ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಳ್ಳಲು ದಂಪತಿಯನ್ನು ಮಠಕ್ಕೆ ಕಳಿಸಿದ ನ್ಯಾ. ದೀಕ್ಷಿತ್‌; ಚಿಂತಕರ ವಿರೋಧ

Date:

ಧಾರವಾಡದ ಹೈಕೋರ್ಟ್‌ ಸರ್ಕ್ಯೂಟ್‌ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರು ನ್ಯಾಯ ಕೋರಿ ಬಂದಿದ್ದ ದಂಪತಿಯನ್ನು ಕೊಪ್ಪಳದ ಗವಿ ಸಿದ್ಧೇಶ್ವರ ಸ್ವಾಮೀಜಿಗಳ ಮಧ್ಯಸ್ಥಿಕೆಯಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳಲು ಸೂಚಿಸಿರುವುದನ್ನು ನಾಡಿನ ಹಲವು ಚಿಂತಕರು ವಿರೋಧಿಸಿದ್ದಾರೆ.

ಇದು ಅತ್ಯಂತ ವಿಷಾದನೀಯ ಮತ್ತು ಕಾನೂನುಬಾಹಿರ ನಡೆಯಾಗಿದೆ. ಇದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಜನರು ಅಂತಿಮವಾಗಿ ನ್ಯಾಯಾಲಯಕ್ಕೆ ಹೋಗುವುದು ನ್ಯಾಯ ಸಿಗುತ್ತದೆಯೆಂಬ ಭರವಸೆಯಿಂದ. ಆದರೆ, ನ್ಯಾಯಾಧೀಶರು ತಮ್ಮ ಕಾನೂನುಬದ್ಧ ಕರ್ತವ್ಯವನ್ನು ನಿರ್ವಹಿಸುವ ಬದಲು, ಸತಿ-ಪತಿಯನ್ನು ಮಠಾಧೀಶರೊಬ್ಬರ ಬಳಿಗೆ ಮಧ್ಯಸ್ಥಿಕೆವಹಿಸಿ ವಿವಾದ ಬಗೆಹರಿಸಲು ಸೂಚಿಸುವುದು ಅಥವಾ ನಿರ್ದೇಶಿಸುವುದು, ʼಮಠಗಳು ಸಂವಿಧಾನ ಕೊಡಮಾಡಿರುವ ನ್ಯಾಯಾಲಯಗಳಿಗಿಂತ ದೊಡ್ಡವುʼ ಎಂಬ ಭಾವನೆಯನ್ನು ಜನರಲ್ಲಿ ಬೆಳೆಸುತ್ತವೆ. ನ್ಯಾಯಾಲಯಗಳು ವಾದ -ಪ್ರತಿವಾದಗಳನ್ನು ಆಲಿಸಿ, ಸಾಕ್ಷ್ಯಾಧಾರಗಳನ್ನು ಸಮಗ್ರವಾಗಿ ಪರಿಶೀಲಿಸಿ ನ್ಯಾಯ ಒದಗಿಸುವ ಬದಲು ಮಠದ ಸ್ವಾಮೀಜಿಯವರ ಮಧ್ಯಸ್ಥಿಕೆಗೆ ಸೂಚಿಸುವುದು ಯಾವ ಬಗೆಯ ನ್ಯಾಯ?

ನಿರ್ದಿಷ್ಟ ಜಾತಿ ಧರ್ಮಕ್ಕೆ ಸೇರಿದ ಮಠಮಾನ್ಯಗಳು ವಿವಾದಗಳನ್ನು ಬಗೆಹರಿಸುವ ನ್ಯಾಯಾಲಯಗಳಾದರೆ, ಸಂವಿಧಾನದ ಅಡಿಯಲ್ಲಿ ಸ್ಥಾಪಿತವಾಗಿರುವ ನ್ಯಾಯಾಲಯಗಳ ಅವಶ್ಯಕತೆಯಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ. ನ್ಯಾಯಾಲಯಗಳ ಬದಲು ನಾವು ಮಠಮಾನ್ಯಗಳನ್ನೇ ನ್ಯಾಯಾಲಯಗಳೆಂದು ಘೋಷಿಸಿಬಿಡಬಹುದು. ಗೌರವಾನ್ವಿತ ನ್ಯಾಯಾಧೀಶರ ಈ ನಡೆ ಸಂವಿಧಾನ ವಿರೋಧಿ ನಡೆಯಾಗಿದ್ದು, ಈ ಹಿಂದೆ ಮೇಲ್ಜಾತಿ ಮತ್ತು ಮೇಲ್ವರ್ಗದವರು ನಡೆಸುತ್ತಿದ್ದ ಪಂಚಾಯತಿ ಕಟ್ಟೆಯ ತೀರ್ಮಾನಗಳನ್ನು ನೆನಪಿಸುತ್ತದೆ. ಇದು ಕಾನೂನಿನ ನಿಯಮದ ಪ್ರಕಾರ ನ್ಯಾಯದಾನ ಮಾಡುವ ಬದಲು ಮತೀಯತೆ, ಜಾತಿ ಮತ್ತು ಧರ್ಮದ ನೆಲೆಯಲ್ಲಿ ಅನ್ಯಾಯವನ್ನು ಕ್ರಮಬದ್ಧಗೊಳಿಸುವ ಕ್ರಮವಾಗಿದೆ.

- Advertisement -

ನ್ಯಾಯಾಧೀಶರಿಗೆ ಮಧ್ಯಸ್ಥಿಕೆಯ ಅಗತ್ಯ ಕಂಡಿದ್ದರೆ, ಕಾನೂನು ಸೇವಾ ಪ್ರಾಧಿಕಾರ ನಡೆಸುವ ಕಾನೂನು ಬದ್ದ ಸಂಧಾನ ಕೇಂದ್ರಕ್ಕೆ (ಮೀಡಿಯೇಷನ್ ಸೆಂಟರ್) ಕಳಿಸಲು ಸೂಚಿಸಬಹುದಿತ್ತು. ಅದನ್ನು ಬಿಟ್ಟು ಮಠಾಧೀಶರ ಮಧ್ಯಸ್ಥಿಕೆ ಸೂಚಿಸಿರುವುದು ʼಸಂವಿಧಾನಬದ್ಧ ನ್ಯಾಯಾಧೀಶರ ನ್ಯಾಯ ಪೀಠಕ್ಕಿಂತ ಧರ್ಮಾಧಾರಿತ ಮಠಾಧೀಶರ ಪೀಠವೇ ಮೇಲುʼ ಎಂಬ ಸಂದೇಶ ರವಾನಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಎಲ್ಲಕಿಂತ ಮಿಗಿಲಾಗಿ, ವಿವಾದ ಬಗೆಹರಿಸಲಿರುವ ಪರ್ಯಾಯ ವ್ಯವಸ್ಥೆಗೆ (ಎಡಿಆರ್) ಅಥವಾ ಮಧ್ಯಸ್ಥಿಕೆಗೆ ಎಲ್ಲೆಂದರಲ್ಲಿ ಶಿಫಾರಸು ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಮೀಡಿಯೇಷನ್ ಮಾಡುವವರಿಗೂ ಕೆಲವು ಅರ್ಹತೆಗಳಿವೆ. ಆ ಅರ್ಹತೆ ಗವಿಸಿದ್ದೇಶ್ವರ ಶ್ರೀಗಳಿಗೆ ಇದೆ ಎಂಬುದನ್ನು ನ್ಯಾಯಾಲಯ ಖಚಿತಪಡಿಸಿಕೊಂಡಿದೆಯೇ ಎಂಬ ಬಗ್ಗೆ ನ್ಯಾಯಾಲಯ ಏನನ್ನೂ ಹೇಳಿಲ್ಲ.

gavisiddeshwara swamy
ಕೊಪ್ಪಳದ ಗವಿ ಸಿದ್ಧೇಶ್ವರ ಸ್ವಾಮೀಜಿ

ದಂಪತಿಗಳು ನೇರವಾಗಿ ಸ್ವಾಮೀಜಿಯ ಬಳಿ ಹೋಗಿ ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದಕ್ಕೂ, ನ್ಯಾಯಾಲಯವೇ ಅವರನ್ನು ಸ್ವಾಮೀಜಿಯ ಬಳಿ ಹೋಗುವಂತೆ ಸೂಚಿಸುವುದಕ್ಕೂ ಬಹಳ ವ್ಯತ್ಯಾಸವಿದೆ. ನಾವು ವ್ಯಕ್ತಿಯೊಬ್ಬರ ಬಳಿ ನಾವಾಗಿಯೇ ಹೋಗುವುದು ನಮ್ಮ ನಂಬಿಕೆ ವಿಶ್ವಾಸವಾದರೆ, ನ್ಯಾಯಾಲಯದ ಮೊರೆ ಹೋಗುವುದು ನಮ್ಮ ವೈಯಕ್ತಿಕ ನಂಬಿಕೆ ವಿಶ್ವಾಸಗಳನ್ನು ಮೀರಿ ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನದ ಆಶಯದಂತೆ ವಾಸ್ತವಿಕ ನ್ಯಾಯವನ್ನು ಕೊಡಮಾಡುವುದಾಗಿದೆ. ಇವೆರಡನ್ನು ಅದಲು-ಬದಲಾಗಿ ಅಥವಾ ಪರ್ಯಾಯವಾಗಿ ನೋಡುವುದು ನ್ಯಾಯದ ಪರಿಕಲ್ಪನೆ ಮತ್ತು ಅದಕ್ಕಾಗಿ ನಾವು ರೂಪಿಸಿಕೊಂಡಿರುವ ನ್ಯಾಯಾಂಗ ವ್ಯವಸ್ಥೆಯನ್ನು ಅಣಕಿಸುವಂತಿದೆ.

ಸುಪ್ರೀಂ ಕೋರ್ಟು ಈ ತೀರ್ಮಾನವನ್ನು ಗಂಭೀರವಾಗಿ ಪರಿಗಣಿಸಿ ಸಂವಿಧಾನ ಬಾಹಿರವಾಗಿರುವ ಹೈಕೋರ್ಟಿನ ನ್ಯಾಯಾಧೀಶರ ಇಂಥ ನಡೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಸೂಕ್ತವಾದ ನಿರ್ದೇಶನವನ್ನು ಅಧೀನ ನ್ಯಾಯಾಲಯದ ನ್ಯಾಯಾಧೀಶರಿಗೆ ನೀಡಬೇಕು. ಈ ತೀರ್ಪು ನೀಡಿದ ಗೌರವಾನ್ವಿತ ನ್ಯಾಯಮೂರ್ತಿಗಳೂ ಸಹ ತಮ್ಮ ಈ ತೀರ್ಪನ್ನು ಮರುಪರಿಶೀಲಿಸಬೇಕು” ಎಂದು ಡಾ ವಿ ಪಿ ನಿರಂಜನಾರಾಧ್ಯ, ಬಸವರಾಜ ಸೂಳಿಭಾವಿ, ಡಾ ವಸುಂಧರ ಭೂಪತಿ, ಬಿ. ಸುರೇಶ, ಡಾ ಸಬಿಹಾ ಭೂಮಿಗೌಡ, ಮೂಡ್ನಾಕೂಡ ಚಿನ್ನಸ್ವಾಮಿ, ಕ.ಮ. ರವಿಶಂಕರ, ಲಕ್ಷ್ಮಣ ಕೊಡಸೆ, ಡಾ ಜಯಲಕ್ಷ್ಮಿ ಎಚ್.ಜಿ, ಡಾ. ಮಂಜುನಾಥ್ ಬಿ ಆರ್, ಡಾ ತುಕಾರಾಮ, ಶ್ರೀಪಾದ ಭಟ್ಟ, ಪೂಜಾ ಸಿಂಗೆ, ಪ್ರಕಾಶ ಬಿ, ಮುತ್ತು ಬಿಳಯಲಿ ಜೆ ಎಂ ವೀರಸಂಗಯ್ಯ, ಬಸವರಾಜ ಬ್ಯಾಗವಾಟ, ಎಸ್ ಸತ್ಯಾ, ವಿಶುಕುಮಾರ, ಅನಿಲ ಹೊಸಮನಿ, ಪ್ರಶಾಂತ್ ಹೊಸಪೇಟೆ ಕರಿಬಸಪ್ಪ ಎಂ ಸೇರಿದಂತೆ ಹಲವು ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು...

ಮುಸ್ಲಿಂ ಮತದಾರರ ಹೆಸರು ಅಳಿಸಲು ಬಿಜೆಪಿ ಜೊತೆ ಜೆಡಿಎಸ್ ಸಂಚು? ಡಿಕೆಶಿ ಹೇಳಿದ್ದೇನು?

ಮುಸ್ಲಿಂ ಸೇರಿದಂತೆ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ...

ಕರ್ನಾಟಕ SIR | ಅರ್ಹರ ಹೆಸರು ಡಿಲೀಟ್‌ ಮಾಡಲು ಬಿಜೆಪಿಗೆ ‘ಫಾರ್ಮ್‌-7’ ಟೂಲ್‌ಕಿಟ್; ಷಡ್ಯಂತ್ರ ಬಹಿರಂಗ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬಿಜೆಪಿಗರು ‘ಫಾರ್ಮ್‌-7’ಅನ್ನು ದುರ್ಬಳಕೆ ಮಾಡಿಕೊಳ್ಳುತತಿದ್ದಾರೆ. ಈ...