ಶತಮಾನ ಕಂಡ ಶಾಲೆಗಳು; ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವರದಿ ಸಲ್ಲಿಕೆ, ಶಿಫಾರಸುಗಳೇನು?

Date:

ಶತಮಾನ ಕಂಡ ಶಾಲೆಗಳಿಗೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಿದ್ಧಪಡಿಸಿದ ವರದಿಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಪ್ರಾಧಿಕಾರವು ಸಲ್ಲಿಸಿದೆ. 20ನೇ ಶತಮಾನದ ಮೊದಲೆರಡು ದಶಕಗಳಲ್ಲಿ ಸ್ಥಾಪನೆಗೊಂಡು, ಇದೀಗ ನೂರು ವರ್ಷಗಳನ್ನು ಪೂರೈಸಿ, ಐತಿಹಾಸಿಕವಾದ ಕಾರ್ಯ ನಿರ್ವಹಿಸಿದ ಅಂಥ ಶಾಲೆಗಳು ಈಗ ಹೇಗಿವೆ ಎಂಬ ಬಗ್ಗೆ ದಾಖಲೆ ಸಂಗ್ರಹಿಸುವ ಉದ್ದೇಶದಿಂದ ಈ ವರದಿ ಸಿದ್ಧಪಡಿಸಲಾಗಿದೆ.

- Advertisement -

ಪ್ರಾಧಿಕಾರವು ಶತಮಾನ ಕಂಡ ಶಾಲೆಗಳನ್ನು ಪರಿಶೀಲಿಸಿ ಹಲವು ಶಿಫಾರಸುಗಳನ್ನು ಮಾಡಿದೆ. ಯಾವ ಕಾರಣಕ್ಕಾಗಿ ಈ ಶಿಫಾರಸುಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗುತ್ತಿದೆ ಎಂಬುದನ್ನೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನು ಓದಿದ್ದೀರಾ? ವಿಜಯಪುರ | ಶತಮಾನ ಕಂಡ ಶಾಲೆಗಿಲ್ಲ ಮೂಲಭೂತ ಸೌಕರ್ಯ

