ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಮುಂದಿನ ಬಜೆಟ್‌ನಲ್ಲಿ ಅನುದಾನ: ಸಿಎಂ ಡಿ ಕೆ ಶಿವಕುಮಾರ್

Date:

“ಮುಂದಿನ ಬಜೆಟ್‌ನಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆಗೆ ಸೂಕ್ತ ಅನುದಾನ ಮೀಸಲಿಡಲಾಗುವುದು. ಅರಣ್ಯ ಇಲಾಖೆಗೆ ಸೇರಿದ 5000 ಹೆಕ್ಟೇರ್ ಭೂಮಿಗೆ ಪರ್ಯಾಯ ಭೂಮಿಯನ್ನು ಒದಗಿಸಲು ಈಗಾಗಲೇ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಭೂಮಿ ಪೂಜೆಗೆ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

- Advertisement -

ಕೆಆರ್‌ಎಸ್‌ನ ಬೃಂದಾವನ ಉದ್ಯಾನದಲ್ಲಿ ನಡೆದ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಶಿವಕುಮಾರ್ ಅವರು ಶುಕ್ರವಾರ ಚಾಲನೆ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

“ಚಾಮುಂಡೇಶ್ವರಿ ಶಕ್ತಿಯ ಸಂಕೇತವಾದರೆ ಕಾವೇರಿ ಸಮೃದ್ಧಿಯ ಸಂಕೇತ. ನಮ್ಮ ನಾಡಿನ ಸಂಸ್ಕೃತಿಗೆ ನಮನ ಸಲ್ಲಿಸಲು ಕಾವೇರಿ ಆರತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಂದಿನ ದಿನಗಳಲ್ಲಿಯೂ ಎಲ್ಲಾ ಸರ್ಕಾರಗಳು, ಸಾರ್ವಜನಿಕರು, ಇಲಾಖೆಗಳು ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು” ಎಂದರು.

“ಜಲ ಎಲ್ಲರ ಜೀವ. ಜೀವ ಜಲಕ್ಕೆ ನಮನ ಸಲ್ಲಿಸುವ ಕೆಲಸವನ್ನು ಮಾಡಬೇಕು, ಉಪಕಾರ ಸ್ಮರಣೆ ಸಲ್ಲಿಸಬೇಕು. ಕಾವೇರಿ ಹುಟ್ಟಿ, ಸಮುದ್ರ ಸೇರುವವರೆಗೂ ಅದೆಷ್ಟೋ ನಗರ, ಜನರು ಉದ್ಯಮಗಳಿಗೆ ರಕ್ಷಣೆಯಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: ಕಾವೇರಿ-ಮೇಕೆದಾಟು ವಿವಾದ: ಸೌಹಾರ್ದ ಮಾರ್ಗಕ್ಕಾಗಿ ತಮಿಳು ಸಿಎಂ ವಿಜಯ್‌ಗೆ ವಿಜಯೇಂದ್ರ ಪತ್ರ

“ಕನ್ನಂಬಾಡಿ ಕಟ್ಟೆ 347 ಕಿ.ಮೀ ಉದ್ದ, 37147 ಎಕರೆ ಭೂಮಿಗೆ ನೀರಾವರಿಯು ಒದಗಿಸುತ್ತಿದೆ. ಹಿಂದೆ ನಾನು ಜಲ ಸಂಪನ್ಮೂಲ ಸಚಿವನಾದ್ದ ಸಂದರ್ಭದಲ್ಲಿ ಮಂಡ್ಯ, ಮೈಸೂರು ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಿ ಅಳತೆ ಮಾಡುವ ಕೆಲಸವನ್ನು ವಹಿಸಲಾಗಿತ್ತು. ಈಗಾಗಲೇ ಇದರ ಗುರುತನ್ನು ಕೂಡ ಮಾಡಲಾಗಿದೆ. ಕಳೆದ ವರ್ಷ 341 ಟಿಎಂಸಿ ನೀರು ಸಮುದ್ರದ ಪಾಲಾಯಿತು. 177 ಟಿಎಂಸಿ ತಮಿಳುನಾಡಿಗೆ ಹರಿಸಬೇಕಿತ್ತು . ಈ ವರ್ಷ ದೇಶದಲ್ಲಿ ಭೀಕರ ಬರಗಾಲ ಎದುರಾಗಿದೆ ರಾಜ್ಯದಲ್ಲಿ ಕೃಷ್ಣ ಅಣೆಕಟ್ಟು ಬಿಟ್ಟರೆ ಬೇರೆ ಯಾವ ಅಣೆಕಟ್ಟು ತುಂಬಿಲ್ಲ” ಎಂದರು.

ಅಣೆಕಟ್ಟಿನ ಹೂಳು ತೆಗೆಸಲಾಗುವುದು

“ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಆಂಧ್ರಪ್ರದೇಶ ತೆಲಂಗಾಣ ಮತ್ತು ನಾನು ಸೇರಿ ಭೇಟಿ ಮಾಡಿದ ಸಂದರ್ಭದಲ್ಲಿ ಕಾವೇರಿ ಮತ್ತು ತುಂಗಭದ್ರ ಜಲಾಶಯಗಳಿಂದ ಹೂಳು ತೆಗೆಯಲು ಟೆಂಡರ್ ಕರೆಯಲು ಸೂಚಿಸಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಈಗಾಗಲೇ ಹೂಳು ತೆಗೆಯುವ ಕಾರ್ಯಕ್ರಮ ಪ್ರಾರಂಭವಾಗಿದ್ದು, ಡ್ರಜ್ಜಿಂಗ್ ಮೆಶೀನ್ ತರಿಸಿ ಹೂಳು ತೆಗೆಸಿ, ಮರಳು ಹಾಗೂ ಮಣ್ಣನ್ನು ರೈತರಿಗೆ ಒದಗಿಸುವ ಕೆಲಸ ಮಾಡಲಾಗುತ್ತಿದೆ. ಸದ್ಯದಲ್ಲಿಯೇ ನಾನು ಮತ್ತು ನೀರಾವರಿ ಸಚಿವರು ತೆಲಂಗಾಣಕ್ಕೆ ಭೇಟಿ ನೀಡಿ ಈ ಯೋಜನೆಯನ್ನು ವೀಕ್ಷಿಸಿ ನೀರು ವ್ಯರ್ಥವಾಗದಂತೆ ಪ್ರಯತ್ನ ಮಾಡಲಾಗುವುದು” ಎಂದರು.

ಟೀಕೆಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ

“ನಾನು ಟೀಕೆಗಳನ್ನು ಸ್ವಾಗತಿಸುವವನು. ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತವೆ ಎಂದು ನಂಬಿರುವವನು. ರಾಜಕಾರಣ ಮಾಡುವವರಿಗೆ ವೈರಿಗಳು ಇರಬೇಕು, ಟೀಕೆ ಮಾಡುವವರೂ ಇರಬೇಕು. ವೈರಿಗಳು ಇಲ್ಲದಿದ್ದರೆ ಎಚ್ಚರಿಕೆಯಿಂದ ಬದುಕು ಮತ್ತು ಆಳ್ವಿಕೆಯನ್ನು ನಡೆಸಲು ಸಾಧ್ಯವಿಲ್ಲ. ಟೀಕೆ, ಅವಹೇಳನಗಳನ್ನು ಸಂತೋಷದಿಂದ ಸ್ವೀಕರಿಸುತ್ತೇನೆ. ಬದುಕಿನಲ್ಲಿ ನನಗೆ ಕಷ್ಟವೂ, ಗೊತ್ತು ಸುಖವು ಗೊತ್ತು. ರಾಜ್ಯದ ಜನತೆಗೆ ಸೇವೆ ಮಾಡಲು ರಾಜ್ಯದ ಜನತೆ ನನ್ನ ಮತ್ತು ಸಿದ್ದರಾಮಯ್ಯನವರ ನಾಯಕತ್ವದಲ್ಲಿ 136 ಸ್ಥಾನಗಳನ್ನು ಕೊಟ್ಟು ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿದ್ದಾರೆ” ಎಂದರು.

ಎಷ್ಟು ಉಳಿ ಏಟು ಬಿದ್ದರೂ ಈ ಕಲ್ಲು ಜಗ್ಗಲು ಸಾಧ್ಯವಿಲ್ಲ

“ಹಿಂದೆ ಕಾಂಗ್ರೆಸ್ ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳು 45 ಸಾವಿರ ಕೋಟಿ ರೂ.ಗಳಷ್ಟು ಸಾಲ ಮನ್ನಾ ಮಾಡಿದ್ದರು. ನಾನು ಗ್ಯಾರಂಟಿ ಯೋಜನೆಗಳ ಅಡಿ ಇದುವರೆಗೂ 160 ಕೋಟಿಗೂ ಹೆಚ್ಚು ಹಣವನ್ನು ನೇರವಾಗಿ ಕೊಟ್ಟು, ಜನರ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತರಲಾಗಿದೆ. ಟೀಕೆ ಮಾಡುವವರು ಮಾಡಲಿ, ಅಸೂಯೆ ಪಡುವವರು ಪಟ್ಟುಕೊಳ್ಳಲಿ” ಎಂದರು.

