ಸಮೀಪದ ಸ್ಪರ್ಧೆ ಕಾಣಲಿರುವ ಕರ್ನಾಟಕದ 70 ಸೀಟುಗಳಲ್ಲಿ ಗೆಲುವಿಗೆ ಕಾಂಗ್ರೆಸ್ ಒತ್ತು

Date:

ಕರ್ನಾಟಕದ ಚುನಾವಣೆಯಲ್ಲಿ ಸಮೀಪದ ಸ್ಪರ್ಧೆ ಕಾಣಲಿರುವ 70 ಸೀಟುಗಳಲ್ಲಿ ಕೊನೆ ಕ್ಷಣದಲ್ಲಿ ಪ್ರಚಾರದ ಮೂಲಕ ಬದಲಾವಣೆ ತರಲು ಕಾಂಗ್ರೆಸ್ ಯೋಜನೆ ರೂಪಿಸಿದೆ.

ಕಾಂಗ್ರೆಸ್‌ನ ಮಿಶನ್ ಕರ್ನಾಟಕ ಯೋಜನೆಯಲ್ಲಿ 2018ರಲ್ಲಿ ಬಿಜೆಪಿ ಗೆದ್ದಿರುವ 28 ಸ್ಥಾನಗಳು ಮತ್ತು ಕಾಂಗ್ರೆಸ್ ಗೆದ್ದಿರುವ 23 ಸ್ಥಾನಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಸಣ್ಣ ಅಂತರದಲ್ಲಿ ಗೆಲುವು ಸಾಧಿಸಿದ್ದ ಈ ಸ್ಥಾನಗಳಲ್ಲಿ ಕ್ಷೇತ್ರವಾರು ಅವಲೋಕನಕ್ಕೆ ಕಾಂಗ್ರೆಸ್ ವೀಕ್ಷಕರನ್ನು ನೇಮಿಸಲಾಗಿದೆ. ಸಮೀಪದ ಸ್ಪರ್ಧೆಯ ಸ್ಥಾನಗಳಲ್ಲಿ ಗಾಂಧಿ ಕುಟುಂಬ ಹೆಚ್ಚು ಪ್ರಚಾರ ಮಾಡುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್‌ನ ಆಂತರಿಕ ಸಮೀಕ್ಷೆಗಳು ಸುಮಾರು 70 ಸ್ಥಾನಗಳನ್ನು ರಾಜ್ಯಾದ್ಯಂತ ಗುರುತಿಸಿದೆ. ಈ ಸ್ಥಾನಗಳಲ್ಲಿ ಸ್ವಲ್ಪ ಹೆಚ್ಚು ಶ್ರಮವಹಿಸಿ ಪ್ರಯತ್ನಪಟ್ಟರೆ ರಾಜ್ಯದ ಪ್ರತಿಷ್ಠಿತ ಚುನಾವಣಾ ಹೋರಾಟದಲ್ಲಿ ಗೆಲುವು ಸಾಧ್ಯವಿದೆ ಎಂದು ಕಾಂಗ್ರೆಸ್‌ ಅಭಿಪ್ರಾಯ. ಈ ಸ್ಥಾನಗಳಲ್ಲಿ ದೇಶಾದ್ಯಂತ ಬಂದಿರುವ ಎಐಸಿಸಿ ವೀಕ್ಷಕರನ್ನು ನೇಮಿಸಲಾಗಿದೆ.

ಗಾಂಧಿ ಕುಟುಂಬದ ಜೊತೆಗೆ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್ ಹಾಗೂ ಸುಖವಿಂದರ್ ಸಿಂಗ್ ಸುಕು ಅವರು ರಾಜ್ಯಾದ್ಯಂತ ವ್ಯಾಪಕ ಪ್ರಚಾರ ಮಾಡಲಿದ್ದಾರೆ. ಪ್ರಿಯಾಂಕಾ ಈಗಾಗಲೇ ಎರಡು ದಿನ ಪ್ರಚಾರ ಮಾಡಿದ್ದು, ಇನ್ನೂ ಆರು ದಿನ ಕರ್ನಾಟಕದಲ್ಲಿರುವ ಸಾಧ್ಯತೆಯಿದೆ.

