ಜೆಡಿಎಸ್‌ನ ಭರವಸೆ ಪತ್ರ ಬಿಡುಗಡೆ

Date:

  • ಪತ್ರದಲ್ಲಿ 12 ಭರವಸೆಗಳ ಉಲ್ಲೇಖ
  • ಕನ್ನಡವೇ ಮೊದಲು ಎಂದ ಜೆಡಿಎಸ್‌

ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಜೆಡಿಎಸ್‌ನ ಪ್ರಣಾಳಿಕೆ ರೂಪದ ಭರವಸೆ ಪತ್ರ ಬಿಡುಗಡೆ ಮಾಡಿದ್ದಾರೆ.

- Advertisement -

ಚುನಾವಣಾ ತಯಾರಿಯಲ್ಲಿರುವ ಜೆಡಿಎಸ್‌ ರಾಜ್ಯದ ಮತದಾರರ ಮನಸ್ಸು ಗೆಲ್ಲಲು ಕಸರತ್ತು ನಡೆಸಿದೆ. ಇದರ ಭಾಗವಾಗಿಯೇ ಪ್ರಣಾಳಿಕೆ ರೂಪದ ಭರವಸೆ ಪತ್ರ ಬಿಡುಗಡೆಗೊಳಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ...

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ. ವಾಸ್ತವವಾಗಿ, ಶಾಂತಿಯುತ ಸಭೆಗೆ ಜಾಗ ನೀಡದೆ ಸರ್ಕಾರವೇ ಅಡೆತಡೆಗಳನ್ನು ಸೃಷ್ಟಿಸುತ್ತಿದೆ. ಈ ಉದ್ದೇಶವನ್ನು ಬೆಂಬಲಿಸುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬೀದಿಗೆ...

ದೇವೇಗೌಡ ಬಿಡುಗಡೆ ಮಾಡಿರುವ ಪತ್ರದಲ್ಲಿ 12 ಭರವಸೆಗಳನ್ನು ಉಲ್ಲೇಖಿಸಲಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಜನರಿಗೆ ಸವಲತ್ತುಗಳನ್ನು ನೀಡುವುದಾಗಿ ಜೆಡಿಎಸ್ ಭರವಸೆ ನೀಡಿದೆ.

ಪಂಚರತ್ನ, ಸಾಲಮನ್ನಾ, ಮಹಿಳೆಯರಿಗೆ ನೀಡಲಾಗುವ ಸವಲತ್ತು, ಆಟೋ ಡ್ರೈವರ್ ಗಳಿಗೆ ನೀಡಲಾಗುವ ಮಾಸಿಕ ಧನ ಸಹಾಯ ಸೇರಿದಂತೆ ಹಲವು ಭರವಸೆಗಳನ್ನು ಅನಾವರಣಗೊಳಿಸಲಾಗಿದೆ. ಆದರೆ, ಜೆಡಿಎಸ್‌ನ ಪ್ರಣಾಳಿಕೆಯನ್ನು ಎಚ್‌ ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಜಗದೀಶ್ ಶೆಟ್ಟರ್‌ಗೆ ಟಿಕೆಟ್‌ ವಿಳಂಬ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 16 ಸದಸ್ಯರ ರಾಜೀನಾಮೆ

“ಈಗ ನಾನು ಹನ್ನೆರಡು ಭರವಸೆಗಳನ್ನು ಬಿಡುಗಡೆ ಮಾಡುತ್ತೇನೆ. ಅಧಿಕಾರಕ್ಕೆ ಬಂದ ನಂತರ ಏನು ಮಾಡಬೇಕೆಂದು ಒಂದು ಕಮಿಟಿ ಮಾಡಿ ಅದರ ಮೂಲಕ ಕಾರ್ಯಕ್ರಮಗಳನ್ನು ಜಾರಿ ಮಾಡಲಿದ್ದಾರೆ” ಎಂದು ಎಚ್‌ ಡಿ ದೇವೇಗೌಡ ಅವರು ಹೇಳಿದ್ದಾರೆ.

