ಸಿ ಎಸ್ ದ್ವಾರಕಾನಾಥ್ ಆಡಿಯೊ ಸಂದರ್ಶನ | ‘ಹೈಕೋರ್ಟ್ ನ್ಯಾಯಮೂರ್ತಿಯ ಇನ್ನೊಂದು ಮೂತಿ’ ಅಂತ ಹೆಡ್ಡಿಂಗ್ ಕೊಟ್ಟಿದ್ದರು ಲಂಕೇಶ್!

Date:

Advertisements
ನಾವು ಬದುಕುತ್ತಿರುವ ಇದೇ ನೆಲದಲ್ಲಿ, ಅಂದ್ರೆ ಕರ್ನಾಟಕದಲ್ಲಿ ನೂರಾರು ಪುಟ್ಟ-ಪುಟ್ಟ ಸಮುದಾಯಗಳು ಕೂಡ ಬದುಕುತ್ತಿವೆ. ಅವುಗಳಲ್ಲಿ ಬಹುತೇಕ ಸಮುದಾಯಗಳು ನಾವೆಲ್ಲ ಕಂಡು-ಕೇಳಿರದ ಕೆಲಸಗಳನ್ನು ಬದುಕಲಿಕ್ಕಾಗಿ ಮಾಡುತ್ತಿವೆ. ಇಂತಹ ಸಮುದಾಯಗಳ ಬಗೆಗೆ ನಮ್ಮ ಕಣ್ಣು ತೆರೆಸುವಂಥ ಕೆಲಸ ಮಾಡುತ್ತಿರುವವರಲ್ಲಿ ಸಿ ಎಸ್ ದ್ವಾರಕಾನಾಥ್ ಕೂಡ ಒಬ್ಬರು. ಇವರು ವಕೀಲರು. ನಮ್ಮ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದವರು. ಎಲ್ಲಕ್ಕಿಂತ ಮುಖ್ಯವಾಗಿ, ಪಿ ಲಂಕೇಶರ ಗರಡಿಯಲ್ಲಿ ಸರಿಸುಮಾರು ಇಪ್ಪತ್ತು ವರ್ಷ ಪಳಗಿದಂತಹ ಪತ್ರಕರ್ತ. ಇವರ ಬದುಕಿನ ಕತೆಗಳು - ನಮ್ಮ ನಡುವೆಯೇ ಬದುಕುತ್ತಿರುವ, ದನಿ ಇಲ್ಲದ ಪುಟ್ಟ-ಪುಟ್ಟ ಸಮುದಾಯಗಳ ಬದುಕಿನ ಕತೆಗಳೂ ಹೌದು. ಬನ್ನಿ, ದ್ವಾರಕಾನಾಥ್ ಅವರು ಪರಿಚಯಿಸುವ ಪ್ರಪಂಚಕ್ಕೆ ಹೋಗಿಬರೋಣ.

ಸಂದರ್ಶನದ ಮುಖ್ಯಾಂಶಗಳು:

“ಗಣಿಯಲ್ಲಿ ಕೆಲಸ ಮಾಡೋದ್ರಿಂದ ಅವ್ರಿಗೆ ಪ್ರತಿದಿನ ಆಲ್ಕೋಹಾಲ್ ಬೇಕಾಗಿತ್ತು. ಆಲ್ಕೋಹಾಲ್ ಸಿಗದಿದ್ದಾಗ ಬೂಟ್‌ಪಾಲಿಶ್ ಅನ್ನೇ ನೀರಿಗೆ ಬೆರೆಸಿಕೊಂಡು ಕುಡಿದುಬಿಡ್ತಿದ್ರು!”

“ಲಂಕೇಶ್ ಅಂದ್ರೆ, ಅತ್ಯಂತ ಪ್ರಾಮಾಣಿಕ ಕ್ರಾಂತಿಕಾರಿ.”

Advertisements

“ಚಿಕ್ಕನಾಯಕನಹಳ್ಳಿ ಸ್ಮಶಾನದಲ್ಲಿ, ಹರಿದ ಗುಡಿಸಲುಗಳಲ್ಲಿ ವಾಸವಿದ್ದವರನ್ನು ಮಾತಾಡಿಸೋಣ ಅಂತ ಹೋದ್ರೆ, ಕಂಕುಳಲ್ಲಿ ಮಕ್ಕಳನ್ನು ಎತ್ಕೊಂಡಿದ್ದ ಹೆಣ್ಮಕ್ಳು ಓಡೋಕೆ ಶುರುಮಾಡಿದ್ರು!”

