ಆ. 4ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಗೊಳ್ಳಲಿದೆ ‘ಕಾಡುಗಳ್ಳ ವೀರಪ್ಪನ್ ಬೇಟೆ’ಯ ಕಥೆ

Date:

Advertisements
  • ಆಗಸ್ಟ್ 4ರಂದು ಬಿಡುಗಡೆಗೊಳಿಸಲಿದೆ ಒಟಿಟಿ ಸಂಸ್ಥೆ ನೆಟ್‌ಫ್ಲಿಕ್ಸ್
  • 108 ದಿನ ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿದ್ದ ವೀರಪ್ಪನ್

ಕರ್ನಾಟಕ ಮತ್ತು ತಮಿಳುನಾಡಿನ ಕಾಡುಗಳಲ್ಲಿ ವಾಸವಿದ್ದ ಕುಖ್ಯಾತ ಕಾಡುಗಳ್ಳ ವೀರಪ್ಪನ್ ಕುರಿತ ಕಥೆಯು ನೆಟ್‌ಫ್ಲಿಕ್ಸ್(Netflix)ನಲ್ಲಿ ಬರಲು ಸಿದ್ಧವಾಗಿದೆ.

ಆಗಸ್ಟ್ 4ರಂದು ಬಿಡುಗಡೆಗೊಳಿಸಲಿರುವ ‘ದಿ ಹಂಟ್ ಫಾರ್ ವೀರಪ್ಪನ್‌’ ಡಾಕ್ಯುಮೆಂಟರಿಯ ಟೀಸರ್ ಹಾಗೂ ಟ್ರೇಲರ್ ಅನ್ನು ನೆಟ್‌ಫ್ಲಿಕ್ಸ್ ಈಗಾಗಲೇ ಬಿಡುಗಡೆ ಮಾಡಿದೆ.

ಪೊಲೀಸರು ಮತ್ತು ರಾಜಕಾರಣಿಗಳ ದುಃಸ್ವಪ್ನವಾಗಿದ್ದ ವೀರಪ್ಪನ್‌, ತಮಿಳುನಾಡು, ಕರ್ನಾಟಕ ಮತ್ತು ಕೇರಳದ ಕಾಡುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು. ‘ಕಾಡುಗಳ್ಳ ವೀರಪ್ಪನ್’ ಎಂದೇ ಕುಖ್ಯಾತಿ ಪಡೆದಿದ್ದನು.

Advertisements

‘ಒಬ್ಬ ಕಾಡುಗಳ್ಳ​ನಿಂದ ದೊಡ್ಡ ಡಕಾಯಿತನಾಗುವವರೆಗಿನ ವೀರಪ್ಪನ್ ಪ್ರಯಾಣ, ಇಡೀ ದೇಶವೇ ತನ್ನತ್ತ ನೋಡುವತ್ತ ಮಾಡಿದ್ದ ಕುಖ್ಯಾತ ಮಾನವ ಬೇಟೆಯ ಕತೆ ತೆರೆಯ ಮೇಲೆ ಬರಲಿದೆ’ ಎಂದು ನೆಟ್‌ಫ್ಲಿಕ್ಸ್ ಟೀಸರ್ ಅನ್ನು ಹಂಚಿಕೊಂಡಿತ್ತು.

‘ಪತಿ, ತಂದೆ, ನಾಯಕ ಮತ್ತು ವಾಟೆಂಡ್ ಕ್ರಿಮಿನಲ್ ಅಲ್ಲದೆ, ಉದ್ದ ಮತ್ತು ದಪ್ಪ ಮೀಸೆ ಮತ್ತು ಮುಖದ ತುಂಬ ಮೂಳೆಗಳೇ ಕಾಣಿಸುವಂತ ವ್ಯಕ್ತಿಯ ಚಿತ್ರಣವು ಪ್ರಸಿದ್ಧವಾಗಿದ್ದರೂ, ವೀರಪ್ಪನ್‌ ಜೀವನದ ಇತರ ಹಲವು ಅಂಶಗಳು ದಕ್ಷಿಣ ಭಾರತದ ಕರಾಳ ಕಾಡುಗಳಲ್ಲಿ ಮರೆಯಾಗಿವೆ. ಈ ವೆಬ್ ಸರಣಿಯು ಈ ಸಾಹಸಗಾಥೆಯನ್ನು ಅವರಿಗೆ ಹತ್ತಿರವಿರುವವರಿಂದ ಹೊರ ಜಗತ್ತಿಗೆ ತಿಳಿಸಲು ಶ್ರಮಿಸಿದೆ’ ಎಂದು ನೆಟ್‌ಫ್ಲಿಕ್ಸ್‌ ಹೇಳಿದೆ.