ಸಮಿತಿಯು ಸರಕಾರಕ್ಕೆ ಸಲ್ಲಿಸಿದ ವರದಿಯ ಪ್ರಮುಖ ಶಿಫಾರಸುಗಳು ಈ ಕೆಳಗಿನಂತಿವೆ –

ಕಂಡುಬಂದ ಸಾಮಾನ್ಯ ಅಂಶಗಳು

  1. ಶತಮಾನ ಕಂಡ ಶಾಲೆಗಳ ಕುರಿತಾಗಿ ಸರಕಾರ ಸುಮಾರು 25 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದರಿಂದ 240 ಶಾಲೆಗಳು ಅಭಿವೃದ್ಧಿಯಾಗಿವೆ. ಆದರೆ ಈ ಯೋಜನೆ ಮುಂದುವರೆಯಲಿಲ್ಲ. ಅನುದಾನವನ್ನು ಇತರ ಶಾಲೆಗಳಿಗೂ ಹಂತಹಂತವಾಗಿ ವಿಸ್ತರಿಸುವ ಬಗ್ಗೆ ಇಲಾಖೆಯಿಂದ ಯಾವುದೇ ಬೇಡಿಕೆ ಸರಕಾರಕ್ಕೆ ಸಲ್ಲಿಸಿದ ಬಗ್ಗೆ ಮಾಹಿತಿ ಇಲ್ಲ.
  2. ಕಳೆದ ಹತ್ತು ವರ್ಷಗಳಲ್ಲಿ ಮುಚ್ಚಿ ಹೋದ ಸರಕಾರಿ ಶಾಲೆಗಳ ಹಿಂದಿರುವ ಕಾರಣಗಳ ಬಗ್ಗೆ ಯಾವುದೇ ಗಂಭೀರ ಅಧ್ಯಯನಗಳು ನಡೆದಿಲ್ಲ, ವರದಿಗಳೂ ಲಭ್ಯವಿಲ್ಲ.
  3. ಸಾವಿರಾರು ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿತ ಕಂಡಿದೆ. ಇದಕ್ಕಿರುವ ಕಾರಣಗಳನ್ನು ಆಳವಾಗಿ ಪರಿಶೀಲಿಸಲಾಗಿಲ್ಲ. ಸರಕಾರಿ ಶಾಲೆಗಳ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳು ಹುಟ್ಟಿಕೊಂಡದ್ದು ರೋಗಲಕ್ಷಣವೇ ಹೊರತು ರೋಗಕಾರಣವಲ್ಲ. ಖಾಸಗಿ ಶಾಲೆಗಳಿಗೆ ಅನುಮತಿ ನೀಡುವಲ್ಲಿ ಶಿಕ್ಷಣ ಇಲಾಖೆ ತನ್ನ ಅಳವಿನಲ್ಲಿರುವ ಶಾಲೆಗಳ ಹಿತಾಸಕ್ತಿಯನ್ನು ಗಮನಿಸಿದಂತಿಲ್ಲ.
  4. ಇತ್ತೀಚೆಗೆ ದ್ವಿಭಾಷಾ ಮಾಧ್ಯಮವನ್ನು ಸಾವಿರಾರು ಶಾಲೆಗಳಲ್ಲಿ ಆರಂಭಿಸಿದ್ದು ಇದು ಶಾಲಾ ದಾಖಲಾತಿಯಲ್ಲಿ ಸುಧಾರಣೆಗೆ ಕಾರಣವಾಗಿದೆ.
  5. ಶಾಲೆಗಳ ಪೈಕಿ ಹಲವಾರು ಶಾಲೆಗಳಲ್ಲಿ ದಾಖಲಾತಿ ಆಯಾ ತರಗತಿಗಳಲ್ಲಿ ಒಂದಂಕಿಗೆ ಬಂದಿದ್ದು ಇವು ಮುಂದಿನ ವರ್ಷಗಳಲ್ಲಿ ಮುಚ್ಚಿ ಹೋಗುವ ಸಾಧ್ಯತೆ ನಿಚ್ಚಳವಾಗಿದೆ

ನೀತಿ ಸಂಬಂಧಿ ಶಿಫಾರಸುಗಳು:

  1. ರಾಜ್ಯದ ಶತಮಾನ ಕಂಡ ಶಾಲೆಗಳನ್ನು (3136) ಚಾರಿತ್ರಿಕವಾಗಿ ಮಹತ್ವ ಪಡೆದ ಪಾರಂಪರಿಕ ಶಾಲೆಗಳೆಂದು ಶಿಕ್ಷಣ ಇಲಾಖೆ ಮತ್ತು ಸರಕಾರ ಘೋಷಿಸಬೇಕು. ಅವುಗಳಲ್ಲಿ ನಾಡಿನ ಹಲವಾರು ಮಹನೀಯರು ಓದಿದ್ದಾರೆ. ಸರ್‌ ಎಂ ಮಿರ್ಜಾ ಇಸ್ಮಾಯಿಲ್,ಸರ್‌ ಎಂ ವಿಶ್ವೇಶ್ವರಯ್ಯ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಡಿ.ವಿ.ಗುಂಡಪ್ಪ, ಮೊಳಹಳ್ಳಿ ಶಿವರಾವ್, ಕಾರ್ನಾಡ್ ಸದಾಶಿವರಾವ್, ದಿನಕರ ದೇಸಾಯಿ, ಗೌರೀಶ್ ಕಾಯ್ಕಿಣಿ, ಅಲೂರು ವೆಂಕಟರಾಯರು, ದ.ರಾ.ಬೇಂದ್ರೆ, ಕುವೆಂಪು, ಶಾಂತವೇರಿ ಗೋಪಾಲಗೌಡ, ಜಿ.ಎಸ್. ಶಿವರುದ್ರಪ್ಪ, ಪ್ರೊ. ನಂಜುಂಡಸ್ವಾಮಿ, ಜೀ.ಶಂ. ಪರಮಶಿವಯ್ಯ, ಉತ್ತಂಗಿ ಚನ್ನಪ್ಪ, ಯು.ಆರ್. ಅನಂತಮೂರ್ತಿ, ಜನರಲ್ ಕೆ.ಎಂ. ಕಾರ್ಯಪ್ಪ, ದೇವರಾಜು ಅರಸು, ಎಸ್‌ ಬಂಗಾರಪ್ಪ, ನಿಜಲಿಂಗಪ್ಪ, ಕೆಂಗಲ್‌ ಹನುಮಂತಯ್ಯ, ರಂಜಾನ್ ಸಾಬ್, ಪಂಡಿತ್ ತಾರಾನಾಥ್, ಕೆ.ಜಿ.ಕುಂದಣಗಾರ, ಷ. ಶೆಟ್ಟರ್, ಎಂ.ಎಂ. ಕಲಬುರ್ಗಿ, ಬೆಟಗೇರಿ ಕೃಷ್ಣಶರ್ಮ, ಸಿಂಪಿ ಲಿಂಗಣ್ಣ, ಮಿರ್ಜಿ ಅಣ್ಣಾರಾವ್, ಶಿವರಾಮಕಾರಂತ, ಕೆ.ಎಸ್. ನರಸಿಂಹಸ್ವಾಮಿ, ಪು ತಿ ನರಸಿಂಹಾಚಾರ್, ಎಚ್.ಎಲ್. ನಾಗೇಗೌಡ, ಪಿ.ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಎಚ್.ಎನ್.ನಂಜೇಗೌಡ, ಡಾ. ಶಿವಕುಮಾರ ಸ್ವಾಮೀಜಿ, ಚನ್ನಬಸವ ಪಟ್ಟದೇವರು, ಶಾಮನೂರು ಶಿವಶಂಕರಪ್ಪ, ಪಾಟೀಲ ಪುಟ್ಟಪ್ಪ, ಜಯದೇವಿತಾಯಿ ಲಿಗಾಡೆ, ಚಂದ್ರಶೇಖರ ಪಾಟೀಲ, ಸಿದ್ದಲಿಂಗಯ್ಯ ಅಂತಹ ಧೀಮಂತರು ಓದಿದ ಶಾಲೆಗಳನ್ನಾದರೂ ಸರ್ಕಾರವು ಕನಿಷ್ಠ ಜಿಲ್ಲೆಗೊಂದರಂತೆ ಆಯ್ದು, ಒಟ್ಟು ೩೧ ಶಾಲೆಗಳನ್ನು ಪಾರಂಪರಿಕ ಶಾಲೆಗಳನ್ನಾಗಿ ಬದಲಾಯಿಸಿ ಈ ಮಹನೀಯರ ಸಾಧನೆಗಳನ್ನು ಆ ಶಾಲೆಗೆ ಬರುವ ಮಕ್ಕಳಿಗೆ ವರ್ಗಾಯಿಸಲು ಸೂಕ್ತಕ್ರಮ ಕೈಗೊಳ್ಳಬೇಕು. ಅಂಥ ಶಾಲೆಗಳಲ್ಲಿ ಆ ಶಾಲೆ ಯಾರ ಹೆಸರಲ್ಲಿದೆಯೋ ಅವರ ಕುರಿತಾದ ಒಂದು ಸಣ್ಣ ವಸ್ತು ಸಂಗ್ರಹಾಲಯವೂ ಇರಬೇಕು. ಆಗ ಅಲ್ಲಿ ಓದುವ ಮಕ್ಕಳಿಗೆ ಪರಂಪರೆಯ ಕಸುವು ದಾಟಿ ಬರುತ್ತದೆ. ಆಧುನಿಕ, ಜಾತ್ಯತೀತ ಶಿಕ್ಷಣ ನೀಡುವ ಆಶಯದ ಈ ಶಾಲೆಗಳು ರಾಜ್ಯದ ಇತಿಹಾಸದ ಅಸ್ಮಿತೆಯ ಭಾಗವಾಗಬೇಕು.
  2. ಶತಮಾನ ಕಂಡ ಶಾಲೆಗಳು ಸ್ಥಾಪನೆಯಾದ ಕಾಲದ ಆಶೋತ್ತರಗಳು ಮತ್ತು ಕನಸುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸರಕಾರವು ಆಯ್ದ ಕೆಲವು ಶಾಲೆಗಳಲ್ಲಿ ವಿಸ್ತೃತ, ವಿಶಿಷ್ಟ ಕಲಿಕಾ ವಿಷಯಗಳನ್ನು ವಿಕಾಸಶೀಲವಾಗಿ ಸ್ಥಾಪಿಸಬೇಕು.

