ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಡಾ. ಡಿ.ಎಸ್. ಕರ್ಕಿ ರಂಗಮಂದಿರದಲ್ಲಿ ಮರಾಠಾ ಕೋ-ಆಪರೇಟಿವ್ ಸೊಸೈಟಿ ಹಾಗೂ ವೃಂದಾರಣ್ಯ ಗುರುಕುಲದ ಸಹಯೋಗದಲ್ಲಿ ಕಲ್ಲಪ್ಪ ಪೂಜೇರ ಅವರ ನಿರ್ದೇಶನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಆಧರಿಸಿದ “ಶಿವಕೇಸರಿ” ನಾಟಕ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ವೃಂದಾರಣ್ಯ ಗುರುಕುಲದ ವಸುದೇವ ಪ್ರಭುಜಿ ಮಾತನಾಡಿ, ಮಕ್ಕಳಿಗೆ ದೇಶಭಕ್ತಿ, ಸಂಸ್ಕೃತಿ ಹಾಗೂ ಮಹನೀಯರ ತ್ಯಾಗಗಳ ಅರಿವು ಮೂಡಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು. ಶಿವಾಜಿ ಮಹಾರಾಜರು ದೇಹದಲ್ಲಿ ಚಿಕ್ಕವರಾಗಿದ್ದರೂ ಕೀರ್ತಿಯಲ್ಲಿ ಮಹಾನ್ ವ್ಯಕ್ತಿಯಾಗಿದ್ದು, ಅವರ ಆದರ್ಶಗಳನ್ನು ಮಕ್ಕಳು ಅನುಸರಿಸಬೇಕು ಎಂದು ತಿಳಿಸಿದರು.
ಬಿಜೆಪಿ ಮುಖಂಡ ಡಾ. ಕೆ.ವಿ. ಪಾಟೀಲ ಮಾತನಾಡಿ, ಶಿವಾಜಿ ಜಯಂತಿ ಅಂಗವಾಗಿ ವಿದ್ಯಾರ್ಥಿಗಳು ನಾಟಕ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಮರಾಠಾ ಸಮಾಜದ ಪರವಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ವಕೀಲ ಪಿ.ಎಂ. ಜಗತಾಪ್ ಮಾತನಾಡಿ, ಶಿವಾಜಿ ಮಹಾರಾಜರು ಮಹಿಳೆಯರಿಗೆ ಅತ್ಯಂತ ಗೌರವ ನೀಡಿದ ನಾಯಕನಾಗಿದ್ದು, ಅವರ ಗೆರಿಲ್ಲಾ ಯುದ್ಧ ತಂತ್ರವನ್ನು ವಿಶ್ವದ ಹಲವು ದೇಶಗಳು ಅಧ್ಯಯನ ಮಾಡಿವೆ ಎಂದು ಹೇಳಿದರು. ಅಪ್ಟಲ್ ಖಾನ್ ವಿರುದ್ಧದ ಯುದ್ಧದಲ್ಲಿ ಅವರು ತೋರಿದ ಧೈರ್ಯ ಉದಾಹರಣೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತೊರಗಲ ಸಂಸ್ಥಾನದ ಶ್ರೀಮಂತ ಸಂಜಯಸಿಂಗ್ ಸಿಂಧೆ, ರಾಜಮಾತಾ ಹಾಗೂ ಪಿ.ಎಂ. ಆಷ್ಟೆ ಸೇರಿದಂತೆ ಹಲವು ಗಣ್ಯರು ಹಾಗೂ ರಾಮದುರ್ಗ ನಗರದ ಸಾರ್ವಜನಿಕರು ಉಪಸ್ಥಿತರಿದ್ದರು. ಉಪಸ್ಥಿತರಿದ್ದರು.



