ಎತ್ತ ಸಾಗುತ್ತಿದೆ ಕನ್ನಡ ಚಿತ್ರರಂಗ; ಸಿನಿಮಾ ಉಳಿಸಲು ಹೋಮ, ಹವನ – ಪೂಜೆ ನಂತರ ಚಿತ್ರಗಳೆಲ್ಲವೂ ಹೌಸ್‌ಫುಲ್‌ ಆಗಲಿವೆಯೆ?

Date:

Advertisements

ಉತ್ತಮ ಕಂಟೆಂಟ್‌ಗಳೊಂದಿಗೆ ಸದಭಿರುಚಿಯ ಚಿತ್ರಗಳನ್ನು ನೀಡದೆ ಸೊರಗುತ್ತಿರುವ ಕನ್ನಡ ಚಿತ್ರರಂಗ ಈದೀಗ ಸಿನಿಮಾ ರಂಗವನ್ನು ಉಳಿಸಲು ಸಂಪೂರ್ಣ ಮೌಢ್ಯಕ್ಕೆ ಜಾರುತ್ತಿರುವುದು ನಿಜಕ್ಕೂ ದುಃಖಕರ ಸಂಗತಿ. ಅತ್ಯುತ್ತಮ ಕಥೆಗಳೊಂದಿಗೆ ಗುಣಮಟ್ಟದ ಚಿತ್ರಗಳನ್ನು ನೀಡದ ಸ್ಯಾಂಡಲ್‌ವುಡ್‌ ಮಂದಿ ಚಿತ್ರರಂಗವನ್ನು ಹೋಮ, ಹವನ, ಪೂಜೆಗಳಿಂದ ಉಳಿಸಲು ಹೊರಟಿದ್ದಾರೆ. ಇದಕ್ಕಾಗಿಯೇ ಆಗಸ್ಟ್‌ 14 ರಂದು ಕನ್ನಡ ಚಲನಚಿತ್ರ ಕಲಾವಿದರ ಸಂಘ ಇಡೀ ದಿನ ಪೂಜಾ, ಹವನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.

ಕನ್ನಡ ಚಿತ್ರರಂಗದಲ್ಲಿ ಕಲಾವಿದರ ಸಂಘಕ್ಕೆ ತನ್ನದೇ ಆದ ಮಹತ್ವ ಇದೆ. ಕೋವಿಡ್ ನಂತರ ಎಲ್ಲ ಕ್ಷೇತ್ರಗಳಂತೆ ಚಿತ್ರರಂಗವೂ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದು ನಿಜ. ಅದಕ್ಕೆ ಪರಿಹಾರ ಏನು, ಎಲ್ಲ ವಿಭಾಗಗಳ ಕಾಸ್ಟ್ ಕಟ್ಟಿಂಗ್, ಟಿಕೇಟ್ ರೇಟು ಕಡಿಮೆ, ಮೇಕಿಂಗ್ ಕಾಸ್ಟ್ ಕಡಿತ, ವರ್ಷಾನುಗಟ್ಟಲೇ ಸಿನಿಮಾ ಮಾಡುವುದನ್ನು ತಪ್ಪಿಸುವುದು, ಕಷ್ಚದಲ್ಲಿರುವ ನಿರ್ಮಾಪಕ, ನಿರ್ದೇಶಕ, ಕಲಾವಿದರಿಗೆ ಕೆಲಸ ಸಿಗುವಂತೆ ನೋಡಿಕೊಳ್ಳುವುದು. ಇದೆಲ್ಲವೂ ಮಾಡುವ ಅವಕಾಶ ಇತ್ತು. ಆದರೆ, ಹೋಮ ಮಾಡುವುದರಿಂದ ಏನು ಪ್ರಯೋಜನ ಅಂತ ಈಗ ಕಲಾವಿದರ ಸಂಘದಲ್ಲಿ ಕೂತಿರುವ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ಅವರೇ ಹೇಳಬೇಕು.

