ಚುನಾವಣೆ 2023 | ಮೌಢ್ಯಕ್ಕೆ ಸೆಡ್ಡು; ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿದ ಸತೀಶ್ ಜಾರಕಿಹೊಳಿ

Date:

Advertisements
  • ತಮ್ಮ ಪುತ್ರನೊಂದಿಗೆ ಬಂದು ಸರಳವಾಗಿ ನಾಮಪತ್ರ ಸಲ್ಲಿಕೆ
  • ಬೆಳಗಾವಿಯ 18 ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆ ನನ್ನದೇ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ವಿಶೇಷ ಆಚರಣೆ ಮತ್ತು ಸಂಪ್ರದಾಯಗಳಲ್ಲಿ ಗುರುತಿಸಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇಂದು ಮತ್ತೊಮ್ಮೆ ಅಂತದ್ದೇ ಆಚರಣೆ ಮಾಡಿದ್ದು, ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಮತ್ತೆ ಸುದ್ದಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆ ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸತೀಶ್‌ ಇಂದು ಅಮಾವಾಸ್ಯೆ ಮತ್ತು ಸೂರ್ಯ ಗ್ರಹಣ ಇರುವುದು ಮಾತ್ರವಲ್ಲದೇ ರಾಹುಕಾಲದಲ್ಲಿಯೇ ತಮ್ಮ ಪುತ್ರನೊಂದಿಗೆ ತೆರಳಿ ಸರಳವಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ನಾನು ಮೌಢ್ಯ ವಿರೋಧ ಮಾಡಿದರೆ ಬಿಜೆಪಿಯವರು ನನ್ನನ್ನು ವಿರೋಧ ಮಾಡುತ್ತಾರೆ. ಇದು ಸ್ವಾಭಾವಿಕ, ರಾಜಕೀಯದಲ್ಲಿ ಇರುವಾಗ ಯಾವುದಾದರು ಕಾರಣಕ್ಕೆ ವಿರೋಧ ಮಾಡಲೇಬೇಕು ಹಾಗಾಗಿ ಇಂತಹ ಚಿಕ್ಕ ಕಾರಣಕ್ಕಾಗಿ ವಿರೋಧ ಮಾಡುತ್ತಾರೆ. ಆದರೆ, ನಾನು ಕರ್ನಾಟದಲ್ಲಿ ಟಾಪ್ 10ರಲ್ಲಿ ಆಯ್ಕೆ ಆಗುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisements

ಈ ಸುದ್ದಿ ಓದಿದ್ದೀರಾ? : ಡಿಕೆಶಿ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಅರ್ಜಿ ವಜಾ ಮಾಡಿದ ಹೈಕೋರ್ಟ್

ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡುತ್ತಾ, “ಈ ಸಲ ನನಗೆ ಎಷ್ಟು ಮತ ಬರುತ್ತೆ, ನಮ್ಮ ಪರವಾಗಿ ಎಷ್ಟು ಹಿಂದುಗಳಿದ್ದಾರೆ ಎಂದು ಮೇ 13ರ ಬೆಳಗ್ಗೆ 11 ಗಂಟೆಗೆ ಮತಗಳ ಮೂಲಕವೇ ಉತ್ತರ ಕೊಡುತ್ತೇವೆ” ಎಂದು ತಿರುಗೇಟು ನೀಡಿದರು.

ಅಥಣಿಗೆ ಮೋದಿ ಬಂದು ಅವರ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲಿ, ನಮ್ಮ ಅಭ್ಯರ್ಥಿ ಪರವಾಗಿ ಅಥಣಿ ಮತ್ತು ಕಾಗವಾಡಕ್ಕೆ ಹೋಗಿ ಪ್ರಚಾರ ಮಾಡುತ್ತೇವೆ. ಬೆಳಗಾವಿಯ 18 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿ ನನ್ನ ಮೇಲೆ ಇದೆ” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ : ಮಾನವೀಯತೆ ಮರೆತು ರೋಗಿಯನ್ನು ಚಳಿಯಲ್ಲಿ ಬಿಟ್ಟು ಹೋದ ಸಿಬ್ಬಂದಿ

ಮಾನವೀಯತೆ, ಕರುಣೆ ಎನ್ನುವುದು ಆಸ್ಪತ್ರೆಯ ಆವರಣದಲ್ಲಿ ಮರೆತುಹೋದಂತಾಗಿದೆ. ಬೆಳಗಾವಿ ಬಿಮ್ಸ್ ಮಲ್ಟಿ...

ಬೆಳಗಾವಿ : ಜಿಲ್ಲೆಯಲ್ಲಿ ಇಂದು ತಂಪು ವಾತಾವರಣ – ಮಧ್ಯಮ ಮಳೆಯ ಮುನ್ಸೂಚನೆ

ಇಂದು ಬೆಳಗಾವಿ ಜಿಲ್ಲೆಯಾದ್ಯಂತ ಮೋಡ ಆವರಿಸಿಕೊಂಡಿದ್ದು, ಹವಾಮಾನ ಇಲಾಖೆ ಮಧ್ಯಮ ಮಳೆಯ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X