20 ತಿಂಗಳಲ್ಲಿ 20 ಮುಖ್ಯ ಚುನಾವಣಾಧಿಕಾರಿಗಳ ವರ್ಗಾವಣೆ: ಗ್ಯಾನೇಶ್ ಕುಮಾರ್ ದಾಖಲೆ!

Date:

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಆಡಳಿತದಲ್ಲಿ‌ ಚುನಾವಣಾ ಆಯೋಗವು ಭಾರೀ ವಿವಾದಗಳನ್ನು ಎದುರಿಸುತ್ತಿದೆ. ಇದೀಗ, ಆ ಸಾಲಿಗೆ ಮತ್ತೊಂದು ಆಡಳಿತಾತ್ಮಕ ಬದಲಾವಣೆಯೂ ಸೇರಿಸಿಕೊಂಡಿದೆ. ಗ್ಯಾನೇಶ್ ಕುಮಾರ್ ಅವರು 2025ರ ಫೆಬ್ರವರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರದ ಕೇವಲ 20 ತಿಂಗಳುಗಳ ಅವಧಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸುಮಾರು 18 ರಿಂದ 20 ಮುಖ್ಯ ಚುನಾವಣಾಧಿಕಾರಿಗಳನ್ನು (ಸಿಇಒ) ವರ್ಗಾವಣೆ ಮಾಡಿದ್ದಾರೆ.

- Advertisement -

ದೇಶಾದ್ಯಂತ,ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿರುವ ನಡುವೆಯೇ ಆಯೋಗದ ಉನ್ನತ ಅಧಿಕಾರಿಗಳ ಈ ಸರಣಿ ವರ್ಗಾವಣೆಗಳು ತೀವ್ರ ಗಮನ ಸೆಳೆದಿವೆ.‌ ಸಾಮಾನ್ಯವಾಗಿ ಚುನಾವಣಾ ವ್ಯವಸ್ಥೆಯಲ್ಲಿ ಸ್ಥಿರತೆ ಮತ್ತು ಕಾರ್ಯನಿರ್ವಹಣೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಒಬ್ಬ ಸಿಇಒಗೆ ಕನಿಷ್ಠ ಮೂರು ವರ್ಷಗಳ ಅಧಿಕಾರಾವಧಿಯನ್ನು ನೀಡುವ ಸಂಪ್ರದಾಯವಿದೆ. ಆದರೆ, ಗ್ಯಾನೇಶ್ ಕುಮಾರ್ ಅವರ ಈ 20 ತಿಂಗಳ ಅವಧಿಯಲ್ಲಿ ವರ್ಗಾವಣೆಗೊಂಡ ಸಿಇಒಗಳ ಪೈಕಿ ಕನಿಷ್ಠ ಏಳಕ್ಕೂ ಹೆಚ್ಚು ಅಧಿಕಾರಿಗಳು ತಮ್ಮ ಹುದ್ದೆಯಲ್ಲಿ ಕನಿಷ್ಠ ಎರಡು ವರ್ಷಗಳನ್ನೂ ಪೂರ್ಣಗೊಳಿಸಿಲ್ಲ ಎಂಬುದು ಗಮನಾರ್ಹ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಗ್ಯಾನೇಶ್ ಕುಮಾರ್ ನಡೆಸಿರುವ ಈ ವರ್ಗಾವಣೆಗಳಿಗೆ ಹೋಲಿಸಿದರೆ, ಮಾಜಿ ಸಿಇಸಿ ರಾಜೀವ್ ಕುಮಾರ್ ಅವರ 33 ತಿಂಗಳ ಅಧಿಕಾರಾವಧಿಯಲ್ಲಿ (2024ರ ಲೋಕಸಭಾ ಚುನಾವಣೆಯನ್ನೂ ಒಳಗೊಂಡು) 23 ಸಿಇಒಗಳ ವರ್ಗಾವಣೆಯಾಗಿತ್ತು. ಅದಕ್ಕೂ ಮುನ್ನ ಸುನಿಲ್ ಅರೋರಾ ಮತ್ತು ಸುಶೀಲ್ ಚಂದ್ರ ಅವರ ಒಟ್ಟು 41 ತಿಂಗಳ ಸುದೀರ್ಘ ಅವಧಿಯಲ್ಲಿ 29 ಸಿಇಒಗಳು ವರ್ಗಾವಣೆಗೊಂಡಿದ್ದರು. ಆದರೆ, ಪ್ರಸ್ತುತ ಗ್ಯಾನೇಶ್ ಕುಮಾರ್ ಅವರ ಅವಧಿಯಲ್ಲಿ ಅತ್ಯಲ್ಪ ಸಮಯದಲ್ಲೇ ಅತ್ಯಧಿಕ ಸಂಖ್ಯೆಯ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ಈ ವರ್ಗಾವಣೆಯ ಪರ್ವವು 2025ರ ಜೂನ್‌ನಲ್ಲಿ ಬಿಹಾರದಲ್ಲಿ ಎಸ್‌ಐಆರ್ ಆರಂಭವಾಗುವ ಮುನ್ನ ಏಪ್ರಿಲ್‌ನಲ್ಲೇ ಶುರುವಾಗಿತ್ತು. ತದನಂತರ ನಾಗಾಲ್ಯಾಂಡ್, ಛತ್ತೀಸ್‌ಗಢ, ಜಮ್ಮು-ಕಾಶ್ಮೀರ, ಹರಿಯಾಣ, ಮಧ್ಯಪ್ರದೇಶ, ಕರ್ನಾಟಕ, ಮಣಿಪುರ ಮತ್ತು ಲಡಾಖ್‌ಗಳಲ್ಲಿ ಹೊಸ ಸಿಇಒಗಳನ್ನು ನೇಮಕ ಮಾಡಲಾಯಿತು.

ಗಮನಾರ್ಹವಾಗಿ, ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಂತೂ ಕೇವಲ ಒಂದು ವರ್ಷದ ಅವಧಿಯಲ್ಲಿ ಮೂವರು ಸಿಇಒಗಳನ್ನು ಬದಲಾಯಿಸಲಾಗಿದೆ.

2026 ರಲ್ಲಿಯೂ ಈ ಸರಣಿ ಮುಂದುವರಿದಿದ್ದು ದೆಹಲಿ, ಗುಜರಾತ್, ಪಂಜಾಬ್, ಸಿಕ್ಕಿಂ, ಚಂಡೀಗಢ ಸೇರಿದಂತೆ ಇತ್ತೀಚೆಗೆ ವಿಧಾನಸಭೆ ಚುನಾವಣೆ ಮುಗಿಸಿದ ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲೂ ಸಿಇಒಗಳನ್ನು ಬದಲಾಯಿಸಲಾಗಿದೆ.

ಕೇವಲ ರಾಜ್ಯ ಮಟ್ಟದ ಸಿಇಒಗಳು ಮಾತ್ರವಲ್ಲದೆ, ದೆಹಲಿಯ ‘ನಿರ್ವಾಚನ ಸದನ’ದಲ್ಲಿರುವ ಆಯೋಗದ ಕೇಂದ್ರ ಕಚೇರಿಯಲ್ಲೂ ಪ್ರಮುಖ ಬದಲಾವಣೆಗಳು ನಡೆದಿವೆ. ಉಪ ಚುನಾವಣಾ ಆಯುಕ್ತರ (DEC) ಹುದ್ದೆಯಲ್ಲಿ ಭಾನು ಪ್ರಕಾಶ್ ಯೇಟೂರು, ಪವನ್ ಕುಮಾರ್ ಶರ್ಮಾ ಹಾಗೂ ಇತ್ತೀಚೆಗೆ ಪ್ರಕಾಶ್ ರಾಜ್‌ಪುರೋಹಿತ್ ಸೇರಿದಂತೆ ನಾಲ್ವರನ್ನು ಬದಲಾಯಿಸಲಾಗಿದೆ.