“ನನ್ನನ್ನು ಕೆಲವರು ಕನಕಪುರದ ಬಂಡೆ ಎಂದು ಕರೆಯುತ್ತಾರೆ. ಬಂಡೆ ಪ್ರಕೃತಿ, ಅದನ್ನು ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಕೆತ್ತನೆ ಮಾಡಿ ದೇವಿಯನ್ನು ರೂಪಿಸಿರುವುದಕ್ಕೆ ಪೂಜೆ ಮಾಡಲು ಸಾಧ್ಯವಾಗಿದೆ. ಎಷ್ಟು ಉಳಿ ಏಟು ಬಿದ್ದರೂ ಈ ಕಲ್ಲು ಜಗಲು ಸಾಧ್ಯವಿಲ್ಲ. ರಾಜ್ಯದ ಜನರ ಋಣವನ್ನು ತೀರಿಸಲು ಕಂಕಣಬದ್ಧನಾಗಿದ್ದೇನೆ. ಶಪಥ, ಸಂಕಲ್ಪವನ್ನು ಮಾಡಿದ್ದೇನೆ. ಮೇಕೆದಾಟು ಅಣೆಕಟ್ಟು ವಿಚಾರದಲ್ಲಿ ಪಾದಯಾತ್ರೆ ಕೈಗೊಂಡಾಗ ಅನೇಕರು ಇದು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಎಲ್ಲರ ಪ್ರಾರ್ಥನೆಯಿಂದ ನಮ್ಮ ಅವಧಿಯಲ್ಲಿಯೇ ಸುಪ್ರೀಂ ಕೋರ್ಟ್ ಅಣೆಕಟ್ಟು ಕಟ್ಟಲು ಅನುಮತಿಯನ್ನು ಕೊಟ್ಟಿದೆ” ಎಂದರು

ಕಟ್ಟಕಡೆಯ ರೈತನಿಗೆ ನೀರು ಒದಗಿಸಲಾಗುತ್ತಿದೆ

“ನಮ್ಮ ವಿಚಾರಗಳು ಜನರ ಬದುಕಿಗೋಸ್ಕರವಾಗಿದೆ. ಇಡೀ ವಿಶ್ವ ಇಂದು ಬೆಂಗಳೂರಿನತ್ತ ನೋಡುತ್ತಿದ್ದು ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುತ್ತಿದ್ದೇವೆ. ಈಗ 6 ನೇ ಹಂತವನ್ನು ತಲುಪಿದೆ. ರೈತರಿಗೆ ನೀರು ಕೊಡಲು ಕಿಂಚಿತ್ತು ಸಮಸ್ಯೆಯಾಗದಂತೆ ಕಟ್ಟ ಕಡೆಯ ರೈತನಿಗೆ ನೀರು ಒದಗಿಸಿಕೊಂಡು ಬರುತ್ತಿದ್ದೇವೆ” ಎಂದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಸ್ಕ್–ಅಂಬಾನಿ ವಾಕ್ಸಮರ: ‘ಸ್ಪರ್ಧೆಗೆ ಸಿದ್ಧ’ ಎಂದ ರಿಲಯನ್ಸ್

ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ಆರಂಭಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬ ಎಲಾನ್ ಮಸ್ಕ್ ಅವರ...

ಹವಾಮಾನ ವರದಿ | ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಅ.22ರವರೆಗೆ ಮಳೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ...

ಬೀಳಗಿ | ಬೆಳೆ ಉಳಿಸಲು ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯವರೆಗೆ ನೀರು ಹರಿಸಿ: ಭಾರತೀಯ ಕಿಸಾನ್‌ ಸಂಘ ಆಗ್ರಹ

ಘಟಪ್ರಭಾ ಮತ್ತು ಕೃಷ್ಣಾ ನದಿಗಳಲ್ಲಿ ಸಾಕಷ್ಟು ನೀರಿದ್ದರೂ ಘಟಪ್ರಭಾ ಎಡದಂಡೆ ಕಾಲುವೆಯ...

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...