‘ಸುಳ್ಳ ರಾಜ’ನ ಹೇಡಿಗಳ ಸೈನ್ಯಕ್ಕೆ … ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ ಎಂದು ಬಲಪಂಥೀಯ ವಿಚಾರಗಳನ್ನು ಪ್ರತಿಪಾದಿಸುವ ಪ್ರಶಾಂತ್ ಸಂಬರಗಿಗೆ ನಟ ಪ್ರಕಾಶ್ ರೈ ತಿರುಗೇಟು ನೀಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಬಹುಭಾಷಾ ನಟ ಪ್ರಕಾಶ್ ರೈ ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು ಎಂದು ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಚಿತ್ರವನ್ನು ಪ್ರಶಾಂತ್ ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ‘ಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಅವರ ಎಲ್ಲ ಪಾಪಗಳನ್ನು ಕ್ಷಮಿಸಿ, ತೆಗೆದುಹಾಕಲಾಗುವುದು ಎಂದು ಭಾವಿಸುತ್ತೇನೆ,” ಎಂದು ಬರೆದುಕೊಂಡಿದ್ದರು.
ಸಂಬರಗಿ ಪೋಸ್ಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಪ್ರಕಾಶ್ ರೈ, “ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ” ಎಂದು ಹೇಳಿದ್ದಾರೆ.
ಪ್ರಕಾಶ್ ರೈ ಚಿತ್ರ ಎಐನಿಂದ ರಚಿಸಿದ್ದಾಗಿದೆ. ಎಐ ಚಿತ್ರಗಳನ್ನು ಕಂಡು ಹಿಡಿಯುವ ‘ಸೈಟ್ ಎಂಜಿನ್’ನಲ್ಲಿ ಮೊದಲಿಗೆ ಈ ಚಿತ್ರವನ್ನು ಪರಿಶೀಲನೆಗೆ ಒಳಪಡಿಸಿದಾಗ ಇದು ಶೇ. 92ರಷ್ಟು ಜರನೇಟಿವ್ ಎಐ ಬಳಸಿ ರಚಿಸಿದ ಚಿತ್ರ ಎಂದು ‘ಸೈಟ್ ಇಂಜಿನ್’ ಫಲಿತಾಂಶ ತೋರಿಸಿದೆ.
ಸುಳ್ಳು ಸುದ್ದಿ
— Prakash Raj (@prakashraaj) January 28, 2025
“ಸುಳ್ಳ ರಾಜ” ನ ಹೇಡಿಗಳ ಸೈನ್ಯಕ್ಕೆ .. ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ .. police complaint ದಾಖಲಾಗಿದೆ .. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ 😊 #justasking pic.twitter.com/S6ySeyFKmh