ಒಂದು ವೇಳೆ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅವರು ಇದ್ದಿದ್ದರೂ ಇಂತಹದ್ದೊಂದು ನಿರ್ಧಾರ ತೆಗೆದುಕೊಂಡಿದ್ದರೆ ಕಪಾಳ ಮೋಕ್ಷ ಮಾಡುತ್ತಿದ್ದರು. ಯಾಕೆಂದರೆ ಇಂಥ ದಿಗ್ಗಜರು ಇದ್ದಾಗ ಸಮಸ್ಯೆ ಪರಿಹಾರಕ್ಕೆ ಅವರು ಎಲ್ಲರು ಒಟ್ಟಾಗಿ ಯೋಚಿಸುವ ದಾರಿಯೇ ಬೇರೆಯಿತ್ತು. ಈ ಹಿಂದೆ ಪ್ರವಾಹ, ಬರಗಾಲ, ಕನ್ನಡ ಹೋರಾಟ ಅಂತ ಬಂದಾಗ ಸಿನಿಮಾ ಮಂದಿ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡೆ ನಡೆಸುತ್ತಿದ್ದರು. ನಿರ್ಮಾಪಕರಿಗೆ, ಉದ್ಯಮಕ್ಕೆ ಒಳ್ಳೆದಾಗಲಿ ಅಂತ ಡಾ. ರಾಜ್ ಕುಮಾರ್ ಸಾರಥ್ಯದಲ್ಲಿ ಅಂದು ಒಂದು ಚಿತ್ರ ಮಾಡಿದ್ದರು. ಇಂಥ ಪರಂಪರೆ ಇರುವ ಕಲಾವಿದರು ಸಂಘದಲ್ಲಿ ಈಗ ಹೋಮ ನಡೆಯುತ್ತಿದೆ. ದುರಂತವಲ್ಲದೆ ಮತ್ತೇನಿಲ್ಲ.

Advertisements

ಈ ಸುದ್ದಿ ಓದಿದ್ದೀರಾ? ಮನೆ ಊಟದಿಂದ ತೊಂದರೆಯಾದರೆ ಯಾರು ಹೊಣೆ?: ದರ್ಶನ್ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪ್ರಶ್ನೆ

1960 ರಲ್ಲಿ ಕಲಾವಿದರಿಗೆ ಕೆಲಸ ಇಲ್ಲದಿದ್ದಾಗ ಎಲ್ಲರು ಸೇರಿ ತಾವು ಹಣಹಾಕಿಕೊಂಡು ಒಂದು ಸಿನಿಮಾ ಮಾಡುತ್ತಾರೆ. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ಉತ್ಸಾಹ ತುಂಬುವ ಉದ್ದೇಶ ಇತ್ತು. ಆ ಚಿತ್ರವೇ ರಣಧೀರ ಕಂಠೀರವ. ಇದು ಇಡೀ ಉದ್ಯಮದ ಮೊದಲ ಕ್ರೌಡ್ ಫಂಡಿಗ್ ಸಿನಿಮಾ. ಚಿತ್ರರಂಗ ಹೀಗೆ ಯೋಚನೆ ಮಾಡೋ ಬದಲು ಹೋಮ, ಪಿಂಡ ಅಂತ ಹೊಗೆ ಹಾಕೋ ಕಾರ್ಯಕ್ರಮ ಮಾಡುತ್ತಿರುವುದು ನಾಚಿಗೇಡಿನ ಸಂಗತಿ. ಹತ್ತಾರು ಚಿತ್ರಗಳನ್ನು ನಿರ್ಮಿಸಿರುವ ನಿರ್ಮಾಪಕ ರಾಕ್ ಲೈನ್ ಅವರಿಗೆ ಹೇಳೋರು ಕೇಳೋರು ಯಾರೂ ಇಲ್ಲವೇ? ನೂರಾರು ಚಿತ್ರಗಳಲ್ಲಿ ನಟಿಸಿರುವ ದೊಡ್ಡಣನವರ ಬುದ್ಧಿಗೆ ಮಂಕು ಕವಿದಿದೆಯೆ?

