ನಾಟಕಕಾರ ಕೆ ವೈ ನಾರಾಯಣಸ್ವಾಮಿ ಸಂದರ್ಶನ | ‘ವಿದ್ಯಾರ್ಥಿಯೊಬ್ಬ ನಾಡಬಾಂಬ್ ತಂದು ಟೇಬಲ್ ಮೇಲೆ ಇಟ್ಟುಬಿಟ್ಟಿದ್ದ!’

Date:

Advertisements
ಕಣ್ಮುಚ್ಚಿ ಕೇಳಬಹುದಾದ ರೀತಿಯಲ್ಲಿ ಪಾಠ ಮಾಡುವ ಕೆಲವೇ ಮೇಷ್ಟ್ರುಗಳಲ್ಲಿ ಕೆ ವೈ ನಾರಾಯಣಸ್ವಾಮಿಯವರೂ ಒಬ್ಬರು. ಯಾವುದೇ ವಿಷಯವನ್ನು ಅರ್ಥ ಮಾಡಿಸಲೇಬೇಕು ಎಂಬ ಹಠವಿರದ, ಎಷ್ಟೇ ಸಂಕೀರ್ಣವಾದ ಸಂಗತಿಯನ್ನು ಕೂಡ ಅತ್ಯಂತ ಸರಳ ನಿದರ್ಶನಗಳ ಮೂಲಕ ಮಂಡಿಸುವ ಅಪರೂಪದ ಮಾತುಗಾರ. ಬಹುಶಃ ಇದಕ್ಕೆ ಕಾರಣ, ಇವರನ್ನು ಹೆಚ್ಚಾಗಿ ಪ್ರಭಾವಿಸಿದ ಜಾನಪದ. ಹೌದು... ಕೆವೈಎನ್ - ಜಾನಪದ ಸಮೃದ್ಧಿಯ ಸೀಮೆಗಳಲ್ಲಿ ಒಂದಾದ ಕೋಲಾರ ಜಿಲ್ಲೆಯವರು. ಇವರು ರಚಿಸಿದ ನಾಟಕಗಳಲ್ಲಿ 'ಅನಭಿಜ್ಞ ಶಾಕುಂತಲ' ಅತ್ಯಂತ ಜನಪ್ರಿಯ. ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯನ್ನು ನಾಟಕವನ್ನಾಗಿ ರೂಪಾಂತರಿಸಿದವರು ಕೂಡ ಇವರೇ. ಅಧ್ಯಾಪನದ ಜೊತೆಗೆ ಏನೆಲ್ಲ ಸೃಜನಶೀಲ ಚಟುವಟಿಕೆಗಳಲ್ಲಿ ಸದಾ ತೊಡಗಿರುವ ಇವರ ಜೀವನಪ್ರೀತಿ, ಪ್ರಾಮಾಣಿಕ ಮಾತುಗಾರಿಕೆ ಅನುಕರಣೀಯ. 'ಈದಿನ.ಕಾಮ್'ಗೆ ನೀಡಿರುವ ಈ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ, ಎರಡು ಹಾಡು ಹಾಡಿದ್ದಾರೆ ಹಾಗೂ ಒಂದು ಕವಿತೆಯನ್ನೂ ಓದಿದ್ದಾರೆ. ಬನ್ನಿ, ಜಾನಪದ ಸೀಮೆಯ ಜಾದೂಗಾರರಲ್ಲಿ ಒಬ್ಬರಾದ ಕೆವೈಎನ್ ಅವರ ಮಾತು ಆಲಿಸುವ.

ಸಂದರ್ಶನದ ಮುಖ್ಯಾಂಶಗಳು:

ಕೆ ವೈ ನಾರಾಯಣಸ್ವಾಮಿ ಅವರ ದನಿಯಲ್ಲಿ ಕೇಳಿ, ಕೋಲಾರದ ಜನಪದ ರಾಷ್ಟ್ರಗೀತೆ ‘ನ್ಯಾಸ್ತನೇ ನೆಲಬಾಲನೆ’ ಹಾಡು

