ಚುನಾವಣೆ 2023 | ದೇವದುರ್ಗಕ್ಕೆ ದಳಪತಿ ಯಾರು?

Date:

Advertisements

ರಾಯಚೂರು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ದೇವದುರ್ಗ ವಿಧಾನಸಭಾ ಕ್ಷೇತ್ರವೂ ಒಂದು. ಪ್ರತೀ ಚುನಾವಣೆ ಸಂದರ್ಭದಲ್ಲಿ ಈ ಕ್ಷೇತ್ರವು ಯಾವುದಾದರು ಒಂದು ಕಾರಣಕ್ಕೆ ಸದ್ದು ಮಾಡುತ್ತಲೇ ಇರುತ್ತದೆ. ಅದೇ ರೀತಿ ಈ ಬಾರಿಯೂ ಕೂಡ ಭಾರೀ ಸದ್ದು ಮಾಡುತ್ತಿದೆ. ವಿಶೇಷವೆಂದರೆ, ಕ್ಷೇತ್ರದಲ್ಲಿ ಮೂವರು ಮಹಿಳೆಯರು ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅವರು ವಿವಿಧ ಪಕ್ಷಗಳಿಂದ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ಸದ್ಯ, ಜೆಡಿಎಸ್‌ನಿಂದ ಕರೆಮ್ಮ ಸ್ಪರ್ಧೆ ಖಚಿತವಾಗಿದೆ. ಈ ಬಾರಿ ಮಹಿಳೆಯರೇ ಈ ಕ್ಷೇತ್ರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯೂ ಹೆಚ್ಚಿದೆ.

ದೇವದುರ್ಗ ವಿಧಾನಸಭಾ ಕ್ಷೇತ್ರ ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಪ್ರಸ್ತುತ ಕ್ಷೇತ್ರವನ್ನು ಬಿಜೆಪಿ ಶಾಸಕ ಕೆ ಶಿವನಗೌಡ ನಾಯಕ ಪ್ರತಿನಿಧಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಗೂ ಬಿಜೆಪಿ ಅವರಿಗೂ ಟಿಕೆಟ್‌ ನೀಡಿದೆ. ಬಿಜೆಪಿಯಿಂದ ಮತ್ತೆ ಕಣಕ್ಕಿಳಿದಿದ್ದಾರೆ. ಶಿವನಗೌಡ ನಾಯಕ ಬಗ್ಗೆ ಕ್ಷೇತ್ರದಲ್ಲಿ ಅತೀ ವಿರೋಧವೂ ಇಲ್ಲ, ಅತೀ ಪರವೂ ಇಲ್ಲ. ಇನ್ನು, 2018ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಕಂಡಿದ್ದ ಕರೆಮ್ಮ, ಕಳೆದ ಐದು ವರ್ಷಗಳಿಂದಲೂ ಕ್ಷೇತ್ರದಲ್ಲಿ ಉತ್ತಮ ಒಡನಾಟವನ್ನು ರೂಪಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ವಿರೋಧ ಪಕ್ಷದ ರೀತಿಯಲ್ಲಿ ಹಾಲಿ ಶಾಸಕರ ವಿರುದ್ಧ ದನಿ ಎತ್ತುವ ಕೆಲಸ ಮಾಡಿದ್ದಾರೆ. ಅವರನ್ನು ಕ್ಷೇತ್ರದ ಜರನು ತನು-ಮನದಿಂದ ಬೆಂಬಲಿಸುತ್ತಿದ್ದಾರೆ. ಅದು ಇತ್ತೀಚೆಗೆ ನಡೆದ ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ವ್ಯಕ್ತವಾಗಿದೆ. ಈ ಬಾರಿ, ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿದ್ದು, ಹಾಲಿ ಶಾಸಕರಿಗೆ ಪ್ರಬಲ ಪೈಪೋಟಿ ನೀಡಲಿದ್ದು, ಹಾಲಿ ಶಾಸಕರನ್ನು ಮಣಿಸುತ್ತಾರೆಂದೂ ಹೇಳಲಾಗುತ್ತಿದೆ.

ಕರೆಮ್ಮ ಎರಡು ಬಾರಿ ಸೋತರು ಜನರ ಸಂಪರ್ಕ ಬಿಡದೆ, ನಿರಂತರವಾಗಿ ಜನರೊಂದಿಗೆ ಇರುವುದು ಅವರಿಗೆ ಗೆಲುವಿಗೆ ದಾರಿ ಮಾಡಿಕೊಡಲಿದೆ. ಇತ್ತೀಚೆಗೆ, ಗಬ್ಬೂರಿಗೆ ತಾಲೂಕು ಸ್ಥಾನಮಾನವನ್ನು ತಪ್ಪಿಸಿದ ಹಾಲಿ ಶಾಸಕರು, ಸ್ವಂತ ಊರಾದ ಅರಕೇರಾವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಮೂಲಕ ಇಲ್ಲಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕೆಲವು ಬಿಜೆಪಿ (ಲಿಂಗಾಯತ) ಮುಖಂಡರು ಹಾಲಿ ಶಾಸಕರ ವಿರುದ್ಧ ತಿರುಗಿ ಬಿದ್ದಿದ್ದಾರೆ.

Advertisements

ಇನ್ನು ಒಂದು ಕಾಲದಲ್ಲಿ ದೇವದುರ್ಗ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದತ್ತು. ಕಾಂಗ್ರೆಸ್‌ ವರ್ಚಸ್ಸು ಕುಸಿದಿದ್ದು. ದೇವದುರ್ಗ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್‌ಗೆ ನೆಲೆಯಿಲ್ಲದಂತಾಗಿದೆ. ಆದರೂ, ಕಾಂಗ್ರೇಸ್‌ ನಲ್ಲಿ ಮಾವ ಬಿ.ವಿ ನಾಯಕ್, ಬಿಜೆಪಿಯಲ್ಲಿ ಅಳಿಯ ಶಿವನಗೌಡ ನಾಯಕ್‌ ಕ್ಷೇತ್ರದ ದಳಪತಿಗಳೆಂದು ಬಾವಿಸಿದ್ದಾರೆ. ನಾವೇ ಇಲ್ಲಿ ನಮ್ಮದೇ ಕಾರುಬಾರು ನಡೆಯುತ್ತದೆಂದು ಮೆರೆಯುತ್ತಿದ್ದಾರೆ. ಒಂದೇ ಕುಟುಂಬದ ನಾಲ್ವರು ಆಕಾಂಕ್ಷಿಗಳಾಗಿ ಕಾಂಗ್ರೆಸ್‌ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಕಂಡ ಪಕ್ಷದ ಕೆಲವು ಕಾರ್ಯಕರ್ತರು ಮತ್ತು ಮುಖಂಡರು ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ.

ಇದೆಲ್ಲದರ ನಡುವೆ ಕರೆಮ್ಮ ಕ್ಷೇತ್ರದಲ್ಲಿ ತಮ್ಮ ಪ್ರಬಾವವನ್ನು ಬೆಳೆಸಿಕೊಂಡು, ಕ್ಷೇತ್ರದ ಜನನಾಯಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈ ಬಾರಿ, ಅವರಿಗೆ ಮಣೆ ಹಾಕಲು ಕ್ಷೇತ್ರದ ಮತದಾರರು ತೀರ್ಮಾನಿಸಿದ್ದಾರೆ ಎನ್ನವಂತೆ ಕ್ಷೇತ್ರದಾದ್ಯಂತ ಚರ್ಚೆಗಳು ನಡೆಯುತ್ತಿವೆ. ಆದರೆ ಕೊನೆಯ ಕ್ಷಣದಲ್ಲಿ ಏನಾದರು ಬದಲಾವಣೆಗಳೂ ಆಗಬಿಡಬಹುದು.

ಈ ಸುದ್ದಿ ಓದಿದ್ದೀರಾ?: ಬಿಜೆಪಿ ಟಿಕೆಟ್ ಕಗ್ಗಂಟು : ಸೋಗಲಾಡಿ ಬಿಜೆಪಿ ಮತ್ತು ವಂಶ ಪಾರಂಪರ್ಯ ರಾಜಕಾರಣ

ಕರೆಮ್ಮರನ್ನು ನೇರವಾಗಿ ಎದುರಿಸಲಾಗುದೆ ಕಾಂಗ್ರೆಸ್‌-ಬಿಜೆಪಿಯಲ್ಲಿರುವ ಮಾವ-ಅಳಿಯ ಒಳಒಪ್ಪಂದ ಮಾಡಿಕೊಂಡು, ತಮ್ಮ ಹಣಬಲವನ್ನು ಪ್ರಯೋಗಿಸಿ ಚುನಾವಣೆಯಲ್ಲಿ ಕರೆಮ್ಮರನ್ನು ಮಣಿಸಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ, ಅಭ್ಯರ್ಥಿಯೆಂದು ಅವರದ್ಧೇ ಕುಟುಂಬದ ರೂಪ ಶ್ರೀನಿವಾಸ ನಾಯಕ್‌ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಬಹುದು. ಯಾಕೆಂದರೆ ರೂಪಾ ಅವರು ರೈತಸಂಘದಲ್ಲಿ ಗುರುತಿಸಿಕೊಂಡಿದ್ದಾರೆ. ಅವರೂ ಸ್ಪರ್ಧಿಸಿದರೆ, ಕರೆಮ್ಮಗೆ ದೊರೆಯಬಹುದಾದ ಒಂದಷ್ಟು ಮತಗಳನ್ನು ರೂಪಾ ಸೆಳೆಯಬಹುದು ಎನ್ನುವ ಲೆಕ್ಕಾಚಾರವೂ ಅವರಲ್ಲಿದೆ.

2018ರ ಚುನಾವಣೆಯಲ್ಲಿ ಇದೇ ಶಿವನಗೌಡ ಅವರು ಕರೆಮ್ಮ ಅವರಿಗೆ ಸಿಗಬೇಕಾದ ಜೆಡಿಎಸ್‌ ಟಿಕೆಟ್‌ನ್ನು ತಪ್ಪಿಸಿ ಅವರದೇ ಕುಟುಂಬದ ಸದಸ್ಯರಿಗೆ ಟಿಕೆಟ್‌ ಕೊಡುವಂತೆ ಮಾಡಿದ್ದರು. ಇದರಿಂದ ಟಿಕೆಟ್‌ ವಂಚಿತರಾದ ಕರೆಮ್ಮ ಜನಾಭಿಪ್ರಾಯ ಪಡೆದು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರನೆಯ ಸ್ಥಾನ ಪಡೆದರು.

ಈ ಬಾರಿ ಕ್ಷೇತ್ರದ ಕರೆಮ್ಮ ಅವರು ಶಾಸಕರಾಗಿ ವಿಧಾನಸೌಧದ ಮೆಟ್ಟಿಲೇರುತ್ತಾರಾ? ಅಥವಾ ಕುಟುಂಬ ರಾಜಕಾರಣಿಗಳ ತಂತ್ರದಿಂದ ಕ್ಷೇತ್ರದಲ್ಲೇ ಉಳಿಯುತ್ತಾರಾ? ಎಲ್ಲದಕ್ಕೂ ಉತ್ತರ ಚುನಾವಣಾ ರಂಗದಲ್ಲಿಯೇ ಸಿಗಲಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

Download Eedina App Android / iOS

X