ಈಗ ಚಿತ್ರರಂಗದಲ್ಲಿ ದೊಡ್ಡವರು ಇಲ್ಲ. ಹೀಗಾಗಿ ನಾವು ದೇವರ ಮೊರೆ ಹೋಗುತ್ತಿದ್ದೇವೆ. ಆ ಮೂಲಕ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದೇವೆ ಎನ್ನುವ ರಾಕ್ ಲೈನ್ ವೆಂಕಟೇಶ್ ಅವರ ಹೇಳಿಕೆ ಕೇಳಿ ಇಡೀ ಭಾರತೀಯ ಚಿತ್ರರಂಗಕ್ಕೆ ನಗಬಾರದ ಜಾಗದಲ್ಲಿ ನಗುತ್ತಿದೆ ಎಂಬುದು ರಾಕ್ ಲೈನ್ ಪಕ್ಕದಲ್ಲಿ ಕೂತಿರುವ ದೊಡ್ಡಣ್ಣ ಅವರಿಗೂ ಗೊತ್ತಾಗದೆ ಹೋಗಿರುವುದು ಪರಮ ಅಚ್ಚರಿ.

ರಾಕ್‌ಲೈನ್‌ ಹೇಳಿರುವುದೇನು?

“ಆಗಸ್ಟ್ 14ರಂದು ಬೆಳಿಗ್ಗೆ ಎಂಟಕ್ಕೆ ಸಂಕಲ್ಪ ನಡೆಯಲಿದೆ. ನಂತರ ಮೂರು ಹೋಮಗಳು ನಡೆಯಲಿವೆ. ಗಣಪತಿ ಹೋಮ, ಮೃತ್ಯುಂಜಯ ಹೋಮ ಮತ್ತು ಸರ್ಪ ಶಾಂತಿ ನಡೆಯಲಿದೆ. ಇದರಲ್ಲಿ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರು ಭಾಗವಹಿಸಲಿದ್ದಾರೆ. ಚಿತ್ರರಂಗ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೆ. ಕೋವಿಡ್‍ ನಂತರವೇ ಇಂಥದ್ದೊಂದು ಯೋಚನೆ ಇತ್ತು. ಕೋವಿಡ್‍ ನಂತರ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಾವು, ನೋವುಗಳಾದವು. ಕಾರಣಾಂತರಗಳಿಂದ ಆಗಲಿಲ್ಲ. ದೊಡ್ಡಣ್ಣ ಒಂದು ತಿಂಗಳ ಮುಂಚೆ ಯಾಕೆ ಒಂದು ಪೂಜೆ ಮಾಡಿಸಬಾರದು ಎಂದು ಹೇಳಿದರು. 14ರಂದು ದಿನ ಚೆನ್ನಾಗಿರುವುದರಿಂದ ಅಂದು ಚಿತ್ರರಂಗದ ಉಳಿವಿಗಾಗಿ ಮತ್ತು ಏಳಿಗೆಗಾಗಿ ಹೋಮ ಮಾಡಿಸುತ್ತಿದ್ದೇವೆ. ಇದಕ್ಕೆ ಚಿತ್ರರಂಗದ ಎಲ್ಲರನ್ನೂ ಕರೆದಿದ್ದೇವೆ”