ಆಡಳಿತಾತ್ಮಕ ಶಿಫಾರಸುಗಳು:

  1. ಶತಮಾನ ಕಂಡ ಶಾಲೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಇಲಾಖೆಯಲ್ಲಿ ಒಂದು ಪ್ರತ್ಯೇಕ ಕೋಶವನ್ನು ಸ್ಥಾಪಿಸಬೇಕು. ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಈ ಶತಮಾನ ಕಂಡ ಶಾಲೆಗಳ ಸಮಗ್ರ ಅಧ್ಯಯನವನ್ನು ಕೈಗೊಳ್ಳಬೇಕು. ಈ ಶಾಲೆಗಳ ಚರಿತ್ರೆ ಅಂದರೆ ಶಿಕ್ಷಣ ಬೆಳೆದು ಬಂದ ಚರಿತ್ರೆ. ಈ ಹಿನ್ನೆಲೆಯಲ್ಲಿ ಜಿಲ್ಲೆ ತಾಲೂಕುಗಳಲ್ಲಿ ಶಾಲಾ ಪರಂಪರೆ ಕುರಿತ ಪ್ರತ್ಯೇಕ ದಾಖಲಾತಿ, ಪ್ರದರ್ಶನ, ಪ್ರಕಟಣೆಗಳನ್ನು ಕೈಗೊಳ್ಳಬೇಕು. ಒಂದು ಊರಿನ ಕೋಟೆ, ದೇವಾಲಯಗಳು ಪರಂಪರೆಯ ಅಸ್ಮಿತೆಯ ಭಾಗವಾಗಬಹುದಾದರೆ ಶಾಲೆ ಯಾಕೆ ಆಗುತ್ತಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡಬೇಕು.
  2. 2019ರ ಸರಸುತ್ತೋಲೆಯಲ್ಲೇ ಶತಮಾನ ಕಂಡ ಶಾಲೆಯ ಚರಿತ್ರೆ ಇತ್ಯಾದಿ ವಿವರಗಳನ್ನೊಳಗೊಂಡ ಪುಸ್ತಕ ಅಥವಾ ವಿಡಿಯೋ ಮಾಡಬೇಕು ಎಂದು ತಿಳಿಸಲಾಗಿದೆ.. ಆದ್ದರಿಂದ ಈ ಸಲಹೆಯನ್ನು ಅಂಗೀಕರಿಸಿ ಪ್ರತೀ ಶಾಲೆಯ ಪರಂಪರೆಯ ವಿವರಗಳನ್ನೊಳಗೊಂಡ ಪ್ರಕಟಣೆಗಳನ್ನು ಮಾಡಬೇಕು ಮತ್ತು ಅವುಗಳು ಜಾಲತಾಣವೊಂದರ ಮೂಲಕ ಆಸಕ್ತಿರಿಗೆ ದೊರೆಯುವಂತೆ ಮಾಡಬೇಕು. ಶೈಕ್ಷಣಿಕ ಇತಿಹಾಸವು ಅಧ್ಯಯನ ಯೋಗ್ಯವೆಂದು ಶಿಕ್ಷಣ ಇಲಾಖೆ ಭಾವಿಸಬೇಕು.
  3. ಶಿಕ್ಷಣ ಇಲಾಖೆಗೇ ತನ್ನ ವಿಶಿಷ್ಟ ಶಾಲೆಗಳ ಚಾರಿತ್ರಿಕ ಮಹತ್ವ ಮತ್ತು ಪರಂಪರೆಯ ಮೌಲ್ಯ ದ ಅರಿವು ಇರುವ ಯಾವ ಪುರಾವೆಯೂ ಇಲ್ಲ. ಈ ಹಿನ್ನೆಲೆಯಲ್ಲಿ ಆಯಾ ಜಿಲ್ಲೆಯ ಶಿಕ್ಷಣಾಧಿಕಾರಿ ಕಛೇರಿಗಳಲ್ಲಿ ಶತಮಾನ ಕಂಡ ಶಾಲೆಗಳ ಬಗ್ಗೆ ನಿರ್ದಿಷ್ಟ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು.
  4. ತಾಲೂಕಿನ ಶತಮಾನ ಕಂಡ ಶಾಲೆಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅದನ್ನು ಆ ತಾಲೂಕಿನ ಚರಿತ್ರೆ, ಭೌಗೋಳಿಕ ವಿಶೇಷತೆ, ಸಸ್ಯ, ಪಕ್ಷಿ, ಪ್ರಾಣಿ ಮತ್ತು ಪರಿಸರ ವಿವರಗಳ ಕಲಿಕೆ ಮತ್ತು ಪ್ರದರ್ಶನ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕು.
  5. ಶತಮಾನ ಕಂಡ ಉನ್ನತ ಪ್ರಾಥಮಿಕ ಶಾಲೆಗಳಿಗೆ ವಿಜ್ಞಾನದ ಲ್ಯಾಬ್, ಇತಿಹಾಸ, ಪರಿಸರ ಲ್ಯಾಬ್ ಗಳನ್ನು ಒದಗಿಸಬೇಕು. ಮಕ್ಕಳೇ ಪ್ರಯೋಗ ಮಾದರಿಗಳನ್ನು ಮಾಡುವ ಮೂಲಕ ಕಲಿಯುವ ಮಾದರಿಯನ್ನು ಸ್ಥಾಪಿಸಬೇಕು.
  6. ಶತಮಾನ ಕಂಡ ಶಾಲೆಗಳ ಶೈಕ್ಷಣಿಕ ಹಿರಿಮೆ ಬಗ್ಗೆ ಆಯಾ ಜಿಲ್ಲೆಗಳ ಶಾಲೆಗಳ ಸ್ಥೂಲ ವಿವರಗಳುಳ್ಳ ಪಠ್ಯವು ಜಿಲ್ಲಾ ಮಟ್ಟದಲ್ಲಿ ಪಠ್ಯಗಳಲ್ಲಿ ಅಡಕಗೊಳ್ಳಬೇಕು.
  7. ಶಾಲೆಯ ಕೊಠಡಿಗಳ ಸದ್ಯೋ ಭವಿಷ್ಯದ ಅಗತ್ಯವನ್ನು ಮುಂಗಾಣ್ಕೆ ಮೂಲಕ ದಾಖಲಿಸಿ ಕೊಠಡಿ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು.
  8. ಶತಮಾನ ಕಂಡ ಶಾಲೆಗಳನ್ನು ವಿಶೇಷ ಆದ್ಯತಾ ಶಾಲೆಗಳಾಗಿ ಪರಿಗಣಿಸಿ ಅವಶ್ಯ ಶಿಕ್ಷಕರ ಖಾಯಂ ನೇಮಕಾತಿ ಆಗಬೇಕು
  9. ಶತಮಾನ ಕಂಡ ಶಾಲೆಗಳ ಸಂಖ್ಯೆ ಏರುತ್ತಲೇ ಇದೆ. ಅಂಥ ಶಾಲೆಗಳ ಗುರುತಿಸುವಿಕೆ ಮತ್ತು ಅಭಿವೃದ್ಧಿ ಒಂದು ಸತತ ಆಡಳಿತಾತ್ಮಕ ಪ್ರಕ್ರಿಯೆಯಾಗಬೇಕು.
  10. ಈ ಶಾಲೆಗಳ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗೆ ಅನುಮತಿ ನೀಡುವ ಪ್ರಕ್ರಿಯೆ ಬಗ್ಗೆ ಸಾರ್ವಜನಿಕ ಚರ್ಚೆಯಾಗಬೇಕಿದೆ. ಹಾಗೇ ಸರಕಾರ ಈ ಅನುಮತಿ ಪ್ರಕ್ರಿಯೆಯನ್ನು ಅಮಾನತುಗೊಳಿಸಬೇಕಿದೆ.

