ಗೌರಿ, ಗಾಂಧಿಯನ್ನು ಕೊಂದದ್ದು ಬರೀ ಬುಲೆಟ್‌ಗಳಲ್ಲ, ಕೋಮುವಾದಿ ಸಿದ್ಧಾಂತ: ವಿದ್ಯಾರ್ಥಿ ನಾಯಕಿ ದಾನಿಶ್ ಅಲಿ

Date:

“ಮಹಾತ್ಮ ಗಾಂಧಿ ಅವರನ್ನೂ ಗೌರಿ ಲಂಕೇಶ್ ಅವರ ಹತ್ಯೆ ಮಾಡಿದ ಸಿದ್ಧಾಂತ (ಹಿಂದುತ್ವವಾದಿ) ಹೊಂದಿರುವವರೇ ಕೊಂದಿದ್ದು. ಗಾಂಧಿ, ಗೌರಿಯನ್ನು ಕೊಂದಿದ್ದು ಬರೀ ಬುಲೆಟ್‌ಗಳಲ್ಲ, ಅದು ಸಿದ್ಧಾಂತ ಎಂಬುದನ್ನು ನಾವು ನೆನಪಿಡಬೇಕು. ಈ ಸಿದ್ಧಾಂತಗಳ ವಿರುದ್ಧವಾಗಿ ನಾವು ಇಂದು ಹೋರಾಡಬೇಕಿದೆ” ಎಂದು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ವಿದ್ಯಾರ್ಥಿ ನಾಯಕಿ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA)ನ ನಾಯಕಿ ದಾನಿಶ್ ಅಲಿ ಕರೆ ನೀಡಿದರು.

- Advertisement -

ಬೆಂಗಳೂರು ನಗರದ ಸೇಂಟ್ ಜೋಸೆಫ್ ಸಭಾಂಗಣದಲ್ಲಿ ಗೌರಿ ಮೆಮೋರಿಯಲ್ ಟ್ರಸ್ಟ್ ಹಮ್ಮಿಕೊಂಡಿರುವ ‘ಗೌರಿ ದಿನ ಜೆನ್ ಝೀ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ವಿದ್ಯಾರ್ಥಿ ನಾಯಕಿ, “ನರೇಂದ್ರ ದಾಭೋಲ್ಕರ್, ಎಂಎಂ ಕಲಬುರ್ಗಿ, ಗೋವಿಂದ ಪನ್ಸಾರೆ ಹೇಗೆ ಕೊಲೆಯಾದರು ಎಂಬುದನ್ನು ನಾವು ಈಗ ನೆನಪಿಸಿಕೊಳ್ಳಬೇಕಾಗಿದೆ. ಸ್ಟ್ಯಾನ್ ಸ್ವಾಮಿ ಅವರನ್ನು ಜೈಲಲ್ಲಿ ಹೇಗೆ ಸಾಯುವಂತೆ ಮಾಡಲಾಯಿತು ಎಂಬುದನ್ನೂ ನಾವು ಇಂದು ನೆನಪಿಸಿಕೊಳ್ಳಬೇಕಾಗಿದೆ. ಆರ್‌ಎಸ್‌ಎಸ್‌, ಬಿಜೆಪಿ ವಿರುದ್ಧವಾಗಿ ಮಾತನಾಡಿದ್ದಕ್ಕೆ ಇಂದು ಉಮರ್ ಖಾಲಿದ್, ಶರ್ಜಿಲ್ ಇಮಾಮ್‌ರಂತಹ ಹಲವು ವಿದ್ಯಾರ್ಥಿ ಹೋರಾಟಗಾರರು ಜೈಲಿನಲ್ಲಿದ್ದಾರೆ. ಇಂದು ನಾವು ನಿಂತಿರುವ ಹೋರಾಟದ ವೇದಿಕೆಗೆ ಅಡಿಪಾಯ ಹಾಕಿದವರು ಇವೆರೆಲ್ಲರೂ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಟಿಪ್ಪು ನಿಜ ಕನಸು’ಗಳಿಂದ ‘ಗಾಂಧೀ ಹತ್ಯೆಯ ಸತ್ಯ’ದವರೆಗೆ: ಇತಿಹಾಸ...

ನಾಟಕಕಾರ, ಬರಹಗಾರ ಅಡ್ಡಂಡ ಕಾರ್ಯಪ್ಪ ಹಿಂದಿನಿಂದಲೂ ಒಂದಲ್ಲೊಂದು ಕಾರಣಕ್ಕೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿರುವ ಹೆಸರು. ಇತಿಹಾಸದ ನಿರೂಪಣೆ, ರಂಗಭೂಮಿಯ ಬಳಕೆ, ಧಾರ್ಮಿಕ ಮತ್ತು ರಾಜಕೀಯ ವಿಚಾರಗಳ ಅಭಿವ್ಯಕ್ತಿ ಹಾಗೂ ಕೋಮು ಸೌಹಾರ್ದದ...

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ...

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ ಕಲೆ ಮತ್ತೊಮ್ಮೆ ಅತ್ಯಂತ ಸುಂದರವಾಗಿ ಸಾಬೀತುಪಡಿಸಿದೆ. ಮಂಗಳೂರಿನ ಐತಿಹಾಸಿಕ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವೇದಿಕೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು 'ಮಹಿಷಾಸುರ...

ಪದವೀಧರರು, ಶಿಕ್ಷಕರೇ ಗಮನಿಸಿ.. ಅ.23ರಂದು ಪ್ರಾಶಸ್ತ್ಯ ಮತ ಚಲಾಯಿಸುವಾಗ...

ಕರ್ನಾಟಕ ವಿಧಾನ ಪರಿಷತ್ತಿನ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2026ರ ಮತದಾನ ಅಕ್ಟೋಬರ್ 23ರಂದು ನಡೆಯಲಿದೆ. ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯನ್ನು ಆರಿಸಲು ಪ್ರಾಶಸ್ತ್ಯ ಮತದಾನ ಪದ್ಧತಿಯನ್ನು ಅನುಸರಿಸಬೇಕು. ಈ ಸಂದರ್ಭದಲ್ಲಿ...

ಇದನ್ನೂ ಓದಿ: ಎಂತಹ ಕಷ್ಟದ ಸಂದರ್ಭದಲ್ಲೂ ಧ್ವನಿ ಎತ್ತುವುದನ್ನು ಕಲಿಸಿಕೊಟ್ಟವರು ಗೌರಿ ಲಂಕೇಶ್: ಐಶೆ ಘೋಷ್

ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯನ್ನು ನೆನಪಿಸಿಕೊಂಡ ವಿದ್ಯಾರ್ಥಿ ನಾಯಕಿ, “2017ರಲ್ಲಿ ಗೌರಿ ಲಂಕೇಶ್ ಅವರ ಹತ್ಯೆ ನಡೆದಾಗ ನಾನು 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದೆ. ಆದರೆ ಆ ಸುದ್ದಿ ಕೇಳಿ ನಾನು ಆಘಾತಕ್ಕೆ ಒಳಗಾಗಿದ್ದು ನನಗೆ ಇಂದಿಗೂ ನೆನಪಿದೆ. ಯಾಕೆಂದರೆ ಸರ್ಕಾರದ ವಿರುದ್ಧ, ಹಿಂದುತ್ವದ ವಿರುದ್ಧ ಮಾತನಾಡುವುದಕ್ಕೆ ಯಾವ ಬೆಲೆ ತೆರಬೇಕಾದೀತು ಎಂಬುದನ್ನು ಈ ಹತ್ಯೆ ತಿಳಿಸುತ್ತದೆ” ಎಂದರು.

“ಗೌರಿ ಅವರು ಫ್ಯಾಸಿಸಂ, ಭಯೋತ್ಪಾದಕರ ವಿರುದ್ಧವಾಗಿ ನಿಂತವರು. ಪ್ರತಿ ವರ್ಷ ನಾವು ಸ್ವಾತಂತ್ರೋತ್ಸವ, ಗಣರಾಜ್ಯೋತ್ಸವ ಆಚರಿಸುತ್ತೇವೆ. ಪ್ರತಿ ವರ್ಷ ಸರ್ಕಾರ ಭಾರತವು ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ ಎಂಬುದನ್ನು ಹೇಳುವುದನ್ನು ಕೇಳುತ್ತೇವೆ. ಅದೇ ಸಂದರ್ಭದಲ್ಲಿ ಗೌರಿಯಂತಹವರ ಕೊಲೆಯೂ ನಡೆಯುವುದನ್ನು ನಾವು ನೋಡಬಹುದು” ಎಂದು ತಿಳಿಸಿದರು.

:ನಮ್ಮ ಅಭಿಪ್ರಾಯವನ್ನು ತಿಳಿಸುವುದು ಇಂದು ದೇಶದಲ್ಲಿ ಅತಿ ಕಷ್ಟದ ಸ್ಥಿತಿಗೆ ನಮ್ಮನ್ನು ತಂದು ನಿಲ್ಲಿಸುತ್ತದೆ. ನೀವು ಧೈರ್ಯದಿಂದ ಧ್ವನಿ ಎತ್ತಿದರೆ ನಿಮ್ಮ ಜೀವವನ್ನೂ ಬಲಿಕೊಡಲು ಸಿದ್ಧವಾಗಿರಬೇಕಾಗುತ್ತದೆ. ಹಿಂದುತ್ವವಾದಿಗಳು ಅತಿ ಪ್ರಬಲರಾಗಿರುವ ಇಂದಿನ ಕಾಲದಲ್ಲಿ ನಮ್ಮನ್ನು ಗುರಿಯಾಗಿಸಲಾಗುತ್ತಿದೆ. ಯಾಕೆಂದರೆ ನಾವು ಇಂತಹ ಶಕ್ತಿಗಳ ವಿರುದ್ಧವಾಗಿ ಮಾತನಾಡುವವರು” ಎಂದರು.

“ನೀವು ರಾಜಕೀಯದಲ್ಲಿ ಯಾಕಿದ್ದೀರಿ? ಈ ಮೂಲಕ ಅಪಾಯವನ್ನು ಯಾಕೆ ಆಹ್ವಾನಿಸುತ್ತೀರಿ ಎಂದು ನಮ್ಮನ್ನು ಹಲವರು ಪ್ರಶ್ನಿಸುತ್ತಾರೆ. ಗೌರಿ ಅಂತಹ ವ್ಯಕ್ತಿಗಳ ಹತ್ಯೆಯು ನಮ್ಮ ಜನರೇಷನ್‌ಗೆ ಹೋರಾಟದ ಕಿಚ್ಚು ನೀಡಿದೆ. ಗೌರಿ ಅವರಿಂದ ಸ್ಪೂರ್ತಿ ಪಡೆದ ನಾವು ಇಂದು ಇಲ್ಲಿ ನಿಂತಿದ್ದೇವೆ” ಎಂದು ಹೇಳಿದರು.

“2016ರಲ್ಲಿ ಜೆಎನ್‌ಯು ಮೇಲೆ ದಾಳಿ ನಡೆದಿತ್ತು. ಆದರೆ ಅಂದು ಹಲವು ಮಂದಿ ಜೆಎನ್‌ಯು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಲು ಹಿಂಜರಿದರು. ಆದರೆ ಗೌರಿ ಲಂಕೇಶ್ ನಮ್ಮ ಪರವಾಗಿ ಧ್ವನಿ ಎತ್ತಿದರು. ವಿದ್ಯಾರ್ಥಿಗಳ ರಾಜಕೀಯವನ್ನು ಅಪರಾಧೀಕರಿಸುವುದರ ವಿರುದ್ಧ ಗೌರಿ ಮಾತನಾಡಿದರು” ಎಂದರು.

“ಸ್ವಾತಂತ್ರ್ಯ ಸಂಗ್ರಾಮದಿಂದಲೂ ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಅವರಂತಹ ಯುವಕರು ಹೋರಾಡಿದರು. 2019ರ ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲೂ ಜಾಮಿಯಾ ಮೊದಲಾದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧವಾಗಿ ನಿಂತರು. ಅಂದೂ ಪೊಲೀಸರು ಎಷ್ಟೊಂದು ದೌರ್ಜನ್ಯ ಮಾಡಿದ್ದಾರೆ ಎಂಬುದನ್ನು ನಾವು ಇಂದೂ ನೆನಪಿಟ್ಟುಕೊಳ್ಳಬೇಕು. ಇಂದಿಗೂ ಹಲವು ವಿದ್ಯಾರ್ಥಿಗಳ ಮೇಲೆ ಸುಳ್ಳು ಪ್ರಕರಣವಿದೆ. ನಮ್ಮ ಸಂಗಾತಿಗಳು ಇಂದಿಗೂ ಕೋರ್ಟ್‌ಗೆ ಅಲೆದಾಡುತ್ತಿದ್ದಾರೆ. ರೈತರ ಹತ್ತು ವರ್ಷಗಳ ಹೋರಾಟಕ್ಕೆ ಸರ್ಕಾರ ತಲೆಬಾಗಲೇಬೇಕಾಯಿತು. ನಾವು ಇಂತಹ ಚಳವಳಿಗಳನ್ನು ಇಂದು ನೆನೆಯಬೇಕಾಗುತ್ತದೆ. ಯಾಕೆಂದರೆ ನಾವು ಇಂದು ಹೊಸದಾಗಿ ಚಳವಳಿ ಕಟ್ಟುತ್ತಿರುವುದಲ್ಲ. ಈ ಎಲ್ಲ ಹೋರಾಟಗಳು ನಮ್ಮ ಇಂದಿನ ಚಳವಳಿಗೆ ಅಡಿಪಾಯ. ಈ ಹೋರಾಟಗಳೇ ನಮಗೆ ಸ್ಪೂರ್ತಿ, ಪಾಠ” ಎಂದು ವಿದ್ಯಾರ್ಥಿ ನಾಯಕಿ ದಾನಿಶ್ ಹೇಳಿದರು.

ಇದನ್ನೂ ಓದಿ: ‘ಕರ್ನಾಟಕ, ಕ್ರಿಕೆಟ್ ಮತ್ತು ನಾನು’: ಯೋಗೇಂದ್ರ ಯಾದವ್ ನೆನಪುಗಳು

“ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬರೀ ಒಬ್ಬರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವುದಲ್ಲ. ಇಂದು ನಾವು ಎಲ್ಲ ಸಚಿವರ ಹೊಣೆಗಾರಿಕೆಯನ್ನು ಪ್ರಶ್ನಿಸುತ್ತೇವೆ ಎಂಬುದರ ಸಂಕೇತ. ನೀವು ನಿಮ್ಮ ಕೆಲಸ ಮಾಡದಿದ್ದರೆ ನೀವು ನಮ್ಮ ಜಾಗವನ್ನು ಖಾಲಿ ಮಾಡಬೇಕಾಗುತ್ತದೆ ಎಂಬ ಪಾಠವನ್ನು ಈ ರಾಜೀನಾಮೆ ಎಲ್ಲ ಸಚಿವರಿಗೆ ನೀಡಿದೆ. ಇದು ಕೇವಲ ಮೊದಲ ಹೆಜ್ಜೆ. ನಮ್ಮ ಹೋರಾಟ ದೊಡ್ಡದಾಗಿದೆ. ಎನ್‌ಟಿಎ ವಿರುದ್ಧವಾಗಿ, ಹೊಸ ಶಿಕ್ಷಣ ನೀತಿಯ ವಿರುದ್ಧವಾಗಿ ನಮ್ಮ ಹೋರಾಟ” ಎಂದು ತಿಳಿಸಿದರು.