“ಇದು ಭರವಸೆಯಷ್ಟೆ, ಪ್ರಣಾಳಿಕೆಯಲ್ಲ. ಹೆಣ್ಣು ಮಕ್ಕಳಿಗೆ ನಾನು ಮೀಸಲಾತಿ ನೀಡಿದ್ದೆ, ಮೋದಿಯವರಿಗೆ ಪತ್ರ ಕೂಡ ಬರೆದಿದ್ದೇನೆ. ಹೆಣ್ಣು ಮಕ್ಕಳ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ನಾನು” ಎಂದು ಹೇಳಿದ್ದಾರೆ.

12 ಭರವಸೆಗಳು

  • ಕನ್ನಡವೇ ಮೊದಲು
  • ಶಿಕ್ಷಣವೇ ಅಧುನಿಕ ಶಕ್ತಿ
  • ಧಾರ್ಮಿಕ ಅಲ್ಪ ಸಂಖ್ಯಾತರ ಪ್ರಗತಿ
  • ಹಿರಿಯ ನಾಗರಿಕರ ಸನ್ಮಾನ
  • ರೈತ ಚೈತನ್ಯ
  • ವಿಕಲ ಚೇತನರಿಗೆ ಆಸರೆ
  • ಆರಕ್ಷಕರಿಗೆ ಅಭಯ
  • ಮಹಿಳಾ ಸಬಲೀಕರಣ
  • ಪರಿಶಿಷ್ಟ ಜಾತಿ, ಪಂಗಡಗಳ ಏಳಿಗೆ
  • ಆರೋಗ್ಯ ಸಂಪತ್ತು
  • ಯುವಜನ ಸಬಲೀಕರಣ
  • ವೃತ್ತಿ ನಿರತ ವಕೀಲರ ಅಭ್ಯುದಯ
eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಇದು ಕೇವಲ ಒಂದು ಪಕ್ಷದ ಹೋರಾಟವಲ್ಲ, ವ್ಯವಸ್ಥೆಯ ಮೇಲಿನ ನಂಬಿಕೆಯ ಬಿಕ್ಕಟ್ಟು

ಜೆಪಿಯ ಟೀಕೆಗಳು ತೀಕ್ಷ್ಣವಾಗಿದ್ದರೂ, ಅದು ಅಹಿಂಸಾತ್ಮಕವಾಗಿದೆ. ಹೆದ್ದಾರಿ ತಡೆಗಳಿಲ್ಲ, ಬಲವಂತದ ಬಂದ್‌ಗಳಿಲ್ಲ....

ನೊಬೆಲ್‌ ಪ್ರಶಸ್ತಿ ಸರಣಿ | ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ನವಿ ಪಿಳ್ಳೈಗೆ ಒಲಿದ ಶಾಂತಿ ಪುರಸ್ಕಾರ

ಈ ಬಾರಿಯ ಶಾಂತಿ ನೊಬೆಲ್‌ ಪ್ರಶಸ್ತಿಯನ್ನು ಶಾಂತಿ ಮತ್ತು ಅಂತಾರಾಷ್ಟ್ರೀಯ ಕಾನೂನನ್ನು...

ನಮ್ಮ‌ ಪ್ರಸ್ತಾಪಗಳನ್ನು ರಾಷ್ಟ್ರಪತಿ ನಿರಾಕರಿಸಿದ್ದು ಅಚ್ಚರಿ ಮೂಡಿಸಿದೆ, ಸಾಕ್ಷ್ಯ ಕೇಳಿದ್ದಾರೆ – ಕೊಡುತ್ತೇವೆ: ರಾಹುಲ್ ಗಾಂಧಿ

ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕಿರುವ ಕುರಿತು ನಾವು ಎತ್ತಿರುವ ವಿಷಯವನ್ನು...

ಪ್ರತಿಭಟನೆ ಹಿನ್ನೆಲೆ ಮೆಟ್ರೋ ಬಂದ್; ‘ನೊಣ ಕೊಲ್ಲೋಕೆ ಸುತ್ತಿಗೆ ಬೇಡ’ – ಮಾರ್ಮಿಕವಾಗಿ ನುಡಿದ ಸುಪ್ರೀಂ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಜಂತರ್ ಮಂತರ್‌ನಲ್ಲಿ ಆಯೋಜಿಸಿರುವ ಪ್ರತಿಭಟನೆಯನ್ನು ತಡೆಯಲು...