ಬೀದರ್ | ಮನುವಾದ, ಚಾತುರ್ವರ್ಣ ವಿಚಾರಧಾರೆ ತಿರಸ್ಕರಿಸಿದ ಬಸವಣ್ಣ : ಮಲ್ಲಿಕಾರ್ಜುನ ಖರ್ಗೆ

Date:

ಈ ದೇಶದಲ್ಲಿ ಮನುವಾದ ಮತ್ತು ಚಾತುರ್ವರ್ಣ ತಿರಸ್ಕರಿಸಿ ಹೊಸ ಲಿಂಗಾಯತ ಧರ್ಮ ಸ್ಥಾಪಿಸಿದವರು ವಿಶ್ವಗುರು ಬಸವಣ್ಣನವರು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

- Advertisement -

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಭಾಲ್ಕಿಯ ಚನ್ನಬಸವಾಶ್ರಮದಲ್ಲಿ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತ್ಯುತ್ಸವ, ವಚನ ಜಾತ್ರೆ, ಚನ್ನಬಸವ ಪಟ್ಟದ್ದೇವರ 27ನೇ ಸ್ಮರಣೋತ್ಸವ, ವಚನ ಜಾತ್ರೆ ಹಾಗೂ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಬೌದ್ಧ ಧರ್ಮಕ್ಕೆ ಅತ್ಯಂತ ತೊಂದರೆ ಕೊಟ್ಟು ಹಾಳುಗೆಡವಿ, ಓಡಿಸಿದವರು ನಮ್ಮವರೇ ಹೊರತು ಬೇರೆಯವರಲ್ಲ. ಬಸವಣ್ಣನವರ ತತ್ವಗಳು ಹಾಗೇ ಆಗದಂತೆ ಎಚ್ಚರವಹಿಸಿ ದೇಶಾದ್ಯಂತ ಪ್ರಚಾರ ನಡೆಸಬೇಕು. ನಂಬಿಕೆ, ನಿಷ್ಠೆ ಇಟ್ಟುಕೊಂಡು ಧರ್ಮ ಬೆಳೆಸುವ ಗುರಿ ಇರಲಿ. ಸುಮ್ಮನೆ ಒಂದೆರಡು ಹರಿಜನರ ಮನೆಗೆ ತೆರಳಿ ನೀರು, ಊಟ ಸೇವಿಸುವುದು ಬಿಟ್ಟು ಜನರಿಗೆ ಅಗತ್ಯವಾದ ಮಾನವೀಯ ಧರ್ಮದ ತತ್ವ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು’ ಎಂದು ಹೇಳಿದರು.

‘ಬಸವಕಲ್ಯಾಣ, ಬೀದರ್ ಜಿಲ್ಲೆಯ ಜನರು ಬಸವಣ್ಣನವರ ವಿಚಾರಧಾರೆ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. ಶರಣರ ವಚನ ಸಾಹಿತ್ಯ, ಸಂದೇಶಗಳು ಪ್ರಚಾರಗೈದು ಸಮಾಜಕ್ಕೆ ಮುಟ್ಟಿಸಿದ್ದಾರೆ. ಬಸವಣ್ಣನವರ ವಿಚಾರಗಳು ಪ್ರಚಾರ ಆಗದಿದ್ದರೆ ಮನೆ-ಮಠ-ಗುರುಕುಲಗಳಲ್ಲಿಯೇ ಉಳಿಯುತ್ತದೆ. ಎಲ್ಲರೂ ಮೇಲಿನ ಮಾತಿಗೆ ವಿಚಾರಗಳು ಹೇಳುತ್ತಾ ಹೋದರೆ ಸಮಾಜ ಉದ್ಧಾರ ಆಗಲ್ಲ, ಸಮಾನತೆ ಬರಲು ಸಾಧ್ಯವಿಲ್ಲ. ಹೀಗಾಗಿ ಬಸವಾದಿ ಶರಣರ ವಿಚಾರಗಳು ಅನುಷ್ಠಾನಗೊಳ್ಳಬೇಕು’ ಎಂದರು.