“ಬೀದಿಯಲ್ಲಿ ಬಟ್ಟೆ ಮಾರ್ತಿದ್ದ ಸುಡುಗಾಡು ಸಿದ್ದರ ಮೂವರು ಹೆಣ್ಮಕ್ಳನ್ನು ಅರೆಸ್ಟ್ ಮಾಡಲಾಗಿತ್ತು. ಕಾರಣ ಕೇಳಿದಾಗ ಇನ್ಸ್‌ಪೆಕ್ಟರ್ ಹೇಳಿದ… ‘ಜಿಎಸ್‌ಟಿ ಕಟ್ಟಿರ್ಲಿಲ್ಲ ಸರ್, ಅದುಕ್ಕೇ ಅರೆಸ್ಟ್ ಮಾಡಿದ್ದೀವಿ!”

“ಅವತ್ತು, ಮೂರ್ನಾಲ್ಕು ಜನ ತಿನ್ನೋ ಅನ್ನವನ್ನು ಒಬ್ಬನೇ ಒಂದೇ ಸಾರಿ ಮುಗ್ಸಿಬಿಟ್ಟಿದ್ದೆ… ಕೋಳಿ ಸಾರು ಅಷ್ಟು ರುಚಿಯಾಗಿತ್ತು.”

“ಕುಣಬಿ ಸಮುದಾಯದ ಆ ಮುದುಕ ಕೋಳಿ ಬಗ್ಗೆ ಕೇಳಿದ ಪ್ರಶ್ನೆ ನನ್ನಲ್ಲಿ ಬಹಳ ದೊಡ್ಡ ಗಿಲ್ಟ್ ಹುಟ್ಟುಹಾಕಿಬಿಟ್ಟಿತು!”

“ತಮ್ಮ ವಿರುದ್ಧವಿದ್ದ ಕೇಸಿನಲ್ಲಿ ವಾದಿಸದಂತೆ ನನ್ನನ್ನು ಮನವೊಲಿಸೋಕೆ ಪೇಜಾವರ ಶ್ರೀ ಹೇಳಿದ್ರು – ‘ದ್ವಾರಕಾನಾಥ್ ಅಂತ ಕೃಷ್ಣನ ಹೆಸ್ರು ಇಂಟ್ಕೊಂಡಿದಿಯ… ನಾನು ಕೃಷ್ಣನ ಆರಾಧಕ. ನನ್ ಮೇಲ್ ಕೇಸ್ ನಡೆಸ್ತಿದಿಯ…!”

“ಏಳೆಂಟು ತಿಂಗಳ ನಂತರ ಊರಿಂದ ಆತ ಮರಳಿಬಂದ. ಅದೇ ಬಟ್ಟೆ, ಮತ್ತೋನೋ ಗಂಟು ತಂದಿದ್ದ. ತೆಗೆದು ನೋಡಿದರೆ ಹುಚ್ಚೆಳ್ಳು…”

“ಕೋಲಾರದಲ್ಲಿ ಅಂದು, ಬರೀ ವೇಷ ನೋಡಿ ಆತ ಮುಸ್ಲಿಂ ಅಂದ್ಕೊಂಡು ಈತ ಚಾಕು ಇರಿದುಬಿಟ್ಟಿದ್ದ. ಆದರೆ ಆತ ಬ್ರಾಹ್ಮಣ ಸಮುದಾಯದ ಹುಡುಗ! ಈ ಘಟನೆಯನ್ನು, ‘ಹಿಂದೂ ಹುಡುಗನನ್ನು ಮುಸ್ಲಿಮರು ಕೊಂದರು’ ಅಂತ ಸುದ್ದಿ ಮಾಡಲಾಗಿತ್ತು!

“ಬೇಡಗೆಂಪಣ ಅನ್ನೋ ಹೆಸರಿನ ಸಸ್ಯಾಹಾರಿ ಬುಡಕಟ್ಟಿನ ಪುಟಾಣಿ ಹೆಣ್ಣುಮಕ್ಕಳು ದೀಪಾವಳಿ ದಿನ, ತಂಬಿಗೆಗಳಲ್ಲಿ ನೊರೆಹಾಲು ಹೊತ್ತು ಮಾದಪ್ಪನಿಗೆ ಅರ್ಪಿಸಲು ಬರುವ ದೃಶ್ಯವನ್ನು ನೋಡಲು ಕಣ್ಣೆರಡು ಸಾಲೋಲ್ಲ…”

“ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಕಾಲು ಕಳೆದುಕೊಂಡ್ರೂ ಪಿಂಚಣಿ ಸಹಿತ ಯಾವುದೇ ಸಹಾಯ ಪಡೆಯಲೇ ಇಲ್ಲ ಆ ಮಹಾನುಭಾವ!”