ಈ ಬಾರಿ ಕರ್ನಾಟಕದಲ್ಲಿ ಸೂಕ್ಷ್ಮ ಕಾರ್ಯಯೋಜನೆಗಳನ್ನು ರೂಪಿಸುತ್ತಿರುವ ಕಾಂಗ್ರೆಸ್, ಕೇಂದ್ರದ ನಾಯಕರನ್ನು 70 ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ನೇಮಿಸಿದೆ. ಈ ಕೊನೆ ಕ್ಷಣದ ಪ್ರಯತ್ನಗಳಿಂದ ಕಾಂಗ್ರೆಸ್‌ನ ಚುನಾವಣಾ ಭರವಸೆಗಳು ಪ್ರತೀ ಮನೆಗೂ ತಲುಪಿಸುವ ಪ್ರಯತ್ನ ಮಾಡಲಾಗುತ್ತಿದೆ.

ರಾಹುಲ್ ಗಾಂಧಿ ಸುಮಾರು 12 ದಿನಗಳ ಕಾಲ ಕರ್ನಾಟಕಾದ್ಯಂತ ಪ್ರಚಾರ ನಡೆಸಲಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಕೆಲವು ಪ್ರಮುಖ ಸ್ಥಾನಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಇಬ್ಬರೂ ಸ್ಥಳೀಯ ವಿಚಾರಗಳು ಮತ್ತು ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳಂತಹ ವಿಚಾರಗಳ ಮೇಲೆ ಹೆಚ್ಚು ಗಮನಹರಿಸಲಿದ್ದಾರೆ.

70 ಸ್ಥಾನಗಳ ಪೈಕಿ 63 ಕ್ಷೇತ್ರಗಳಿಗೆ ಎಐಸಿಸಿ ವೀಕ್ಷಕರನ್ನು ಈಗಾಗಲೇ ಕಳುಹಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 23 ಗೆದ್ದಿದ್ದರೆ, ಬಿಜೆಪಿ 28 ಮತ್ತು ಜೆಡಿಎಸ್ 11 ಅನ್ನು ಗೆದ್ದಿದ್ದವು. ಒಂದು ಸ್ಥಾನದಲ್ಲಿ ಬಿಎಸ್‌ಪಿ ಗೆದ್ದಿತ್ತು. ಪಾವಗಡ, ಕುಂದಗೋಳ, ಹಿರೇಕುರೂರ್‌, ಶೃಂಗೇರಿ, ಬಳ್ಳಾರಿ, ಜಮಖಂಡಿ ಮತ್ತು ಬಾದಾಮಿಗಳಲ್ಲಿ ಕಾಂಗ್ರೆಸ್ ದೊಡ್ಡ ಅಂತರದಲ್ಲಿ ಜಯ ಸಾಧಿಸಿತ್ತು. ಇವುಗಳಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ನಾಲ್ಕು ಕ್ಷೇತ್ರಗಳಾದ ಹನೂರ್‌ ಮತ್ತು ಕೃಷ್ಣರಾಜನಗರಗಳಲ್ಲಿ ಮಂಗಳವಾರ, ಶೃಂಗೇರಿ ಮತ್ತು ಹಿರಿಯೂರುನಲ್ಲಿ ಬುಧವಾರ ಪ್ರಚಾರ ನಡೆಸಿದ್ದಾರೆ.

ಮಧ್ಯಪ್ರದೇಶದ ಗೃಹಸಚಿವ ಬಾಲಾ ಬಚ್ಚನ್‌, ಛತ್ತೀಸ್‌ಗಢದ ಸಚಿವ ಕಾವಾಸಿ ಲಖ್ಮ, ರಾಜ್ಯಸಭಾ ಸಂಸದ ರಣ್‌ಜೀತ್ ರಂಜನ್‌, ಗುಜರಾತ್‌ನ ಮಾಜಿ ವಿಪಕ್ಷ ನಾಯಕ ಪರೇಶ್ ಧಾನನಿ, ಮಹಾರಾಷ್ಟ್ರದ ಮಾಜಿ ಸಚಿವರಾದ ವಿಜಯ್ ವಾಡೆಟಿವಾರ್, ಅಮಿತ್ ದೇಶ್‌ಮುಖ್ ಹಾಗೂ ಸಟೇಜ್ ಪಾಟೀಲ್, ಉತ್ತರಪ್ರದೇಶ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಅಜಯ್ ಕುಮಾರ್ ಲಾಲು ಹಾಗೂ ಉತ್ತರಖಂಡ ಉಪ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಐಕ ಭುವಾನ್ ಕಪ್ರಿ ಮೊದಲಾದವರನ್ನು ವೀಕ್ಷಕರಾಗಿ ಕರ್ನಾಟಕಕ್ಕೆ ಕಳುಹಿಸಲಾಗಿದೆ.

