ಸಾಕಷ್ಟು ವಿವಾದಗಳ ಬಳಿಕ ನಟಿ-ಬಿಜೆಪಿ ಸಂಸದೆ ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾ ತೆರೆ ಕಾಣುವ ಭಾಗ್ಯವನ್ನು ಕಂಡಿದೆ. ಮುಂದಿನ ವರ್ಷದ ಜನವರಿ 17ರಂದು ಎಮರ್ಜೆನ್ಸಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಕಂಗನಾ ರಣಾವತ್ ಘೋಷಿಸಿದ್ದಾರೆ.
ಈ ಹಿಂದೆ ಸೆಪ್ಟೆಂಬರ್ 6ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನಿಂದ (ಸಿಬಿಎಫ್‌ಸಿ) ಸೆನ್ಸಾರ್ ಪ್ರಮಾಣಪತ್ರ ಲಭಿಸಿದ ಕಾರಣ ಬಿಡುಗಡೆ ವಿಳಂಬವಾಗಿದೆ. ಹಲವು ವಿವಾದಗಳ ಬಳಿಕ ಕಳೆದ ತಿಂಗಳು ಸಿಬಿಎಫ್‌ಸಿ ಎಮರ್ಜೆನ್ಸಿ ಸಿನಿಮಾಕ್ಕೆ ಪ್ರಮಾಣಪತ್ರ ನೀಡಿದೆ.
ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸುತ್ತಿರುವ ಕಂಗನಾ ರಣಾವತ್ ತಮ್ಮ ಅಧಿಕೃತ ಎಕ್ಸ್ ಪೇಜ್‌ನಲ್ಲಿ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾವನ್ನು ಸಹನಿರ್ದೇಶನ, ಸಹನಿರ್ಮಾಣ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಕಂಗನಾ ರಣಾವತ್ ನಟನೆಯ ‘ಎಮರ್ಜೆನ್ಸಿ’ ಸಿನಿಮಾಗೆ ಸೆನ್ಸಾರ್ ಮಂಡಳಿ ಅನುಮೋದನೆ; ಶೀಘ್ರ ಬಿಡುಗಡೆ
“2025ರ ಜನವರಿ 17ರಂದು ರಾಷ್ಟ್ರದ ಅತ್ಯಂತ ಶಕ್ತಿಶಾಲಿ ಮಹಿಳೆಯ ಮಹಾಕಾವ್ಯ ಮತ್ತು ಭಾರತವನ್ನು ಬದಲಾಯಿಸಿದ ಕ್ಷಣದ ಸಿನಿಮಾ ಎಮರ್ಜೆನ್ಸಿ ಚಿತ್ರಮಂದಿರಗಳಲ್ಲಿ ಮಾತ್ರ ತೆರೆಕಾಣಲಿದೆ” ಎಂದು ತಿಳಿಸಿದ್ದಾರೆ.
17th January 2025 – The epic saga of the nation’s most powerful woman and the moment that altered India’s destiny. #Emergency – Unveils Only in cinemas on 17.01.2025! @KanganaTeam @AnupamPKher #SatishKaushik @shreyastalpade1 #MahimaChaudhry @milindrunning #VishakNair… pic.twitter.com/dC0gnYSNlW
— Kangana Ranaut (@KanganaTeam) November 18, 2024
ಎಮರ್ಜೆನ್ಸಿ ಸಿನಿಮಾವು ಸಿಖ್ ಸಮುದಾಯವನ್ನು ಕೆಟ್ಟದಾಗಿ, ತಪ್ಪಾಗಿ ತೋರಿಸಲಾಗಿದೆ ಎಂದು ಶಿರೋಮಣಿ ಅಕಾಲಿ ದಳ ಸೇರಿದಂತೆ ಸಿಖ್ ಸಂಘಟನೆಗಳು ಆರೋಪಿಸಿದ್ದವು. ಈ ಕಾರಣದಿಂದಾಗಿ ಸಿಬಿಎಫ್‌ಸಿ ಪ್ರಮಾಣಪತ್ರವನ್ನು ಸ್ಥಗಿತಗೊಳಿಸಿತ್ತು.
ಎಮರ್ಜೆನ್ಸಿ 1975ರಿಂದ 1977ರವರೆಗೆ 21 ತಿಂಗಳ ಕಾಲ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಹೇರಿದ ತುರ್ತು ಪರಿಸ್ಥಿತಿ ಮತ್ತು ಅದರ ನಂತರದ ಪರಿಣಾಮಗಳನ್ನು ವಿವರಿಸುವ ಸಿನಿಮಾವಾಗಿದೆ. ಝೀ ಸ್ಟುಡಿಯೋಸ್ ಮತ್ತು ಮಣಿಕರ್ಣಿಕಾ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಮೊದಲಾದವರು ನಟಿಸಿದ್ದಾರೆ.
