- ಪತ್ರದಲ್ಲಿ 12 ಭರವಸೆಗಳ ಉಲ್ಲೇಖ
- ಕನ್ನಡವೇ ಮೊದಲು ಎಂದ ಜೆಡಿಎಸ್
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಜೆಡಿಎಸ್‌ನ ಪ್ರಣಾಳಿಕೆ ರೂಪದ ಭರವಸೆ ಪತ್ರ ಬಿಡುಗಡೆ ಮಾಡಿದ್ದಾರೆ.
ಚುನಾವಣಾ ತಯಾರಿಯಲ್ಲಿರುವ ಜೆಡಿಎಸ್ ರಾಜ್ಯದ ಮತದಾರರ ಮನಸ್ಸು ಗೆಲ್ಲಲು ಕಸರತ್ತು ನಡೆಸಿದೆ. ಇದರ ಭಾಗವಾಗಿಯೇ ಪ್ರಣಾಳಿಕೆ ರೂಪದ ಭರವಸೆ ಪತ್ರ ಬಿಡುಗಡೆಗೊಳಿಸಲಾಗಿದೆ.
ದೇವೇಗೌಡ ಬಿಡುಗಡೆ ಮಾಡಿರುವ ಪತ್ರದಲ್ಲಿ 12 ಭರವಸೆಗಳನ್ನು ಉಲ್ಲೇಖಿಸಲಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನರಿಗೆ ಸವಲತ್ತುಗಳನ್ನು ನೀಡುವುದಾಗಿ ಜೆಡಿಎಸ್ ಭರವಸೆ ನೀಡಿದೆ.
ಪಂಚರತ್ನ, ಸಾಲಮನ್ನಾ, ಮಹಿಳೆಯರಿಗೆ ನೀಡಲಾಗುವ ಸವಲತ್ತು, ಆಟೋ ಡ್ರೈವರ್ ಗಳಿಗೆ ನೀಡಲಾಗುವ ಮಾಸಿಕ ಧನ ಸಹಾಯ ಸೇರಿದಂತೆ ಹಲವು ಭರವಸೆಗಳನ್ನು ಅನಾವರಣಗೊಳಿಸಲಾಗಿದೆ. ಆದರೆ, ಜೆಡಿಎಸ್‌ನ ಪ್ರಣಾಳಿಕೆಯನ್ನು ಎಚ್ ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಜಗದೀಶ್ ಶೆಟ್ಟರ್‌ಗೆ ಟಿಕೆಟ್ ವಿಳಂಬ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 16 ಸದಸ್ಯರ ರಾಜೀನಾಮೆ
“ಈಗ ನಾನು ಹನ್ನೆರಡು ಭರವಸೆಗಳನ್ನು ಬಿಡುಗಡೆ ಮಾಡುತ್ತೇನೆ. ಅಧಿಕಾರಕ್ಕೆ ಬಂದ ನಂತರ ಏನು ಮಾಡಬೇಕೆಂದು ಒಂದು ಕಮಿಟಿ ಮಾಡಿ ಅದರ ಮೂಲಕ ಕಾರ್ಯಕ್ರಮಗಳನ್ನು ಜಾರಿ ಮಾಡಲಿದ್ದಾರೆ” ಎಂದು ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.
“ಇದು ಭರವಸೆಯಷ್ಟೆ, ಪ್ರಣಾಳಿಕೆಯಲ್ಲ. ಹೆಣ್ಣು ಮಕ್ಕಳಿಗೆ ನಾನು ಮೀಸಲಾತಿ ನೀಡಿದ್ದೆ, ಮೋದಿಯವರಿಗೆ ಪತ್ರ ಕೂಡ ಬರೆದಿದ್ದೇನೆ. ಹೆಣ್ಣು ಮಕ್ಕಳ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ನಾನು” ಎಂದು ಹೇಳಿದ್ದಾರೆ.
12 ಭರವಸೆಗಳು
- ಕನ್ನಡವೇ ಮೊದಲು
- ಶಿಕ್ಷಣವೇ ಅಧುನಿಕ ಶಕ್ತಿ
- ಧಾರ್ಮಿಕ ಅಲ್ಪ ಸಂಖ್ಯಾತರ ಪ್ರಗತಿ
- ಹಿರಿಯ ನಾಗರಿಕರ ಸನ್ಮಾನ
- ರೈತ ಚೈತನ್ಯ
- ವಿಕಲ ಚೇತನರಿಗೆ ಆಸರೆ
- ಆರಕ್ಷಕರಿಗೆ ಅಭಯ
- ಮಹಿಳಾ ಸಬಲೀಕರಣ
- ಪರಿಶಿಷ್ಟ ಜಾತಿ, ಪಂಗಡಗಳ ಏಳಿಗೆ
- ಆರೋಗ್ಯ ಸಂಪತ್ತು
- ಯುವಜನ ಸಬಲೀಕರಣ
- ವೃತ್ತಿ ನಿರತ ವಕೀಲರ ಅಭ್ಯುದಯ