ವೀಕ್ಷಕರ ಕೆಲಸ ಸರಳವೇನಿಲ್ಲ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿ ಒಮ್ಮೆ ಮಾತ್ರ ಗೆದ್ದ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಆದರೆ ಕಾಂಗ್ರೆಸ್‌ನ ಕಾರ್ಯಕರ್ತರು ಮತ್ತು ಸಿಬ್ಬಂದಿಗಳು ಇನ್ನೂ ಆತನ ಪರವಾಗಿದ್ದಾರೆ. ಆತನ ಮಗ ಪಕ್ಕದ ಕ್ಷೇತ್ರದಲ್ಲಿ ಸ್ಪಧಿಸುತ್ತಿದ್ದಾರೆ. ಇಂತಹ ಕ್ಷೇತ್ರದಲ್ಲಿ, ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯು ಟಿಕೆಟ್ ಸಿಗದ ವ್ಯಕ್ತಿಯ ಜೊತೆಗೆ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಉತ್ತಮ ಬಾಂಧವ್ಯ ಬೆಸೆಯುವಂತೆ ಮಾಡಿ ಚುನಾವಣಾ ಕಣ ಸಿದ್ಧಗೊಳಿಸುವ ಜವಾಬ್ದಾರಿ ವೀಕ್ಷಕರ ಮೇಲಿದೆ. ಇಂತಹ ಹಲವು ಕ್ಷೇತ್ರಗಳಲ್ಲಿ ವೀಕ್ಷಕರು ಕಾರ್ಯಕರ್ತರು ಮತ್ತು ಅಭ್ಯರ್ಥಿಗಳ ನಡುವೆ ಕೆಲಸ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿ ಓದಿದ್ದೀರಾ?: ಸಂಚಾರ ನಿಯಮ ಉಲ್ಲಂಘನೆ ಆರೋಪ; ಪ್ರಧಾನಿ ಮೋದಿ ವಿರುದ್ಧ ದೂರು ದಾಖಲು

ಕಾಂಗ್ರೆಸ್‌ನ ಸ್ಥಳೀಯ ನಾಯಕರ ನಡುವಿನ ಅಸಮಾಧಾನ ನಿಭಾಯಿಸುವುದರ ಜೊತೆಗೆ ಪಕ್ಷದ ಸಾಮಾಜಿಕ ಜಾಲತಾಣಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎನ್ನುವ ಕಡೆಗೆ ಗಮನಹರಿಸುವುದು, ಅಗತ್ಯವಿದ್ದರೆ ಜಾತಿ, ಸಮುದಾಯ ಅಥವಾ ಭಾಷಾ ಗುಂಪುಗಳನ್ನು ತಲುಪಲು ಕಾರ್ಯಯೋಜನೆಗಳನ್ನು ರೂಪಿಸುವುದು ವೀಕ್ಷಕರ ಜವಾಬ್ದಾರಿ. ಉಡುಪಿಯ ಕಾಪುವಿನಲ್ಲಿ ರಾಹುಲ್ ಗಾಂಧಿ ಅವರು ಮೀನುಗಾರರ ಜೊತೆಗೆ ಮಾತುಕತೆ ನಡೆಸಿರುವುದು ಇಂತಹ ಪ್ರಯತ್ನಗಳಲ್ಲಿ ಒಂದಾಗಿದೆ.

ಕಾಂಗ್ರೆಸ್ ನೀಡಿರುವ ನಿರುದ್ಯೋಗ ಭತ್ಯೆ, ಡಿಪ್ಲೊಮಾ ಮತ್ತು ಪದವಿ ಓದಿದವರಿಗೆ ಯುವನಿಧಿ ಭತ್ಯೆ, ವಿದ್ಯುತ್ ಶುಲ್ಕಕ್ಕಾಗಿ ಗೃಹ ಜ್ಯೋತಿ ಭತ್ಯೆ ಹಾಗೂ ಕುಟುಂಬದ ಮಹಿಳಾ ಮುಖ್ಯಸ್ಥೆಗೆ ಗೃಹಲಕ್ಷ್ಮೀ ಭತ್ಯೆಗಳು, ಬಿಪಿಎಲ್ ಕುಟುಂಬಗಳಿಗೆ ಅನ್ನ ಯೋಜನೆ ಮೊದಲಾದ ಕಾಂಗ್ರೆಸ್‌ನ ಭರವಸೆಗಳನ್ನು ಜನರಿಗೆ ತಲುಪಿಸುವುದು ಕೂಡ ಮುಖ್ಯ ಉದ್ದೇಶವೆನಿಸಿದೆ.

