ನೂರಕ್ಕೆ ನೂರರಷ್ಟು ಜಗದೀಶ್ ಶೆಟ್ಟರ್ ಗೆಲುವು ಸಾಧಿಸುತ್ತಾರೆ ಎಂದು ಪತ್ರ ಬರೆದಿದ್ದ ಮಂಜುನಾಥ ಎಂಬ ಯುವಕನ ಮನೆಗೆ ಶೆಟ್ಟರ್ ಭೇಟಿ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಗೆಲ್ಲುವುದು ಶತಸಿದ್ಧ, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮಂಜುನಾಥ ಎಂಬಾತ ರಕ್ತದಲ್ಲಿ ಪತ್ರ ಬರೆದಿದ್ದನು.
ಯಡಿಯೂರಪ್ಪ ಅವರು ರಕ್ತದಲ್ಲಿ ಬರೆದುಕೊಡುತ್ತೇನೆ ಜಗದೀಶ್ ಶೆಟ್ಟರ್ ಗೆಲ್ಲುವುದಿಲ್ಲ ಎಂದಿದ್ದರು. ಅವರ ಮಾತಿಗೆ ಪ್ರತಿಯಾಗಿ ರಕ್ತದಲ್ಲಿಯೇ ಪತ್ರ ಬರೆದಿದ್ದ ಅಭಿಮಾನಿ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಂಜುನಾಥ ಮನೆಗೆ ಜಗದೀಶ್ ಶೆಟ್ಟರ್ ಭೇಟಿ ನೀಡಿ ಅಭಿಮಾನ ತೋರದ್ದಕ್ಕೆ ಸನ್ಮಾನ ಮಾಡಿದರು. ಇದೇ ವೇಳೆ ಮಂಜುನಾಥ ಸಹ ಚುನಾವಣೆಯಲ್ಲಿ ಗೆಲುವಾಗಲಿ ಎಂದು ಜಗದೀಶ್ ಶೆಟ್ಟರ್ ಅವರಿಗೆ ಶುಭ ಹಾರೈಸಿದರು.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸಿರುವ ಶೆಟ್ಟರ್, “ರಕ್ತದಾನ ಶ್ರೇಷ್ಠದಾನ. ಯಾರೂ ರಕ್ತ ವ್ಯರ್ಥ ಮಾಡಬೇಡಿ. ಅವಶ್ಯಕತೆ ಇರುವವರಿಗೆ ದಾನ ಮಾಡಿ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ರಾಜ್ಯದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡ ಪಕ್ಷ ಬಿಜೆಪಿ
ಪತ್ರದಲ್ಲಿ ಏನಿತ್ತು?
“ಜಗದೀಶ್ ಶೆಟ್ಟರ್ 100ಕ್ಕೆ 100ರಷ್ಟು ವಿಜಯಶಾಲಿಯಾಗುತ್ತಾರೆ. ರಕ್ತದಲ್ಲಿ ಬರೆದುಕೊಡುತ್ತೇನೆ. ಈ ಸಾರಿ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬರುತ್ತದೆ” ಎಂದು ಮಂಜುನಾಥ ರಕ್ತದಲ್ಲಿ ಪತ್ರ ಬರೆದು ಶುಭ ಹಾರೈಸಿದ್ದಾನೆ. ಮಂಜುನಾಥ ಎಂಬಾತನ ರಕ್ತದ ಪತ್ರ ಎಲ್ಲೆಡೆ ವೈರಲ್ ಆಗಿತ್ತು.