ಎಸ್‌ಐಆರ್‌ ಜಾರಿ ನಿರ್ಧಾರವನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳಲಾಗಿದೆ, ಬಿಜೆಪಿಗೆ ಅನುಕೂಲವಾಗುವ ರೀತಿಯಲ್ಲಿ ಮತಪಟ್ಟಿಯನ್ನು ಪರಿಷ್ಕರಿಸಿ ಬಿಜೆಪಿ ವಿರೋಧಿ ಅರ್ಹ ಮತದಾರರನ್ನೂ ಪಟ್ಟಿಯಿಂದ ಹೊರಹಾಕಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿರುವ, ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ಹೊತ್ತಿನಲ್ಲಿ‌ ಸಿಇಒಗಳ ಬದಲಾವಣೆ ವಿಚಾರವು ಗಮನ ಸೆಳೆದಿದೆ. ಮೋದಿ-ಶಾ ಜೋಡಿ ಮತ್ತು ಗ್ಯಾನೇಶ್ ಕುಮಾರ್ ಇಚ್ಛಿಸಿದಂತೆ, ಮತಪಟ್ಟಿಯನ್ನು ಪರಿಷ್ಕರಿಸುವ, ಅವರ ಅಣತಿಯಂತೆ ಕೆಲಸ ಮಾಡುವ ಅಧಿಕಾರಿಗಳನ್ನು ಸಿಇಒ ಹುದ್ದೆಗೆ ಪ್ರತಿಷ್ಠಾಪಿಸುವ ಹುನ್ನಾರ ಈ ವರ್ಗಾವಣೆಗಳ ಹಿಂದಿದೆ ಎಂದು ಆರೋಪಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೆಹಲಿಯಲ್ಲಿ ‘ತಿರಂಗಾ’ ಪ್ರತಿಭಟನೆಗೆ ತಡೆ: ದೀಪ್ಕೆ, ನೇಹಾ ಬೋರಾ ಸೇರಿ ಸುಮಾರು 150 ಮಂದಿ ವಶಕ್ಕೆ

‘ಲೆಹರಾ ದೋ ತಿರಂಗಾ’ ಪ್ರತಿಭಟನೆ ಮತ್ತು ಸಂಬಂಧಿತ ಪ್ರದರ್ಶನಗಳ ಸಂದರ್ಭದಲ್ಲಿ ಅಭಿಜೀತ್...

ಮಸ್ಕ್–ಅಂಬಾನಿ ವಾಕ್ಸಮರ: ‘ಸ್ಪರ್ಧೆಗೆ ಸಿದ್ಧ’ ಎಂದ ರಿಲಯನ್ಸ್

ಭಾರತದಲ್ಲಿ ಸ್ಟಾರ್‌ಲಿಂಕ್ ಸೇವೆ ಆರಂಭಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂಬ ಎಲಾನ್ ಮಸ್ಕ್ ಅವರ...

ಹವಾಮಾನ ವರದಿ | ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಅ.22ರವರೆಗೆ ಮಳೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಮಳೆ ಮುಂದುವರಿಯುವ...

ಬೀಳಗಿ | ಬೆಳೆ ಉಳಿಸಲು ಘಟಪ್ರಭಾ ಎಡದಂಡೆ ಕಾಲುವೆಯ ಕೊನೆಯವರೆಗೆ ನೀರು ಹರಿಸಿ: ಭಾರತೀಯ ಕಿಸಾನ್‌ ಸಂಘ ಆಗ್ರಹ

ಘಟಪ್ರಭಾ ಮತ್ತು ಕೃಷ್ಣಾ ನದಿಗಳಲ್ಲಿ ಸಾಕಷ್ಟು ನೀರಿದ್ದರೂ ಘಟಪ್ರಭಾ ಎಡದಂಡೆ ಕಾಲುವೆಯ...