‘ಎಲ್ಲ ಮನುಷ್ಯರೂ ಒಂದೇ, ಎಲ್ಲರೂ ಒಗ್ಗೂಡಬೇಕಿದೆ. ಮನುಷ್ಯ ಕುಲಕ್ಕೆ ಧರ್ಮ ಬೇಕು. ಮನುಷ್ಯ ಧರ್ಮಕ್ಕಾಗಿ ಹುಟ್ಟಿಲ್ಲ, ಧರ್ಮಗಳು ಮನುಷ್ಯನ ಏಳಿಗೆಗಾಗಿ ಹುಟ್ಟಿವೆ ಎಂಬುದು ನೆನಪಿರಬೇಕು. ಅನೇಕ ಧರ್ಮಗಳು ಶೂನ್ಯದಿಂದ ಆರಂಭವಾಗಿ ಕೋಟ್ಯಂತರ ಜನರಿಗೆ ತಲುಪಿವೆ. ಮತ್ತೊಬ್ಬರನ್ನು ಪ್ರೀತಿಸಿ ತನ್ನತ ಸೆಳೆದು ಅಪ್ಪಿಕೊಂಡರೆ ಮಾತ್ರ ಒಂದು ಧರ್ಮ ಬೆಳೆಯಲು ಸಾಧ್ಯ. ಇರುವ ಧರ್ಮದೊಳಗೆ ಸಾಕಷ್ಟು ಕಿರುಕುಳ ಕೊಡುವ ಕಾರಣಕ್ಕೆ ಧರ್ಮ ಬೆಳೆಯುವುದಿಲ್ಲ. ಇಂತಹ ಎಲ್ಲ ಕಾಟ ನೋಡಿದ ಬಸವಣ್ಣನವರು ಮನುವಾದ, ಚಾತುರ್ವರ್ಣ ವಿಚಾರಧಾರೆ ತಿರಸ್ಕಾರ ಮಾಡಿದರು’ ಎಂದು ಹೇಳಿದರು.

ಇದನ್ನೂ ಓದಿ : ಬೀದರ್‌ | ಸಮಾಜದ ಅಸಮಾನತೆ ನಿವಾರಣೆಗೆ ಬಸವತತ್ವವೇ ಔಷಧಿ : ಸಚಿವ ಈಶ್ವರ ಖಂಡ್ರೆ

‘ಎಲ್ಲ ಜಾತಿಗಳನ್ನು ಒಗ್ಗೂಡಿಸಿ, ಸಂಸತ್ತಿನ ಪರಿಕಲ್ಪನೆಯಂತೆ ಅನುಭವ ಮಂಟಪದಲ್ಲಿ ಎಲ್ಲರನ್ನೂ ಒಳಗೊಳ್ಳುವ ಮುಖಾಂತರ ಬಸವಣ್ಣ ಹೊಸ ಧರ್ಮ ಸ್ಥಾಪಿಸಿದರು. ಹಿಂದುಳಿದ ಸಮಾಜದ ಅಲ್ಲಮಪ್ರಭು ಅವರ ಅಧ್ಯಕ್ಷತೆಯಲ್ಲಿ ಅನುಭವ ಮಂಟಪದಲ್ಲಿ ಚರ್ಚೆ ನಡೆಯುತ್ತಿತ್ತು. ಈಗ ಅವರು ಬೇರೆ, ಇವರು ಬೇರೆ ಎಂದು ಬೇಧಭಾವ ಮಾಡುತ್ತಿದ್ದೇವೆ. ಎಲ್ಲಿಯವರೆಗೆ ‘ನಾವೆಲ್ಲರೂ ಒಂದು’ ಎಂದು ಅನ್ನುವುದಿಲ್ಲವೊ ಅಲ್ಲಿಯವರೆಗೆ ಯಾವುದೇ ಧರ್ಮ ಬೆಳೆಯುವುದಿಲ್ಲ’ ಎಂದು ಹೇಳಿದರು.

ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ಬೀದರ ಲೋಕಸಭಾ ಸಂಸದ ಸಾಗರ ಈಶ್ವರ ಖಂಡ್ರೆ, ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಗದಗ ಡಂಬಳದ ಸಿದ್ಧರಾಮ ಸ್ವಾಮೀಜಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಸೇರಿದಂತೆ ವಿವಿಧ ಮಠಾಧೀಶರು , ಗಣ್ಯರು, ಮಠದ ಭಕ್ತಾದಿಗಳು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ; ತರಾತುರಿಯಲ್ಲಿ ಅಂತ್ಯಕ್ರಿಯೆ, ಕಾರಣ ನಿಗೂಢ!

ಸೊರಬ ತಾಲೂಕಿನ ಮುಟಗುಪ್ಪೆ ಗ್ರಾಮದಲ್ಲಿ 22 ವರ್ಷದ ಯುವತಿಯೊಬ್ಬರು ಮನೆಯಲ್ಲಿ ನೇಣು...