3 ವಾರಗಳಲ್ಲಿ ಹನಿಯಷ್ಟೂ ಮಳೆ ಕಾಣದ 122 ತಾಲೂಕುಗಳು; ಬೆಂಗಳೂರಿನಲ್ಲಿ 75 ವರ್ಷಗಳಲ್ಲೇ ಅತೀ ಹೆಚ್ಚು ಬಿಸಿಲು

Date:

ತಂಪು ಹವೆ, ಮೋಡಕವಿದ ವಾತಾವರಣಕ್ಕೆ ಹೆಸರಾಗಿದ್ದ ರಾಜಧಾನಿ ಬೆಂಗಳೂರು ಈಗ ಸುಡು ಬಿಸಿಲಿನಿಂದ ಬಸವಳಿಯುತ್ತಿದೆ. ನಗರದಲ್ಲಿ ಮಳೆ ಮರೆಯಾಗಿದ್ದು, ಗರಿಷ್ಠ ತಾಪಮಾನವು 30ರಿಂದ 32 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ದಾಖಲಾಗುತ್ತಿದೆ. ಪರಿಣಾಮ, ಬೆಂಗಳೂರು ಬರೋಬ್ಬರಿ 75 ವರ್ಷಗಳ ಬಳಿಕ, ಮತ್ತೆ ಭಾರೀ ತಾಪಮಾನಕ್ಕೆ ಗುರಿಯಾಗಿದೆ.

- Advertisement -

ಹವಾಮಾನ ಇಲಾಖೆಯ ವರದಿ ಪ್ರಕಾರ, ಸೆಪ್ಟೆಂಬರ್ 6ರಂದು ನಗರದಲ್ಲಿ 32.2 ಡಿಗ್ರಿ ಸೆಲ್ಸಿಯಸ್ ಮತ್ತು ಸೆಪ್ಟೆಂಬರ್ 7ರಂದು ಅದು 31.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಹಿಂದೆ 1951ರ ಸೆಪ್ಟೆಂಬರ್ 16ರಂದು ಬೆಂಗಳೂರಿನಲ್ಲಿ ಗರಿಷ್ಠ 33.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಪ್ರಸ್ತುತ ತಾಪಮಾನವು ಈ ಐತಿಹಾಸಿಕ ದಾಖಲೆಗಿಂತ ಕೇವಲ 1.4 ಡಿಗ್ರಿ ಮಾತ್ರ ಕಡಿಮೆಯಿದ್ದು, ಮುಂದಿನ ದಿನಗಳಲ್ಲಿ 33.3 ಡಿಗ್ರಿ ಸೆಲ್ಸಿಯಸ್‌ಅನ್ನು ದಾಟುವ ಸಾಧ್ಯತೆ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಿಪಟೂರು | ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ;...

ತಿಪಟೂರು ಕೊಬ್ಬರಿ ವ್ಯಾಪಾರದಲ್ಲಿ ಅಂಡರ್ ಬಿಲ್ಲಿಂಗ್ ಆಟ ಜೋರಿದೆ. ಟೆಂಡರ್ ದರ ಒಂದಾದರೆ, ಸುತ್ತಮುತ್ತಲಿನ ಮಾರುಕಟ್ಟೆಗಳಲ್ಲಿ ನೇರ ಖರೀದಿ (URD) ಮತ್ತು ರವಾನೆ ಕೊಬ್ಬರಿ ಖರೀದಿಗೆ ಮತ್ತೊಂದು ಬೆಲೆ ನಿಗದಿಯಾಗಿದೆ. ಅಂಡರ್ ಬಿಲ್ಲಿಂಗ್...

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

ಹವಾಮಾನ ತಜ್ಞರ ಪ್ರಕಾರ ಎಲ್ ನಿನೊ ಪರಿಣಾಮ, ಭೂಮಿಯಲ್ಲಿ ತೇವಾಂಶದ ಕೊರತೆ ಮತ್ತು ಮೋಡಗಳು ಕ್ಷೀಣಿಸಿದ್ದು, ನೇರ ಬಿಸಿಲು ಭೂಮಿಗೆ ತಗುಲುತ್ತಿರುವುದೇ ಈ ಹಠಾತ್ ತಾಪಮಾನ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.

ದಕ್ಷಿಣ ಒಳನಾಡಿನಲ್ಲಿ ಮುಂಗಾರು ತೀವ್ರ ದುರ್ಬಲಗೊಂಡಿದ್ದು, ಸೆಪ್ಟೆಂಬರ್ 10 ಮತ್ತು 11ರಂದು ಕೆಲವೆಡೆ ಗಾಳಿ-ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಇದನ್ನು ಹೊರತುಪಡಿಸಿದರೆ ತಕ್ಷಣಕ್ಕೆ ವ್ಯಾಪಕ ಮಳೆಯ ಲಕ್ಷಣಗಳಿಲ್ಲ. ಹೀಗಾಗಿ, ಸೆಪ್ಟೆಂಬರ್ ತಿಂಗಳ ಪೂರ್ತಿ ಸಾಧಾರಣಕ್ಕಿಂತ ಹೆಚ್ಚು ತಾಪಮಾನ ಮತ್ತು ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ.

