ಕಾಳೇನಹಳ್ಳಿಯ ಧನಂಜಯ ʼಡಾಲಿʼ ಆದ ಕಥೆ

Date:

Advertisements

ನಟ ಡಾಲಿ ಧನಂಜಯ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ 10 ವರ್ಷಗಳನ್ನು ಪೂರೈಸಿದ್ದಾರೆ. ಮೇ 31ಕ್ಕೆ ಧನಂಜಯ ನಟನೆಯ ಚೊಚ್ಚಲ ಚಿತ್ರ ‘ಡೈರೆಕ್ಟರ್‌ ಸ್ಪೆಷಲ್‌’ ಬಿಡುಗಡೆಯಾಗಿ 10 ವರ್ಷಗಳ ಕಳೆದಿವೆ. ಈ ಹಿನ್ನೆಲೆ ಅವರ ಆಪ್ತರು ಮತ್ತು ಅಭಿಮಾನಿಗಳು ಮಂಗಳವಾರ ಮೈಸೂರಿನಲ್ಲಿ ಅದ್ದೂರಿಯಾಗಿ ದಶಮಾನೋತ್ಸವ ಆಚರಿಸಿ, ನಟನನ್ನು ಆತ್ಮೀಯವಾಗಿ ಅಭಿನಂದಿಸಿದ್ದಾರೆ.

ಅರಸಿಕೆರೆ ತಾಲ್ಲೂಕಿನ ಕಾಳೇನಹಳ್ಳಿಯ ಮಧ್ಯಮ ಕುಟುಂಬದ ಧನಂಜಯ ಇವತ್ತಿಗೆ ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟ. ಚಿತ್ರರಂಗದ ಯಾವುದೇ ಹಿನ್ನೆಲೆ ಇರದ ಈತ ಬೆಳೆದ ಬಂದು ಹಾದಿಯೇ ರೋಚಕ. ಕಾಲೇಜು ದಿನಗಳಿಂದಲೂ ಧನಂಜಯ್‌ಗೆ ರಂಗಭೂಮಿಯ ಜೊತೆಗಿದ್ದ ನಂಟು ಇನ್ಫೋಸಿಸ್‌ ಸಂಸ್ಥೆಯಲ್ಲಿದ್ದ ಕೆಲಸವನ್ನು ತೊರೆದು ನಟನೆಯತ್ತ ಮುಖ ಮಾಡಲು ಪ್ರೇರಣೆಯಾಯಿತು.

ʼಮಠʼ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ನಿರ್ದೇಶನದ 2013ರ ಮೇ 31ರಂದು ತೆರೆಕಂಡ ʼಡೈರೆಕ್ಟರ್‌ ಸ್ಪೆಷಲ್‌ʼ ಚಿತ್ರದ ಮೂಲಕ ಧನಂಜಯ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾದರು. ನಂತರ ʼರಾಮಾ ರಾಮಾ ರೇʼ ಖ್ಯಾತಿಯ ಡಿ ಸತ್ಯಪ್ರಕಾಶ್‌ ನಿರ್ದೇಶನದ ʼಜಯನಗರ ಫೊರ್ತ್‌ ಬ್ಲಾಕ್‌ʼ ಕಿರುಚಿತ್ರದಲ್ಲಿ ನಟಿಸಿ ತಕ್ಕ ಮಟ್ಟಿಗೆ ಗುರುತಿಸಿಕೊಂಡರು. ಇದಾದ ಬಳಿಕ ʼರಾಟೆʼ, ʼಬಾಕ್ಸರ್‌ʼ, ʼಜೆಸ್ಸೀʼ, ʼಬದ್ಮಾಶ್‌ʼ, ʼಅಲ್ಲಮʼ, ʼಎರಡನೇ ಸಲʼ ಮುಂತಾದ ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಲ್ಲಿ ಗುರುತಿಸಿಕೊಂಡರಾದರೂ ನಿರೀಕ್ಷಿತ ಯಶಸ್ಸು ದಕ್ಕಿರಲಿಲ್ಲ.

Advertisements

ಧನಂಜಯ ಅವರನ್ನು ನಟ ರಾಕ್ಷಸನ ಪಟ್ಟಕ್ಕೇರಿಸಿದ್ದು ʼಡಾಲಿʼಯ ಪಾತ್ರ. ದುನಿಯಾ ಸೂರಿ ನಿರ್ದೇಶನದ, ಶಿವರಾಜ್‌ ಕುಮಾರ್‌ ಮುಖ್ಯಭೂಮಿಕೆಯ ʼಟಗರುʼ ಚಿತ್ರದಲ್ಲಿ ಧನಂಜಯ, ʼಡಾಲಿʼಯಾಗಿ ಜೀವಿಸಿದ್ದರು. ಅದಾಗಲೇ ನಾಯಕ ನಟನಾಗಿ ಗುರುತಿಸಿಕೊಂಡಿದ್ದರೂ ಯಾವುದೇ ಹಿಂಜರಿಕೆ ಇಲ್ಲದೆ ಮಾಡಿದ್ದ ಅದೊಂದು ಪಾತ್ರ ಅವರ ಸಿನಿ ಬದುಕಿಗೆ ಮಹತ್ತರ ತಿರುವು ನೀಡಿತು. ಡಾಲಿ ಧನಂಜಯ ಎಂದೇ ಖ್ಯಾತಿ ಗಳಿಸಿದ ಅವರು ಟಗರು ಚಿತ್ರದ ಯಶಸ್ಸಿನ ಬಳಿಕ ʼಯಜಮಾನʼ, ʼಯುವರತ್ನʼ, ʼಪೊಗರುʼ, ʼಸಲಗʼ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿ ಮತ್ತಷ್ಟು ಜನಪ್ರಿಯತೆ ಗಳಿಸಿದರು. ಅದೇ ಸಿದ್ಧಮಂತ್ರಕ್ಕೆ ಜೋತು ಬೀಳದೆ ʼಪಾಪ್‌ಕಾರ್ನ್‌ ಮಂಕಿ ಟೈಗರ್‌ʼ ಮೂಲಕ ಮತ್ತೆ ನಾಯಕ ನಟನಾಗಿ ಪ್ರೇಕ್ಷಕರನ್ನು ಎದುರುಗೊಂಡರು.

ಲಾಕ್‌ಡೌನ್‌ ಬಳಿಕ ತೆರೆಗೆ ಬಂದ ʼರತ್ನನ್‌ ಪ್ರಪಂಚʼ ಯಶಸ್ಸು ಕಂಡಿತು. ಅದರ ಬೆನ್ನಲ್ಲೇ ತೆರೆಕಂಡ ತೆಲುಗಿನ ʼಪುಷ್ಪʼ ಸಿನಿಮಾ ಧನಂಜಯ ಅವರಿಗೆ ಬಹುಭಾಷಾ ನಟನ ವರ್ಚಸ್ಸು ತಂದುಕೊಟ್ಟಿತು. ಹಲವು ವರ್ಷಗಳ ಕಾಲ ಏಳು ಬೀಳುಗಳನ್ನು ಕಂಡು ಸ್ಟಾರ್‌ ನಟರ ಸಾಲಿನಲ್ಲಿ ನಿಂತ ಧನಂಜಯ ತಮ್ಮ ವೃತ್ತಿ ಬದುಕಿಗೆ ತಿರುವು ನೀಡಿದ, ಜನಮೆಚ್ಚಿದ ʼಡಾಲಿʼ ಪಾತ್ರದ ಹೆಸರಲ್ಲೇ ʼಡಾಲಿ ಪಿಕ್ಚರ್ಸ್‌ʼ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದರು. ʼಬಡವ ರಾಸ್ಕಲ್‌ʼ ಸಿನಿಮಾದಲ್ಲಿ ನಟಿಸಿದ್ದು ಮಾತ್ರವಲ್ಲದೇ, ಚಿತ್ರಕ್ಕೆ ಬಂಡವಾಳ ಹೂಡುವ ಮೂಲಕ ಯಶಸ್ವಿ ನಿರ್ಮಾಪಕ ಎನ್ನಿಸಿಕೊಂಡರು. ಡಾನ್‌ ಜಯರಾಜ್‌ ಜೀವನಾಧಾರಿತ ʼಹೆಡ್‌ ಬುಷ್‌ʼ ಸಿನಿಮಾಗೂ ಧನಂಜಯ ಅವರೇ ಬಂಡವಾಳ ಹೂಡಿದ್ದು. “ಬಡವರ ಮಕ್ಕಳು ಬೇಳಿಬೇಕು ಕಣ್ರಯ್ಯಾ” ಎನ್ನುವ ಸ್ನೇಹಜಿವಿ ಧನಂಜಯ, ತಮ್ಮ ʼಡಾಲಿ ಪಿಕ್ಚರ್ಸ್‌ʼ ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಹೊಸಬರ ʼಆರ್ಕೆಸ್ಟ್ರಾ ಮೈಸೂರುʼ, ʼಡೇರ್‌ ಡೆವಿಲ್‌ ಮುಸ್ತಾಫಾʼ ಸಿನಿಮಾಗಳನ್ನು ತಮ್ಮದೇ ಬ್ಯಾನರ್‌ನಡಿಯಲ್ಲಿ ಪ್ರಸ್ತುತ ಪಡಿಸಿದ್ದಾರೆ. ʼಟಗರು ಪಲ್ಯʼ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಕೇವಲ ನಟ, ನಿರ್ಮಾಪಕ ಮಾತ್ರವಲ್ಲದೇ ಗೀತ ರಚನೆಕಾರನಾಗಿಯೂ ಧನಂಜಯ ಗುರುತಿಸಿಕೊಂಡಿದ್ದಾರೆ.

