ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ಬಿಜೆಪಿ ಶಾಸಕ ಶ್ರೀವತ್ಸ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದು, ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
“ಅರವಿಂದ್ ಕೇಜ್ರಿವಾಲ್ ತರ ಜೈಲಿನಲ್ಲಿ ಕೂತು ಆಡಳಿತ ಮಾಡವ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೂ ಬರಬಹುದು” ಎಂದು ಶಾಸಕ ಶ್ರೀವತ್ಸ ಹೇಳಿಕೆ ಕೊಟ್ಟಿದ್ದರು. ಶ್ರೀವತ್ಸ ಅವರಿಗೆ ತಿರುಗೇಟು ನೀಡುವ ಭರದಲ್ಲಿ “ತಾಕತ್ತಿದ್ದರೆ, ನಿಮ್ಮ ವಂಶಸ್ಥರಿಗೆ ನೀನು ಹುಟ್ಟಿದ್ದರೇ ಜೈಲಿಗೆ ಹಾಕಿಸು ನೋಡೋಣ” ಎಂದು ಏಕವಚನದಲ್ಲಿ ಲಕ್ಷ್ಮಣ್ ಹರಿಹಾಯ್ದಿದ್ದರು.
ಶಾಸಕ ಶ್ರೀವತ್ಸ ಅವರು ಲಕ್ಷ್ಮಣ್ ಅವರ ಅವಹೇಳನಕಾರಿ ಹೇಳಿಕೆ ಖಂಡಿಸಿ ವಕೀಲ ವಿ.ರವಿಕುಮಾರ್ ಮೂಲಕ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