ಈ ಲೇಖನ ಓದಿದ್ದೀರಾ?: ಗೌರಿ ಲಂಕೇಶ್ | ಜೆನ್ ಝಿ ಪೀಳಿಗೆಯ ಕನಸು ಕಂಡಿದ್ದ ’ದತ್ತು’ ತಾಯಿ!

ಇನ್ನೊಂದೆಡೆ, ಈ ಮಳೆ ಕೊರತೆಯ ಬಿಸಿ ಇಡೀ ರಾಜ್ಯದ ಕೃಷಿ ವಲಯವನ್ನು ಕಂಗೆಡಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಮಾಹಿತಿ ಪ್ರಕಾರ, ರಾಜ್ಯದ 122 ತಾಲೂಕುಗಳಲ್ಲಿ ಸತತ ಮೂರು ವಾರಗಳಿಂದ ಒಂದು ಹನಿ ಮಳೆಯೂ ಬಿದ್ದಿಲ್ಲ. ಈಗಾಗಲೇ ರಾಜ್ಯದ 239 ತಾಲೂಕುಗಳ ಪೈಕಿ 101 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದ್ದು, ಮುಂಗಾರು ಮುಗಿಯುವುದರೊಳಗೆ ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಆತಂಕವಿದೆ. ಬೆಳೆಗಳ ಬೆಳವಣಿಗೆಯ ನಿರ್ಣಾಯಕ ಹಂತದಲ್ಲೇ ನೀರಿಲ್ಲದೆ ಬೆಳೆಗಳು ಒಣಗುತ್ತಿದ್ದು, ಕೃಷಿ ಹಾಗೂ ತೋಟಗಾರಿಕಾ ಉತ್ಪಾದನೆಯಲ್ಲಿ ಶೇ.50ರವರೆಗೆ ನಷ್ಟ ಸಂಭವಿಸುವ ಭೀತಿ ಎದುರಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿ ಶಾಲಾ ಆವರಣದಲ್ಲಿ ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ; ಸ್ಥಳದಲ್ಲಿ ಮೂರು ಡೆತ್‌ನೋಟ್‌ಗಳು ಪತ್ತೆ

ರಾಷ್ಟ್ರ ರಾಜಧಾನಿ ದೆಹಲಿಯ ಕೃಷ್ಣ ನಗರ ಪ್ರದೇಶದಲ್ಲಿರುವ ಸರ್ವೋದಯ ಕನ್ಯಾ ವಿದ್ಯಾಲಯದ...

ಕಾಲದ ಹಾದಿಯಲ್ಲಿ ಅಮರ ಪ್ರೇಮ ಕಾವ್ಯ: ರಾಜೀವ್ ಜತೆಗಿನ ಮಧುರ ಒಡನಾಟ ನೆನೆದು ಭಾವುಕರಾದ ಸೋನಿಯಾ ಗಾಂಧಿ

ಬದುಕಿನ ಸಂಧ್ಯಾಕಾಲದಲ್ಲಿ ನಿಂತು ಹಿಂದಿನ ಸವಿ ನೆನಪುಗಳನ್ನು ಮೆಲುಕು ಹಾಕುವುದು ಒಂದು...

ಭಾಲ್ಕಿ | ಕನ್ನಡ ನಾಮಫಲಕ ಅಳವಡಿಕೆಗೆ ಕ್ರಮ ಕೈಗೊಳ್ಳಲು ನಮ್ಮ ಕರ್ನಾಟಕ ಸೇನೆ ಆಗ್ರಹ

ರಾಜ್ಯ ಸರ್ಕಾರದ ಆದೇಶದಂತೆ ಅಂಗಡಿ, ಮುಂಗಟ್ಟುಗಳು ಸೇರಿದಂತೆ ಎಲ್ಲ ವ್ಯಾಪಾರ ಸಂಸ್ಥೆಗಳು,...

ಈ ದಿನ ಸಂಪಾದಕೀಯ | ಅಮೆರಿಕದ ದಬ್ಬಾಳಿಕೆ-ಮೋದಿ ಸರ್ಕಾರದ ಮೌನ; ಭಾರತದ ಸಾರ್ವಭೌಮತ್ವಕ್ಕೆ ಶೋಭೆಯಲ್ಲ!

ತನ್ನ ಹಿತಾಸಕ್ತಿಗಾಗಿ ಭಾರತದ ಇಂಧನ, ವ್ಯಾಪಾರ ಹಾಗೂ ವಿದೇಶಾಂಗ ನೀತಿಗಳನ್ನು ನಿಯಂತ್ರಿಸಲು...