ಅನ್ಯ ಇಲಾಖಾ ಸಹಕಾರ- ಸಮನ್ವಯ

  1. ಈ ಶಾಲೆಗಳ ಭೌತಿಕ ಸಂರಚನೆಗಳ ನಿರ್ಮಾಣ . ದುರಸ್ತಿಗೆ ಉದ್ಯೋಗ ಖಾತರಿ ಯೋಜನೆಯ ಅನುದಾನ ಬಳಕೆಗೆ ಪ್ರಾಥಮಿಕ ಆದ್ಯತೆ ನೀಡಬೇಕು. ಶಾಲೆಯ ಅವಶ್ಯಕತೆಯ ಪಟ್ಟಿಯಲ್ಲಿ ಉದ್ಯೋಗ ಖಾತರಿ ಮೂಲಕ ಪೂರೈಸಬಹುದಾದ ಕಾಮಗಾರಿಗಳಿವೆ. ಉದಾಹರಣೆಗೆ : ಶಾಲಾ ಆಟದ ಮೈದಾನ, ಶೌಚಾಲಯ, ಆವರಣ ಗೋಡೆ, ಅಡುಗೆ ಮನೆ ಕಟ್ಟಿಸುವ ಕೆಲಸ ಇತ್ಯಾದಿ.
  2. ಈ ಶತಮಾನ ಕಂಡ ಶಾಲೆ ಇರುವ ಗ್ರಾಮ ಪಂಚಾಯತ್/ ಪಟ್ಟಣ ಪಂಚಾಯತುಗಳು ಈ ಶಾಲೆಗಳಬಗ್ಗೆ ವಿಶೇಷ ಮುತುವರ್ಜಿ ವಹಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಕ್ರಮ ಕೈಗೊಳ್ಳಬೇಕು ಮತ್ತು ತಾಲೂಕು ಪಂಚಾಯತ್ ಮಟ್ಟದಲ್ಲಿ ವಿಶೇಷ ಆಡಳಿತಾತ್ಮಕ ಕಾರ್ಯಪಡೆ ರಚಿಸಬೇಕು.
  3. ಆಯಾ ಶಾಲೆಯಲ್ಲಿ ಅಥವಾ ಗ್ರಾಮ/ ಪ್ರದೇಶಗಳಲ್ಲಿ ಲಭ್ಯವಿರುವ ಚಾರಿತ್ರಿಕ ದಾಖಲೆಗಳನ್ನು ಸಂಗ್ರಹಿಸಿ ದಾಖಲೀಕರಿಸಬೇಕು. ಶಾಲೆಯ ಹಳೆ ಕಟ್ಟಡ ಕೆಡಹುವಾಗ ಅಥವಾ ಹಳೇ ದಾಖಲೆಗಳನ್ನು ವಿಲೇವಾರಿ ಮಾಡುವಾಗ ಈ ಅಮೂಲ್ಯ ದಾಖಲೆಗಳೆಲ್ಲಾ ಗುಜರಿಗೆ ಹೋಗಿರುವ ಬಗ್ಗೆ ಶಿಕ್ಷಕರೇ ಹೇಳಿರುತ್ತಾರೆ. ಸ್ಥಳೀಯ ಗ್ರಾಮ ಪಂಚಾಯತ್ ಈ ಪರಂಪರೆಯ ದಾಖಲೀಕರಣ, ಸಂಗ್ರಹ, ಪ್ರದರ್ಶನಗಳಲ್ಲಿ ಅಧಿಕೃತವಾಗಿ ನಿಯೋಜಿಸಿಕೊಳ್ಳಬೇಕು. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಂಥ ದಾಖಲೆಗಳು ಡಿಜಿಟಲೀಕರಣಗೊಂಡು ಸಂರಕ್ಷಿಸಲ್ಪಡಬೇಕು.
  4. ಶತಮಾನ ಕಂಡ ಶಾಲೆಗಳ ಆಸ್ತಿ ಸಂರಕ್ಷಣೆಯನ್ನು ಶಿಕ್ಷಣ ಇಲಾಖೆ ಮಾಡಿದ್ದಕ್ಕೆ ಇಲಾಖೆಗೆ ಕೃತಜ್ಞತೆಗಳು.
  5. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿ ಸಾಕಷ್ಟು ಅನುದಾನ ಲಭ್ಯವಿದ್ದು ಈ ಅನುದಾನದಲ್ಲಿ ಆದ್ಯತೆಯ ಮೇರೆಗೆ ತನ್ನ ವ್ಯಾಪ್ತಿಯ ಶತಮಾನ ಕಂಡ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಅನುದಾನ ಮೀಸಲಿಡಬೇಕು.
  6. ಗಣಿಗಾರಿಕೆ ಪ್ರದೇಶದ ಪರಿಸರ ಪುನರುಜ್ಜೀವನ ನಿಧಿಯಲ್ಲಿ ಸಾಕಷ್ಟು ನಿಧಿ ಲಭ್ಯವಿದ್ದು ಈ ವ್ಯಾಪ್ತಿಗೆ ಬರುವ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಶತಮಾನ ಕಂಡ ಶಾಲೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆಯನ್ನು ಸಿದ್ಧ ಪಡಿಸಿ ಅನುದಾನ ಬಿಡುಗಡೆ ಮಾಡಬೇಕು.
  7. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಬಳಕೆಯಲ್ಲಿ ಕನಿಷ್ಠ ಶೇ. 10ರಷ್ಟನ್ನು ತನ್ನ ಕ್ಷೇತ್ರ ವ್ಯಾಪ್ತಿಯ ಸರಕಾರಿ ಶಾಲೆಗಳ ಅದರಲ್ಲೂ ಶತಮಾನ ಕಂಡ ಶಾಲೆಗಳ ಅಭಿವೃದ್ಧಿಗೆ ಕನಿಷ್ಠ ಮೂರು ವರ್ಷ ಮೊದಲ ಆದ್ಯತೆಯಾಗಿ ಮೀಸಲಿಡುವಂತೆ ಸರಕಾರವು ನಿರ್ದೇಶನ ನೀಡಬೇಕು.
  8. ಶತಮಾನ ಕಂಡ ಶಾಲೆಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಒಗ್ಗೂಡಿಸಿದ ಸಮನ್ವಯ ಸಮಿತಿಯನ್ನು ಶಾಸಕರ ಅಧ್ಯಕ್ಷತೆಯಲ್ಲಿ ರಚಿಸುವುದು.
  9. ಸಾಕಷ್ಟು ಸಂಖ್ಯೆ ಶಿಥಿಲ ಕಟ್ಟಡದ ವಿಲೇವಾರಿ ಮತ್ತು ಹೊಸ ಕಟ್ಟಡದ ಕಾಲಮಿತಿ ನಿರ್ಮಾಣ

