ಉಡುಪಿ | ಸಿಎನ್‌ಜಿ ಇಂಧನ ಕೇಂದ್ರಗಳ ಕೊರತೆ; ಶಾಶ್ವತ ಪರಿಹಾರಕ್ಕೆ ಕಾಯುತ್ತಿದ್ದಾರೆ ಆಟೋ ಚಾಲಕರು

Date:

ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನ ಸಮಸ್ಯೆ ಇನ್ನೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದಿದೆ. ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ಹಲವಾರು ವರದಿಗಳು ಪ್ರಕಟವಾಗಿದ್ದರೂ ಸಿಎನ್‌ಜಿ ಇಂಧನ ಸಮಸ್ಯೆ ಬಗೆಹರಿಸುವಂತೆ ಕಾರ್ಮಿಕ ಸಂಘಟನೆಗಳು ಮನವಿ ಮಾಡಿಕೊಂಡಿದ್ದರೂ ಸಮಸ್ಯೆ ಕೊನೆಯೇ ಇಲ್ಲದಂತಾಗಿದೆ.

- Advertisement -

ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ಇಂಧನ ಆಧಾರಿತ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಸಿಎನ್‌ಜಿ ಬಂಕ್‌ಗಳು ಇಲ್ಲದ ಪರಿಣಾಮ ತೀವ್ರ ಇಂಧನ ಕೊರತೆ ಎದುರಾಗಿದೆ. ಪ್ರತಿನಿತ್ಯ ಸಾವಿರಾರು ಸಿಎನ್‌ಜಿ ಆಟೊ ರಿಕ್ಷಾ, ಕಾರು, ಸರಕು ಸಾಗಣೆ ವಾಹನಗಳು ಇಂಧನ ತುಂಬಿಸಿಕೊಳ್ಳಲು ಸಿಎನ್‌ಜಿ ಕೇಂದ್ರಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಅಂದು ದುಡಿದು ಅಂದು ಜೀವನ ನಡೆಸುವ ಅನಿವಾರ್ಯತೆಗೆ ಸಿಲುಕಿರುವ ಆಟೋ ಚಾಲಕರ ಪಾಡು ಯಾರಿಗೂ ಬೇಡ. ದಿನದ ಐದಾರು ಗಂಟೆ ಬಾಡಿಗೆ ಹೊಡೆದರೆ ಕನಿಷ್ಠ ಮೂರರಿಂದ ನಾಲ್ಕು ಗಂಟೆ ಇಂಧನ ಭರ್ತಿ ಮಾಡಿಕೊಳ್ಳಲು ಸಿಎನ್‌ಜಿ ಕೇಂದ್ರದ ಮುಂದೆ ಕಾಯಬೇಕಾಗಿದೆ. ಹಗಲಿನ ಹೊತ್ತು ಬಾಡಿಗೆ ನಷ್ಟವಾಗುವ ಆತಂಕದಿಂದ ಬೆಳಗಿನ ಜಾವ, ರಾತ್ರಿ ಹೊತ್ತು ತಾಸುಗಟ್ಟಲೆ ಕಾಯ್ದು ಇಂಧನ ಭರ್ತಿ ಮಾಡಿಸಿಕೊಳ್ಳುತ್ತಿದ್ದಾರೆ.

auto3 1

ಜಿಲ್ಲೆಯಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ಸಿಎನ್‌ಜಿ ಇಂಧನ ವಾಹನಗಳಿದ್ದರೂ ಸಿಎನ್‌ಜಿ ಬಂಕ್‌ಗಳು ಇರುವುದು ಕೇವಲ 8 ಉಡುಪಿಯ ಸೀಮಾ ಪ್ಯೂಯಲ್ಸ್ ಅಂಡ್ ಸರ್ವೀಸಸ್, ಮಲ್ಪೆಯ ಭಾವನಾ ಎಂಟರ್‌ ಪ್ರೈಸಸ್, ಬ್ರಹ್ಮಾವರ ತಾಲೂಕಿನ ಶ್ರೀಲಕ್ಷ್ಮೀ ಎಂಟರ್‌ ಪ್ರೈಸಸ್‌, ಹೆಜಮಾಡಿ ಟೋಲ್ ಗೇಟ್ ಬಳಿಯ ಮಾತೃಶ್ರೀ ಹೈವೇ ಸ್ಟಾರ್, ಕಾರ್ಕಳದ ಕೆದಿಂಜೆಯ ಶ್ರೀದುರ್ಗಾ ಪ್ಯೂಯಲ್ಸ್, ಕಾರ್ಕಳ ತಾಲೂಕಿನ ಸಾಣೂರಿನಲ್ಲಿರುವ ಪಡು ತಿರುಪತಿ ವೆಂಕಟರಮಣ, ಕುಂದಾಪುರ ತಾಲೂಕು ಕೋಟೇಶ್ವರದಲ್ಲಿರುವ ಕೆವಿಎಂ ಕಾಮತ್, ಪಡುಬಿದ್ರಿಯ ಭವ್ಯ ಪ್ಯೂಯೆಲ್ಸ್ ಜಿಲ್ಲೆಯಲ್ಲಿರುವ ಸಿಎನ್‌ಜಿ ಕೇಂದ್ರಗಳು.

