ತಮಿಳು ನಟ ವಿಜಯ್ ರಾಜಕೀಯ ಪಕ್ಷವನ್ನು ನೋಂದಾಯಿಸಲು ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದು, ನಟನ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಾಕ್ಕಮ್ ಸಭೆ ಹಮ್ಮಿಕೊಂಡ ನಂತರ ಪಕ್ಷದ ಆರಂಭಕ್ಕೆ ಒಪ್ಪಿಗೆ ದೊರೆತಿದೆ. ಈ ಬೆಳವಣಿಗೆಯು ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿಯಿರುವಾಗ ಸಂಭವಿಸಿದೆ.
ಚೆನ್ನೈನಲ್ಲಿ ಗುರುವಾರ ಪಕ್ಷದ ಸಭೆ ನಡೆದಿದ್ದು ತಮಿಳು ನಟ ಪಕ್ಷವನ್ನು ನೋಂದಾಯಿಸಲು ಅರ್ಜಿ ಸಲ್ಲಿಸಲಾಗಿದೆ ಎಂದು ಮೂಲಗಳು ಅಧಿಕೃತಗೊಳಿಸಿವೆ. ಅಧ್ಯಕ್ಷರಾಗಿ ವಿಜಯ್ ಹೆಸರಿಸುವುದು ಹಾಗೂ ಪಕ್ಷದ ಕಾನೂನು ಕಟ್ಟಲೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಪಕ್ಷದ ನೋಂದಣಿ ಕಾರ್ಯಗಳು ಒಂದು ತಿಂಗಳೊಳಗೆ ಪೂರ್ಣಗೊಳ್ಳಲಿವೆ. ನಟ ವಿಜಯ್ ತಮಿಳುನಾಡು ಹಾಗೂ ಕೇರಳದಲ್ಲಿ ಬೃಹತ್ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದು, ಹಲವು ಸಾರ್ವಜನಿಕ ಸೇವಾ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಎಲ್ಲರನ್ನೂ ಒಳಗೊಳ್ಳದಿದ್ದರೆ ‘ಗಣರಾಜ್ಯ’ ಹೇಗಾಗುತ್ತದೆ?
2018ರಲ್ಲಿ ತೂತುಕುಡಿ ಪೊಲೀಸ್ ದಾಳಿಯಲ್ಲಿ ಮೃತಪಟ್ಟ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಮ್ಮ ರಾಜಕೀಯ ಪ್ರವೇಶಕ್ಕೆ ಗಂಭೀರ ಸೂಚನೆಯನ್ನು ನೀಡಿದ್ದರು.
ನಂತರದಲ್ಲಿ, ವಿಜಯ್ ಅಭಿಮಾನಿಗಳ ಸಂಘ ವಿಜಯ್ ಮಕ್ಕಳ್ ಇಯಕ್ಕಮ್ ಹಲವು ರಾಜಕೀಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದೆ ಹಾಗೂ ತಮಿಳುನಾಡು ಸ್ಥಳೀಯ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧಿಸುತ್ತಿದೆ.
ಡಿಸೆಂಬರ್ನಲ್ಲಿ ತಮಿಳುನಾಡಿನಲ್ಲಿ ತೀವ್ರ ಪ್ರವಾಹ ಉಂಟಾದಾಗ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ತೊಂದರೆಗೀಡಾದ ಜನರಿಗೆ ಪರಿಹಾರವನ್ನು ವಿತರಿಸಿದ್ದರು.
ಈ ಮೊದಲು ವಿಜಯ್ 2026ರಲ್ಲಿ ರಾಜಕೀಯ ಪ್ರವೇಶಿಸುವುದಾಗಿ ಸೂಚನೆ ನೀಡಿದ್ದರು. ಆದಾಗ್ಯೂ, ನಟನ ಅಭಿಮಾನಿಗಳು ಶೀಘ್ರವಾಗಿ ಪಕ್ಷವನ್ನು ನೋಂದಾಯಿಸುವಂತೆ ನಟನಿಗೆ ಒತ್ತಾಯಿಸಿದ್ದರು.