ಬಾಲಿವುಡ್‌ನ ಹಿರಿಯ ನಟಿ ಮತ್ತು ಖ್ಯಾತ ಚಲನಚಿತ್ರ ನಿರ್ಮಾಪಕ ವಿ. ಶಾಂತಾರಾಮ್ ಅವರ ಪತ್ನಿ ಸಂಧ್ಯಾ ಶಾಂತಾರಾಮ್ ಅವರು ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಶನಿವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಅವರಗೆ
94 ವಯಸ್ಸಾಗಿತ್ತು. ಅವರ ಅಂತ್ಯಕ್ರಿಯೆಯನ್ನು ಮುಂಬೈನ ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿರುವ ವೈಕುಂಠ ಧಾಮದಲ್ಲಿ ನಡೆಸಲಾಗಿದೆ.
“ಕಳೆದ ನಾಲೈದು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಂಧ್ಯಾ ಅವರು ಶುಕ್ರವಾರ ರಾತ್ರಿ 10 ಗಂಟೆಗೆ ಅವರು ವಾಸಿಸುತ್ತಿದ್ದ ರಾಜ್‌ಕಮಲ್ ಸ್ಟುಡಿಯೊದಲ್ಲಿ ನಿಧನರಾಗಿದ್ದಾರೆ” ಎಂದು ಅವರ ಮಗ ಕಿರಣ್ ಶಾಂತಾರಾಮ್ ತಿಳಿಸಿದ್ದಾರೆ.
ಸಂಧ್ಯಾ ಶಾಂತಾರಾಮ್ ಅವರನ್ನು ‘ಸಂಧ್ಯಾ’ ಎಂದೇ ಕರೆಯಲಾಗುತ್ತಿತ್ತು. ‘ಅಮರ್ ಭೂಪಾಲಿ’ ಚಿತ್ರಕ್ಕಾಗಿ ಆಯ್ಕೆಯಾದಾಗ ವಿ. ಶಾಂತಾರಾಮ್ ಅವರನ್ನು ಮೊದಲ ಬಾರಿಗೆ ಸಂದ್ಯಾ ಭೇಟಿಯಾದರು. ಇದು ಅವರ ಚಿತ್ರವಾಗಿದ್ದು, ಈ ಚಿತ್ರದಲ್ಲಿ ಅವರು ಗಾಯಕಿಯ ಪಾತ್ರವನ್ನು ನಿರ್ವಹಿಸಿದರು.
ಸಂಧ್ಯಾ ಅವರು ಅವರ ‘ದೋ ಆಂಖೇ ಬಾರಾ ಹಾತ್’ ಎಂಬ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ಅವರು ಚಿತ್ರದಲ್ಲಿನ ಅಭಿನಯ ಮತ್ತು ನೃತ್ಯದಿಂದ ಎಲ್ಲರನ್ನೂ ಮೆಚ್ಚಿಸಿದ್ದರು. ಅವರು ‘ಝನಕ್ ಝನಕ್ ಪಾಯಲ್ ಬಾಜೆ’, ‘ನವರಂಗ್’ ಮತ್ತು ‘ಅಮರ್ ಭೂಪಾಲಿ’ ಚಿತ್ರಗಳಲ್ಲಿಯೂ ನಟಿಸಿದ್ದಾರೆ.