ಮೇ ಸಾಹಿತ್ಯ ಮೇಳ | ಹುಚ್ಚಮ್ಮ ಚೌಧರಿ ಕುಣಿಕೇರಿಗೆ ‘ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ’

Date:

ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ರಾಜ್ಯದ ಸಾಹಿತ್ಯ-ಸಾಂಸ್ಕೃತಿಕ ಚಳುವಳಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿರುವ ‘ಮೇ ಸಾಹಿತ್ಯ ಮೇಳ’ವು ಮೇ 25 ಹಾಗೂ 26 ರಂದು ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಜರುಗಲಿದೆ. ಸಮ್ಮೇಳನದಲ್ಲಿ ಹಲವಾರು ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಸಮ್ಮೇಳನದ ಆಯೋಜಕರಲ್ಲಿ ಒಬ್ಬರಾದ ಬಸವರಾಜ ಸೂಳಿಬಾವಿ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ನೀಡಲಾಗುವ ಪ್ರಶಸ್ತಿಗಳು ಮತ್ತು ಭಾಜನರು
ವಿಭಾ ಸಾಹಿತ್ಯ ಪ್ರಶಸ್ತಿ- ತೀರ್ಥಹಳ್ಳಿಯ ಸವಿರಾಜ್ ಆನಂದ್,
ಬಂಡ್ರಿ ನರಸಪ್ಪ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ- ಎಸ್.ಆರ್.ಹಿರೇಮಠ,
ನವಲಕಲ್ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ- ಕೆರೆಕೋಣದ ಮಾಧವಿ ಭಂಡಾರಿ,
ನಿಂಗಪ್ಪ ಸಂಶಿ ರೈತ ಚೇತನ ಪ್ರಶಸ್ತಿ- ಬೆಳಗಾವಿಯ ಶಿವಾಜಿ ಕಾಗಣೇಕರ್,
ಪಂಚಪ್ಪ ಸಮುದಾಯ ಮಾರ್ಗಿ ಪ್ರಶಸ್ತಿ – ಜನಾರ್ದನ(ಜನ್ನಿ) ಮೈಸೂರು,
ಚಂದ್ರಶೇಖರ ಹೊಸಮನಿ ಅಂಬೇಡ್ಕರ್ ಪತ್ರಿಕಾ ಮಾರ್ಗಿ ಪ್ರಶಸ್ತಿ- ಇಂದೂಧರ ಹೊನ್ನಾಪುರ,
ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ ಪ್ರಶಸ್ತಿ – ಕೊಪ್ಪಳದ ಹುಚ್ಚಮ್ಮ ಚೌಧರಿ ಕುಣಿಕೇರಿ

ಹುಚ್ಚಮ್ಮ ಚೌದ್ರಿ ಕುಣಿಕೇರಿ ಕಿರು ಪರಿಚಯ
ಹುಚ್ಚಮ್ಮ ಶಿವಪ್ಪ ಗೋಂದಿಹೊಸಳ್ಳಿ ಅವರು ಈಗಿನ ಕೊಪ್ಪಳ ಜಿಲ್ಲೆಯ ಹಂದ್ರಾಳ ಗ್ರಾಮದಲ್ಲಿ ಹುಟ್ಟಿ ಬೆಳೆದರು. ಮೂರ‍್ನಾಲ್ಕು ವರ್ಷದ ಬಾಲೆಯಾಗಿದ್ದಾಗಲೇ ಬಸಪ್ಪ ಚೌದ್ರಿ ಎಂಬ ವರನೊಂದಿಗೆ ಮದುವೆಯಾಯಿತು. ಗಂಡನ ಊರು ಕುಣಿಕೇರಿಗೆ ಬಂದಾಗ ಅವರಿಗೆ 13 ವರ್ಷ ವಯಸ್ಸು. ಸಂಸಾರ ಆರಂಭಿಸಿ ನಾಲ್ಕು ವರ್ಷ ಕಳೆಯುವುದರಲ್ಲೇ ಬಸಪ್ಪ ತೀರಿಕೊಂಡರು. ಮಕ್ಕಳಾಗಿರದ ಹದಿನೇಳು ವರ್ಷದ ಯುವತಿ ಹುಚ್ಚಮ್ಮ ವಿಧವೆ ಎನಿಸಿಕೊಂಡಳು. ವಿಧವೆ ಯುವತಿ ಒಂಟಿ ಹೆಣ್ಣಾಗಿ ಭಾರತೀಯ ಸಮಾಜದಲ್ಲಿ ಬದುಕುವುದು ಸುಲಭವಿಲ್ಲ. ಆದರೆ ಧೃಢವಾಗಿ, ದಿಟ್ಟವಾಗಿ ತನ್ನ ಅನ್ನ ತಾನು ದುಡಿದುಕೊಂಡು ಅತಿ ಕಷ್ಟದಿಂದಲೇ ಘನತೆಯ ಬದುಕನ್ನು ಕಟ್ಟಿಕೊಂಡರು. ತನ್ನ ಹೊಲದಲ್ಲಿ ತಾನೇ ಕೈಹಾಕಿ ದುಡಿದು ಸರಳ ಜೀವನ ನಡೆಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ದಶಕಗಳ ಕೆಳಗಿನ ಮಾತು. ಕುಣಿಕೇರಿ ಊರಿನಲ್ಲೊಂದು ಶಾಲೆಯಿರಲಿಲ್ಲ. ಶಾಲಾ ಕೊಠಡಿ ಕಟ್ಟಲು, ಮಕ್ಕಳು ಆಟವಾಡಲು ಜಾಗವಿರಲಿಲ್ಲ. ಊರಿನಲ್ಲಿ ಜಮೀನ್ದಾರರಿದ್ದರು, ಹೊಲಗಳ ಒಡೆಯರಿದ್ದರು. ಆದರೆ ತುಂಡು ಭೂಮಿಗಾಗಿ ಜೀವಮಾನವಿಡೀ ರಕ್ತಸಿಕ್ತ ಕದನ ನಡೆಸಲೂ ಸಿದ್ಧವಾಗುವ ಸಮಾಜದಲ್ಲಿ ಶಾಲೆಗಾಗಿ ಪುಕ್ಕಟೆ ಭೂಮಿ ಕೊಡಲು ಯಾರೂ ಸಿದ್ಧರಿರಲಿಲ್ಲ. ನೂರಾರು ಎಕರೆ ಹೊಲವಿರುವವರು ಒಂದೆಕರೆ ಕೊಡಲೂ ಒಪ್ಪಲಿಲ್ಲ.

ಆಗ ಹುಚ್ಚಮ್ಮ ಯೋಚಿಸಿದರು. ತನಗೆ ಮಕ್ಕಳಿಲ್ಲ. ಸಾಕಬೇಕಾದ ಕುಟುಂಬವಿಲ್ಲ. ಜಮೀನು ಇಟ್ಟುಕೊಂಡು ಏನು ಮಾಡಲಿ? ತನ್ನಂತೆ ನಿರಕ್ಷರಿಯಾಗಿ ಕಷ್ಟದ ಬದುಕು ನಡೆಸುವ ಪರಿಸ್ಥಿತಿ ತನ್ನೂರ ಮಕ್ಕಳಿಗೆ ಬಾರದೆ ಇರಲಿ, ಊರಿನಲ್ಲೊಂದು ಶಾಲೆ ಶುರುವಾಗಿ ಮಕ್ಕಳೆಲ್ಲ ವಿದ್ಯಾವಂತರಾಗಲಿ ಎಂದು ಯೋಚಿಸಿದರು. ಇದ್ದಷ್ಟು ದಿವಸ ದುಡಿದು ಬದುಕುವೆ ಎಂದು ತನ್ನ ಪಾಲಿನ ಎರಡೆಕರೆ ಜಮೀನನ್ನು ಶಾಲೆಗೆ ದಾನ ಮಾಡಿಬಿಟ್ಟರು. ಅವರ ತಂದೆ ಶಿವಪ್ಪ ಸಹಾ ತವರೂರು ಹಂದ್ರಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಒಂದು ಎಕರೆ ಜಮೀನು ದಾನ ಮಾಡಿದ್ದ ನೆನಪು ಅವರಿಗಿತ್ತು. ತಂದೆಯ ಉದಾತ್ತ ನಡೆಯನ್ನೇ ಮಗಳೂ ಅನುಸರಿಸಿದಳು.

ನಂತರ? ಬದುಕು ನಿಭಾಯಿಸಲು ಹುಚ್ಚಮ್ಮ ಕೂಲಿ ಕೆಲಸವನ್ನೇ ನಂಬಿಕೊಂಡರು. ಕೆಲವು ವರ್ಷಗಳ ಬಳಿಕ ತನ್ನ ಜಮೀನಿನಲ್ಲಿ ಆರಂಭವಾದ ಶಾಲೆಯಲ್ಲಿ ಬಿಸಿಯೂಟ ನೌಕರರಾಗಿ ಸೇರಿಕೊಂಡರು. ಮಕ್ಕಳಿಗೆ ಅಕ್ಷರದ ತುತ್ತುಣಿಸಲು ಜಾಗ ನೀಡಿದ ಆ ಮಹಾಮನಸು, 25 ವರ್ಷಗಳ ಕಾಲ ಮಕ್ಕಳಿಗೆ ತುತ್ತನ್ನೂ ಉಣಿಸಿತು. ಸರ್ಕಾರಿ ಲೆಕ್ಕದ ಪ್ರಕಾರ ಅವರೀಗ ವೃತ್ತಿಯಿಂದ ನಿವೃತ್ತರಾಗಿದ್ದಾರೆ. ಆದರೆ ಈಗಲೂ ಶಾಲೆಗೊಮ್ಮೆ ಹೋಗಿಬರುತ್ತಾರೆ. ತಾವು ಪ್ರೀತಿಯಿಂದ ಸಾಕಿ ಸಲಹಿದ ದೀಪಾ ಅವರ ಕುಟುಂಬದೊಡನೆ ಜೀವನ ನಡೆಸುತ್ತಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.

ಊರಲ್ಲೊಂದು ಶಾಲೆಯಾಗಲೆಂದು ತನ್ನ ಪಾಲಿನ ಜಮೀನು ಪೂರ್ತಿ ದಾನ ನೀಡುವ ಮೂಲಕ ಸಮಾಜಮುಖಿಯಾಗಿ ಬದುಕನ್ನು ತೆತ್ತುಕೊಂಡ ಹುಚ್ಚವ್ವ ಸಮುದಾಯಕ್ಕೆ ಮಾದರಿಯೆನಿಸುವ ಚೇತನ. ಅಂತಹ ಅಕ್ಷರದಾತೆಗೆ ‘ಲಕ್ಷ್ಮಿಬಾಯಿ ಕಟ್ಟಿಮನಿ ಸಮಾಜಮುಖಿ ಮಹಿಳೆ’ ಪ್ರಶಸ್ತಿಯನ್ನು ಕೊಟ್ಟು ಗೌರವಿಸಲು ‘ಮೇ ಸಾಹಿತ್ಯ ಮೇಳ ಬಳಗ’ವು ಹರ್ಷಿಸುತ್ತದೆ. ಅವರಿಗೆ ಆರೋಗ್ಯ, ನೆಮ್ಮದಿಯ ಬದುಕು ಸದಾ ಸಿಗಲೆಂದು ಹಾರೈಸುತ್ತೇವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | 371(ಜೆ) ಸಮರ್ಪಕ ಅನುಷ್ಠಾನಕ್ಕೆ ಆಗ್ರಹ

ಕಲ್ಯಾಣ ಕರ್ನಾಟಕದ ಭಾಗಕ್ಕೆ ಸಂವಿಧಾನದಲ್ಲಿ ನೀಡಲಾಗಿರುವ 371(ಜೆ) ಅನುಷ್ಠಾನಕ್ಕೆ ಆಗ್ರಹಿಸಿ 371(ಜೆ)...

ಚುನಾವಣಾ ಫಲಿತಾಂಶಕ್ಕೂ ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಸಂಬಂಧವಿಲ್ಲ: ಸಿಎಂ ಸಿದ್ದರಾಮಯ್ಯ

“ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದದ್ದೇ, ಪೆಟ್ರೋಲ್ ಬೆಲೆ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ...

ರಾಯಚೂರು | ಉತ್ತರ ಕರ್ನಾಟಕದ ಭಾಗದಲ್ಲಿ ಗಮಕ ಕಾವ್ಯವನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು: ಡಾ ಎ ವಿ ಪ್ರಸನ್ನ

ಉತ್ತರ ಕರ್ನಾಟಕದ ಭಾಗದಲ್ಲಿ ಹುಟ್ಟಿಕೊಂಡಿದ್ದ ಗಮಕ ಕಾವ್ಯ ಇಂದು ದಕ್ಷಿಣ ಕರ್ನಾಟಕದಲ್ಲಿ ಬೆಳೆಯುತ್ತಿದೆ....

ಬೆಂಗಳೂರು | ಸಮಸ್ಯೆಗಳ ಬಗ್ಗೆ ಮನಮುಟ್ಟುವಂತೆ ಬರೆದು ಜನರಿಗೆ ತಲುಪಿಸುವುದು ಅತ್ಯವಶ್ಯಕ; ಕೆ ಸೋಮಶೇಖರ್

"ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಸತ್ವಯುತ ಲೇಖನಗಳು, ಬರಹಗಳು ಸಮಾಜದ ಬದಲಾವಣೆಯಲ್ಲಿ ಅತ್ಯಂತ...