ಕೋಳಿ ಕೃಷಿಯಲ್ಲಿ ಲಾಭಾಂಶವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ರಕ್ಷಿಸಲು ಮತ್ತು ಕಂಪನಿಗಳಿಂದ ಆಗುತ್ತಿರುವ ಆರ್ಥಿಕ ನಷ್ಟವನ್ನು ತಪ್ಪಿಸಲು, ಪ್ರತಿ ಕೆ.ಜಿ. ತೂಕಕ್ಕೆ ಕನಿಷ್ಠ 10 ರೂಪಾಯಿಗಳ ಕೋಳಿ ಬೆಳವಣಿಗೆ ದರವನ್ನು ನಿಗದಿಪಡಿಸಬೇಕು ಎಂದು ಕೆ.ಜಿ.ಎಫ್ ತಾಲೂಕು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘವು ಒತ್ತಾಯಿಸಿದೆ.
ಈ ಕುರಿತು ಸಂಘದ ಪದಾಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕೃತ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.
ಸರ್ಕಾರದ ಆದೇಶ ಪಾಲನೆಗೆ ಆಗ್ರಹ: ಕರ್ನಾಟಕ ಸರ್ಕಾರ ನೀಡಿರುವ ಆದೇಶದಂತೆ ಒಪ್ಪಂದದ ಪದ್ಧತಿಯಲ್ಲಿ ಕೋಳಿ ಬೆಳೆಸುವ ರೈತರಿಗೆ ಎಲ್ಲಾ ಕಂಪನಿಗಳು ಕಡ್ಡಾಯವಾಗಿ ಕನಿಷ್ಠ ಪ್ರತಿ ಕೆ.ಜಿ ಗೆ 10 ರೂಪಾಯಿಗಳ ದರವನ್ನು ನೀಡಬೇಕು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಒತ್ತಾಯಿಸಿದ್ದಾರೆ.
ಸರ್ಕಾರದ ಈ ಆದೇಶವನ್ನು ತಪ್ಪದೇ ಪಾಲಿಸಬೇಕು. ಒಂದು ವೇಳೆ ಯಾವುದೇ ಕಂಪನಿಯು ಕರ್ನಾಟಕದ ರೈತರಿಗೆ ಈ ದರವನ್ನು ನೀಡದಿದ್ದಲ್ಲಿ, ಅಂತಹ ಕಂಪನಿಗಳ ರಾಜ್ಯದ ನೋಂದಣಿಯನ್ನು ರದ್ದುಪಡಿಸಲಾಗುವುದು ಹಾಗೂ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಎಫ್ ಸಿ ಆರ್ ಕಡಿತಕ್ಕೆ ತಡೆ:
ಈ ಆದೇಶವನ್ನು ಎಫ್ ಸಿ ಆರ್ ಮತ್ತು ಉತ್ಪಾದಿತ ವೆಚ್ಚದ ಪ್ರಕಾರವಾಗಿ ಪಾಲಿಸತಕ್ಕದ್ದು ಹಾಗೂ ಯಾವುದೇ ಎಫ್ ಸಿ ಆರ್ ಕಡಿತವನ್ನು ಕನಿಷ್ಠ ದರದಲ್ಲಿ ಕಡಿತ ಮಾಡಬಾರದು ಎಂದು ಸಂಘವು ಸ್ಪಷ್ಟಪಡಿಸಿದೆ.
ಕೋಳಿ ರೈತರ ಹಿತರಕ್ಷಣೆಗಾಗಿ ಈ ನಿಯಮಗಳನ್ನು ತಕ್ಷಣದಿಂದಲೇ ಜಾರಿಗೆ ತರಬೇಕು ಎಂದು ಕೆ.ಜಿ.ಎಫ್ ತಾಲೂಕು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಜಂಟಿಯಾಗಿ ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ..?ಕೋಲಾರ | ಎಸ್ಐಆರ್ ನೋಂದಣಿಗೆ ಸಮಯಾವಕಾಶ ನೀಡುವಂತೆ ಡಿಸಿಗೆ ಜನಪರ ಸಂಘಟನೆಗಳ ಒತ್ತಾಯ
ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅವರು ಪಶು ಸಂಗೋಪನೆ ಮಾನ್ಯ ಸಚಿವರಿಂದ ಅನುಮೋದನೆಗೊಂಡಿದ್ದು ಅವರ ಆದೇಶದಂತೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯುಕ್ತರು ಆದೇಶದಂತೆ ಈ ಕೂಡಲೇ ಪರಿಷ್ಕೃತ ದರವನ್ನು ನೀಡಲು ಕೋಳಿ ಸಾಕಾಣಿಕೆದಾರಲ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.





