- ಬಿಜೆಪಿ, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಯತೀಂದ್ರ ಸಿದ್ದರಾಮಯ್ಯ
- ಸಿದ್ದರಾಮಯ್ಯ ಸೋಲಿಸಲು ಸಾಧ್ಯವಿಲ್ಲ ಎಂದ ವರುಣಾ ಕ್ಷೇತ್ರದ ಶಾಸಕ
ವರುಣಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸಲು ರಾಹು-ಕೇತು-ಶನಿ ಒಂದಾಗಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ವರುಣಾದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಒಂದಾಗಿವೆ. ಒಳ ಒಪ್ಪಂದ ಮಾಡಿಕೊಂಡು ಕೆಲಸ ಮಾಡುತ್ತಿವೆ ಎಂದು ದೂರಿದರು.
2018ರ ಚುನಾವಣೆ ಮಾದರಿಯಲ್ಲಿ ಸಿದ್ದರಾಮಯ್ಯ ವಿರುದ್ದ ಎರಡೂ ಪಕ್ಷಗಳು ಒಂದುಗೂಡಿವೆ. ಚಾಮುಂಡೇಶ್ವರಿ ಚುನಾವಣೆಯಂತೆ ಈ ಬಾರಿಯೂ ಒಂದಾಗಿವೆ. ಬಿಜೆಪಿ ಆದೇಶದಂತೆ ವರುಣದಲ್ಲಿ ಅಭ್ಯರ್ಥಿ ಬದಲು ಮಾಡಿದ್ದಾರೆ ಎಂದು ಯತೀಂದ್ರ ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? :ಈ ಬಾರಿಯ ಚುನಾವಣಾ ಕಣದಲ್ಲಿ 184 ಮಹಿಳೆಯರು : ಕೆಲವು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಮಹಿಳೆಯರೇ ಸವಾಲು
ಕಾಂಗ್ರೆಸ್ ಮತ ಒಡೆಯಲು ಹಣದ ಆಮಿಷವೊಡ್ಡುತ್ತಿದೆ. ಸಿದ್ದರಾಮಯ್ಯ ಸೋಲಿಸಲು ರಾಹು – ಕೇತು – ಶನಿ ಒಂದಾಗಿದ್ದಾರೆ ಎಂದು ಅವರು ಆರೋಪಿಸಿದರು.