- ಸೋತ ಬೆನ್ನಲ್ಲೇ ಬೆಂಗಳೂರಿಗೆ ಕಾಂಗ್ರೆಸ್ ಬುಲಾವ್
- ಜಗದೀಶ್ ಶೆಟ್ಟರ್ ಕೈಬಿಡುವುದಿಲ್ಲ ಎನ್ನುವ ಅಭಯ
ರಾಜ್ಯದ ಗಮನ ಸೆಳೆದಿದ್ದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಸೋಲು ಕಂಡ ಬೆನ್ನಲ್ಲೇ ಅವರಿಗೆ ಬೆಂಗಳೂರಿಗೆ ಬರಲು ಕಾಂಗ್ರೆಸ್ ಬುಲಾವ್ ನೀಡಿದೆ.
ಇಂದು (ಮೆ 14) ಸಂಜೆ ಶ್ಯಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್ ಶಾಸಕರ ಸಭೆ ನಡೆಯಲಿದೆ. ಪ್ರಬಲ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್ ಸೋತಿರುವ ಬಗ್ಗೆ ಪರಾಮರ್ಶೆ ಕೂಡ ನಡೆಯಲಿದೆ ಎಂದು ತಿಳಿದು ಬಂದಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರು ಬೆಂಗಳೂರಿಗೆ ಬರುವಂತೆ ಜಗದೀಶ್ ಶೆಟ್ಟರ್ ಅವರಿಗೆ ಬುಲಾವ್ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ?: ವಿಜಯಪುರ | ಯತ್ನಾಳ್ ಗೆಲುವು; ಸಾರ್ವಜನಿಕವಾಗಿ ಖಡ್ಗ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತ
ಜಗದೀಶ್ ಶೆಟ್ಟರ್ ಸುಮಾರು 34,053 ಮತಗಳ ಅಂತರದಿಂದ ಮೊದಲ ಬಾರಿಗೆ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋತಿದ್ದಾರೆ. ಇದು ಸಹಜವಾಗಿಯೇ ಶೆಟ್ಟರ್ ಅವರಿಗೆ ತೀವ್ರ ನಿರಾಶೆ ತಂದಿದೆ. ಈ ಹಿಂದೆ ಶೆಟ್ಟರ್ ಅವರನ್ನು ಕೈ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದರು. ಹೀಗಾಗಿ ವಿಧಾನ ಪರಿಷತ್ ಮೂಲಕವಾದರೂ ಅವರನ್ನು ಸಚಿವ ಸಂಪುಟಕ್ಕೆ ಕರೆದುಕೊಳ್ಳುವ ಸಾಧ್ಯತೆ ಬಗ್ಗೆ ಮಾತುಗಳು ಕೇಳಿಬರುತ್ತಿವೆ.