ಪ್ರಶಾಂತ್‌ ಸಂಬರಗಿಗೆ ನಗುತ್ತಲೇ ತಿರುಗೇಟು ನೀಡಿದ ಶಿವಣ್ಣ

Date:

ಶಿವಣ್ಣ ಪ್ರಚಾರಕ್ಕೆ ಹಣ ಪಡೆದಿರುವುದಾಗಿ ಆರೋಪಿಸಿದ್ದ ಸಂಬರಗಿ

- Advertisement -

ವಿವಾದಾತ್ಮಕ ಹೇಳಿಕೆ ಹಿಂಪಡೆಯುವಂತೆ ಆಗ್ರಹಿಸಿದ ಹಿರಿಯ ನಟ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಶಿವರಾಜ್‌ ಕುಮಾರ್‌, ಹಣ ಪಡೆದು ಕಾಂಗ್ರೆಸ್‌ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಎಂಬ ಪ್ರಶಾಂತ್‌ ಸಂಬರಗಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಣ್ಣ ನನ್ನ ಬಳಿ ಹಣ ಇಲ್ಲವೇ? ನಿಮ್ಮ ಹೇಳಿಕೆಯನ್ನು ಮೊದಲು ಹಿಂಪಡೆಯಿರಿ ಎಂದು ತಿರುಗೇಟು ನೀಡಿದ್ದಾರೆ.

ಶನಿವಾರ ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಪರ ಭರ್ಜರಿ ಪ್ರಚಾರ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಣ್ಣ, ತಮ್ಮ ಬಗ್ಗೆ ಪ್ರಶಾಂತ್‌ ಸಂಬರಗಿ ಮಾಡಿದ ʼಫೇಸ್‌ಬುಕ್‌ ಪೋಸ್ಟ್‌ʼ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಹಣಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಕೇಳುತ್ತಲೇ ಆಶ್ಚರ್ಯ ವ್ಯಕ್ತಪಡಿಸಿರುವ ಅವರು, “ನಮಗೆ ಹಣ ಮುಖ್ಯವಂತಾ? ಹಾಗಿದ್ದರೆ ನಮ್ಮ ಬಳಿ ದುಡ್ಡಿಲ್ಲವಾ? ದಯವಿಟ್ಟು ಈ ಹೇಳಿಕೆಯನ್ನು ವಾಪಾಸ್‌ ಪಡೆಯಿರಿ. ನಾನು ಹೆಚ್ಚು ಸಿನಿಮಾಗಳನ್ನು ಮಾಡುತ್ತೇನೆ ಎಂಬ ಕಾರಣಕ್ಕೆ ಈ ರೀತಿ ಮಾತನಾಡುವುದು ತಪ್ಪು. ನಾನು ಹಣ ಪಡೆದುಕೊಂಡು ಯಾರ ಪರವೂ ಪ್ರಚಾರ ಮಾಡಲು ಬಂದಿಲ್ಲ. ಮನಸ್ಸಿನಿಂದ ಬಂದಿದ್ದೇನೆ. ಒಬ್ಬ ಮನುಷ್ಯನಾಗಿ ಬಂದಿದ್ದೇನೆಯೇ ಹೊರತು, ವ್ಯಾಪಾರಕ್ಕಾಗಿ ಅಲ್ಲ. ಬೇರೆ ಯಾರನ್ನೂ ಟೀಕಿಸುವುದಕ್ಕಾಗಿ ಕೂಡ ನಾನು ಬಂದಿಲ್ಲ. ನಾನು ಬೆಂಬಲಿಸುತ್ತಿರುವ ವ್ಯಕ್ತಿಗಳ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಬೇರೆ ಯಾರ ಬಗ್ಗೆಯೂ ಮಾತನಾಡಿಲ್ಲ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್‌ ಪರ ಶಿವರಾಜ್‌ ಕುಮಾರ್‌ ಪ್ರಚಾರ : ನಾಲಿಗೆ ಹರಿಬಿಟ್ಟ ಪ್ರಶಾಂತ್‌ ಸಂಬರಗಿ