ಕನ್ನಡದ ವರನಟ ಡಾ. ರಾಜ್‌ಕುಮಾರ್ ಅನ್ನು ಅಪಹರಿಸಿದ್ದ ವೀರಪ್ಪನ್

ವೀರಪ್ಪನ್ ಹೆಚ್ಚು ಚರ್ಚೆಗೊಳಗಾದದ್ದು ಡಾ. ರಾಜ್‌ಕುಮಾರ್ ಅವರನ್ನು ಅಪಹರಿಸಿದ ಬಳಿಕ. 2000ನೇ ಇಸವಿಯ ಜುಲೈ 30ರ ರಾತ್ರಿ ಪತ್ನಿ ಪಾರ್ವತಮ್ಮ ಅವರೊಂದಿಗೆ ತಮ್ಮ ಹುಟ್ಟೂರು ಗಾಜನೂರಿಗೆ ಹೋಗಿದ್ದ ಡಾ. ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ಆ ಸುದ್ದಿ ರಾಜ್ಯದ ಜನತೆಗೆ ಮರುದಿನ ಬೆಳಗ್ಗೆ ಬರಸಿಡಿಲಿನಂತೆ ಅಪ್ಪಳಿಸಿತ್ತು. ಈ ಘಟನೆ ನಡೆದ 108 ದಿನಗಳ ಬಳಿಕ ರಾಜ್ ಕುಮಾರ್ ಬಿಡುಗಡೆಯಾಗಿ ಮನೆಗೆ ಮರಳಿದ್ದರು. ರಾಜ್ ಕುಮಾರ್ ಅವರೊಂದಿಗೆ ಅವರ ಅಳಿಯ ಎಸ್‌ಎ ಗೋವಿಂದರಾಜ್, ಸಹ ನಿರ್ದೇಶಕ ನಾಗಪ್ಪ ಮಾರಡಗಿ, ಸಂಬಂಧಿ ನಾಗೇಶ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ರಾಜ್ ಕುಮಾರ್ ಅಪಹರಣದ ಸಂದರ್ಭದಲ್ಲಿ ರಾಜ್ಯದಾದ್ಯಂತ ಗದ್ದಲ, ಪ್ರತಿಭಟನೆ, ಕೋಲಾಹಲವೇ ಸೃಷ್ಟಿಯಾಗಿತ್ತು.

drrajkumar

‘ದಿ ಹಂಟ್ ಫಾರ್ ವೀರಪ್ಪನ್’ ಅನ್ನು ಸೆಲ್ವಮಣಿ ಸೆಲ್ವರಾಜ್ ನಿರ್ದೇಶಿಸಿದ್ದಾರೆ. ಅವೇಡಸಿಯಸ್ ಒರಿಜಿನಲ್ಸ್‌ನ ಅಪೂರ್ವ ಬಕ್ಷಿ ಮತ್ತು ಮೋನಿಶಾ ತ್ಯಾಗರಾಜನ್ ನಿರ್ಮಿಸಿದ್ದಾರೆ. ಈ ವೆಬ್ ಸರಣಿಗೆ ವೀರಪ್ಪನ್ ಹೆಸರು ಬಳಸದಂತೆ ಆತನ ಪತ್ನಿ ಮುತ್ತುಲಕ್ಷ್ಮೀ ಮೊದಲು ವಿರೋಧ ವ್ಯಕ್ತಪಡಿಸಿದ್ದರು.

‘ದಿ ಹಂಟ್ ಫಾರ್ ವೀರಪ್ಪನ್’ನಲ್ಲಿ ಮುತ್ತುಲಕ್ಷ್ಮೀ ಸಹಿತ ವೀರಪ್ಪನ್ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದ ಹಲವು ನಿವೃತ್ತ ಪೊಲೀಸ್ ಅಧಿಕಾರಿಗಳು ಮಾತನಾಡಿದ್ದಾರೆ.

ವೀರಪ್ಪನ್ ಸೆರೆ ಕಾರ್ಯಾಚರಣೆ ಭಾರತದ ಅತ್ಯಂತ ದೀರ್ಘಾವಧಿಯ ಮತ್ತು ದುಬಾರಿ ಮಾನವ ಬೇಟೆಗಳಲ್ಲಿ ಒಂದಾಗಿದೆ. ಈ ವೆಬ್ ಸರಣಿಯು ನಾಲ್ಕು ಭಾಗಗಳಾಗಿದ್ದು, ತಮಿಳು, ಇಂಗ್ಲಿಷ್, ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರಲಿದೆ ಎಂದು ಒಟಿಟಿ ಸಂಸ್ಥೆ ತಿಳಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X