‘ಕ್ರೈಮ್ ಕ್ಯಾಪಿಟಲ್‌’ನ ಸಿಎಂ ಯೋಗಿ ಬಿಡುವುದೆಲ್ಲ ಡೋಂಗಿ: ಕಾಂಗ್ರೆಸ್

Date:

Advertisements
  • ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯವಾಗುವ ರಾಜ್ಯ ಯುಪಿ
  • ‘ಯುಪಿ ಮಾದರಿ ಬೇಡ’ ಎಂದು ಸರಣಿ ಟ್ವೀಟ್ ಮಾಡಿದ ಕಾಂಗ್ರೆಸ್

ಅತಿ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕನ್ನಡಿಗರಿಗೆ ಕಾನೂನು ಪಾಠ ಮಾಡುತ್ತಿರುವುದು ಪರಮ ಹಾಸ್ಯ ಎಂದು ಕಾಂಗ್ರೆಸ್ ಕಿಡಿಕಾರಿದೆ.

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಗೆಲುವು ಸಾಧಿಸಬೇಕೆಂದು ಕಸರತ್ತು ನಡೆಸಿರುವ ಬಿಜೆಪಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ರಾಜ್ಯಕ್ಕೆ ಕರೆಸಿದೆ. ಯೋಗಿ ಉತ್ತರ ಪ್ರದೇಶದ ಕುರಿತು ಕೆಲ ಮಾತುಗಳನ್ನು ಆಡಿದ್ದು, ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ತಿರುಗೇಟು ನೀಡಿದೆ.

“ರಾಜ್ಯಕ್ಕೆ ಯುಪಿ ಮಾದರಿ ಬರಬೇಕು ಎಂದು ಅನೇಕ ಬಿಜೆಪಿಗರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುತ್ತಿರುತ್ತಾರೆ. ಈ ನಡುವೆ, ಅವರಿಗೆ ಬಲ ನೀಡುವಂತೆಯೇ ಯೋಗಿ ತಮ್ಮ ಭಾಷಣದಲ್ಲಿ ಉತ್ತರ ಪ್ರದೇಶವನ್ನು ಹೊಗಳಿದ್ದಾರೆ. ‘ಯುಪಿ ಮಾದರಿ ಬೇಡ’” ಎಂದು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಉತ್ತರ ಪ್ರದೇಶದ ಕೆಲ ಅಂಕಿಅಂಶಗಳನ್ನು ಬಹಿರಂಗಗೊಳಿಸಿದೆ.

Advertisements

“2019ರಿಂದ 2021ರವರೆಗೆ 11,302 ಹತ್ಯೆಗಳು. 44,057 ಕಿಡ್ನಾಪ್ಸ್‌, 1,65,321 ಮಹಿಳೆಯರ ವಿರುದ್ಧ ದೌರ್ಜನ್ಯ ಪ್ರಕರಣಗಳು, 6970 ಪೋಕ್ಸೋ ಪ್ರಕರಣಗಳು ಯುಪಿಯಲ್ಲಿ ದಾಖಲಾಗಿವೆ” ಎಂದು ಕಾಂಗ್ರೆಸ್ ಅಂಕಿಅಂಶ ಹಂಚಿಕೊಂಡಿದೆ.

“ಯೋಗಿ ಆದಿತ್ಯನಾಥ್ ಅವರೇ, ತಮ್ಮ ರಾಜ್ಯ, ತಮ್ಮ ಆಡಳಿತ ನಡೆಯುತ್ತಿರುವುದು ಕನ್ನಡಿಗರು ಕಟ್ಟುತ್ತಿರುವ ಬೆವರಿನ ತೆರಿಗೆಯಲ್ಲಿ ಎನ್ನುವುದು ನೆನಪಿರಲಿ. ಕರ್ನಾಟಕದ ತೆರಿಗೆ ಹಣವನ್ನಷ್ಟೇ ಅಲ್ಲ, ಕರ್ನಾಟಕದ ಏರ್ ಶೋವನ್ನೂ ಹೈಜಾಕ್ ಮಾಡಲು ಯತ್ನಿಸಿದ ತಮ್ಮ ಉಪದೇಶ ಕನ್ನಡಿಗರಿಗೆ ಬೇಕಿಲ್ಲ. ಪರಾವಲಂಬಿ ಯೋಗಿ ಮಾತಾಡೋದೆಲ್ಲ ಡೋಂಗಿ!” ಎಂದು ಕಿಡಿಕಾರಿದೆ.

“ದೇಶದ 100 ಅಪರಾಧ ಪ್ರಕರಣಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತವೆ. ಅಪರಾಧದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾದ ಯುಪಿ ಮುಖ್ಯಮಂತ್ರಿ ಕರ್ನಾಟಕಕ್ಕೆ ಬಂದು ಕಾನೂನು ಸುವ್ಯವಸ್ಥೆ ಹಾಗೂ ಅಪರಾಧದ ಬಗ್ಗೆ ಉಪದೇಶ ಕೊಡುವುದು ಪರಮ ಹಾಸ್ಯ. ಮೊದಲು ತಮ್ಮ ರಾಜ್ಯದ ಮಕ್ಕಳನ್ನು ರಕ್ಷಿಸಿಕೊಳ್ಳಲಿ” ಎಂದು ವ್ಯಂಗ್ಯವಾಡಿದೆ.

“ಕೋವಿಡ್‌ನಿಂದ ತನ್ನ ರಾಜ್ಯದ ಜನರನ್ನು ರಕ್ಷಿಸದೆ ಗಂಗೆಯಲ್ಲಿ ತೇಲಿಸಿದ ಯೋಗಿ ಅವರು ಆಕ್ಸಿಜನ್ ನೀಡದೆ ಕರ್ನಾಟಕದ ಜನರನ್ನು ಕೊಂದ ಬಿಜೆಪಿಗರಿಗೆ ಆದರ್ಶ ಎನಿಸಿರಬಹುದು. ಆದರೆ ಕನ್ನಡಿಗರಿಗೆ ಇಂತಹ ದುರಂತದ ಯುಪಿ ಮಾದರಿ ಬೇಡ. ದೇಶಕ್ಕೆ ಕರ್ನಾಟಕವೇ ಮಾಡೆಲ್ ಎನ್ನುವಂತಹ ಆಡಳಿತವನ್ನು ಕಾಂಗ್ರೆಸ್ ನೀಡಿದೆ, ಮುಂದೆಯೂ ನೀಡಲಿದೆ” ಎಂದಿದೆ.

“ಮಹಿಳೆಯರ ಮೃಗಗಳಂತೆ ಮುಗಿಬೀಳುವ ಅತ್ಯಂತ ಕ್ರೂರ ಪರಿಸ್ಥಿತಿ ಇರುವ ಯುಪಿ ಸಿಎಂ ಕರ್ನಾಟಕದಲ್ಲಿ ಡೋಂಗಿ ಭಾಷಣ ಕುಟ್ಟುವ ಅಗತ್ಯವಿಲ್ಲ. ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಗುಡಿಸಲಿಗೆ ಬೆಂಕಿ ಹಚ್ಚಿ, ಎಳೆ ಮಕ್ಕಳನ್ನು ಬೇಯಿಸಿದ ಘಟನೆ ಕಣ್ಣ ಮುಂದಿರುವಾಗ ಯಾವ ನೈತಿಕತೆಯಲ್ಲಿ ಯುಪಿ ಮಾಡೆಲ್ ಜಪಿಸುತ್ತೀರಿ?” ಎಂದು ಪ್ರಶ್ನಿಸಿದೆ.

“ಉತ್ತರ ಪ್ರದೇಶವೆಂದರೆ ‘ಕ್ರಿಮಿನಲ್‌ಗಳ ಸ್ವರ್ಗ’ ಎಂದೇ ಜನಜನಿತವಾಗಿದೆ. ಹಾಡಹಗಲೇ ಯಾವುದೇ ಭಯ ಇಲ್ಲದೆ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತವೆ. ಪೊಲೀಸರ ಎದುರಲ್ಲೇ ಹತ್ಯೆಗಳು ನಡೆಯುತ್ತವೆ. ಯೋಗಿ ಆದಿತ್ಯನಾಥ್ ಅವರೇ, ನಿಮ್ಮ ಪ್ರವಚನ ಕನ್ನಡಿಗರಿಗೆ ಬೇಕಿಲ್ಲ, ನಿಮ್ಮ ತಟ್ಟೆಯಲ್ಲಿನ ಹೆಗ್ಗಣವನ್ನು ನೋಡಿಕೊಳ್ಳಿ” ಎಂದು ವ್ಯಂಗ್ಯವಾಡಿದೆ.

ಈ ಸುದ್ದಿ ಓದಿದ್ದೀರಾ? ಧರ್ಮ ಆಧಾರಿತ ಮೀಸಲಾತಿಯನ್ನು ಅನುಮೋದಿಸಲು ಸಾಧ್ಯವಿಲ್ಲ: ಯೋಗಿ ಆದಿತ್ಯನಾಥ

“‘ಕ್ರೈಮ್ ಕ್ಯಾಪಿಟಲ್’ ಎಂದೇ ಕುಖ್ಯಾತಿ ಪಡೆದಿರುವ ರಾಜ್ಯದ ಮುಖ್ಯಮಂತ್ರಿ ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕಕ್ಕೆ ಬಂದು ಬಡಾಯಿ ಕೊಚ್ಚಿಕೊಳ್ಳುವುದಕ್ಕಿಂತ ಹಾಸ್ಯ ಬೇರೊಂದಿಲ್ಲ. 3 ವರ್ಷದಲ್ಲಿ 11 ಸಾವಿರ ಹತ್ಯೆಗಳು ನಡೆದಿದ್ದು ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದ್ದು ತಮ್ಮ ಅಸಾಮರ್ಥ್ಯದಿಂದ ಅಲ್ಲವೇ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಳೆದ ಐದು ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಗಲಭೆಗಳು ಆಗಿಲ್ಲ ಮತ್ತು ಕರ್ಫ್ಯೂ ಜಾರಿ ಮಾಡಿಲ್ಲ ಎಂದು ಯೋಗಿ ಹೇಳಿಕೊಂಡಿದ್ದಾರೆ.

“ಸುಳ್ಳಿಗೂ ಒಂದು ಮಿತಿ ಬೇಡವೇ ಯೋಗಿ ಅವರೇ, 2017ರಿಂದ 2022ರವರೆಗೆ 35,040 ಕ್ರಿಮಿನಲ್ ಪ್ರಕರಣ ದಾಖಲಾಗಿ, ಕ್ರೈಮ್‌ನಲ್ಲಿ ನಂ1 ರಾಜ್ಯವಾಗಿದ್ದು ಯುಪಿ. ಅತಿ ಹೆಚ್ಚು ಅತ್ಯಾಚಾರ ನಡೆಯುವುದು ನಿಮ್ಮ ಯುಪಿಯಲ್ಲಿ. ದಲಿತರ ಮೇಲೆ ಅತಿ ಹೆಚ್ಚು ದೌರ್ಜನ್ಯವಾಗುವುದು ನಿಮ್ಮಲ್ಲಿ. ಈ ವರದಿ ನೀಡಿದ್ದು ನಿಮ್ಮದೇ ಮೋದಿ ಸರ್ಕಾರ” ಎಂದು ಟ್ವೀಟ್ ಮಾಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X