಇವತ್ತಿಗೂ ಮುಂದುವರಿದಿದೆ. ಪಟ್ಟಣ ಪ್ರದೇಶಗಳಲ್ಲಿ ಜಾತಿ ಹೇಳಿಕೊಳ್ಳಲು ಆಗದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ.
ಭೂಮಿ (ಸಂಪತ್ತು) ರಾಷ್ಟ್ರೀಕರಣಗೊಳ್ಳಬೇಕು ಎನ್ನುವುದು ಅಂಬೇಡ್ಕರ್ ಅವರ ವಾದ. ಎಲ್ಲರಿಗೂ ಸಮಾನ ಹಂಚಿಕೆಯಾಗಬೇಕು. ಇಲ್ಲಿ ಎಲ್ಲರೂ ಒಂದೇ, ಸಮಾನರು ಎನ್ನುವುದು. ಆದರೆ. ಇದುವರಿಗೆ ಅಂತಹ ಬದಲಾವಣೆ ದೇಶದಲ್ಲಿ ಕಾಣಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಮಾದಿಗರ ಕಿವಿಗೆ ಸರ್ಕಾರ ಹೂ ಮುಡಿಸಿದೆ : ಭಾಸ್ಕರ್ ಪ್ರಸಾದ್ ಕಿಡಿ
ವಿಚಾರ ಸಂಕೀರಣದಲ್ಲಿ ಗೌಸ್ ಮೋಹಿದ್ದಿನ್, ಗೌಸ್ ಮುನೀರ್, ಅತೀಕ್, ಗಡಿಕಲ್ ಸುರೇಶ್, ರೀತು, ಮುನ್ನ, ಕೆವಿಎಸ್ ಸಂಘಟನೆ, ಎದ್ದೇಳು ಕರ್ನಾಟಕ ಸಂಘಟನೆ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಇದ್ದರು.