ಬೆಂಗಳೂರಿನಲ್ಲಿ ತಮಿಳುನಾಡು ಸಂಸದ ಕಾರ್ತಿ ಚಿದಂಬರಂ ಮತ್ತು ಜೋತಿಮಣಿ ತಮಿಳು ಸಮುದಾಯವನ್ನು ತಲುಪಲು ನೆರವಾಗುತ್ತಿದ್ದರೆ, ಕೇರಳದ ಸಂಸದ ಬೆನ್ನಿ ಬೆಹನನ್‌ ಮತ್ತು ಇತರ ನಾಯಕರು ಮಲಯಾಳಿ ಸಮುದಾಯ, ಎನ್‌ ರಘುವೀರ ರೆಡ್ಡಿ ತೆಲುಗು ಸಮುದಾಯ ಹಾಗೂ ಸಂಜಯ್ ನಿರುಪಮ್ ಉತ್ತರ ಭಾರತೀಯರನ್ನು ತಲುಪುವ ಪ್ರಯತ್ನದಲ್ಲಿದ್ದಾರೆ.

ಕಳೆದ ಬುಧವಾರ ಅವಿನಾಶ್ ಪಾಂಡೆ, ಎ ಚೆಲ್ಲ ಕುಮಾರ್, ಮಾಣಿಕಂ ಟಾಗೋರ್, ಅಜಯ್ ಕುಮಾರ್ ಮತ್ತು ಮೋಹನ್ ಪ್ರಕಾಶ್ ಮೊದಲಾದವರನ್ನು ಮಧ್ಯ ಕರ್ನಾಟಕ, ಮೈಸೂರು, ಮುಂಬೈ ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳ ಉಸ್ತುವಾರಿಗೆ ನೇಮಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಾದ್ಯಂತ ಪ್ರಯಾಣ ಮಾಡಿ ಪ್ರಚಾರ ಮಾಡುತ್ತಿದ್ದಾರೆ. ಎಐಸಿಸಿ ಉಸ್ತುವಾರಿ ಕೆಸಿ ವೇಣುಗೋಪಾಲ್ ಬೆಂಗಳೂರಿನಲ್ಲಿ ಇದ್ದುಕೊಂಡು ಟಿಕೆಟ್ ವಿತರಣೆಯಲ್ಲಿ ಅಸಮಾಧಾನಗೊಂಡಿರುವ ನಾಯಕರಿಗೆ ಸಮಾಧಾನ ಮಾಡುತ್ತಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಯಗೊಂಡಿರುವ ಪ್ರಧಾನಿ ವೇದಿಕೆಯಲ್ಲೇ ಕಣ್ಣೀರು ಹಾಕಬಹುದು: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ನಡೆಸಿರುವ ವಾಗ್ದಾಳಿಗೆ ತಿರುಗೇಟು ನೀಡಿರುವ...

ರಣಹೇಡಿ ನಾನಲ್ಲ, ಗಿಫ್ಟ್ ಕೂಪನ್ ಕೊಡುವವರು ರಣಹೇಡಿಗಳು: ಡಿಕೆಶಿಗೆ ಕುಮಾರಸ್ವಾಮಿ ತಿರುಗೇಟು

ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್...

ಛತ್ತೀಸ್‌ಗಢ| ಚುನಾವಣಾ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ

ಚುನಾವಣಾ ಕರ್ತವ್ಯದಲ್ಲಿದ್ದಾಗ ಪೊಲೀಸ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಛತ್ತೀಸ್‌ಗಢದ ಗರಿಯಾಬಂದ್...

ಸತ್ಯ ಹರಿಶ್ಚಂದ್ರನ ಮೊಮ್ಮಗ ತರ ಕುಮಾರಸ್ವಾಮಿ ಮಾತಾಡ್ತಾರೆ: ಡಿ ಕೆ ಶಿವಕುಮಾರ್ ವಾಗ್ದಾಳಿ

ಕುಮಾರಸ್ವಾಮಿ ಅವರಿಗೆ ಮಾನ ಮರ್ಯಾದೆ ಇದೆಯೇ?, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯವರು...