ಗೋಕುಲ ಶಾಲೆ | ಅನಧಿಕೃತ ವಸತಿನಿಲಯ; ಕಾನೂನು ಕ್ರಮಕ್ಕೆ ಒತ್ತಾಯಿಸಿ ಶಿಕ್ಷಣ ಇಲಾಖೆಗೆ ಪತ್ರ

Date:

Advertisements

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರದಲ್ಲಿರುವ ಗೋಕುಲ ಶಾಲೆಯ ವಸತಿ ನಿಲಯದ ವಿದ್ಯಾರ್ಥಿಗಳು ಹೊರಗಿನಿಂದ ಪೂರೈಸಿದ ಆಹಾರ ತಿಂದು ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಇಬ್ಬರು ಮೇಘಾಲಯದ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಘಟನೆ ನಡೆದ ನಂತರ ಗೋಕುಲ ಶಾಲೆಯಲ್ಲಿ ನಡೆಯುತ್ತಿದ್ದ ವಸತಿನಿಲಯಕ್ಕೆ ಇಲಾಖೆಯಿಂದ ಅನುಮತಿ ಇರಲಿಲ್ಲ ಎಂಬ ಬಗ್ಗೆ ಆರೋಪ ಕೇಳಿ ಬಂದಿತ್ತು. ಅದರ ಬೆನ್ನಲ್ಲೇ ಶಾಲೆಯ ಮುಖ್ಯಸ್ಥ ಲಂಕೇಶ್‌ ಅವರು, ತಮ್ಮ ಸೇವಾಶ್ರಮಕ್ಕೆ ಕಾರ್ಯಕ್ರಮಗಳಲ್ಲಿ ಉಳಿದ ಆಹಾರ ಪೂರೈಸಿ ಎಂದು ತನ್ನ ಶಾಲೆಯ ಅಧಿಕೃತ ಫೇಸ್‌ಬುಕ್‌ ಪುಟ ಹಾಕಿ ಪೋಸ್ಟರ್‌ ಹಾಕಿ ವಿನಂತಿಸಿಕೊಂಡ ಬಗ್ಗೆ ಈ ದಿನ.ಕಾಮ್‌ ವರದಿ ಮಾಡಿತ್ತು. ಗೋಕುಲ ಶಾಲೆಗೆ ಮೇಘಾಲಯದಿಂದ ಮಕ್ಕಳನ್ನು ಕರೆತಂದು ದಾಖಲಿಸಿದ ವ್ಯಕ್ತಿ ಸೀತಾರಾಂ ಎಂಬ ಆರೆಸ್ಸೆಸ್‌ ಪ್ರಚಾರಕ ಎಂಬ ವಿಷಯವನ್ನು ಈ ದಿನದ ವರದಿ ಬಹಿರಂಗಪಡಿಸಿತ್ತು. ಅಷ್ಟೇ ಅಲ್ಲ 2020-21ರಲ್ಲಿ ಮಳವಳ್ಳಿ ಕ್ಷೇತ್ರ ಸಮನ್ವಯಾಧಿಕಾರಿಗಳು ಗೋಕುಲ ಶಾಲೆಯ ವಸ್ತುಸ್ಥಿತಿ ಅಧ್ಯಯನ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವರದಿ ನೀಡಿರುವ ಬಗ್ಗೆ, ಅದರಲ್ಲಿ ಮಕ್ಕಳ ದಾಖಲಾತಿ, ಶಿಕ್ಷಕರ ಬಗ್ಗೆ ಸುಳ್ಳು ಮಾಹಿತಿ ನೀಡಿರುವ ಬಗ್ಗೆ ಈ ದಿನ.ಕಾಮ್‌ ಬೆಳಕು ಚೆಲ್ಲಿತ್ತು. ಇದೀಗ ಈ ವರದಿ ಆಧರಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ಮಳವಳ್ಳಿಯ ಸಾಮಾಜಿಕ ಹೋರಾಟಗಾರರು ಪತ್ರ ಬರೆದಿದ್ದಾರೆ.

ಆ ಪತ್ರದ ಪೂರ್ಣಪಾಠ ಇಲ್ಲಿದೆ.

ಇವರಿಗೆ,
ಆಯುಕ್ತರು, ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಚೇರಿ, ನೃಪತುಂಗ ರಸ್ತೆ, ಬೆಂಗಳೂರು.