‘ಧರ್ಮರಾಯನ ಕರಗ’ವು ಕುಪ್ಪೂರಿನಲ್ಲಿ ಹುಟ್ಟುಹಾಕುತ್ತಿದ್ದ ಸಂಭ್ರಮ

Advertisements

‘ಪಂಪ ಭಾರತ’ ನಾಟಕದ ಕರ್ಣ-ದ್ರೌಪದಿ ಭೇಟಿಯ ದೃಶ್ಯ, ‘ವಿನುರ ವೇಮ’ ನಾಟಕದ – ವೇಮನನ ಲೋಕಸಂಚಾರಕ್ಕೆ ಕಾರಣವಾಗುವ ಪ್ರಸಂಗ, ‘ಚಕ್ರರತ್ನ’ ನಾಟಕದ ಚಾವುಂಡರಾಯ ಯುದ್ಧವನ್ನು ಕೈಬಿಟ್ಟ ದೃಶ್ಯದ ವಿಶೇಷಗಳು

ದೀಪಗಳದ್ದೊಂದು ನ್ಯಾಯಾಲಯ ಏರ್ಪಾಡಾಗಿ ಆ ಊರಿನ ಮನುಷ್ಯರ ವರ್ತನೆ-ವ್ಯವಹಾರಗಳ ಚರ್ಚೆ ನಡೆಯುವ ಕೋಲಾರದ ಜನಪದ ಕತೆ

ಕಂಡದ್ದನ್ನು ಕಂಡ ಹಾಗೆ, ಕೇಳಿದ್ದನ್ನು ಕೇಳಿದ ಹಾಗೆ, ಸತ್ಯವನ್ನಷ್ಟೇ ಹೇಳುತ್ತಿದ್ದ ‘ಬೂಸಿಗ’

‘ಕೈಲ್ಯಾಂಪು – ಕೆವೈಎನ್ ಲವ್ ಸಾಂಗ್ಸ್’ ಆಲ್ಬಮ್‌ನ ಒಂದು ಹಾಡು – ಕೆ ವೈ ನಾರಾಯಣಸ್ವಾಮಿ ಅವರಿಂದ

ಚಿತ್ರಕಲಾ ಪರಿಷತ್‌ನಲ್ಲಿ ಪಾಠ ಮಾಡುವಾಗ, ವಿದ್ಯಾರ್ಥಿನಿಯೊಬ್ಬರು ತನ್ನನ್ನು ಮದುವೆ ಆಗುವಂತೆ ಕೇಳಿದ ಪ್ರಸಂಗ

ಎಂ ಎಂ ಕಲಬುರ್ಗಿ ಅವರೊಂದಿಗಿನ ಮರೆಯಲಾಗದ ಮೂರು ಪ್ರಸಂಗ

‘ಜನಪದ ಮಹಾಭಾರತ’ ಒಂದು ಅಪೂರ್ವ ಕತೆ

ಕೆ ವೈ ನಾರಾಯಣಸ್ವಾಮಿಯವರಿಂದ ಒಂದು ಕವಿತೆ

ಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಟ್ರಾವೆಲ್ ಏಜೆಂಟ್‌ಗಳಿಗೆ ಟ್ರಂಪ್‌ ಸರ್ಕಾರದ ವಿಸಾ ನಿರ್ಬಂಧ; ಇನ್ನು ಮುಂದೆ ಅಮೆರಿಕ ಪ್ರವಾಸ ಕಷ್ಟವೆ?

ಡಿಎಸ್-160 ಅರ್ಜಿ ತುಂಬುವುದು, ಪಾಸ್‌ಪೋರ್ಟ್ ವಿವರಗಳ ನಿರ್ವಹಣೆ, ದಾಖಲೆಗಳ ಸಕಾಲಿಕ ಅಪ್ಲೋಡ್‌...

ವಿದೇಶಿ ಮಾಧ್ಯಮಗಳು ಕಂಡಂತೆ ಭಾರತ – ಪಾಕ್‌ ಸಂಘರ್ಷ

ಭಾರತ - ಪಾಕ್‌ ಸಂಘರ್ಷದ ಸಮಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹಲವು ಮಾಧ್ಯಮಗಳು...

ನಾವು ಪಾಕಿಸ್ತಾನಿಯರಲ್ಲ ಎಂದ ಬಲೂಚಿಗಳು; ಏನಿದು ನೆರೆಯ ದೇಶದ ಬಲೂಚಿಸ್ತಾನ ಹೋರಾಟ?

ಬಲೂಚಿಸ್ತಾನವು ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದ್ದರೂ, ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶದ ಇತರ...

Download Eedina App Android / iOS

X