ಚೊಚ್ಚಲ ಚಿತ್ರದಲ್ಲೇ ʼಸೈಮಾ ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿʼಯನ್ನು ಗೆದ್ದುಕೊಂಡಿದ್ದ ಧನಂಜಯ, ʼಅಲ್ಲಮʼ ಚಿತ್ರದಲ್ಲಿನ ನಟನೆಗಾಗಿ ʼಫಿಲ್ಮ್‌ಫೇರ್‌ ಅತ್ಯುತ್ತಮ ನಟʼ, ʼಬಸವರತ್ನ ಪ್ರಶಸ್ತಿʼ, ʼಟಗರುʼ ಚಿತ್ರದಲ್ಲಿನ ಡಾಲಿಯ ಪಾತ್ರಕ್ಕಾಗಿ ʼಸೈಮಾ ಅತ್ಯುತ್ತಮ ಪೋಷಕ ನಟ ಪ್ರಶಸ್ತಿʼ, ʼಫಿಲ್ಮ್‌ಫೇರ್‌ ಅತ್ಯುತ್ತಮ ಖಳನಟ ಪ್ರಶಸ್ತಿʼ, ʼಪಾಪ್‌ಕಾರ್ನ್‌ ಮಂಕಿ ಟೈಗರ್‌ʼ ಚಿತ್ರದಲ್ಲಿನ ನಟನೆಗಾಗಿ ʼಸೈಮಾ ಅತ್ಯುತ್ತಮ ನಟ ಪ್ರಶಸ್ತಿʼಗೆ ಭಾಜನರಾಗಿದ್ದಾರೆ.

ಇತ್ತೀಚೆಗಷ್ಟೇ ಧನಂಜಯ ಮುಖ್ಯಭೂಮಿಕೆಯ ʼಹೊಯ್ಸಳʼ ಸಿನಿಮಾ ಭರ್ಜರಿ ಯಶಸ್ಸುಕಂಡಿದೆ. ರಮ್ಯಾ ಜೊತೆಗಿನ ʼಉತ್ತರಕಾಂಡʼ ಸಿನಿಮಾ ಈಗಾಗಲೇ ಸೆಟ್ಟೇರಿದೆ. ತೆಲುಗಿನ ʼಪುಷ್ಟ-2ʼ, ʼಝೀಬ್ರಾʼ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಧನಂಜಯ, ʼಪಾಯುಮ್‌ ಒಲಿ ನೀ ಎನಕ್ಕುʼ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X