ಬಿ ಎಲ್ ಸಂತೋಷ್‌ ನನಗಷ್ಟೇ ಅಲ್ಲ, ತೇಜಸ್ವಿನಿ ಅನಂತಕುಮಾರ್ ಗೂ ಟಿಕೆಟ್ ತಪ್ಪಿಸಿದರು: ಜಗದೀಶ್ ಶೆಟ್ಟರ್

Date:

Advertisements
  • ಸಂತೋಷ್ ವಿರುದ್ದ ಮರಳಿ ವಾಗ್ದಾಳಿ ನಡೆಸಿದ ಜಗದೀಶ್‌ ಶೆಟ್ಟರ್
  • ಯಾರು ಬಂದರೂ ನನ್ನ ಗೆಲುವು ತಡೆಯಲು ಸಾಧ್ಯವಿಲ್ಲ ಮಾಜಿ ಸಿಎಂ

ನನ್ನಂತೆಯೇ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಅವರ ಟಿಕೆಟನ್ನೂ ತಪ್ಪಿಸಲಾಗಿದೆ. ಇದು ವಿಘ್ನ ಸಂತೋಷಿಗಳ ಕೃತ್ಯ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂತೋಷ್‌ ವಿರುದ್ಧ ನೇರ ಆರೋಪ ಮಾಡಿದರು.

ಇಂದು (ಏ.28) ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಬಿಜೆಪಿಯಲ್ಲಿದ್ದರೆ ನಂಬರ್ ಒನ್ ನಾಯಕನಾಗುತ್ತಿದ್ದೆ, ಪ್ರತಿಸ್ಪರ್ಧಿ ಆಗುತ್ತೇನೆ ಎಂಬ ಕಾರಣಕ್ಕೆ ನನ್ನ ವಿರುದ್ಧ ಷಡ್ಯಂತ್ರ ಮಾಡಿದರು. ತೇಜಸ್ವಿನಿ ಅನಂತ್ ಕುಮಾರ್ ಅವರಿಗೂ ಟಿಕೆಟ್ ಕೈತಪ್ಪಲು ಬಿ.ಎಲ್ ಸಂತೋಷ್ ಕಾರಣ. ನನಗೆ ಆದ ಅನ್ಯಾಯ ತೇಜಸ್ವಿನಿ ಅನಂತಕುಮಾರ್ ಗೂ ಆಗಿದೆ ಎಂದವರು ಹೇಳಿದರು.

Advertisements

ಕೆಲವರಿಗೆ ಅಡ್ಡಿ ಆಗುತ್ತೇನೆ ಅಂತ ನನ್ನ ವಿರುದ್ಧ ನೆಗೆಟಿವ್ ಪ್ರಚಾರ ನಡೆಸಿದರು. ಕೆಲವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಇದೆ. ಅವರೆಲ್ಲ ಸೇರಿಕೊಂಡು ನನ್ನ ಹಾದಿಗೆ ಕಲ್ಲು ಹಾಕಿದರು. ನನಗೆ ಟಿಕೆಟ್ ಸಿಗದಂತೆ ನೋಡಿಕೊಂಡರು ಎಂದು ಶೆಟ್ಟರ್ ಆಕ್ರೋಶ ಹೊರ ಹಾಕಿದರು.

ಬಿ ಎಲ್ ಸಂತೋಷ್ ಗೆ ಲಿಂಗಾಯತರ ಹೊರತಾಗಿ ಸರ್ಕಾರ ರಚನೆ ಮಾಡಬೇಕಿದೆ. ಇದಕ್ಕಾಗಿ ಲಿಂಗಾಯತರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಬಿ.ಎಲ್ ಸಂತೋಷ್ ವಿರುದ್ಧ ಮಾತನಾಡಿದ್ದಕ್ಕೆ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ.

ಬಿಜೆಪಿ ಹೈಕಮಾಂಡ್ ನಾಯಕರುಗಳೇ ನನ್ನ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಎಲ್ಲರಿಗೂ ನಾನೇ ಟಾರ್ಗೆಟ್. ಅವರೇನೇ ಮಾಡಿದರೂ ನನ್ನ ಗೆಲುವು ತಡೆಯಲಾಗುವುದಿಲ್ಲ. ನನ್ನ ವಿರುದ್ಧ ಇಷ್ಟೆಲ್ಲ ಮಾಡುವ ಸಂತೋಷ್ ಹೀಗೆಲ್ಲ ಮಾಡುವ ಬದಲು ನೇರವಾಗಿ ನಿಂತು ಯುದ್ದ ಮಾಡಲಿ ಎಂದು ಶೆಟ್ಟರ್ ಸವಾಲೆಸೆದರು.

ಈ ಸುದ್ದಿ ಓದಿದ್ದೀರಾ?:ಸಮೀಪದ ಸ್ಪರ್ಧೆ ಕಾಣಲಿರುವ ಕರ್ನಾಟಕದ 70 ಸೀಟುಗಳಲ್ಲಿ ಗೆಲುವಿಗೆ ಕಾಂಗ್ರೆಸ್ ಒತ್ತು

ಏನು ಮಾಡಿದರು ಜಗದೀಶ ಶೆಟ್ಟರ್ ಸ್ವಲ್ಪ ಸಿಟ್ಟಾಗಿ ಸುಮ್ಮನಾಗಿ ಬಿಡುತ್ತಾರೆ ಎಂದು ಅವರು ಅಂದುಕೊಂಡಿದ್ದರು. ನನ್ನನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ, ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದರಿಂದ ಬಿಜೆಪಿ ಬಿಟ್ಟು ಹೊರ ಬಂದೆ, ನಾನು ಕಾಂಗ್ರೆಸ್ ಸೇರಿರುವುದು ಬಿಜೆಪಿಯವರಿಗೆ ತಳಮಳ ಶುರುವಾಗಿದೆ ಎಂದರು.

ಒಬ್ಬ ಜಗದೀಶ ಶೆಟ್ಟರನನ್ನು ಸೋಲಿಸಲು ಕೇಂದ್ರ-ರಾಜ್ಯ ಸರಕಾರಗಳು, ಇಡೀ ಬಿಜೆಪಿಯೇ ಟೊಂಕ ಕಟ್ಟಿ ನಿಂತಂತಿದೆ. ಯಾರೇ ಬಂದರೂ ಕ್ಷೇತ್ರದ ಜನ ನನ್ನ ಕೈ ಬಿಡುವುದಿಲ್ಲ ಎಂದರು.

ಇತ್ತ ಸಂತೋಷ್‌ ವಿರುದ್ದ ಶೆಟ್ಟರ್‌ ನೀಡಿರುವ ಹೇಳಿಕೆಯೀಗ ಬಿಜೆಪಿ ಮನೆಯೊಳಗೆ ತಲ್ಲಣ ಸೃಷ್ಟಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

ಬಿಹಾರದಲ್ಲಿ ಒಂದು ಮತವನ್ನೂ ಕದಿಯಲು ನಾವು ಬಿಡಲ್ಲ: ರಾಹುಲ್ ಗಾಂಧಿ

ಮತಗಳನ್ನು ಕದಿಯಲು ಚುನಾವಣಾ ಆಯೋಗ ಮತ್ತು ಬಿಜೆಪಿ ಪಾಲುದಾರಿಕೆ ಹೊಂದಿದೆ ಎಂದು...

Download Eedina App Android / iOS

X