ಕಾನ್ ಚಲನಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಪ್ರಿ (Grand Prix) ಪ್ರಶಸ್ತಿ ಗೆಲ್ಲುವ ಮೂಲಕ ಚಲನಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ ಅವರು ಶನಿವಾರ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಅವರ ಸ್ಪೆಲ್‌ಬೈಂಡಿಂಗ್ ನಾಟಕ “ಆಲ್ ವಿ ಇಮ್ಯಾಜಿನ್ ಆಸ್ ಲೈಟ್” 2024ರ ಕಾನ್ ಚಲನಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಗೆದ್ದಿದೆ.
ಗುರುವಾರ ರಾತ್ರಿ ತೆರೆಕಂಡ ಎಂಎಸ್ ಕಪಾಡಿಯಾ ಅವರ ಚೊಚ್ಚಲ ನಿರ್ದೇಶನದ ಚಿತ್ರವು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಉತ್ತಮ ವಿಮರ್ಶೆಗಳನ್ನು ಪಡೆದುಕೊಂಡಿದೆ. 30 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತೀಯ ಚಲನಚಿತ್ರಕ್ಕೆ ಕಾನ್‌ನಲ್ಲಿ ಗ್ರ್ಯಾಂಡ್ ಪ್ರಿ ಪ್ರಶಸ್ತಿ ಲಭಿಸಿದೆ. ಜೊತೆಗೆ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಭಾರತೀಯ ಮಹಿಳಾ ನಿರ್ದೇಶಕರ ಸಿನಿಮಾ ಪ್ರದರ್ಶನಗೊಂಡಿದೆ.
Le Grand Prix est attribué à ALL WE IMAGINE AS LIGHT de PAYAL KAPADIA.
–
The Jury Prize goes to ALL WE IMAGINE AS LIGHT by PAYAL KAPADIA.#Cannes2024 #Palmares #Awards #GrandPrix pic.twitter.com/Ew5SfmFmvZ— Festival de Cannes (@Festival_Cannes) May 25, 2024
ಈ ಚಲನಚಿತ್ರ ಪ್ರದರ್ಶನಗೊಂಡ ಬಳಿಕ ಪ್ರೇಕ್ಷಕರ ಚಪ್ಪಾಳೆಯ ಸುರಿಮಳೆ ಸುರಿದಿದೆ. ಸುಮಾರು ಎಂಟು ನಿಮಿಷಗಳ ಕಾಲ ಪ್ರೇಕ್ಷಕರು ನಿಂತು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಮೇ ಸಾಹಿತ್ಯ ಮೇಳ | ಹುಚ್ಚಮ್ಮ ಚೌಧರಿ ಕುಣಿಕೇರಿಗೆ ‘ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ’
“ಆಲ್ ವಿ ಇಮ್ಯಾಜಿನ್ ಆಸ್ ಲೈಟ್”, ಮಲಯಾಳಂ-ಹಿಂದಿ ಫೀಚರ್ ಸಿನಿಮಾವಾಗಿದ್ದು, ಅಂತರಾಷ್ಟ್ರೀಯ ವಿಮರ್ಶಕರು ಚಿತ್ರವನ್ನು ಹಾಡಿಹೊಗಳಿದ್ದಾರೆ. ಪಾಯಲ್ ಕಪಾಡಿಯಾ ಅವರ ಕಥೆ ಹೇಳುವ ರೀತಿಯನ್ನು ಶ್ಲಾಘಿಸಿದ್ದಾರೆ.
ಪ್ರಶಸ್ತಿ ಗೆದ್ದ ಭಾರತೀಯ ನಟಿ
ಇನ್ನು ಈ ವಿಶ್ವ ಪ್ರತಿಷ್ಠಿತ ಕಾನ್ ಚಲನಚಿತ್ರೋತ್ಸವದಲ್ಲಿ ಅನಸೂಯಾ ಸೇನ್‌ಗುಪ್ತಾ ಅವರು ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ದಿ ಶೇಮ್‌ಲೆಸ್’ನಲ್ಲಿ (The Shameless) ಅನಸೂಯಾ ಅವರ ಅಭಿನಯ ಗಮನ ಸೆಳೆದಿದೆ. ಇದನ್ನು ಬಲ್ಗೇರಿಯನ್ ನಿರ್ದೇಶಕ ಕಾನ್‌ಸ್ಟಾಂಟಿನ್ ಬೊಜಾನೋವ್ ಬರೆದು ನಿರ್ದೇಶಿಸಿದ್ದಾರೆ.