“ಕಳೆದ 10 ವರ್ಷಗಳಲ್ಲಿ 19 ಮಂದಿ ಆದಿವಾಸಿಗಳನ್ನು ಅಮಾನುಷವಾಗಿ ಕೊಂದುಹಾಕಲಾಗಿದೆ. ಒಂದೂ ಎಫ್‌ಐಆರ್ ಆಗಿಲ್ಲ!”

“ಆತ ಹೇಳ್ತಾನೆ… ‘ಕಂಚಿಯ ದೇವಸ್ಥಾನದ ಕೊಳದೊಳಗಿನ ಬಂಡೆ ಮೇಲೆ ಗಂಗಭಾರತ ಬರೆಯಲಾಗಿದೆ… ಬೇಕಿದ್ರೆ ಹೋಗಿ ನೋಡಿ’ ಅಂತ!”

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

6 COMMENTS

  1. ದ್ವಾರಕನಾಥ್ ಅವರ ಕುರಿತಾಗಿ ನನ್ನನ್ನೂ ಒಮ್ಮೆ ಸಂದರ್ಸನ ಮಾಡಿ ನಮಗೂ ಅವರ ಬಗ್ಗೆ ಹೇಳಿಕೊಳ್ಳೋ ವಿಚಾರಗಳು ತುಂಬಾ ಇವೆ.

    • ಪ್ರತಿಕ್ರಿಯೆಗಾಗಿ ಧನ್ಯವಾದ ಸರ್. ಈದಿನ.ಕಾಮ್‌ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ.

  2. ತುತ್ತು ಅನ್ನಕ್ಕಾಗಿ ಪರದಾಡುವ ಜನರಿಗೆ ಗೊತ್ತು ಅದರ ಬೆಲೆ. ಅದಾರೆ . ನಮ್ಮ ದ್ವಾರಕಾನಾಥ್ ಅವರ ಅನುಭವದ ಮಾತುಗಳು ತುಂಬ ಸುಂದರವಾಗಿ ಹೇಳಿದಾರೆ.

    • ನಿಜ. ಪ್ರತಿಕ್ರಿಯೆಗಾಗಿ ಧನ್ಯವಾದ ಸರ್. ಈದಿನ.ಕಾಮ್‌ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

  3. ಅದ್ಭುತ ಸರ್ ನಿಮ್ಮ ಮಾತುಗಳು. ಒಂದು ವಿಶಿಷ್ಟ ಅನುಭವದಲ್ಲಿ ಮಿಂದೆದ್ದು ಬಂದಂತಾಯ್ತು.

    • ಪ್ರತಿಕ್ರಿಯೆಗಾಗಿ ಧನ್ಯವಾದ ಮೇಡಂ. ನಿಮ್ಮ ಮಾತನ್ನು ದ್ವಾರಕಾನಾಥ್ ಅವರಿಗೆ ತಲುಪಿಸಲಾಗಿದೆ. ಈದಿನ.ಕಾಮ್‌ ಜಾಲತಾಣಕ್ಕೆ ಭೇಟಿ ನೀಡಿದ್ದಕ್ಕೆ ನನ್ನಿ. ನಿಮ್ಮಿಂದ ಇನ್ನಷ್ಟು ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಟ್ರಾವೆಲ್ ಏಜೆಂಟ್‌ಗಳಿಗೆ ಟ್ರಂಪ್‌ ಸರ್ಕಾರದ ವಿಸಾ ನಿರ್ಬಂಧ; ಇನ್ನು ಮುಂದೆ ಅಮೆರಿಕ ಪ್ರವಾಸ ಕಷ್ಟವೆ?

ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌...

ವಿದೇಶಿ ಮಾಧ್ಯಮಗಳು ಕಂಡಂತೆ ಭಾರತ – ಪಾಕ್‌ ಸಂಘರ್ಷ

ಭಾರತ - ಪಾಕ್‌ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು...

ನಾವು ಪಾಕಿಸ್ತಾನಿಯರಲ್ಲ ಎಂದ ಬಲೂಚಿಗಳು; ಏನಿದು ನೆರೆಯ ದೇಶದ ಬಲೂಚಿಸ್ತಾನ ಹೋರಾಟ?

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ...

Download Eedina App Android / iOS

X