ಅದೆಲ್ಲವೂ ಸರಿ, ಹೋಮ ಮುಗಿದ ನಂತರ…. ಬಿಡುಗಡೆಯಾಗುವ ಎಲ್ಲ ಸಿನಿಮಾಗಳು ಹೌಸ್ ಫುಲ್ ಓಡುತ್ತವೆಯೆ? ಹವನ ನಡೆದ ನಂತರ…ಖಾಲಿ ಕೂತಿರುವ ಎಲ್ಲ ನಟ ನಟಿಯರಿಗೂ ಕೆಲಸ ಸಿಗುತ್ತದೆಯೇ? ಪೂಜೆಯ ನಂತರ….. ಕನ್ನಡ ಚಿತ್ರರಂಗ ಹಾಲಿವುಡ್ ಹಂತಕ್ಕೆ ಹೋಗಲಿದೆಯೆ? ಹೋಮ ಹವನಗಳು ನಡೆದ ನಂತರ … ಹಾಲಿವುಡ್‌ನ ಎಲ್ಲ ನಟ ನಟಿಯರು ಕನ್ನಡ ಚಿತ್ರರಂಗಕ್ಕೆ ಬಂದು ಕನ್ನಡದಲ್ಲಿ ಮಾತನಾಡಲಿದ್ದಾರೆಯೇ? ಎತ್ತ ಸಾಗುತ್ತಿದೆ ಚಿತ್ರರಂಗ? ನೆರೆಯ ಮಲಯಾಳಂ ಚಿತ್ರರಂಗವನ್ನು ನೋಡಿ ನಮ್ಮವರು ಕಲಿಯಬಾರದೆ. ಸ್ಟಾರ್‌ ಪಟ್ಟವನ್ನು ಮೀರಿ ಕೇವಲ ಕಂಟೆಂಟ್‌ಗಳಿದಲೇ ಪ್ರೇಕ್ಷಕರನ್ನು ಸೆಳೆಯುತ್ತಿರುವುದು ಮಲಯಾಳಂ ಸಿನಿಮಾ ಮಂದಿ ನಮ್ಮವರ ಕಣ್ಣಿಗೆ ಕಾಣುತ್ತಿಲ್ಲವೆ? ಅಥವಾ ಕಣ್ಣಿದ್ದು ಕುರುಡಾಗಿದ್ದಾರೆಯೆ?

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

7 COMMENTS

  1. ಉಂಡ ಮನೆಗೆ ದ್ರೋಹ ಬಗೆಯುವವರು ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ಜನ ಇರುವ ಕಾರಣ ಚಿತ್ರರಂಗ ಸೊರಗುತ್ತಿದೆ…
    . ದೊಡ್ಡಣ್ಣ ಮತ್ತು ರಾಕ್ ಲೈನ್ ವೆಂಕಟೇಶ್ ರವರು ಸಾಮಾನ್ಯರೇ…..

  2. Kannada actors yaava kade hodru kannada bittu english koritaare..actor yenu madiddare janrige .avrige yeke maryade kodbeku..hana thagondu act madthare aste…chee ..intha actor ge..

  3. ಒಂದು ಕಾಲದಲ್ಲಿ ಜಪಾನ್ ಮತ್ತು ಮಲಯಾಳಂ ಚಿತ್ರರಂಗಗಳು ಕಾಮೋತ್ತೇಜಕ ಚಿತ್ರಗಳಿಗೆ ಭಾರಿ ಪ್ರಸಿದ್ದವಾಗಿದ್ದವು. ಆಮೇಲೆ
    ಜಪಾನಿ ಚಿತ್ರ ನಿರ್ದೇಶಕ ಅಕಿರೋ ಕುರೋಸಾವನ ಚಿತ್ರಗಳು ಜಗತ್ಪ್ರಸಿದ್ಧವಾದವು. 90 ರಾ ದಶಕದ ನಂತರ ಮಲಯಾಳಂ ಚಿತ್ರರಂಗ ತನ್ನ ಮಗ್ಗುಲು ಬದಲಿಸಿದ ಮೇಲೆ ಹಿಂದಿರುಗಿ ನೋಡಲೇ ಇಲ್ಲ. ಇಂದು, ಕನ್ನಡ ಚಿತ್ರರಂಗ ಅಪ್ಪ ಡೇಟ್ ಆಗದೆ, ಪ್ರಯೋಗಶೀಲವಾಗದೆ, ಬರೇ ಥಳುಕು ಬಳುಕಿಗೆ ಮೊರೆ ಹೋದರೆ ದಾರಿ ಯಾವುದಯ್ಯ? ಜೊತೆಗೆ ಪುರೋಹಿತಶಾಹಿಗೆ ಶರಣಾಗಿ ಹೋಮ, ಹವನ ಮಾಡಿಸುತ್ತಾ ಕೂತರೆ ಲಾಭ ಯಾರಿಗೆ?

  4. ಒಳ್ಳೆಯ ಕಥೆ- ಕಾದಂಬರಿ ಕನ್ನಡದಲ್ಲಿ ಇವೆ. ನೋಡುವ ಕಣ್ಣಿಲ್ಲ, ಓದುವ ಮನಸ್ಸಿಲ್ಲ. ಒಳ್ಳೆಯ ಕವಿಗಳು ಇದ್ದಾರೆ, ಕೇಳುವ ಕಿವಿಗಳು ಇಲ್ಲ. ಕತ್ತಿ ಚಾಕು ಚೂರಿ ಇಲ್ಲದೆ ಸಿನಿಮಾ ಆಗೋಲ್ಲವೇ?
    ಸ್ವಲ್ಪ ಬುದ್ಧಿ ಉಪಯೋಗಿಸಿ. ಒಂದು ಟೀಮ್ ಮಾಡಿ, ಇದೆಲ್ಲವನ್ನು ಶೋಧಿಸಲಿಕ್ಕೆ. Sequence ಗಳು ಮುತ್ತು ಪೋಣಿಸಿದ ಸರದ ಹಾಗೆ ಇರಬೇಕು. ಶಿಳ್ಳೆ ಹೊಡೆಯುವ ಹಾಗೆ ಉದ್ದುದ್ದ ಡೈಲಾಗ್, ಸಿನಿಮಾವನ್ನು ಗೆಲ್ಲಿಸೋಲ್ಲ. ಕಡಿಮೆ ಖರ್ಚಿನಲ್ಲಿ ಸರಳವಾಗಿ ಉತ್ತಮ ಸಿನಿಮಾ ಮಾಡಿ, ಹೀರೋಗಳ ಜೊತೆ
    ಮಾತು ಕಥತೆಗಳಾಗಲಿ. ಎಲ್ಲರೂ ಅವರವರ ರೇಟ್ಗಳನ್ನು ಸ್ವಲ್ಪ ಕಡಿಮೆ ಮಾಡುವಂತೆ ಕೇಳಬೇಕು. ಕನ್ನಡ ಇಂಡಸ್ಟ್ರಿ ಉಳಿಯಲಿಕ್ಕೆ ಎಲ್ಲರೂ ಜೊತೆಗೂಡಬೇಕು, ತ್ಯಾಗ ಮಾಡಬೇಕು ಎನ್ನುವ ಸತ್ಯ ಮನವರಿಕೆ ಆಗಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಶೋಲೆ’ @ 50: ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲ

'ಶೋಲೆ' ಚಿತ್ರ ಬಿಡುಗಡೆಯಾಗಿ 50 ವರ್ಷಗಳಾದರೂ ಇವತ್ತಿಗೂ ಅದೇ ತಾಜಾತನ, ಅದೇ...

ರೇಣುಕಾಸ್ವಾಮಿ ಕೊಲೆ ಪ್ರಕರಣ | ನಟ ದರ್ಶನ್‌, ಪವಿತ್ರಾ ಗೌಡ ಜಾಮೀನು ಭವಿಷ್ಯ ಇಂದು ತೀರ್ಮಾನ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌, ಪವಿತ್ರಾ ಗೌಡ...

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

Download Eedina App Android / iOS

X