ಕೋಲಾರ | ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ ಸಿಎಂಆರ್ ಶ್ರೀನಾಥ್

Date:

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕೋಲಾರ ನಗರದ ಕೀಲುಕೋಟೆ ಬಡಾವಣೆಯ ಚಿನ್ಮಯ ಪ್ರೌಢಶಾಲೆಯ ವಿದ್ಯಾರ್ಥಿ ಕೆ. ಎನ್. ಲಕ್ಷ್ಮಿ ೬೨೫ಕ್ಕೆ ೬೨೪ ಅಂಕ ಪಡೆದು ಜಿಲ್ಲೆಯ ಟಾಪರ್‌ಗಳಲ್ಲಿ ಒಬ್ಬರಾಗಿದ್ದಾರೆ.
ಬಂಗಾರಪೇಟೆ ತಾಲ್ಲೂಕಿನ ಮಾವಳ್ಳಿ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ್ ಹಾಗೂ ಕೋಲಾರದ ಮಂಗಸದ್ರ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕಿ ನಾಗವೇಣಿ ಶಿಕ್ಷಕರ ದಂಪತಿಗಳ ಪುತ್ರಿ ಲಕ್ಷ್ಮಿ ಕೆ. ಎನ್ ಅವರು ಚಿನ್ಮಯ ಪ್ರೌಢಶಾಲೆಯ ವಿದ್ಯಾರ್ಥಿಯಾಗಿ ಸಾಧನೆ ಮಾಡಿದ್ದಾರೆ.

ಜೆಡಿಎಸ್ ಮುಖಂಡ ಸಿ.ಎಂ.ಆರ್ ಶ್ರೀನಾಥ್ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ದ ವಿದ್ಯಾರ್ಥಿ ಕೆ.ಎನ್. ಲಕ್ಷ್ಮಿ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂಧಿಸಿ ಮಾತನಾಡಿ, ವಿದ್ಯಾರ್ಥಿಗಳು ಸತತ ಪರಿಶ್ರಮದಿಂದ ಉತ್ತಮ ಸಾಧನೆಯ ನಿಟ್ಟಿನಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಶಿಕ್ಷಣದ ಮೂಲಕ ಮುಂದೆ ವಿದ್ಯಾಭ್ಯಾಸದಲ್ಲಿಯೂ ಸಹ ಮತ್ತಷ್ಟು ಯಶಸ್ಸುಗಳಿಸಿ, ದೇಶಕ್ಕೆ ತಮ್ಮದೇ ಅದ ಕೊಡುಗೆಯನ್ನು ನೀಡುವ ಕಾರ್ಯ ನಿಮ್ಮ ಮೇಲೆ ಇದೆ ಎಂದರು.
ವಿದ್ಯಾರ್ಥಿಗಳು ಯಾರು ಸಹ ಪರೀಕ್ಷೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ ಎಂದು ಧೃತಿಗೆಡಬೇಡಿ, ನಿರಂತರ ಪ್ರಯತ್ನದಿಂದ ಅಂತಿಮ ಗುರಿಯನ್ನು ತಲುಪಲು ಸಾಧ್ಯ, ಹೀಗಾಗಿ ನಾನಾ ಅವಕಾಶಗಳು ದೊರೆಯುತ್ತದೆ ಎಂದರು. ಜೀವನದಲ್ಲಿ ಅಂಕಗಳ ಜತೆಯಲ್ಲೇ ಕೌಶಲ್ಯಗಳ ಮೂಲಕ ನಿಜವಾದ ಸಾಧನೆ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

ಬಗ್ಗೆ ಪ್ರತಿಕ್ರಿಯಿಸಿದ ಸಾಧಕಿ ವಿದ್ಯಾರ್ಥಿ ಕೆ.ಎನ್ ಲಕ್ಷ್ಮಿ ಮಾತನಾಡಿ, ಅಂದಿನ ಪಾಠವನ್ನು ಅಂದೇ ಕಣ್ಣುಹಾಯಿಸುತ್ತಿದ್ದೆ. ಪಠ್ಯವನ್ನು ಓದಿ ಮುಗಿಸಲು ತಿಂಗಳ ಗುರಿಯನ್ನು ಇಟ್ಟುಕೊಂಡಿದ್ದೆ. ಪೋಷಕರು ಹಾಗೂ ವಿದ್ಯಾಸಂಸ್ಥೆಯವರ ಪ್ರೋತ್ಸಾಹ, ಮಾರ್ಗದರ್ಶನ ಸಾಧನೆಗೆ ಪ್ರೇರಣೆ. ಮುಂದೆ ಎನ್‌ಇಇಟಿ ಪರೀಕ್ಷೆ ಬರೆಯುವ ಮೂಲಕ ವೈದ್ಯರಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿದ್ದೀರಾ..? ಬಾಗೇಪಲ್ಲಿ | ಎಸ್. ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟ ರಾಜ್ಯಕ್ಕೆ 4ನೇ ಟಾಪರ್ ಆದ ಬಾಗೇಪಲ್ಲಿ ಯಶಸ್ವಿನಿ

ಈ ವೇಳೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್ ಗಣೇಶ್, ಜೆಡಿಎಸ್ ಮುಖಂಡರಾದ ಬಣಕನಹಳ್ಳಿ ನಟರಾಜ್, ವೆಂಕಟೇಶ್‌ಗೌಡ, ರೋಟರಿ ಸುಧಾಕರ್, ಕೀಲುಕೋಟೆ ವಿಜಿ, ವಿಶ್ವ ಭೇಟಿ ನೀಡಿ ಶುಭ ಹಾರೈಸಿದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೆಜಿಎಫ್ | ಗಾಳಿ ಮಳೆಗೆ ಮನೆಯ ಮೇಲ್ಚಾವಣಿ ನಾಶ ಕುಟುಂಬಸ್ಥರು ಕಣ್ಣೀರು

ಬೇತಮಂಗಲ ಸಮೀಪದ ಹುಲ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟಾಪುರ ಗ್ರಾಮದ ರತ್ನಮ್ಮ...

ಕೋಲಾರ | ಬೆಗ್ಲಿ ಹೊಸಹಳ್ಳಿ ಶಾಲೆಯಲ್ಲಿ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ

ತಾಲೂಕಿನ ಬೆಗ್ಲಿ ಹೊಸಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2003-2004ನೇ ಸಾಲಿನ ವಿದ್ಯಾರ್ಥಿಗಳಿಂದ...

ಕೋಲಾರ | ಅವೈಜ್ಞಾನಿಕ ರಸ್ತೆ, ಚರಂಡಿ ಕಾಮಗಾರಿ: ವಿಜಯಗರ ಬಡಾವಣೆ ನಿವಾಸಿಗಳು ಆಕ್ರೋಶ

ನಗರ ಹೊರವಲಯದ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಬಡಾವಣೆಯಲ್ಲಿ (ಹಾರೋಹಳ್ಳಿ...

ಶ್ರೀನಿವಾಸಪುರ | ದಕ್ಷಿಣ ಭಾರತ ಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಶ್ರೀನಿವಾಸಪುರದ ಅಬ್ಬಾಸ್ ಬಾಬುಗೆ ತೃತೀಯ ಸ್ಥಾನ

ಶ್ರೀನಿವಾಸಪುರ: ಪಟ್ಟಣದ ಅಕ್ಬರ್ ರಸ್ತೆಯ ನಿವಾಸಿ ಅಬ್ಬಾಸ್ ಬಾಬು ಅವರು ಬೆಂಗಳೂರಿನಲ್ಲಿ...