ಮತ್ತೆ 3 ಸಾವಿರ ಪರದೆಗಳ ಮೇಲೆ ರಾರಾಜಿಸಲು ಸಜ್ಜಾದ ʼಪಠಾಣ್‌ʼ

Date:

Advertisements

ಗಲ್ಲಾ ಪೆಟ್ಟಿಗೆಯಲ್ಲಿ 1,050 ಕೋಟಿ ರೂಪಾಯಿ ಕಲೆಹಾಕಿದ್ದ ʼಪಠಾಣ್‌ʼ

ರಷ್ಯಾ ಸೇರಿ 7 ದೇಶಗಳಲ್ಲಿ ಬಿಡುಗಡೆಯಾಗಲಿದೆ ಶಾರುಖ್‌ ಸಿನಿಮಾ

ಬಾಲಿವುಡ್‌ನ ಸ್ಟಾರ್‌ ನಟ ಶಾರುಖ್‌ ಖಾನ್‌ ಅಭಿನಯದ ಪಠಾಣ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಗಲ್ಲಾ ಪೆಟ್ಟಿಗೆಯಲ್ಲಿ ಭರ್ಜರಿ ಗಳಿಕೆ ಮಾಡಿದ್ದ ಈ ಸಿನಿಮಾ ಒಟಿಟಿ ವೇದಿಕೆಯಲ್ಲೂ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಜಗತ್ತಿನಾದ್ಯಂತ ಸಿನಿಮಾ ಪ್ರೇಮಿಗಳ ಮೆಚ್ಚುಗೆ ಗಳಿಸಿದ್ದ ʼಪಠಾಣ್ʼ ಇದೀಗ ಮತ್ತೆ ತೆರೆಗೆ ಬರಲು ಸಜ್ಜಾಗಿದೆ.

Advertisements

ಪಠಾಣ್‌ ಸಿನಿಮಾ ಒಟಿಟಿಯಲ್ಲಿ ಮೋಡಿ ಮಾಡಿದ ಬೆನ್ನಲ್ಲೇ ರಷ್ಯಾ ಸೇರಿದಂತೆ ಹಲವು ದೇಶಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಬೇಡಿಕೆ ಹೆಚ್ಚಿದೆ. ಈ ಹಿನ್ನೆಲೆ ರಷ್ಯಾ, ಅರ್ಮೇನಿಯ, ಅಜರ್ಬೈಜಾನ್‌, ಬೆಲಾರುಸ್‌, ಜಾರ್ಜಿಯಾ, ಕಜಕಸ್ತಾನ್‌‌, ಕಿರ್ಗಿಸ್ತಾನ್‌, ಉಜ್ಬೇಕಿಸ್ತಾನ್‌ ದೇಶಗಳ 3 ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಸ್ಥಳೀಯ ಭಾಷೆಗಳಲ್ಲಿ‌ ಜುಲೈ 13ರಂದು ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ.

ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ತೆರೆಗೆ ಬಂದಿದ್ದ ‘ಪಠಾಣ್‌’ ಸಿನಿಮಾ ಭಾರತ, ಅಮೆರಿಕಾ, ದುಬೈ ಸೇರಿದಂತೆ 100ಕ್ಕೂ ಹೆಚ್ಚು ದೇಶಗಳ 2500 ಪರದೆಗಳಲ್ಲಿ ಬಿಡುಗಡೆಯಾಗಿತ್ತು. ಕಳೆದ ಬಾರಿಗೆ ಹೋಲಿಸಿಕೊಂಡರೆ ಈ ಬಾರಿ ವಿದೇಶಗಳಲ್ಲಿ ಹೆಚ್ಚಿನ ಪರದೆಗಳಲ್ಲಿ ʼಪಠಾಣ್‌ʼ ಸಿನಿಮಾ ಬಿಡುಗಡೆಯಾಗುತ್ತಿದೆ.

ಭಾರತದಲ್ಲಿ 650 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕಲೆ ಹಾಕಿದ್ದ ಈ ಸಿನಿಮಾ, ವಿದೇಶಗಳಲ್ಲಿ 392 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿತ್ತು. ಒಟ್ಟಾರೆಯಾಗಿ ʼಪಠಾಣ್‌ʼ ಜಗತ್ತಿನಾದ್ಯಂತ 1,050 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಕಲೆ ಹಾಕುವ ಮೂಲಕ ಜಾಗತಿಕವಾಗಿ ಅತಿಹೆಚ್ಚು ಗಳಿಕೆ ಮಾಡಿದ 5ನೇ ಭಾರತೀಯ ಸಿನಿಮಾ ಎಂಬ ದಾಖಲೆಯನ್ನು ನಿರ್ಮಿಸಿತ್ತು.

ಸದ್ಯ ವಿದೇಶಗಳಲ್ಲೇ 3 ಸಾವಿರ ಪರದೆಗಳಲ್ಲಿ ಬಿಡುಗಡೆಯಾಗುತ್ತಿರುವ ʼಪಠಾಣ್‌ʼ, ಗಲ್ಲಾ ಪೆಟ್ಟಿಗೆಯ ಹಳೆಯ ದಾಖಲೆಗಳನ್ನು ಮುರಿಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಜಾಗತಿಕವಾಗಿ ಅತಿಹೆಚ್ಚು ಗಳಿಕೆ ಮಾಡಿರುವ ಭಾರತೀಯ ಸಿನಿಮಾಗಳ ಪೈಕಿ 2,024 ಕೋಟಿ ರೂಪಾಯಿಗಳನ್ನು ಕಲೆಹಾಕಿದ್ದ ಆಮಿರ್‌ ಖಾನ್‌ ನಟನೆಯ ʼದಂಗಲ್‌ʼ ಸಿನಿಮಾ ಮೊದಲ ಸ್ಥಾನದಲ್ಲಿದೆ. 1,700 ಕೋಟಿ ರೂಪಾಯಿಗಳನ್ನು ಕಲೆ ಹಾಕಿದ್ದ ʼಬಾಹುಬಲಿ-2ʼ ಸಿನಿಮಾ ಎರಡನೇ ಸ್ಥಾನದಲ್ಲಿದ್ದರೆ, 1,258 ಕೋಟಿ ರೂಪಾಯಿಗಳನ್ನು ಗಳಿಸಿದ್ದ ʼಆರ್‌ಆರ್‌ಆರ್‌ʼ ಸಿನಿಮಾ ಮೂರನೇ ಸ್ಥಾನದಲ್ಲಿದೆ. ಯಶ್‌ ನಟನೆಯ ಕನ್ನಡದ ʼಕೆಜಿಎಫ್‌-2ʼ ಸಿನಿಮಾ 1,250 ಕೋಟಿ ರೂಪಾಯಿಗಳನ್ನು ಕಲೆ ಹಾಕಿದ್ದು, ನಾಲ್ಕನೇ ಸ್ಥಾನದಲ್ಲಿದೆ. ಸದ್ಯ 5ನೇ ಸ್ಥಾನದಲ್ಲಿರುವ ʼಪಠಾಣ್‌ʼ, ʼಕೆಜಿಎಫ್‌-2ʼ ಮತ್ತು ʼಆರ್‌ಆರ್‌ಆರ್‌ʼ ಸಿನಿಮಾಗಳ ಸಾರ್ವಕಾಲಿಕ ದಾಖಲೆಗಳನ್ನು ಮುರಿಯಲಿದೆ ಎಂಬ ಚರ್ಚೆ ಶುರುವಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X