- ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯವಾಡಿದ ಅಮಿತ್ ಶಾ
- ಮುಸ್ಲಿಮರ ಮೀಸಲಾತಿ ಕುರಿತು ಬಿಜೆಪಿಯಿಂದ ರಾಜಕೀಯ
ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಶೇ.6ರಷ್ಟು ಮೀಸಲಾತಿ ನೀಡುವುದಾಗಿ ಹೇಳುತ್ತಿದ್ದಾರೆ. ಹಾಗಾಗಿ ಮತದಾರರು ಎಚ್ಚರಿಕೆಯಿಂದ ಮತ ಹಾಕಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸವದತ್ತಿಯ ಬಿಜೆಪಿ ಅಭ್ಯರ್ಥಿ ರತ್ನಾ ಮಾಮನಿ ಪರವಾಗಿ ಅಮಿತ್ ಶಾ ಮತಯಾಚಿಸಿದ್ದಾರೆ. ಈ ವೇಳೆ ಮಾತನಾಡಿರುವ ಅವರು, “ಧರ್ಮಾಧಾರಿತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆದ್ದರಿಂದ ನಾವು ಮುಸ್ಲಿಮರಿಗೆ ಮೀಸಲಾತಿ ತೆಗೆದಿದ್ದೇವೆ” ಎಂದು ಹೇಳಿದ್ದಾರೆ.
“ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್‌ಗಾಗಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಿತ್ತು. ನಾವು ಅದನ್ನು ರದ್ದು ಮಾಡಿ, ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ ಶೇ.2ರಷ್ಟು ಮೀಸಲಾತಿ ನೀಡಿದ್ದೇವೆ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹತಾಶ ಪ್ರಧಾನಿಯಿಂದ 40 ಪರ್ಸೆಂಟ್ ಸರ್ಕಾರ 40 ಕಿಲೋಮೀಟರ್ ರೋಡ್ ಶೋ: ಜೈರಾಮ್ ರಮೇಶ್ ವ್ಯಂಗ್ಯ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, “ಮುಸ್ಲಿಮರಿಗೆ ಯಾರ ಮೀಸಲಾತಿ ಕಿತ್ತುಕೊಂಡು ಕೊಡುತ್ತೀರಾ ಎಂಬುವುದನ್ನು ಸ್ಪಷ್ಟಪಡಿಸಿ ರಾಹುಲ್ ಬಾಬಾ” ಎಂದು ವ್ಯಂಗ್ಯವಾಡಿದ್ದಾರೆ.
“ರಾಹುಲ್ ಗಾಂಧಿ ಹನುಮ ಹುಟ್ಟಿದ ದಿನದ ಬಗ್ಗೆ ಕೇಳಿದ್ದಾರೆ. ಹನುಮ ಜಯಂತಿ ಯಾವಾಗ ಬರುತ್ತದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಪಿಎಫ್‌ಐ ಬೆಂಬಲಿತ ಕಾಂಗ್ರೆಸ್ಸಿಗರಿಗೆ ನಿಮಗೆ ಗೊತ್ತಿಲ್ಲವೇ” ಎಂದು ಕೇಳಿದ್ದಾರೆ.
ಮುಸ್ಲಿಮರ ಮೀಸಲಾತಿ ರದ್ದತಿ ಪ್ರಕರಣ ಸುಪ್ರೀಂ ಕೋರ್‍ಟ್ ಮೆಟ್ಟಿಲು ಹತ್ತಿದೆ. ಆದರೂ ಬಿಜೆಪಿ ನಾಯಕರು ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರೆ.