ಧಾರವಾಡದ ಹೈಕೋರ್ಟ್ ಸರ್ಕ್ಯೂಟ್ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರು ನ್ಯಾಯ ಕೋರಿ ಬಂದಿದ್ದ ದಂಪತಿಯನ್ನು ಕೊಪ್ಪಳದ ಗವಿ ಸಿದ್ಧೇಶ್ವರ ಸ್ವಾಮೀಜಿಗಳ ಮಧ್ಯಸ್ಥಿಕೆಯಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳಲು ಸೂಚಿಸಿರುವುದನ್ನು ನಾಡಿನ ಹಲವು ಚಿಂತಕರು ವಿರೋಧಿಸಿದ್ದಾರೆ.
ಇದು ಅತ್ಯಂತ ವಿಷಾದನೀಯ ಮತ್ತು ಕಾನೂನುಬಾಹಿರ ನಡೆಯಾಗಿದೆ. ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಜನರು ಅಂತಿಮವಾಗಿ ನ್ಯಾಯಾಲಯಕ್ಕೆ ಹೋಗುವುದು ನ್ಯಾಯ ಸಿಗುತ್ತದೆಯೆಂಬ ಭರವಸೆಯಿಂದ. ಆದರೆ, ನ್ಯಾಯಾಧೀಶರು ತಮ್ಮ ಕಾನೂನುಬದ್ಧ ಕರ್ತವ್ಯವನ್ನು ನಿರ್ವಹಿಸುವ ಬದಲು, ಸತಿ-ಪತಿಯನ್ನು ಮಠಾಧೀಶರೊಬ್ಬರ ಬಳಿಗೆ ಮಧ್ಯಸ್ಥಿಕೆವಹಿಸಿ ವಿವಾದ ಬಗೆಹರಿಸಲು ಸೂಚಿಸುವುದು ಅಥವಾ ನಿರ್ದೇಶಿಸುವುದು, ʼಮಠಗಳು ಸಂವಿಧಾನ ಕೊಡಮಾಡಿರುವ ನ್ಯಾಯಾಲಯಗಳಿಗಿಂತ ದೊಡ್ಡವುʼ ಎಂಬ ಭಾವನೆಯನ್ನು ಜನರಲ್ಲಿ ಬೆಳೆಸುತ್ತವೆ. ನ್ಯಾಯಾಲಯಗಳು ವಾದ -ಪ್ರತಿವಾದಗಳನ್ನು ಆಲಿಸಿ, ಸಾಕ್ಷ್ಯಾಧಾರಗಳನ್ನು ಸಮಗ್ರವಾಗಿ ಪರಿಶೀಲಿಸಿ ನ್ಯಾಯ ಒದಗಿಸುವ ಬದಲು ಮಠದ ಸ್ವಾಮೀಜಿಯವರ ಮಧ್ಯಸ್ಥಿಕೆಗೆ ಸೂಚಿಸುವುದು ಯಾವ ಬಗೆಯ ನ್ಯಾಯ?
ನಿರ್ದಿಷ್ಟ ಜಾತಿ ಧರ್ಮಕ್ಕೆ ಸೇರಿದ ಮಠಮಾನ್ಯಗಳು ವಿವಾದಗಳನ್ನು ಬಗೆಹರಿಸುವ ನ್ಯಾಯಾಲಯಗಳಾದರೆ, ಸಂವಿಧಾನದ ಅಡಿಯಲ್ಲಿ ಸ್ಥಾಪಿತವಾಗಿರುವ ನ್ಯಾಯಾಲಯಗಳ ಅವಶ್ಯಕತೆಯಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ನ್ಯಾಯಾಲಯಗಳ ಬದಲು ನಾವು ಮಠಮಾನ್ಯಗಳನ್ನೇ ನ್ಯಾಯಾಲಯಗಳೆಂದು ಘೋಷಿಸಿಬಿಡಬಹುದು. ಗೌರವಾನ್ವಿತ ನ್ಯಾಯಾಧೀಶರ ಈ ನಡೆ ಸಂವಿಧಾನ ವಿರೋಧಿ ನಡೆಯಾಗಿದ್ದು, ಈ ಹಿಂದೆ ಮೇಲ್ಜಾತಿ ಮತ್ತು ಮೇಲ್ವರ್ಗದವರು ನಡೆಸುತ್ತಿದ್ದ ಪಂಚಾಯತಿ ಕಟ್ಟೆಯ ತೀರ್ಮಾನಗಳನ್ನು ನೆನಪಿಸುತ್ತದೆ. ಇದು ಕಾನೂನಿನ ನಿಯಮದ ಪ್ರಕಾರ ನ್ಯಾಯದಾನ ಮಾಡುವ ಬದಲು ಮತೀಯತೆ, ಜಾತಿ ಮತ್ತು ಧರ್ಮದ ನೆಲೆಯಲ್ಲಿ ಅನ್ಯಾಯವನ್ನು ಕ್ರಮಬದ್ಧಗೊಳಿಸುವ ಕ್ರಮವಾಗಿದೆ.
