ಬಿಲ್ಕಿಸ್ ಬಾನೊ ಅತ್ಯಾಚಾರಿಗಳ ಮನವಿ ತಿರಸ್ಕರಿಸುವಂತೆ ಒತ್ತಾಯ

Date:

Advertisements

ಬಿಲ್ಕಿಸ್ ಬಾನೊ ಮೇಲೆ ಅತ್ಯಾಚಾರ ಎಸಗಿ, ಅವರ ಕುಟುಂಬದ ಸದಸ್ಯರನ್ನು ಕೊಲೆ ಮಾಡಿದ ಅಪರಾಧಿಗಳನ್ನು ಮತ್ತೆ ಜೈಲಿಗೆ ಕಳುಹಿಸಲು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವುದು ಭರವಸೆ ಹುಟ್ಟಿಸಿದೆ. ಮತ್ತೊಂದೆಡೆ ಅಪರಾಧಿಗಳು ಮತ್ತಷ್ಟು ಕಾಲವಕಾಶವನ್ನು ಕೋರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೋರ್ಟ್ ಅವರ ಮನವಿಯನ್ನು ಒಪ್ಪಿಕೊಳ್ಳಬಾರದು ಎಂದು ಹೋರಾಟಗಾರರು ಒತ್ತಾಯಿಸಿದರು.

ಬಿಲ್ಕಿಸ್ ಬಾನೊ ಅವರಿಗೆ ಬೆಂಬಲ ಸೂಚಿಸಿ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅತ್ಯಾಚಾರಿಗಳ ವಿರುದ್ಧ ಘೋಷಣೆಗಳು ಮೊಳಗಿದವು.

‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯ ಸಂಘಟಕಿ ಮಮತಾ ಅವರು ಮಾತನಾಡಿ, “ಸನ್ನಡತೆಯ ಆಧಾರದಲ್ಲಿ ಗುಜರಾತ್ ಸರ್ಕಾರ ಅತ್ಯಾಚಾರಿಗಳನ್ನು ಬಿಡುಗಡೆ ಮಾಡಿತ್ತು. ಈ ನಾಚಿಗೆಗೇಡು ನಡೆಯ ವಿರುದ್ಧ ಆ ಸಂದರ್ಭದಲ್ಲೂ ನಾವು ಪ್ರತಿಭಟನೆ ಮಾಡಿದ್ದವು. ಇದರ ವಿರುದ್ಧ 40 ಸಾವಿರ ಜನರ ಸಹಿ ಸಂಗ್ರಹ ಮಾಡಿ ಸುಪ್ರೀಂಕೋರ್ಟ್‌ಗೆ ಕಳುಹಿಸಿದ್ದೆವು. ಕರ್ನಾಟಕದಿಂದ ಹೋದಂತಹ ಜಸ್ಟಿಸ್ ನಾಗರತ್ನ ಅವರಿದ್ದ ಪೀಠ ಗುಜರಾತ್ ಸರ್ಕಾರದ ತೀರ್ಪನ್ನು ರದ್ದುಗೊಳಿಸಿರುವುದು ಸಮಾಧಾನ ತಂದಿದೆ” ಎಂದರು.

Advertisements
mamata
‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆಯ ಸಂಘಟಕಿ ಮಮತಾ

“ಅತ್ಯಾಚಾರಿಗಳ ಮನವಿಯನ್ನು ಸುಪ್ರೀಂಕೋರ್ಟ್‌ ಸ್ವೀಕರಿಸಬಾರದು. ಇಪ್ಪತ್ತೆರಡು ವರ್ಷ ದಿಟ್ಟ ಹೋರಾಟವನ್ನು ಬಿಲ್ಕಿಸ್ ಬಾನೊ ನಡೆಸಿದ್ದಾರೆ. ಅವರಿಗೆ ಯಾವುದೇ ಮನ್ನಣೆಯನ್ನು ಕೊಡದೆ  ಅವರನ್ನು ಕೂಡಲೇ ಜೈಲಿಗೆ ಕಳುಹಿಸಬೇಕು ಎಂಬುದು ನಮ್ಮೆಲ್ಲರ ಒಕ್ಕೊರಲ ದನಿ” ಎಂದರು.

ಡಾ.ಬಿ.ಆರ್‌.ಅಂಬೇಡ್ಕರ್‌ ದಂಡು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಸಂತೋಷ್ ಬಿ.ನಾಯಕ್ ಮಾತನಾಡಿ, “ಅತ್ಯಾಚಾರಿಗಳು ಬಿಡುಗಡೆಯಾದ ಸಂದರ್ಭದಲ್ಲಿ ಕೆಲವರು ಸಂಭ್ರಮಾಚರಣೆ ಮಾಡಿದ್ದು ನೋವಿನ ಸಂಗತಿ. ಅತ್ಯಾಚಾರಿಗೆ ಹೂವಿನ ಹಾರ ಹಾಕಿ, ಸ್ವೀಟ್ ಕೊಟ್ಟಿದ್ದು ನಮ್ಮ ಜನ ಎಷ್ಟು ಕೆಟ್ಟಿದ್ದಾರೆ ಎಂಬುದರ ಸೂಚನೆ. ತಮ್ಮ ಮನೆಯ ಮಕ್ಕಳಿಗೆ ಈ ರೀತಿ ಆಗಿದ್ದರೆ ಸ್ವೀಟ್ ಕೊಟ್ಟು ತಿನ್ನಿಸುತ್ತಿದ್ರಾ?” ಎಂದು ಪ್ರಶ್ನಿಸಿದರು.

