ನಟಿಯಾಗಿ ಗುರುತಿಸಿಕೊಂಡು ರಾಜಕೀಯದಲ್ಲೂ ಸಕ್ರಿಯವಾಗಿದ್ದ ಖ್ಯಾತ ನಟಿ ಖುಷ್ಬೂ ಸುಂದರ್ ಅವರು ಅನಾರೋಗ್ಯದಿಂದ ಬಳಲುತ್ತಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ, ಖುಷ್ಬೂ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಅವರು ಕೆಲವು ಗಾಯಗಳಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಸದ್ಯ ಅವರ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದ್ದು, ಅಭಿಮಾನಿಗಳು ಫೋಟೋ ನೋಡಿ, ಆಘಾತಕ್ಕೊಳಗಾಗಿದ್ದಾರೆ.
ಫೋಟೋಗಳನ್ನು ನೋಡಿದ ನಂತರ ಅವರ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ಖುಷ್ಬೂ ಅವರು ತಮ್ಮ ಎಡಗೈಗೆ ಆಗಿರುವ ಗಾಯಗಳ ಫೋಟೋಗಳನ್ನು ಹಂಚಿಕೊಂಡಿದ್ದು, ಸ್ನಾಯು ಅಲರ್ಜಿ ಇದೆ. ತೀವ್ರವಾದ ನೋವಿನಿಂದ ಬಳಲುತ್ತಿದ್ದರೂ, ಗುಣಮುಖವಾಗುತ್ತಿದ್ದೇನೆ ಎಂದು ಅಭಿಮಾನಿಯೋರ್ವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿಕೊಂಡಿದ್ದಾರೆ.
ಸಾಮಾನ್ಯವಾಗಿ, ಕಠಿಣ ವ್ಯಾಯಾಮದಿಂದಾಗಿ ಕ್ರೀಡಾಪಟುಗಳು ಈ ರೀತಿಯ ಸ್ನಾಯು ಅಲರ್ಜಿ ಸಮಸ್ಯೆಯನ್ನು ಎದುರಿಸುತ್ತಾರೆ. ಖುಷ್ಬೂ ಕೂಡ ಈಗ ಅದೇ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.
So sorry to see these injuries Ma’am @khushsundar . Message is very clear from you that no matter what, we must continue the journey and strive for the destination. You’re a role model for all of us. Stay strong and get well soon. pic.twitter.com/dGjhOU2ZeU
— Khushbu_devotee (@DevoteeKhushbu) February 3, 2025
ನಟಿ ಖುಷ್ಬೂ ಅವರು ಸ್ವಲ್ಪ ದಪ್ಪಗಿದ್ದರು.. ಆದರೆ ಕಠಿಣ ವ್ಯಾಯಾಮದಿಂದಾಗಿ ತುಂಬಾ ಸ್ಲಿಮ್ ಆಗಿದ್ದಾರೆ. ಹೀಗಾಗಿ ಈ ಸ್ನಾಯು ಸಮಸ್ಯೆ ಈಗ ಅವರಿಗೆ ಒಂದು ಸಮಸ್ಯೆಯಾಗಿ ಪರಿಣಮಿಸಿದೆ ಎನ್ನಲಾಗಿದೆ.
ಈ ಅನಾರೋಗ್ಯದ ಹೊರತಾಗಿಯೂ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನು ಅರಿತಿರುವ ಅಭಿಮಾನಿಗಳು ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ರಾಜಕೀಯ ಪ್ರವೇಶಿಸಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಖುಷ್ಬೂ ಆ ಬಳಿಕ., ಬಿಜೆಪಿ ಸೇರಿಕೊಂಡಿದ್ದರು. ಬಿಜೆಪಿ ಸೇರಿದ ಬಳಿಕ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿದ್ದರು.
ತಮಿಳು, ತೆಲುಗು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಖುಷ್ಬೂ ಸುಂದರ್ ತಮ್ಮದೇ ಛಾಪು ಮೂಡಿಸಿಕೊಂಡವರು. 1980ರಲ್ಲಿ ‘ದಿ ಬರ್ನಿಂಗ್ ಟ್ರೇನ್’ ಎಂಬ ಸಿನಿಮಾದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ರಜನಿಕಾಂತ್ ಅವರ ‘ಧರ್ಮಾತಿನ್ ತಲೈವಾನ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಅವರು ಕೆಲ ಹಿಂದಿ ಚಿತ್ರಗಳಲ್ಲಿ ನಟಿಸಿದರು. ದಕ್ಷಿಣ ಭಾರತದ ಸಿನಿಮಾಗಳು ಖುಷ್ಬೂಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಖುಷ್ಬೂ ಅವರು ಒಟ್ಟೂ 200 ಸಿನಿಮಾಗಳಲ್ಲಿ ನಟಿಸಿದ್ದು, ಅದರಲ್ಲಿ 100 ಸಿನಿಮಾಗಳು ತಮಿಳು ಭಾಷೆಗೆ ಸೇರಿವೆ.
I am ok. Recovering well. Thank you very much for your love and concern. 🙏🙏 https://t.co/cnHlxlonLP
— KhushbuSundar (@khushsundar) February 6, 2025
ಸ್ಯಾಂಡಲ್‌ವುಡ್ ನಟ ರವಿಚಂದ್ರನ್ ಅವರ ರಣಧೀರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲೂ ಪದಾರ್ಪಣೆಗೈದಿದ್ದ ಖುಷ್ಬೂ ಸುಂದರ್, ಸರಿಸುಮಾರು 20ಕ್ಕೂ ಅಧಿಕ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ.
ನಟಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಖುಷ್ಬೂ ಸುಂದರ್ ಅವರು ಕೆಲ ವರ್ಷಗಳ ಹಿಂದೆ ತಮ್ಮ ತಂದೆ ನಡೆಸಿದ ಲೈಂಗಿಕ ದೌರ್ಜನ್ಯದ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದರು. “8ನೇ ವಯಸ್ಸಿನಿಂದ ನನ್ನ ಮೇಲೆ ದೌರ್ಜನ್ಯ ನಡೆಯಲು ಶುರುವಾಯ್ತು, 15ನೇ ವಯಸ್ಸಿಗೆ ಮಾತನಾಡಲು ಆರಂಭಿಸಿದೆ. ತಾಯಿಯ ಬಳಿ ಈ ಬಗ್ಗೆ ಹೇಳಿದರೂ ಅವಳು ನಂಬುತ್ತಿರಲಿಲ್ಲ ಎಂಬ ಭಯವಿತ್ತು” ಎಂದು ಖುಷ್ಬೂ ಹೇಳಿದ್ದರು.
ಇದನ್ನು ಓದಿದ್ದೀರಾ? ಕಾಂಗ್ರೆಸ್ ನಾಯಕರು ಕೋಮುವಾದದ ಪರವೋ, ವಿರುದ್ಧವೋ?
ಕೋವಿಡ್ ಲಾಕ್‌ಡೌನ್ ನಂತರದಲ್ಲಿ ಖುಷ್ಬೂ ಸುಂದರ್ ಅವರು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ, ಡಯೆಟ್, ವರ್ಕೌಟ್ ಮೂಲಕ ಭಾರೀ ಪ್ರಮಾಣದಲ್ಲಿ ಸಣ್ಣಗಾಗಿದ್ದರು. ಈಗ ಅದುವೇ ಅವರಿಗೆ ಈಗ ಸ್ನಾಯು ಸಮಸ್ಯೆ ತಂದೊಡ್ಡಿರುವುದಾಗಿ ವರದಿಯಾಗಿದೆ.
