‘ಬಾಲಿವುಡ್ ಕಿಂಗ್’ ಎಂದೇ ಪ್ರಸಿದ್ಧಿ ಪಡೆದಿರುವ ನಟ ಶಾರೂಖ್ ಖಾನ್ 58ನೇ ವರ್ಷದ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ನಡುವೆ ಮಧ್ಯರಾತ್ರಿ 12 ಗಂಟೆಗೇ ‘ಜವಾನ್’ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆಗೊಳಿಸಿ ಅಭಿಮಾನಿಗಳಿಗೆ ನೆಟ್‌ಫ್ಲಿಕ್ಸ್ ಜನ್ಮದಿನದ ‘ಸರ್‌ಪ್ರೈಸ್’ ನೀಡಿದೆ.
ಬಿಡುಗಡೆಗೂ ಮುನ್ನ ನಟ ಶಾರುಖ್ ಖಾನ್ ‘ನೆಟ್‌ಫ್ಲಿಕ್ಸ್’ಗಾಗಿಯೇ ಹೊಸ ಟ್ರೇಲರ್ ಅನ್ನು ರಚಿಸಿದ್ದು, ಅದನ್ನು ನೆಟ್‌ಫ್ಲಿಕ್ಸ್ ಬಿಡುಗಡೆ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.
Birthday Jawan ka hai par gift sab ke liye 😎We’re good to go!
Jawan (the extended cut) is now streaming in Hindi, Tamil and Telugu, only on Netflix 💥 pic.twitter.com/SBNBM9hBFB— Netflix India (@NetflixIndia) November 1, 2023
ಶಾರುಖ್ ಖಾನ್ ಪತ್ನಿ ಗೌರಿ ಖಾನ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ‘ಜವಾನ್’ ಸಿನಿಮಾ ಸೆ. 7ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು. ಈ ಸಿನಿಮಾ ಮೂಲಕ ತಮಿಳಿನ ನಿರ್ದೇಶಕ ಆಟ್ಲಿ ಮತ್ತು ನಟಿ ನಯನ್ ತಾರಾ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು.
ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿದ್ದ ‘ಜವಾನ್’ ಚಿತ್ರದ ಡಿಜಿಟಲ್ ಹಕ್ಕನ್ನು ನೆಟ್‌ಫ್ಲಿಕ್ಸ್ ಸಂಸ್ಥೆ ₹250 ಕೋಟಿ ನೀಡಿ ಖರೀದಿಸಿದೆ ಎಂದು ವರದಿಯಾಗಿದೆ.
ಜವಾನ್ ಗಳಿಕೆ ₹1150
‘ಜವಾನ್’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಅಂದಾಜು ₹1150 ಕೋಟಿ ಬಾಕ್ಸ್ ಆಫೀಸ್ ಗಳಿಕೆ ಮಾಡಿತ್ತು. ಹಿಂದಿ ಚಿತ್ರರಂಗದಲ್ಲಿ ಈ ಗಳಿಕೆ ದಾಖಲೆಯಾಗಿದೆ. ಕೇವಲ ಹಿಂದಿಯಲ್ಲಿಯೇ ₹590 ಕೋಟಿ ಗಳಿಸಿದೆ. ತಮಿಳು ಮತ್ತು ತೆಲುಗು ಸಿನಿ ಮಾರುಕಟ್ಟೆಯಲ್ಲೂ ಉತ್ತಮ ಗಳಿಕೆ ಮಾಡಿತ್ತು. ‘ಪಠಾಣ್’ ಚಿತ್ರದ ನಂತರ ಸಾವಿರ ಕೋಟಿ ಕ್ಲಬ್ ಸೇರಿದ ಚಿತ್ರ ಇದಾಗಿತ್ತು.
#WATCH | Mumbai: Actor Shah Rukh Khan waves at the fans who gathered outside his residence ‘Mannat’ in large numbers to catch a glimpse of him, on Shah Rukh Khan’s 58th birthday.#ShahRukhKhan pic.twitter.com/gjE99qa0ZX
— ANI (@ANI) November 1, 2023
‘ಮನ್ನತ್’ ಮುಂದೆ ಅಭಿಮಾನಿಗಳ ದಂಡು
ಶಾರೂಖ್ ಖಾನ್ ಜನ್ಮದಿನಕ್ಕೆ ಶುಭಕೋರಲು ಮಧ್ಯರಾತ್ರಿಯೇ ಅವರ ಮುಂಬೈ ನಿವಾಸ ‘ಮನ್ನತ್’ ಮುಂದೆ ಸಾವಿರಾರು ಅಭಿಮಾನಿಗಳು ನೆರೆದಿದ್ದರು.
12 ಗಂಟೆಯ ಸುಮಾರಿಗೆ ಮನೆಯಿಂದ ಹೊರಬಂದು, ಮನೆಯ ಬಾಲ್ಕನಿಯಲ್ಲಿ ನಿಂತ ಶಾರೂಖ್ ಖಾನ್ ಅಭಿಮಾನಿಗಳಿಗೆ ಕೈ ಬೀಸಿ, ಕೈ ಮುಗಿದರು, ಫ್ಲೈಯಿಂಗ್ ಕಿಸ್ ನೀಡುವುದರ ಜತೆಗೆ ತನ್ನ ‘ಸಿಗ್ನೇಚರ್ ಪೋಸ್’ ನೀಡಿ, ಖುಷಿಪಟ್ಟರು.
ಆ ಬಳಿಕ ‘ಎಕ್ಸ್’ ಖಾತೆಯಲ್ಲಿ ಟ್ವೀಟ್ ಮಾಡಿದ ಶಾರೂಖ್ ಖಾನ್, ‘ನನ್ನ ಹುಟ್ಟುಹಬ್ಬದ ಆಚರಣೆ ನಂಬಲಾಗುತ್ತಿಲ್ಲ. ನೀವಿಷ್ಟು ಜನರು ನನಗಾಗಿ ಬಂದು, ಮಧ್ಯರಾತ್ರಿಯವರೆಗೆ ಇದ್ದು, ಪ್ರೀತಿ ತೋರಿದ್ದೀರಿ. ನನ್ನಂಥ ನಟನಿಗೆ ಇದಕ್ಕಿಂತ ಖುಷಿಯ ವಿಚಾರ ಏನಿದೆ. ನಾನು ಇನ್ನಷ್ಟು ನಿಮ್ಮನ್ನು ಮನರಂಜಿಸಲು ಇದು ಸ್ಪೂರ್ತಿಯಾಗಿದೆ. ನಾನು ನಿಮ್ಮ ಪ್ರೀತಿಯ ಕನಸಿನಲ್ಲಿ ಬದುಕುವೆ. ನಿಮ್ಮನ್ನು ಮನರಂಜಿಸುವ ನನ್ನನ್ನು ಫಾಲೋ ಮಾಡುವ ನಿಮಗೆಲ್ಲರಿಗೂ ಧನ್ಯವಾದ” ಎಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
It’s unbelievable that so many of u come & wish me late at night. I am but a mere actor. Nothing makes me happier, than, the fact that I can entertain u a bit. I live in a dream of your love. Thank u for allowing me to entertain you all. C u in the morning…on the screen & off it
— Shah Rukh Khan (@iamsrk) November 1, 2023
ಡಿಸೆಂಬರ್ 23ಕ್ಕೆ ‘ಡಂಕಿ’
ಜವಾನ್ ಹಾಗೂ ಪಠಾಣ್ ಗೆಲುವಿನ ಅಲೆಯಲ್ಲಿರುವ ಶಾರೂಖ್ ಖಾನ್, ಈ ವರ್ಷ ‘ಡಂಕಿ’ ಸಿನಿಮಾದ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ಬರಲು ಸಜ್ಜಾಗಿದ್ದಾರೆ.
A soldier’s journey to keep a promise.
Rajkumar Hirani’s #Dunki starring #ShahRukhKhan releases at a Star Cinemas near you on December 21, 2023. @iamsrk @hirani.rajkumar @yrf #srk #kingkhan pic.twitter.com/OdVho2kLV4
— Home Screen Entertainment (@homescreenent) October 21, 2023
ರಾಜ್ ಕುಮಾರ್ ಹಿರಾನಿ ನಿರ್ದೇಶನದ ‘ಡಂಕಿ’ ಚಿತ್ರ ಡಿ. 23ಕ್ಕೆ ತೆರೆ ಕಾಣಲಿದ್ದು, ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ. ಪಿಕೆ, ತ್ರೀ ಈಡಿಯಟ್ಸ್ ಮೊದಲಾದ ಸದಭಿರುಚಿಯ ಚಿತ್ರಗಳ ಮೂಲಕ ತಮ್ಮದೇ ಆದ ಅಭಿಮಾನಿ ವರ್ಗ ಸೃಷ್ಟಿಸಿಕೊಂಡಿರುವ ನಿರ್ದೇಶಕ ಹಿರಾನಿ ಅವರ ಈ ಹೊಸ ಚಿತ್ರಕ್ಕೆ ನಿರೀಕ್ಷೆಗಳೂ ಕೂಡ ಹೆಚ್ಚಾಗಿದೆ.