ನ್ಯಾಯಾಧೀಶರಿಗೆ ಮಧ್ಯಸ್ಥಿಕೆಯ ಅಗತ್ಯ ಕಂಡಿದ್ದರೆ, ಕಾನೂನು ಸೇವಾ ಪ್ರಾಧಿಕಾರ ನಡೆಸುವ ಕಾನೂನು ಬದ್ದ ಸಂಧಾನ ಕೇಂದ್ರಕ್ಕೆ (ಮೀಡಿಯೇಷನ್ ಸೆಂಟರ್) ಕಳಿಸಲು ಸೂಚಿಸಬಹುದಿತ್ತು. ಅದನ್ನು ಬಿಟ್ಟು ಮಠಾಧೀಶರ ಮಧ್ಯಸ್ಥಿಕೆ ಸೂಚಿಸಿರುವುದು ʼಸಂವಿಧಾನಬದ್ಧ ನ್ಯಾಯಾಧೀಶರ ನ್ಯಾಯ ಪೀಠಕ್ಕಿಂತ ಧರ್ಮಾಧಾರಿತ ಮಠಾಧೀಶರ ಪೀಠವೇ ಮೇಲುʼ ಎಂಬ ಸಂದೇಶ ರವಾನಿಸುತ್ತದೆ.
ಎಲ್ಲಕಿಂತ ಮಿಗಿಲಾಗಿ, ವಿವಾದ ಬಗೆಹರಿಸಲಿರುವ ಪರ್ಯಾಯ ವ್ಯವಸ್ಥೆಗೆ (ಎಡಿಆರ್) ಅಥವಾ ಮಧ್ಯಸ್ಥಿಕೆಗೆ ಎಲ್ಲೆಂದರಲ್ಲಿ ಶಿಫಾರಸು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಮೀಡಿಯೇಷನ್ ಮಾಡುವವರಿಗೂ ಕೆಲವು ಅರ್ಹತೆಗಳಿವೆ. ಆ ಅರ್ಹತೆ ಗವಿಸಿದ್ದೇಶ್ವರ ಶ್ರೀಗಳಿಗೆ ಇದೆ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಂಡಿದೆಯೇ ಎಂಬ ಬಗ್ಗೆ ನ್ಯಾಯಾಲಯ ಏನನ್ನೂ ಹೇಳಿಲ್ಲ.

ದಂಪತಿಗಳು ನೇರವಾಗಿ ಸ್ವಾಮೀಜಿಯ ಬಳಿ ಹೋಗಿ ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೂ, ನ್ಯಾಯಾಲಯವೇ ಅವರನ್ನು ಸ್ವಾಮೀಜಿಯ ಬಳಿ ಹೋಗುವಂತೆ ಸೂಚಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ನಾವು ವ್ಯಕ್ತಿಯೊಬ್ಬರ ಬಳಿ ನಾವಾಗಿಯೇ ಹೋಗುವುದು ನಮ್ಮ ನಂಬಿಕೆ ವಿಶ್ವಾಸವಾದರೆ, ನ್ಯಾಯಾಲಯದ ಮೊರೆ ಹೋಗುವುದು ನಮ್ಮ ವೈಯಕ್ತಿಕ ನಂಬಿಕೆ ವಿಶ್ವಾಸಗಳನ್ನು ಮೀರಿ ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನದ ಆಶಯದಂತೆ ವಾಸ್ತವಿಕ ನ್ಯಾಯವನ್ನು ಕೊಡಮಾಡುವುದಾಗಿದೆ. ಇವೆರಡನ್ನು ಅದಲು-ಬದಲಾಗಿ ಅಥವಾ ಪರ್ಯಾಯವಾಗಿ ನೋಡುವುದು ನ್ಯಾಯದ ಪರಿಕಲ್ಪನೆ ಮತ್ತು ಅದಕ್ಕಾಗಿ ನಾವು ರೂಪಿಸಿಕೊಂಡಿರುವ ನ್ಯಾಯಾಂಗ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಸುಪ್ರೀಂ ಕೋರ್ಟು ಈ ತೀರ್ಮಾನವನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನ ಬಾಹಿರವಾಗಿರುವ ಹೈಕೋರ್ಟಿನ ನ್ಯಾಯಾಧೀಶರ ಇಂಥ ನಡೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಸೂಕ್ತವಾದ ನಿರ್ದೇಶನವನ್ನು ಅಧೀನ ನ್ಯಾಯಾಲಯದ ನ್ಯಾಯಾಧೀಶರಿಗೆ ನೀಡಬೇಕು. ಈ ತೀರ್ಪು ನೀಡಿದ ಗೌರವಾನ್ವಿತ ನ್ಯಾಯಮೂರ್ತಿಗಳೂ ಸಹ ತಮ್ಮ ಈ ತೀರ್ಪನ್ನು ಮರುಪರಿಶೀಲಿಸಬೇಕು” ಎಂದು ಡಾ ವಿ ಪಿ ನಿರಂಜನಾರಾಧ್ಯ, ಬಸವರಾಜ ಸೂಳಿಭಾವಿ, ಡಾ ವಸುಂಧರ ಭೂಪತಿ, ಬಿ. ಸುರೇಶ, ಡಾ ಸಬಿಹಾ ಭೂಮಿಗೌಡ, ಮೂಡ್ನಾಕೂಡ ಚಿನ್ನಸ್ವಾಮಿ, ಕ.ಮ. ರವಿಶಂಕರ, ಲಕ್ಷ್ಮಣ ಕೊಡಸೆ, ಡಾ ಜಯಲಕ್ಷ್ಮಿ ಎಚ್.ಜಿ, ಡಾ. ಮಂಜುನಾಥ್ ಬಿ ಆರ್, ಡಾ ತುಕಾರಾಮ, ಶ್ರೀಪಾದ ಭಟ್ಟ, ಪೂಜಾ ಸಿಂಗೆ, ಪ್ರಕಾಶ ಬಿ, ಮುತ್ತು ಬಿಳಯಲಿ ಜೆ ಎಂ ವೀರಸಂಗಯ್ಯ, ಬಸವರಾಜ ಬ್ಯಾಗವಾಟ, ಎಸ್ ಸತ್ಯಾ, ವಿಶುಕುಮಾರ, ಅನಿಲ ಹೊಸಮನಿ, ಪ್ರಶಾಂತ್ ಹೊಸಪೇಟೆ ಕರಿಬಸಪ್ಪ ಎಂ ಸೇರಿದಂತೆ ಹಲವು ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ.
Thoo enta managerial mentality nimdu chintakare.
ನ್ಯಾಯಾಧೀಶರು ದಂಪತಿಗಳ ಕೋರಿಕೆ ಅನುಸಾರ ಅವಕಾಶ ಕಲ್ಪಿಸಿರುವುದು. ನೀವುಗಳು ಕಾಮಾಲೆ ಕಣ್ಣಿನವರು . ನಾಚಿಕೆ ಆಗಬೇಕು
Judge was more interested in preaching than hearing problems. Judge is in fact frightening him about duration of fight. Indirectly acknowledging loophole in justice system. He doesn’t know difference between possessive and toxic. Let the god save applicant from that woman. People commenting positive because he has told what they want to hear.
True honoured judge done it on the request of couple. There is nothing wrong.
ಇವರು ಚಿಂತಕರೋ ಅಥವಾ ಹಂತಕರೋ ಒಂದು ಫ್ಯಾಮಿಲಿ ಬೇರೆ ಬೇರೆ ಆಗುವುದು ಸರಿ ಇರುವುದಿಲ್ಲ ಎಂದು ನ್ಯಾಯಾಧೀಶರು ಹೇಳಿರುವುದರಲ್ಲಿ ತಪ್ಪೇನಿದೆ ಚಿಂತಕರು ಅನಗತ್ಯ ವಿಚಾರವನ್ನು ವಿಚಾರ ಮಾಡಿ ನಮ್ಮ ದೇಶ ಹಿಂದೆ ಉಳಿಯುದಿದೆ ಚಿಂತಕರು ಹೇಳೋದು ಆದಷ್ಟು ಬೇಗ ಗಂಡ ಹೆಂಡತಿ ಅವರನ್ನು ಇಬ್ಭಾಗ ಮಾಡುವುದು ಅದೇ ಇದೆ ಇರಬೇಕು ಚಿಂತಕರ ವೇದಿಕೆ
Writer is uneducated
👏👌sir
ಸ್ವಾಮೀಜಿಯವರ ಬಳಿಗೆ ಕಲಹ ಅಥವ ವಿವಾದ ಇತ್ಯರ್ಥ ಮಾಡಲು ಕಳಿಸಿದ್ದಲ್ಲ. ದಂಪತಿಗಳು ದುಡುಕಿನಿಂದ ವಿಚ್ಛೇದನದ ನಿರ್ದಾರ ಮಾಡಿದ್ದರೆ ಅವರಿಗೆ ತಿಳುವಳಿಕೆ ಮೂಡಿಸಲು
ಸಹಬಾಳ್ವೆಯ ಮಾರ್ಗದರ್ಶನಕ್ಕಾಗಿ ಸಮಾಲೋಚನೆಯ (ಕೌನ್ಸಿಲಿಂಗ್) ಅಗತ್ಯವಿರುವ ಕಾರಣಕ್ಕಾಗಿ ವಿಚ್ಚೇದನಕ್ಕಿಂತ ಇಬ್ಬರನ್ನೂ ಒಂದುಗೂಡಿಸುವ ಪ್ರಯತ್ನಕ್ಕಾಗಿ ಮೀಜಿಗಳ ಬಳಿ ಕಳಿಸಿದ್ದಾರೆ. ಇದನ್ನು ದಂಪತಿಗಳೇ ಒಪ್ಪಿರುವಾಗ ಯಾರು ಕೂಡ ವಿವಾದ ಎಬ್ಬಿಸುವ ಅಗತ್ಯವಿಲ್ಲ.
ಮೊಸರಲ್ಲಿ ಕಲ್ಲು ಹುಡುಕುವ ಇಂತಹ ಚಿಂತಕರನ್ನು ಮೊದಲು ಮಾನಸಿಕ ವೈದ್ಯರ ಸಂಘದ ಆಫ್ಟ ಸಮಾಲೋಚನೆ ಮಾಡಿಸುವುದು ಅವಶ್ಯವಾಗಿದೆ
ಸರ್ವಧರ್ಮ ವಿವಾಹ ಸಮಾರಂಭಗಳನ್ನು ಏರ್ಪಡಿಸಿ ಎಷ್ಟೋ ಜನರಿಗೆ ದಾಂಪತ್ಯ ಜೀವನ ಕಲ್ಪಿಸಿರುವ ಈ ಶ್ರೀ ಮಠವು ಒಂದು ವಿಚ್ಛೇದನವನ್ನು ತಡೆಯುವ ಪ್ರಯತ್ನ ಮಾಡಬಾರದೇ? ನ್ಯಾಯಾಧೀಶರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಹಾಗಾದರೇ ಈ ಚಿಂತಕರಿದ್ದರೂ ನಮ್ಮ ನಾಡಿನಲ್ಲಿ ದಂಪತಿಗಳು ಡೈವರ್ಸ್ ಪಡೆಯಲು ನಿಶ್ಚಯಿಸಿದ್ದು ಚಿಂತಕರ ಚಿಂತನೆಗಳು ವಿಫಲತೆಯನ್ನು ಹೊಂದಿವೆ ಎನ್ರ್ಥಲೂ ಅವಕಾಶವಿದೆ.
ಸಾಮಾನ್ಯ ಜ್ಞಾನವಿಲ್ಲದ ಚಿಂತಕರು.
ಈ ಸೋ ಕಾಲ್ಡ್ ಬಹುತೇಕ ಚಿಂತಕರೆಲ್ಲರೂ ಹೆಂಡತಿ ಮಕ್ಕಳು, ಕುಟುಂಬಕ್ಕೆ ಜವಾಬ್ದಾರರಲ್ಲ..
ಒಂದು ವರ್ಗದ ಓಲೈಸುವ ಮೂಲಕ ತುತ್ತಿನ ಚೀಲದ ಬಗ್ಗೆ ಚಿಂತಿಸುವುದು ಇವರ ಕಾಯಕ.
ನಾನು ನ್ಯಾಯಾಧೀಶರು ಹೇಳಿದ್ದನ್ನು ಕೇಳಿದ್ದೇನೆ.
ಕುಟುಂಬದ ಪ್ರತಿಯೊಂದು ವಿಷಯದಲ್ಲೂ ನ್ಯಾಯಾಲಯಕ್ಕೆ ಬಂದರೆ ನೆಮ್ಮದಿ ಜೀವನ ಸಾದ್ಯವಿಲ್ಲ.. ಇದು ೭-೮ ವರ್ಷಗಳ ಪ್ರಕ್ರಿಯೆ ಎಂದು ಬುದ್ಧಿ ಹೇಳಿ ಅವರು ನಂಬುವ ಧಾರ್ಮಿಕ ದಾರ್ಶನಿಕರ ಬಳಿಗೆ ಹೋಗಿ ಬರಲು ಸೂಚಿಸಿದರು..
ಕುಟುಂಬವೇ ಇಲ್ಲದವನಿಗೆ ಅದರ ನೋವು ನಲಿವು ಗೊತ್ತಾಗುವುದಿಲ್ಲ.
ಇವರು ಚಿಂತಕರಲ್ಲ ಹಂತಕರು…ಸತ್ಯ ಚಿಂತನೆಗೆ ಇವರಲ್ಲಿ ಜಾಗವಿಲ್ಲ…ನ್ಯಾಯಾಧೀಶರ ನಿರ್ಣಯ ಸರಿ ಇದೆ….
ಒಬ್ಬ ಪ್ರಾಮಾಣಿಕ , ದಕ್ಷ, ಪರಿಣಾಮಕಾರಿ, ಹಾಗು ಈಗಾಗಲೇ ನೂರಾರು ಕ್ಲಿಷ್ಟಕರ ಪ್ರಕರಣಗಳಲ್ಲಿ ತ್ವರಿತ ಹಾಗು ನ್ಯಾಯಯುತ ತೀರ್ಪು ನೀಡಿದ್ದು ,ಅನೇಕ ಬಡ ಕುಟುಂಬಗಳಿಗೆ ಸಹ ತ್ವರಿತ ನ್ಯಾಯ ಒದಗಿಸುವಲ್ಲಿ ಮೇಲುಗೈ ಸಾಧಿಸಿದ್ದು , ಜುಡಿಷಿಯಲ್ ಕೇತ್ರದಲ್ಲಿ ಪ್ರಶಂಸೆಗೆ ಪಾತ್ರರಾಗಿರುತ್ತಾರೆ. ಇದನ್ನು ಸಹಿಸದ ಹಾಗು ಸದರಿ ಜಡ್ಜ್ ರವರು ಬ್ರಾಹ್ಮಣ ಜಾತಿಗೆ ಸೇರಿದ ವರಾಗಿರುವುದರಿಂದ ಇವರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿರುವ ತಿಳಿಗೇಳಿಗಳಿಗೆ ದಿಕ್ಕಾರ ವಿರಲಿ. ಈ ತಿಳಗೇಡಿಗಳ ಪೂರ್ಣ ವಿವರಗಳನ್ನು ಬಹಿರಂಗ ಗೊಳಿಸಿ ಹಾಗು ಇವರ ಬಗ್ಗೆ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿ.
ಚಿಂತಕರಿಗೆ ತಮ್ಮ ಹೆಂಡತಿ ಡಿವೋರ್ಸ ನೀಡಿದಾಗ ಇನ್ನೊಬ್ಬರ ನೋವು ಅರ್ಥ ಆಗೋ ಹಾಗಾದರೇ…ಇವರು ಯಾವ ಸೀಮೆಯ ಚಿಂತಕರು
Ra
ಹೋಗಲಿ, ಯಿ ಪ್ರಗತಿ ಪರ ಅಂತ ಬೋರ್ಡು ಹಾಕಿರೋರು ಯಾವುದಾದರೂ ಕಾದಾಡುವ ಪತಿ ಪತ್ನಿ ಯರನ್ನು ಒಂದು ಮಾಡಿದ್ದಾರ, ಇಲ್ಲಾ ಅಂದರೆ ಮುಚ್ ಕೊಂಡು ಕೂಡಲಿ. ನಾಚಿಗೆ ಇಲ್ಲದ ಮೂರು ಅಕ್ಷರ ಬರುವ ಇವರು ಸಮಾಜ ಗಟುಕರು
ಚಿಂತಕರೇ ಚನ್ನಾಗಿ ಚಿಂತನೆ ಮಾಡಿ, ಪ್ರತಿಕ್ರಿಯೆ ನೀಡಿ.
ನಡೆಯ ಉದ್ದೇಶ ಮಾತ್ರವೇ ನೋಡಬೇಕು, ಬದಲಿಗೆ ನೇರವಾಗಿ ನ್ಯಾಯಮೂರ್ತಿಗಳ ಮೇಲೆ ವೈಯಕ್ತಿಕ ಟೀಕೆ ಚಿಂತಕರ ಟೀಕಾ ಮನಸ್ಥಿತಿ ಮಾತ್ರವೇ ತೋರಿಸುತ್ತದೆ. ಯಾವ ಸಂದರ್ಭ ಮತ್ತು ಪರಿಸ್ಥಿತಿ ನೋಡಿ ನ್ಯಾಯಮೂರ್ತಿಗಳು ಈ ರೀತಿ ಮಾಡಿದ್ದಾರೆ ಎಂದು ತಿಳಿಯದೇ ಟೀಕೆ ಮಾಡಿದ್ದು ಸರ್ವಥಾ ಸರಿಯಲ್ಲ.
ಚಿಂತಕರು ಬ್ರಷ್ಟಾಚಾರದ ಬಗ್ಗೆ ತಲೆ ಬಿಸಿ ಮಾಡಿ ಕೊಂಡಿಲ್ಲ, ಲಂಚ ತಾಂಡವ ಬಗ್ಗೆ ಉಸಿರಿಲ್ಲ. ಕೋಟಿಗಳ ತಿಂದವರ ಬಗ್ಗೆ ಮಾತಿಲ್ಲ.
ಇವರು ಚಿಂತಕರಲ್ಲ ಮಾವಿಯತೆಯ ಹಂತಕರು.ಇವರಿಗೆ ಬೇಕಿರುವುದು ದಂಪತಿಗಳ ವಿಚ್ಛೇದನ ಮಾಡಿಸಿ.ಕುಟುಂಬಗಳನ್ನು ಒಡೆಯುವುದು ಅಷ್ಟೆ.
Please 🙏 dint look this matter in judicial way think in moral and ethical way.
Judge helped to save husband , Wife and kids.
U will fell the heat when u are in their position
One should really appreciate the move of the judge, So called “Chintakare” pls visit family Court in Bangalore once and later comment about the matter. Take a deep count of number of divorce cases registering per day, and then tell where our society is on wrong direction. It nothing but chopping the roots and expecting harvest. See the judgement copy of CMC 44/2021 in JMFC Bangarpet Court, verify the marked evidence list and later comment about this judge.
E HANTAKARA chinte nodidare evarige area ge ondu Koutumbika Nyayalaya sthapisabekemba bayake iddante kanuthiide, British Divide and Rule policy. Family matters nalli moorane vyakthi moogu thoorsode dodda thappu, antadralli e Hantakarige oorella moogu thoorisabekante. Olle vicharadallu tappu hudukuthirallo.
So many people are eagerly waiting for minting money by seperating couple, but this Judge has taken a bold and correct move by showing his real concern towards the couple and scoiety, appreciate his decision rather than complaining him. Nyayalayadalli Nyaya Sigabeku Sikkide Aste !
“Daari Yavudadarenaiah Vaikuntakke”
ಇವರು ಚಿಂತಕರಲ್ಲ….ಹಂತಕರು
Chintakre ne evu hogi banni matakke,
Kannuninalli mukya enendare kaninannu kapaduvadhar jotege hintaha sandharb dhalli kanuni nondhige ondhu samsar vannu kapaduvudu bahu mukya,
Judge sahebru keval matakke matr kalisuvadill, alliye maguvinondhige court garden nalli samasya kaliyiri anth halavaru case galalli tandhe tayee maguvinondhige samaye kaliyeeri antha helidh udhaharanegalu saha Ive,
Adhar artha nyaya pitakkinth court garden doddademb bavane alla, avrige idharalli nyaya dhondhike badhuku kodisuv vivevechane, avar manasu tili agi avr badhukuku sundhar vagabahudhu emba baravase, hage gavi matakke hogu ennuvudu gavimat shrigalu doddavaredhu torisuv uddesh alla, matada ajjar enu embuvudh idi vishwakke tilidide, allo varegu hogi baruvag avar sambandh alli vatavaran ibbar manasu tiliyagi matte vandhagali emb asheya, ekendhr avru channage iddharu nimmanth chintakaru saha kutumbadhali avr chintane gallu ibbar manasige hali vammomme sansar halu madalu horatituttare, adhakoskar vattinalli manya nyay pitadh uddesh vandhu samsar mattu samajik hitha kapaduvadhu aste nimm chinthane galante alla