ಸರ್ಕಾರದ ಉಪಕ್ರಮಗಳು

  1. ಕನ್ನಡ ಮಾಧ್ಯಮ ದಾಖಲಾತಿಯನ್ನು ಉತ್ತೇಜಿಸಲು ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು . ದ್ವಿಭಾಷಾ ಮಾಧ್ಯಮಗಳನ್ನು ಸರಕಾರಿ ಶಾಲೆಗಳನ್ನು ಉಳಿಸುವ ಉಪಕ್ರಮವಾಗಿ ಸರಕಾರ ಆರಂಭಿಸಿದೆ. ಜನಪ್ರಿಯ ಬೇಡಿಕೆಯೂ ಇದಕ್ಕೆ ಕಾರಣ. ಆದರೆ ಈ ದ್ವಿಭಾಷಾ ಮಾಧ್ಯಮಗಳನ್ನು ಆರಂಭಿಸಿ ಮುಂದುವರಿಸಿಕೊಂಡು ಹೋಗುವಾಗ್ಗೆ ಈ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ದಾಖಲಾತಿ ಶೂನ್ಯಕ್ಕಿಳಿದಿರುವ ಉದಾಹರಣೆಗಳಿವೆ. ಕನಿಷ್ಠ ಶತಮಾನ ಕಂಡ ಶಾಲೆಗಳಲ್ಲಾದರೂ ಕನ್ನಡ ಮಾಧ್ಯಮಗಳ ದಾಖಲಾತಿಯನ್ನು ಉತ್ತೇಜಿಸಲು ಸರಕಾರ ಕ್ರಮ ಕೈಗೊಳ್ಳಬೇಕು . ಇದಕ್ಕೆ ಪ್ರತ್ಯೇಕ ಅನುದಾನವನ್ನು ಸರಕಾರ ನೀಡಬೇಕು.
  2. ಈ ವರೆಗೆ ಜಿ ಎಸ್‌ ಶಿವರುದ್ರಪ್ಪನವರ ಕಾಳಜಿಯ ಮನವಿ ಸ್ವೀಕರಿಸಿ 12 ವರ್ಷಗಳು ಸಂದಿವೆ. ಈ ನಡುವೆ ಸರಕಾರ 2018ರಲ್ಲಿ ರೂ. 5 ಕೋಟಿ ಮತ್ತು 2021-22ರಲ್ಲಿ 20 ಕೋಟಿ ಮಾತ್ರ ಬಿಡುಗಡೆ ಮಾಡಿದ್ದು ಒಟ್ಟಾರೆ ಅಭಿವೃದ್ಧಿ ಪಡಿಸಲಾದ ಶಾಲೆಗಳ ಸಂಖ್ಯೆ ಒಟ್ಟು ಸಂಖ್ಯೆ 240. ಈ ಹಿನ್ನೆಲೆಯಲ್ಲಿ ಸರಕಾರವು ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ವರ್ಷ ಕನಿಷ್ಠ ಶೇ.10 ಶಾಲೆಗಳನ್ನು ಅಭಿವೃದ್ಧಿ ವ್ಯಾಪ್ತಿಗೆ ತರಬೇಕು.

ಸಮುದಾಯ ಸಹಕಾರ- ಸಬಲೀಕರಣ:

  1. ಶತಮಾನ ಕಂಡ ಶಾಲೆಗಳಿಗೆ ಪಂಚಾಯತ್ ಮಟ್ಟದಲ್ಲಿ ಗ್ರಾಮ ಶಿಕ್ಷಣ ಸಮಿತಿಯನ್ನು ರಚಿಸುವುದು.
  2. ಶತಮಾನ ಕಂಡ ಶಾಲೆಗಳ ಹಳೆ ವಿದ್ಯಾರ್ಥಿ ಸಂಘಗಳನ್ನು ಆದ್ಯತೆಯ ಮೇಲೆ ಕಾಲಮಿತಿಯಲ್ಲಿ ಸಕ್ರಿಯಗೊಳಿಸುವುದು.
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...