santhosh 2
ಡಾ.ಬಿ.ಆರ್‌.ಅಂಬೇಡ್ಕರ್‌ ದಂಡು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಸಂತೋಷ್ ಬಿ.ನಾಯಕ್

ಅತ್ಯಾಚಾರಿಗಳನ್ನು ಸಂಸ್ಕಾರಿ ಬ್ರಾಹ್ಮಣರು ಎಂದು ಕೆಲವು ರಾಜಕೀಯ ಮುಖಂಡರು ಕರೆದಿದ್ದರು. ಬ್ರಾಹ್ಮಣರು ಕೂಡ ಅತ್ಯಾಚಾರ ಮಾಡಿದ್ದಾರೆ ಎಂಬುದನ್ನು ಇತಿಹಾಸ ಹೇಳುತ್ತದೆ. ಕೆಲವರು ಮಾಡಿದ ತಪ್ಪಿಗೆ ಇಡೀ ಬ್ರಾಹ್ಮಣ ಸಮುದಾಯವನ್ನು ಟೀಕಿಸುವುದು ತಪ್ಪಾಗುತ್ತದೆ. ಇಂತಹ ಅತ್ಯಾಚಾರಿಗಳ ಪರ ಯಾವುದೇ ಬ್ರಾಹ್ಮಣರು ನಿಲ್ಲಬಾರದು. ಒಬ್ಬ ಅತ್ಯಾಚಾರಿಯ ಪರ ನಿಲ್ಲುವುದೆಂದರೆ ತಾನು ಕೂಡ ಅತ್ಯಾಚಾರಿ ಎಂದು ಒಪ್ಪಿಕೊಂಡಂತೆ, ಒಬ್ಬ ಕೊಲೆಗಡುಕನ ಪರ ನಿಲ್ಲುವುದೆಂದರೆ ತಾನು ಕೂಡ ಕೊಲೆಗಡುಕ ಎಂದು ಒಪ್ಪಿದಂತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಹೋರಾಟಗಾರ್ತಿ ಮನು ಮಾತನಾಡಿ, “ಮಹಿಳೆಯರು ಮತ್ತು ತುಳಿತಕ್ಕೆ ಒಳಗಾದ ಸಮುದಾಯದವರು ಬಿಜೆಪಿ ಸರ್ಕಾರದ ಆಡಳಿತದಲ್ಲಿ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ನ್ಯಾಯ ಕೇಳಿದರೆ ನಮ್ಮನ್ನು ಜೈಲಿಗೆ ತಳ್ಳುತ್ತಾರೆ. ಧರ್ಮದ ಹೆಸರಲ್ಲಿ ಹಿಂಸೆಯತ್ತ ಕರೆದೊಯ್ಯಲಾಗುತ್ತಿದೆ” ಎಂದು ವಿಷಾದಿಸಿದರು.

manu
ಹೋರಾಟಗಾರ್ತಿ ಮನು

ಸಾಮಾಜಿಕ ಕಾರ್ಯಕರ್ತ ಆದರ್ಶ್ ಅಯ್ಯರ್‌, ಅಂಬೇಡ್ಕರ್ ದಂಡು ಸಂಘಟನೆಯ ಅಧ್ಯಕ್ಷ ಡಿ.ಶಿವಣ್ಣ, ಜನಶಕ್ತಿ ಸಂಘಟನೆಯ ಚನ್ನಮ್ಮ ಸೇರಿದಂತೆ ಹಲವು ಹೋರಾಟಗಾರರು ಸ್ಥಳದಲ್ಲಿ ಹಾಜರಿದ್ದರು.

೧೧೧೧
ಬಿಲ್ಕಿಸ್ ಬಾನೊ ಅವರನ್ನು ಬೆಂಬಲಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಸಭೆ ನಡೆಯಿತು
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ನಾವು ಯಾರ ಪರವೂ ಇಲ್ಲ; ನ್ಯಾಯದ ಪರ: ಡಿಸಿಎಂ ಡಿ.ಕೆ.ಶಿವಕುಮಾರ್

"ನಾವು ಧರ್ಮಸ್ಥಳದವರ ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ...

ಆಗಸ್ಟ್ 23ರಿಂದ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು...

ಬೀದರ್‌ | ಈ ತಾಂಡಾಕ್ಕೆ ದಾರಿ ಯಾವುದಯ್ಯಾ?

ʼನಾವು ಹುಟ್ಟಿನಿಂದ ಅಲ್ಲ, ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ...

ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ: ಡಿಸಿಎಂ ಡಿ ಕೆ ಶಿವಕುಮಾರ್

"ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ...

Download Eedina App Android / iOS

X