ಫೇಸ್‌ಬುಕ್‌ನಲ್ಲಿ ಶಿವರಾಜ್‌ ಕುಮಾರ್‌ ಬಗ್ಗೆ ವಿವಾದಾತ್ಮಕ ಬರಹ ಹಂಚಿಕೊಂಡಿದ್ದ ಪ್ರಶಾಂತ್‌ ಸಂಬರಗಿ, “ಶಿವಣ್ಣ ಯಾವತ್ತೂ ʼಸ್ಕ್ರಿಪ್ಟ್‌ʼ ಕೇಳುವುದೇ ಇಲ್ಲ. ಆದರೆ, ಪೇಮೆಂಟ್‌ ತುಂಬಾನೇ ಮುಖ್ಯ, ಒಪ್ಪಿಕೊಂಡಿದ್ದ ಸಿನಿಮಾ ಮಾಡುತ್ತಾರೆ. ತುಂಬಾ ಎಮೋಶನಲ್‌ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್‌ ಆದರೂ ಅವರು ಕೇರ್‌ ಮಾಡಲ್ಲ. ಮತ್ತೆ ಪೇಮೆಂಟ್‌ ತೆಗೆದುಕೊಂಡು ಇನ್ನೊಂದು ಫಿಲಂ ಸೈನ್‌ ಮಾಡಿಬಿಡ್ತಾರೆ. ಅದೇ ಫಾರ್ಮುಲಾ ರಾಜಕೀಯದಲ್ಲೂ ಅನುಸರಿಸಿದ್ದಾರೆ. ಕ್ಯಾಂಡಿಡೇಟ್‌ ಗೆದ್ದರೇನು, ಸೋತರೇನು ಎಲ್ಲ ಒಂದೇ. ಬಂತಾ ಪ್ಯಾಕೇಟ್‌ ಸರಿ. ಆಲ್‌ ರೈಟ್‌ ಮುಂದೆ ಹೋಗೋಣ” ಎಂದು ಗಂಭೀರ ಆರೋಪ ಮಾಡಿದ್ದು, ಶಿವಣ್ಣನ ವಿರುದ್ಧ ಅಶ್ಲೀಲ ಪದ ಪ್ರಯೋಗವನ್ನು ಕೂಡ ಮಾಡಿದ್ದಾರೆ. ಈ ಫೇಸ್‌ಬುಕ್‌ ಪೋಸ್ಟ್‌ಗೆ ಶಿವಣ್ಣನ ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಲೇ ಎಚ್ಚೆತ್ತ ಪ್ರಶಾಂತ್‌ ಸಂಬರಗಿ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸ್ತಬ್ಧ ಚಿತ್ರ ಮಾತಾಡಿದಂತೆ, ಶಬ್ದ ಕಣ್ಣಿಗೆ ಕಾಣಿಸುವಂತೆ- ಸಿನೆಮಾದ ತೆರೆಮರೆಯ ತಾತ್ವಿಕತೆ

ಆಫ್-ಸ್ಕ್ರೀನ್ ಶಬ್ದ ಸಿನೆಮಾದ ಕೇವಲ ತಾಂತ್ರಿಕ ಕುಶಲತೆಯಾಗಿರದೆ, ಅದರ ತಾತ್ವಿಕ ದೃಷ್ಟಿಕೋನವನ್ನೇ...

ಆಟೋಕರೆಕ್ಟ್ ಎಡವಟ್ಟು: ‘ಆತ್ಮಹತ್ಯೆ’ ಪೋಸ್ಟ್ ಹಾಕಿ ಮುಂಬೈ ಪೊಲೀಸರ ಬೆವರಿಳಿಸಿದ ಮರಾಠಿ ನಟ!

ಮರಾಠಿ ಚಿತ್ರರಂಗದ ಜನಪ್ರಿಯ ನಟ ವಿಕಾಸ್ ಸಮುದ್ರೆ ಅವರು ಸಾಮಾಜಿಕ ಜಾಲತಾಣದಲ್ಲಿ...

ನಟ ಶಿವರಾಜ್‌ಕುಮಾರ್ ಜನ ಪರವಾಗಿ ನಿಲ್ಲಬೇಕು; ನಟ ಪ್ರಕಾಶ್‌ ರಾಜ್ ಕರೆ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗ ನಟ ಶಿವರಾಜ್ ಕುಮಾರ್ ಸೇರಿದಂತೆ ಹಲವು...

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ನಟ ದರ್ಶನ್‌ಗೆ ತಾತ್ಕಾಲಿಕ ರಿಲೀಫ್, ‘ಮಾಫಿ ಸಾಕ್ಷಿ’ ಆದೇಶ ವಜಾ

ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ...