ʼಕಬ್ಜ-2ʼ ಘೋಷಿಸಿ ಟ್ರೋಲ್‌ ಆದ ಆರ್‌ ಚಂದ್ರು

Date:

Advertisements

ಸದ್ಯದಲ್ಲೇ ಸೆಟ್ಟೇರಲಿದೆ ʼಕಬ್ಜ-2ʼ ಸಿನಿಮಾ

ʼಕಬ್ಜ-2ʼ ಬೇರೆ ನೋಡಬೇಕಾ ಗುರು ಎಂದ ನೆಟ್ಟಿಗರು

ರಿಯಲ್‌ ಸ್ಟಾರ್‌ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ಇತ್ತೀಚೆಗೆ ತೆರೆಕಂಡಿದ್ದ ʼಕಬ್ಜʼ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆ ಗಳಿಸುವಲ್ಲಿ ವಿಫಲವಾಗಿತ್ತು. ತೆರೆಕಂಡ ಕೆಲವೇ ದಿನಕ್ಕೆ ಬಹುತೇಕ ಚಿತ್ರಮಂದಿಗಳಿಂದ ಎತ್ತಂಗಡಿಯಾಗಿದ್ದ ಈ ಚಿತ್ರ ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿದೆ. ಇದೇ ಸಂದರ್ಭದಲ್ಲಿ ನಿರ್ದೇಶಕ ಆರ್‌ ಚಂದ್ರು ʼಕಬ್ಜ-2ʼ ಚಿತ್ರವನ್ನು ಘೋಷಿಸಿ, ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ.

Advertisements

ʼಕಬ್ಜʼ ಚಿತ್ರ ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿದ್ದಕ್ಕೆ ಶುಕ್ರವಾರ ಅದ್ಧೂರಿ ಸಮಾರಂಭ ಆಯೋಜಿಸಿದ್ದ ಚಿತ್ರತಂಡ ʼಕಬ್ಜ-2ʼ ಚಿತ್ರದ ಟೈಟಲ್‌ ಪೋಸ್ಟರ್‌ ಬಿಡುಗಡೆ ಮಾಡಿ, ʼಪಾರ್ಟ್‌-2ʼ ಭಾಗದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.

ಮುಂದುವರೆದ ಭಾಗದ ಕಥೆ ಈಗಾಗಲೇ ಸಿದ್ಧವಾಗಿದೆ. ಹಿಂದಿನ ಚಿತ್ರದಲ್ಲಿ ಆದ ತಪ್ಪುಗಳನ್ನು ಸರಿಪಡಿಸಿಕೊಂಡು ʼಕಬ್ಜ-2ʼಗೆ ತಯಾರಿ ನಡೆಸುತ್ತಿದ್ದೇನೆ. ಈ ಚಿತ್ರದಲ್ಲಿ ಕೇವಲ ಕನ್ನಡದ ನಟರು ಮಾತ್ರವಲ್ಲ ಬೇರೆ ಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಮುಹೂರ್ತದ ವೇಳೆಗೆ ಎಲ್ಲ ವಿಚಾರಗಳನ್ನು ಬಹಿರಂಗ ಪಡಿಸುತ್ತೇನೆ. ಒಟ್ಟಿನಲ್ಲಿ ಹಾಲಿವುಡ್‌ ಮಾದರಿಯ ಚಿತ್ರವನ್ನು ಪ್ರೇಕ್ಷಕರ ಎದುರಿಗೆ ತರುತ್ತೇನೆ” ಎಂದು ಆರ್‌ ಚಂದ್ರು ಭರವಸೆ ವ್ಯಕ್ತಪಡಿಸಿದ್ದಾರೆ.

ʼಕಬ್ಜ-2ʼ ಸಿನಿಮಾ ಘೋಷಿಸುತ್ತಲೇ ನೆಟ್ಟಿಗರು ಆರ್‌ ಚಂದ್ರು ಮೇಲೆ ಮುಗಿ ಬಿದ್ದಿದ್ದಾರೆ. ” ʼಕಬ್ಜʼ ಸಿನಿಮಾವನ್ನು ಒಟಿಟಿ ವೇದಿಕೆಯಲ್ಲಿ ಕೂಡ ನೋಡಲು ಮನಸ್ಸಾಗುತ್ತಿಲ್ಲ. ಸಿನಿಮಾದ ಸೋಲನ್ನು ಒಪ್ಪಿಕೊಳ್ಳಲು ಸಹ ನೀವು ತಯಾರಿಲ್ಲ. ಹೀಗಿರುವಾಗ ಅದ್ಯಾವ ಧೈರ್ಯದ ಮೇಲೆ ʼಕಬ್ಜ-2ʼ ಸಿನಿಮಾ ಮಾಡಲು ಹೊರಟಿದ್ದೀರಿ” ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಇನ್ನು ಉಪೇಂದ್ರ ಅಭಿಮಾನಿಗಳು ಕೂಡ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದು, ನೀವು ʼಕಬ್ಜ-2ʼನಲ್ಲಿ ನಟಿಸಬೇಡಿ, ಒಂದು ವೇಳೆ ಆ ಚಿತ್ರದಲ್ಲಿ ನೀವು ಕಾಣಿಸಿಕೊಂಡರೆ ನಮ್ಮ ಮೇಲಾಣೆ” ಎನ್ನುತ್ತಿದ್ದಾರೆ.

“ಮೊದಲ ಭಾಗದಲ್ಲೇ ನಿಮಗೆ ಕಥೆ ಹೇಳಲು ಬಂದಿಲ್ಲ. ಇನ್ನು ಎರಡನೇ ಭಾಗದಲ್ಲಿ ಏನು ಕಥೆ ಹೇಳಲು ಹೊರಟಿದ್ದೀರಿ? ನಾವಂತೂ ʼಕಬ್ಜ-2ʼಗಾಗಿ ನಿರೀಕ್ಷೆ ಮಾಡುತ್ತಿಲ್ಲ. ಒಂದು ವೇಳೆ ನೀವು ಮುಂದುವರೆದ ಭಾಗವನ್ನು ಸಿನಿಮಾ ಮಾಡುವುದಾದರೆ, ದಯವಿಟ್ಟು ಚಿತ್ರಕಥೆಯ ಬಗ್ಗೆ ಗಮನ ಹರಿಸಿ. ಅದನ್ನು ಬಿಟ್ಟು ಸುಮ್ಮನೆ ಸಿನಿಮಾ ಹಾಗಿದೆ, ಹೀಗಿದೆ ಅಂತ ಪ್ರಚಾರಕ್ಕಿಳಿಯಬೇಡಿ” ಎಂದು ಕೆಲವರು ಕಿವಿಮಾತು ಹೇಳಿದ್ದಾರೆ.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X