ವಿಷಯ: ಮಳವಳ್ಳಿ ವ್ಯಾಪ್ತಿಯ ಗೋಕುಲ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ವಸತಿನಿಲಯ ಮತ್ತು ಟ್ಯುಟೋರಿಯಲ್ ಬಗ್ಗೆ ಕಾನೂನಾತ್ಮಕ ಕ್ರಮದ ಬಗ್ಗೆ

Advertisements

ವಿಷಯಕ್ಕೆ ಸಂಬಂಧಿಸಿದಂತೆ. ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕು ಗೋಕುಲ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯು 8 ನೇ ತರಗತಿವರೆಗೆ ಮಾತ್ರ ಶಾಲೆ ನಡೆಸಲು ಅನುಮತಿ ಪಡೆದಿರುತ್ತದೆ. ಆದರೆ ಅನಧಿಕೃತವಾಗಿ ಶಾಲಾ ಆವರಣದಲ್ಲಿ, ಒಂಬತ್ತು ಮತ್ತು ಹತ್ತನೆ ತರಗತಿಗಳನ್ನು ಹಾಗೂ ವಸತಿ ನಿಲಯ ಮತ್ತು ಟ್ಯುಟೋರಿಯಲ್‌ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಈ ರೀತಿ ಅನಧಿಕೃತವಾಗಿ ನಡೆಸುತ್ತಿರುವ ವಸತಿ ನಿಲಯಗಳು/ಟ್ಯುಟೋರಿಯಲ್‌ನಲ್ಲಿ ಮಳವಳ್ಳಿಯ ಮದನ್ ಛತ್ರದಲ್ಲಿ ನಡೆದ ಹೋಳಿ ಹಬ್ಬದಲ್ಲಿ ಉಳಿದ ಊಟವನ್ನು ವಿದ್ಯಾರ್ಥಿಗಳಿಗೆ ಕೊಟ್ಟಿರುವುದರಿಂದ ಅವಘಡ ಸಂಭವಿಸಿರುತ್ತದೆ. ಇಬ್ಬರು ಮಕ್ಕಳು ಮೃತಪಟ್ಟಿದ್ದು, ಮಿಕ್ಕ 29 ವಿದ್ಯಾರ್ಥಿಗಳು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿರುತ್ತಾರೆ. ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಮುನ್ನೆಚ್ಚರಿಕೆಯ ಕ್ರಮ ತೆಗೆದು ಕೊಂಡಿಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.

ಈ ಹಿನ್ನೆಲೆಯಲ್ಲಿ ಶಾಲೆ 8ನೇ ತರಗತಿವರೆಗೆ ಮಾತ್ರ ಶಾಲೆ ನಡೆಸಲು ಅನುಮತಿ ಪಡೆದು ಅನಧಿಕೃತವಾಗಿ ವಸತಿ ನಿಲಯ ಮತ್ತು ಟ್ಯುಟೋರಿಯಲ್‌ಗಳನ್ನು ನಡೆಸುತ್ತಿದ್ದದ್ದು ಕಾನೂನು ಬಾಹಿರ. ಜಿಲ್ಲಾ ವ್ಯಾಪ್ತಿಯ ಖಾಸಗಿ ಶಾಲೆಗಳಲ್ಲಿ ತಕ್ಷಣ ಪರಿಶೀಲಿಸಿ ಇನ್ನಾವುದೇ ಶಾಲೆಗಳಲ್ಲಿ ಈ ರೀತಿ ಅನಧಿಕೃತವಾಗಿ ಟ್ಯುಟೋರಿಯಲ್‌ಗಳು ಮತ್ತು ವಸತಿ ನಿಲಯಗಳನ್ನು ನಡೆಸುತ್ತಿರುವ ಶಾಲಾ ಆಡಳಿತ ಮಂಡಳಿಗಳ ವಿರುದ್ಧ ನಿಯಮಾನುಸಾರ ಅಗತ್ಯ ಕ್ರಮವಹಿಸಲು ಒತ್ತಾಯಿಸುತ್ತೇವೆ.

2020-21ರಲ್ಲಿಯೇ ಕ್ಷೇತ್ರ ಸಮನ್ವಯಾಧಿಕಾರಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸಲ್ಲಿಸಿದ ವರದಿ ಈ ದಿನ.ಕಾಮ್‌ನಲ್ಲಿ ಪ್ರಕಟವಾಗಿದೆ. ಅದರಲ್ಲಿ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಕಿರುಗಾವಲು ಹಾಗೂ ಗೋಕುಲ ಹಿರಿಯ ಪ್ರಾಥಮಿಕ ಶಾಲೆ, ಟಿ.ಕಾಗೇಪುರ ಇಲ್ಲಿಗೆ ಸದರಿ ಶೈಕ್ಷಣಿಕ ವರ್ಷದಲ್ಲಿ 129 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆಂದು ಎಸ್.ಎ.ಟಿ.ಎಸ್‌ನಲ್ಲಿ ಸುಳ್ಳು ಮಾಹಿತಿಯನ್ನು ನಮೂದಿಸಿದ್ದಾರೆ ಎಂದು ವರದಿಯಾಗಿರುತ್ತದೆ. ಆದರೆ ಇದುವರೆಗೆ ಮಳವಳ್ಳಿ ಕ್ಷೇತ್ರ ಶಿಕ್ಷಾಧಿಕಾರಿಗಳಾಗಲಿ ಹಾಗೂ ಮಂಡ್ಯದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಲಿ ಯಾವುದೇ ಕ್ರಮ ಜರುಗಿಸಿಲ್ಲ.