ಬೆರಳೆಣಿಕೆಯ ಸಿಎನ್‌ಜಿ ಕೇಂದ್ರಗಳಲ್ಲಿ ಬೇಡಿಕೆಯಷ್ಟು ಇಂಧನ ಸಿಗುತ್ತಿಲ್ಲ. ಪ್ರತಿದಿನ ಜಿಲ್ಲೆಯ ಬಹುತೇಕ ಸಿಎನ್‌ಜಿ ಕೇಂದ್ರಗಳ ಮುಂದೆ ರಿಕ್ಷಾ, ಕಾರು, ಸರಕು ಸಾಗಣೆ ವಾಹನಗಳ ಉದ್ದನೆಯ ಸಾಲು ಸಾಮಾನ್ಯವಾಗಿ ಕಾಣಸಿಗುತ್ತದೆ. ತಾಸುಗಟ್ಟಲೆ ಕಾದರೂ ಇಂಧನ ಸಿಗುತ್ತದೆ ಎಂಬ ಯಾವ ಖಾತ್ರಿಯೂ ಇಲ್ಲದೆ ವಾಹನ ಸವಾರರು ಹೈರಾಣಾಗಿದ್ದಾರೆ.

auto1
ಬಾಬಣ್ಣ

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತನಾಡಿದ ಆಟೋ ಚಾಲಕ ಬಾಬಣ್ಣ, “ನಮ್ಮ ಗೋಳು ಯಾರು ಸಹ ಕೇಳುವವರಿಲ್ಲ ಎರಡು ತಿಂಗಳ ಹಿಂದೆ ಸಿಎನ್ ಜಿ ಗ್ಯಾಸ್ ಗೆ ಕನ್ವರ್ಟ್ ಮಾಡಿಸಿದ್ದೇನೆ. ಆದರೆ ಈಗ ಸರಿಯಾಗಿ ಇಂಧನವೇ ಸಿಗುತ್ತಿಲ್ಲ ಈಗ ಸಿಎನ್ ಜಿ ಇಂದ ಬದಲಾಯಿಸಿ ಮೊದಲು ಇದ್ದ ಎಲ್ ಪಿಜಿ ಗೆ ಪುನಃ ಮಾಡಿಸಬೇಕು ಅಂದುಕೊಂಡಿದ್ದೇನೆ. ಇಲ್ಲದಿದ್ದರೆ ಬ್ಯಾಟರಿ ಆಟೋ ರಿಕ್ಷಾ ಆದ್ರೂ ಮಾಡಬೇಕೆಂದಿದ್ದೇನೆ. ಆಗ ಈ ರೀತಿ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ತಪ್ಪುತ್ತದೆ ಎಂದು ಹೇಳಿದರು.

auto 2
ಆಟೋ ಜಾಲಕ ಶ್ರೀನಿವಾಸ್

ಮತ್ತೊಬ್ಬ ಸಿಎನ್ ಜಿ ಆಟೋ ಜಾಲಕ ಶ್ರೀನಿವಾಸ್ ಮಾತನಾಡಿ, “ಸಿಎನ್ ಜಿ ಆಟೋ ತೆಗೆದುಕೊಂಡು ನಾವು ಮಂಗನಂತೆ ಆಗಿ ಬಿಟ್ಟಿದ್ದೇವೆ. ಕಂಪನಿಯವರು ಸಹ ಸರಿಯಾದ ಮಾಹಿತಿ ನೀಡಿರಲಿಲ್ಲ. ಈಗ ಇಂಧನಕ್ಕಾಗಿ ಕಷ್ಟ ಅನುಭವಿಸುತ್ತಾ ಇದ್ದೇವೆ. ಬಾಡಿಗೆ ಮಾಡಲು ಆಟೋ ನಿಲ್ದಾಣದಲ್ಲಿ ನಿಲ್ಲಿಸುವುದಕ್ಕಿಂತ ಹೆಚ್ಚು ಸಮಯ ಸಿಎನ್‌ಜಿ ಕೇಂದ್ರಗಳ ಮುಂದೆಯೇ ಕಳೆಯುತ್ತಿದ್ದೇವೆ. ಉಡುಪಿಯಲ್ಲಿ ಇಂಧನ ಇಲ್ಲದಿದ್ದರೆ ಬ್ರಹ್ಮಾವರಕ್ಕೆ, ಬ್ರಹ್ಮಾವರದಲ್ಲಿ ಇಲ್ಲದಿದ್ದರೆ ಉಡುಪಿಗೆ ಹೀಗೆಯೇ ಓಡಾಗುವುದೆ ದಿನಿತ್ಯದ ಕೆಲಸ ಆಗಿ ಬಿಟ್ಟಿದೆ ಇನ್ನೂ ಬಾಡಿಗೆ ಎಲ್ಲಿಂದ ಮಾಡುವುದು? ಪ್ರತಿದಿನ ಜನಪ್ರತಿನಿಧಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಿರುತ್ತಾರೆ. ನೂರಾರು ಆಟೋ ರಿಕ್ಷಾಗಳು ಸಾರತಿ ಸಾಲಿನಲ್ಲಿ ನಿಂತಿರುತ್ತವೆ. ಯಾಕೆ ಎಂದು ಒಬ್ಬರೂ ಸಹ ಬಂದು ಕೇಳುವುದಿಲ್ಲ” ಎಂದು ತಮ್ಮ ನೋವು ಹೇಳಿಕೊಂಡರು.

auto4

ಇದನ್ನು ಓದಿದ್ದೀರಾ? ದಾವಣಗೆರೆ | ಮಕ್ಕಳಿಗೆ ಮೊಟ್ಟೆ ವಿತರಣೆಯಲ್ಲಿ ಲೋಪ: ಮುಖ್ಯ ಶಿಕ್ಷಕಿ ಸೇರಿ ಇಬ್ಬರ ಅಮಾನತು

ಒಟ್ಟಿನಲ್ಲಿ ಸಿಎನ್‌ಜಿ ಆಟೋ ರಿಕ್ಷಾ ವಾಹನಗಳು ಹೆಚ್ಚಾದಂತೆಲ್ಲ ಇಂಧನ ಪಂಪ್‌ಗಳ ಸಂಖ್ಯೆ ಸಹ ಹೆಚ್ಚಾಗಬೇಕು. ಅವಶ್ಯಕತೆಗೆ ತಕ್ಕಂತೆ ಪೂರೈಕೆ ಇದ್ದರೆ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ಉಡುಪಿ ನಗರದಲ್ಲಿ ಇನ್ನೂ ಎರಡು ಸಿಎನ್‌ಜಿ‌ ಇಂಧನ ಕೇಂದ್ರಗಳು ಪ್ರಾರಂಭವಾದರೆ ಮಾತ್ರ ಇದಕ್ಕೆ ಪರಿಹಾರ ಸಾಧ್ಯ ಎನ್ನುತ್ತಾರೆ ಆಟೋ ಚಾಲಕ-ಮಾಲಕರ ಸಂಘದ ಮುಖಂಡರು.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಶಾರೂಕ್ ತೀರ್ಥಹಳ್ಳಿ
ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಎನ್‌.ಎಸ್‌.ಎಸ್‌ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದ ದಾರಿ: ನಾಲತವಾಡ

ವಿದ್ಯಾರ್ಥಿಗಳಲ್ಲಿ ಕೇವಲ ಶೈಕ್ಷಣಿಕ ಜ್ಞಾನವಷ್ಟೇ ಅಲ್ಲದೆ, ಸಾಮಾಜಿಕ ಜವಾಬ್ದಾರಿ, ನಾಯಕತ್ವ ಗುಣ...

ವಿಜಯಪುರ | ಮತದಾರರ ಹಕ್ಕು ರಕ್ಷಣೆಗೆ SIR ಪರಿಶೋಧನಾ ಪ್ರವಾಸ; ನಟ ಪ್ರಕಾಶ್ ರಾಜ್ ಭಾಗಿ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತದಾರರ...

ಯುವ ಪೀಳಿಗೆ ಸತ್ಯ, ಸರಳತೆಯ ತತ್ವಗಳನ್ನು ಅಳವಡಿಸಿಕೊಳ್ಳಬೇಕು: ಪ್ರೊ. ವಿಜಯಾ ಕೋರಿಶೆಟ್ಟಿ

ಸತ್ಯ, ಅಹಿಂಸೆ, ಸರಳತೆ, ಕರ್ತವ್ಯನಿಷ್ಠೆ ಮತ್ತು ನೈತಿಕ ಮೌಲ್ಯಗಳು ಕೇವಲ ಇತಿಹಾಸದ...

ಅಹಿಂಸೆ-ಸತ್ಯಾಗ್ರಹದ ಸಂದೇಶದೊಂದಿಗೆ ಸಾಮರಸ್ಯ ನಡಿಗೆ

ಅಹಿಂಸೆ ಮತ್ತು ಸತ್ಯಾಗ್ರಹದ ಮೂಲಕ ಭಾರತವನ್ನು ಮುನ್ನಡೆಸಿ, ಜಗತ್ತಿಗೆ ಬೆಳಕಾದ ಮಹಾತ್ಮ...