“ಫ್ಯಾಸಿಸ್ಟ್‌ಗಳ ಮೊದಲ ದಾಳಿ ಎಂದಿಗೂ ಶಿಕ್ಷಣ ವ್ಯವಸ್ಥೆ ಆಗಿರುತ್ತದೆ. ಯಾಕೆಂದರೆ ಜನರು ಇತಿಹಾಸ ತಿಳಿದರೆ, ಜನರು ದೇಶದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದರೆ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂಬುದು ಅವರಿಗೆ (ಬಿಜೆಪಿ ಸರ್ಕಾರ/ ಫಾಸಿಸ್ಟ್‌) ತಿಳಿದಿದೆ. ಈ ಎಲ್ಲ ವಿಚಾರ ತಿಳಿದರೆ, ಶಿಕ್ಷಿತರಾದರೆ ನಾವು ಸರ್ಕಾರದ ವಿರುದ್ಧವಾಗಿ ಮಾತನಾಡುತ್ತೇವೆ ಎಂಬುದು ತಿಳಿದಿದೆ. ಆದ್ದರಿಂದ ಮೊದಲ ಫ್ಯಾಸಿಸ್ಟ್‌ಗಳ ಮೊದಲ ದಾಳಿ ಎಂದಿಗೂ ಶಿಕ್ಷಣ ವ್ಯವಸ್ಥೆ ಆಗಿರುತ್ತದೆ” ಎಂದರು.

“ಇಲ್ಲಿರುವ ನಾವು ಬೇರೆ ಬೇರೆ ಸಂಘಟನೆಗೆ ಸೇರಿದವರು. ಸೈದ್ಧಾಂತಿಕ ಭಿನ್ನತೆಯಿಂದಾಗಿ ಬೇರೆ ಬೇರೆ ಸಂಘಟನೆಯಲ್ಲಿದ್ದೇವೆ. ಆದರೆ ನಾವೆಲ್ಲರೂ ಒಂದೇ ಶಕ್ತಿಯ ವಿರುದ್ಧವಾಗಿ ಹೋರಾಡುವವರು. ಈಗ ಎಸ್‌ಐಆರ್ ಮೂಲಕ ಅಲ್ಪಸಂಖ್ಯಾತರು, ಬಡವರು, ದಲಿತರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಈ ಮೂಲಕ ಅವರು (ಬಿಜೆಪಿ) ಚುನಾವಣೆಯನ್ನು ಗೆಲ್ಲುತ್ತಿದ್ದಾರೆ” ಎಂದು ಆರೋಪಿಸಿದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುಪಿ | ಮತದಾರರ ಪಟ್ಟಿಯಲ್ಲಿ ಭಾರೀ ಅಕ್ರಮ ಆರೋಪ; 16 ಸಾವಿರಕ್ಕೂ ಹೆಚ್ಚು ಹೆಸರುಗಳ ಪರಿಶೀಲನೆಗೆ EC ಆದೇಶ

ಉತ್ತರ ಪ್ರದೇಶದ ಪಿಲಿಭಿತ್ ಸದರ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ...

ಭಾವೈಕ್ಯತೆಯ ಹೆಜ್ಜೆನಾದ: ಕದ್ರಿ ದೇಗುಲದ ಯಕ್ಷಗಾನದಲ್ಲಿ ‘ಮಹಿಷಾಸುರ ಮರ್ದಿನಿ’ಯಾಗಿ ಮಿಂಚಿದ ಆರ್ಷಿಯಾ ಖಾನ್

ಕಲೆಗೆ ಯಾವುದೇ ಧರ್ಮ, ಜಾತಿಗಳ ಭೇದವಿಲ್ಲ ಎಂಬುದನ್ನು ಕರಾವಳಿಯ ಹೆಮ್ಮೆಯ ಸಾಂಪ್ರದಾಯಿಕ...

ಅಭಿವೃದ್ಧಿ ಹೆಸರಲ್ಲಿ 23 ಲಕ್ಷ ಮರಗಳಿಗೆ ಕುತ್ತು; ಅರುಣಾಚಲದ ಜಲವಿದ್ಯುತ್‌ ಯೋಜನೆ ಅನುಮತಿ ಕೋರಿದ NHPC

ಅರುಣಾಚಲ ಪ್ರದೇಶದಲ್ಲಿ 1,720 ಮೆಗಾವ್ಯಾಟ್ ಸಾಮರ್ಥ್ಯದ ಕಮಲಾ ಜಲವಿದ್ಯುತ್ ಯೋಜನೆ ಅನುಷ್ಠಾನಗೊಳಿಸಲು...

ಭಾರತ–ನ್ಯೂಜಿಲೆಂಡ್ ಟಿ20 ಸರಣಿ: ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ

ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಗುರುವಾರ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಐದು...