“ಯಾರೂ ದಯವಿಟ್ಟು ಇನ್ನು ಮುಂದೆ ಬ್ಯಾನರ್ ಕಟ್ಟಬೇಡಿ. ನನಗೆ ನನ್ನ ಹುಟ್ಟುಹಬ್ಬದ ದಿನ ಬಂತೆಂದರೆ ಭಯ ಶುರುವಾಗಿಬಿಟ್ಟಿದೆ” ಎಂದು ಕನ್ನಡದ ಸ್ಟಾರ್ ನಟ ಯಶ್ ಅವರು ತಿಳಿಸಿದ್ದಾರೆ.
ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಟೌಟ್ ಕಟ್ಟುವಾಗ ವಿದ್ಯುತ್ ಸ್ಪರ್ಶಿಸಿ ಮೂವರು ಅಭಿಮಾನಿಗಳು ಮೃತಪಟ್ಟ ಗದಗ ಜಿಲ್ಲೆಯ ಸೂರಣಗಿಯ ಹನಮಂತು, ನವೀನ್ ಮತ್ತು ಮುರಳಿಯವರ ಕುಟುಂಬಗಳನ್ನು ಭೇಟಿಯಾಗಿ, ಸಾಂತ್ವನ ನೀಡಿದರು.
ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಯಶ್, “ಯಾವುದೇ ಕಾರಣಕ್ಕೂ ನಾನು ಈ ಥರದ ಅಭಿಮಾನಿ ವ್ಯಕ್ತಪಡಿಸಿ ಎಂದು ಬಯಸುವವಲ್ಲ. ಪ್ರತಿವರ್ಷ ನನ್ನ ಹುಟ್ಟಿದ ದಿನ ಬಂದಾಗ ಈಥರ ಘಟನೆ ನಡೆದಾಗ, ನನಗೆ ಬರ್ತ್ಡೇ ಅಂದರೇನೇ ಒಂಥರಾ ಭಯ ಬಂದುಬಿಟ್ಟಿದೆ. ನಿಜ ಹೇಳಬೇಕೆಂದರೆ ನನಗೇನೇ ಅಸಹ್ಯ ಆಗಿಬಿಟ್ಟಿದೆ. ಅಭಿಮಾನಿಗಳು ಎಲ್ಲಿದ್ದಾರೋ ಅಲ್ಲಿಂದಲೇ ನಮಗೆ ಹರಸಿದರೆ ಸಾಕು, ಅದುವೇ ನಿಜವಾದ ಬರ್ತ್ಡೇ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಯಶ್ ಅಭಿಮಾನಿಗಳ ದುರಂತ ಸಾವು | ಮೃತರ ಕುಟುಂಬಸ್ಥರಿಗೆ 2 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ
“ಈ ವರ್ಷ ಬರ್ತ್ಡೇ ಮಾಡದಿರುವುದಕ್ಕೆ ಕಾರಣಾನೇ ಮಾಧ್ಯಮಗಳು. ಯಾಕೆಂದರೆ ಕಳೆದ 10-15ದಿನಗಳ ಹಿಂದೆಯೇ ಶುರುವಿಟ್ಟುಕೊಂಡಿದ್ದಕ್ಕೆ ಯಾರಿಗೂ ನನ್ನ ಬರ್ತ್ಡೇಯಿಂದ ಯಾರಿಗೂ ತೊಂದರೆಯಾಗದಿರಲಿ ಎಂಬುವುದೇ ನನ್ನ ಉದ್ದೇಶ” ಎಂದು ಯಶ್ ಸ್ಪಷ್ಟಪಡಿಸಿದರು.
#Yash talks to media.
Says i never asked any fan to show this kind of fanism. That’s why he always refused celebarte his birthdays recently. Asked every fan to be responsible for his family first. pic.twitter.com/2bMdv3Sevz— RSK (@RSKTheMonsters) January 8, 2024
“ದುಡ್ಡು ಸಹಾಯ ಯಾರೂ ಬೇಕಾದರೂ ಮಾಡಬಹುದು. ಮನೆಗೆ ಮಗ ಬರುತ್ತಾನಾ?” ಎಂದು ಕೇಳಿದ ನಟ, “ಮನೆಯಲ್ಲಿ ಮಕ್ಕಳನ್ನು ಕಳಕೊಂಡವರು ಏನ್ ಹೇಳಕ್ಕೆ ಸಾಧ್ಯ. ಅಭಿಮಾನ ತೋರಿಸುವುದಾದರೆ ನಿಮ್ಮ ಬದುಕಲ್ಲಿ ಖುಷಿಯಾಗಿರಿ. ನಮ್ಮ ಬಗ್ಗೆ ಯೋಚನೆ ಮಾಡಬೇಡಿ. ನೀವು ಖುಷಿಯಾಗಿರಿ, ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಇದೆಲ್ಲಾ ಬಿಟ್ಟುಬಿಡಿ ಎಂದು ಯಶ್ ಹೇಳಿದರು.
“ಈಗ ನಾನು ಬರುವಾಗಲೂ ಬೈಕ್ನಲ್ಲಿ ಚೇಸ್ ಮಾಡ್ತಿದ್ರು, ಇದು ನಿಜಕ್ಕೂ ಬೇಜಾರಾಗುತ್ತೆ. ಕಟೌಟ್ ಕಟ್ಟಬೇಡಿ ಅಂದ್ರೆ ಬೇಜಾರು ಮಾಡಿಕೊಳ್ತೀರಿ. ಈ ರೀತಿ ಆದಾಗ ನಮ್ಮ ಮನಸ್ಸಿಗೆ ನೋವಾಗುತ್ತದೆ” ಎಂದು ಕೆಜಿಎಫ್ ನಟ ಬೇಸರ ವ್ಯಕ್ತಪಡಿಸಿದರು.