ಮಳವಳ್ಳಿಯ ಗೋಕುಲ ವಿದ್ಯಾಸಂಸ್ಥೆಯ ಮುಖ್ಯಸ್ಥ ಲಂಕೇಶ್, ಸಮಾರಂಭಗಳಲ್ಲಿ ಉಳಿದ ಆಹಾರ ತಮ್ಮ ಗೋಕುಲ ಸೇವಾಶ್ರಮಕ್ಕೆ ತಲುಪಿಸಿ ಎಂದು ಫೇಸ್‌ಬುಕ್‌ನಲ್ಲಿ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದರು. ಈ ಸುದ್ದಿ ಈದಿನ.ಕಾಮ್‌ನಲ್ಲಿ ಪ್ರಕಟವಾಗಿದೆ. ಅಷ್ಟೇ ಅಲ್ಲ ಹಾಸ್ಟೆಲ್‌ ನಡೆಸಲು ಸರ್ಕಾರದ ಅನುಮತಿ ಕೂಡಾ ಪಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಸೀತಾರಾಂ ಎಂಬ ವ್ಯಕ್ತಿ ಮೇಘಾಲಯದಿಂದ ಮಕ್ಕಳನ್ನು ಕರೆತಂದು ಈ ಶಾಲೆಗೆ ಸೇರಿಸಿದ್ದಾರೆ ಎಂಬ ಸುದ್ದಿ ಈದಿನ.ಕಾಮ್‌ನಲ್ಲಿ ಬಂದಿರುತ್ತದೆ. ಯಾವ ಉದ್ದೇಶದಿಂದ ಈ ಮಕ್ಕಳನ್ನು ಕರೆತರಲಾಗಿದೆ. ಆ ಮಕ್ಕಳು ಅನಾಥ ಮಕ್ಕಳೇ? ಅಥವಾ ಇಲ್ಲವೇ? ಆ ಮಕ್ಕಳು ಅಲ್ಲಿಂದ ಇಲ್ಲಿಗೆ ಬಂದು ಸೇರಲು ಕಾರಣ ಏನು? ಈ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲು ಒತ್ತಾಯಿಸುತ್ತೇವೆ.

ಅನಧಿಕೃತವಾಗಿ ನಡೆಸಲಾಗುತ್ತಿದ್ದ ಗೋಕುಲ ವಿದ್ಯಾ ಸಂಸ್ಥೆಯ ವಸತಿ ನಿಲಯಗಳು ಅಥವಾ ಟ್ಯುಟೋರಿಯಲ್ಗಳಲ್ಲಿ ಸಂಭವಿಸಿದ ಅವಘಡಕ್ಕೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪನಿರ್ದೇಶಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಕ್ರಮವಹಿಸುವಂತೆ ಒತ್ತಾಯಿಸುತ್ತೇವೆ.

21 ಮಾರ್ಚ್ 2025 ರಂದು ಈದಿನ.ಕಾಮ್‌ನಲ್ಲಿ ಪ್ರಕಟವಾದ ಸುದ್ದಿಯ ಕೊಂಡಿ: https://eedina.com/special/gokul-school-number-of-children-enrollment-are-all-bogus-field-coordinator-who-gave-report-to-beo-in-2021-1015/2025-03-21/

20 ಮಾರ್ಚ್ 2025 ರಂದು ಈದಿನ.ಕಾಮ್‌ನಲ್ಲಿ ಪ್ರಕಟವಾದ ಸುದ್ದಿಯ ಕೊಂಡಿ:
https://eedina.com/special/gokul-school-head-lankesh-openly-demanded-to-send-the-leftover-food1015/2025-03-20/

17 ಮಾರ್ಚ್ 2025 ರಂದು ಈದಿನ.ಕಾಮ್‌ನಲ್ಲಿ ಪ್ರಕಟವಾದ ಸುದ್ದಿಯ ಕೊಂಡಿ:
https://eedina.com/special/rss-pracharak-sitaram-is-the-one-who-brought-children-from-meghalaya-to-gokula-school-in-malavalli1015/2025-03-17/

ಇಂತಿ,
ಎಂ ವಿ ಕೃಷ್ಣ
ಜಗದೀಶ್‌ ನಗರಕೆರೆ,
ಮಾದಳ್ಳಿ ಶಿವಕುಮಾರ್
ಚೇತನ್‌ ಕೆ ಎಸ್‌
ಶ್ರೀನಿವಾಸ ಕುಮಾರ್‌ (ವಕೀಲರು)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

Download Eedina App Android / iOS

X